ಬರಿಗಾಲಿನಲ್ಲಿ ನೀವು ನಡೆಯುವುದರಿಂದ ಎಷ್ಟೆಲ್ಲ ಉಪಯೋಗ ಇದೆ ಗೊತ್ತ ,,,!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮ್ಮ ಪೂರ್ವಜರು ಅಷ್ಟೊಂದು ಆರೋಗ್ಯವಾಗಿರಲು ಅವರು ಪಾಲಿಸುತ್ತಿದ್ದ ಪ್ರತಿಯೊಂದು ವಿಚಾರಗಳು ಪದ್ಧತಿಗಳು ಎಲ್ಲವೂ ಕೂಡ ಅವರ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿತ್ತು ಅವರ ದೈನಂದಿನ ಚಟುವಟಿಕೆಗಳ ಆಧಾರದ ಮೇಲೆ ಅವರ ಆರೋಗ್ಯ ಇರುತ್ತಿತ್ತು.ಅದೇ ರೀತಿಯಲ್ಲಿ ಪೂರ್ವಜರು ಕಾಲಿಗೆ ಚಪ್ಪಲಿ ಹಾಕಿಕೊಂಡು ಓಡಾಡುವ ಒಂದು ವಿಚಾರದಲ್ಲಿ ಕೂಡ ತುಂಬಾನೇ ಗಮನ ನೀಡುತ್ತಿದ್ದರು ಯಾಕೆ ಅಂದರೆ ಹೊಲಗಳಲ್ಲಿ ಜಮೀನಿನಲ್ಲಿ ಕೆಲಸ ಮಾಡುವಾಗ ಅಥವಾ ದೇವಸ್ಥಾನಗಳಿಗೆ ಹೋಗುವಾಗ ಇಂತಹ ಸಂದರ್ಭದಲ್ಲಿ ಚಪ್ಪಲಿಗಳನ್ನು ಧರಿಸದೇ ಬರೀ ಪಾದದಲ್ಲಿ ಹೋಗುತ್ತಿದ್ದರೂ.ಇದರ ಹಿಂದೆಯೂ ಕೂಡ ಕೆಲವೊಂದು ಮುಖ್ಯವಾದ ಆರೋಗ್ಯಕರ ವಿಚಾರಗಳಿವೆ. ಆ ಒಂದು ವಿಚಾರಗಳ ಬಗ್ಗೆಯೇ ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ ಈ ಒಂದು ಸಂಕ್ಷಿಪ್ತ ವಿವರವನ್ನು ನೀವು ಕೂಡ ತಿಳಿದು ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಹೌದು ಇದೀಗ ಜನ ಹೇಗೆ ಅಂದರೆ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಚಪ್ಪಲಿಗಳನ್ನು ಧರಿಸಿ ಓಡಾಡುತ್ತಾರೆ ಇಂತಹ ಸಮಯ ಬಂದು ಬಿಟ್ಟಿದೆ, ಪಾಶ್ಚಾತ್ಯರ ಮೊರೆ ಹೋಗಿ ನಮ್ಮ ಜನರು ಕೂಡಾ ಮನೆಯೊಳಗೂ ಸಹ ಚಪ್ಪಲಿಗಳನ್ನು ಹಾಕಿಕೊಂಡು ಓಡಾಡುವ ಹವ್ಯಾಸವನ್ನು ಮಾಡಿಕೊಂಡಿದ್ದಾರೆ ಆದರೆ ಇದು ಎಷ್ಟು ತಪ್ಪು ಎಷ್ಟು ಸರಿ ಎಂಬುದನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ.ಬರೀ ಪಾದಗಳಲ್ಲಿ ಓಡಾಡುವುದರಿಂದ ಆಗುವ ಪ್ರಯೋಜನಗಳನ್ನು ಇದೀಗ ನಾವು ತಿಳಿದುಕೊಳ್ಳೋಣ ಈ ಆರು ಪ್ರಯೋಜನಗಳ ಬಗ್ಗೆ ನೀವು ಕೂಡ ತಿಳಿದು ನಿಮ್ಮ ದಿನನಿತ್ಯ ಜೀವನದಲ್ಲಿ ನೀವು ಕೂಡ ಹೆಚ್ಚು ಸಮಯ ಚಪ್ಪಲಿಗಳನ್ನು ಬಳಸುತ್ತಿದ್ದರೆ ಅದನ್ನು ಈ ಕೂಡಲೆ ಕಡಿಮೆ ಮಾಡಿ ಹಾಗೂ ಮಾಹಿತಿಯನ್ನು ತಿಳಿದು ಬೇರೆಯವರಿಗೂ ಶೇರ್ ಮಾಡಿ.

ಮೊದಲನೆಯದಾಗಿ ಪರಿ ಪಾತ್ರದಲ್ಲಿ ನಡೆಯುವುದರಿಂದ ಅದು ಹೊಟ್ಟೆಯ ಮೇಲೆ ಒತ್ತಡವನ್ನು ಬೀರುವಂತೆ ಮಾಡಿ ಜೀರ್ಣಕ್ರಿಯೆಯನ್ನು ಉತ್ತಮವಾಗಿಸಲು ಸಹಕರಿಸುತ್ತದೆ.ಎರಡನೆಯ ಕಾರಣ ಸಾಮಾನ್ಯವಾಗಿ ಹೆಚ್ಚು ಸಮಯ ಚಪ್ಪಲಿಗಳನ್ನು ಶೂಗಳನ್ನು ಅಥವಾ ಸ್ಯಾಂಡಲ್ಗಳನ್ನು ಬಳಸುವುದರಿಂದ ನಮ್ಮ ದೇಹದ ಭಂಗಿಯೂ ಕೂಡ ಬದಲಾಗುತ್ತದೆ ಒಮ್ಮೆ ನೀವೇ ಗಮನಿಸಿ, ಆದ ಕಾರಣ ದಿನದಲ್ಲಿ ಮೂರರಿಂದ ನಾಲ್ಕು ತಾಸು ಆದರೂ ಚಪ್ಪಲಿಯಿಲ್ಲದೆ ಬರೀ ಪಾದದಲ್ಲಿ ನಡೆಯುವುದು ಸೂಕ್ತ.ಬರೀ ಪಾದದಲ್ಲಿ ನಡೆಯುವುದರಿಂದ ಮರುಳಿನಲ್ಲಿರುವ ಚಿಕ್ಕ ಚಿಕ್ಕ ಕಲ್ಲುಗಳು ಪಾದಗಳಿಗೆ ಮೃದುವಾಗಿ ಮಸಾಜ್ ಮಾಡಿ ಇದು ರಕ್ತದೊತ್ತಡ ಸಮಸ್ಯೆ ಅನ್ನು ದೂರ ಮಾಡಲು ಸಹಕರಿಸುತ್ತದೆ.

ಬರೀ ಪಾದಗಳಲ್ಲಿ ಹುಲ್ಲುಗಳ ಮೇಲೆ ಮಣ್ಣಿನ ಮೇಲೆ ನಡೆಯುವುದರಿಂದ ಪಾದಗಳಲ್ಲಿರುವ ಆಕ್ಯುಪ್ರೆಶರ್ ಪಾಯಿಂಟ್ ನಿಂದಾಗಿ ದೇಹಕ್ಕೆ ಒತ್ತಡವು ಕಡಿಮೆಯಾಗುತ್ತದೆ ಹಾಗೆ ನಮ್ಮಲ್ಲಿರುವ ನಕಾರಾತ್ಮಕತೆಯನ್ನು ಭೂಮಿಯೇ ಹೀರಿಕೊಂಡು ಭೂಮಿಯಲ್ಲಿರುವ ಪಾಸಿಟಿವ್ ಎನರ್ಜಿಯನ್ನು ನಮಗೆ ಒದಗಿಸಿಕೊಡುತ್ತದೆ.ನಮ್ಮ ಪಾದಗಳಲ್ಲಿ ದೇಹದ ಎಪ್ಪತ್ತ್ ಎರಡು ಸಾವಿರ ನರಗಳ ಎಂಡ್ ಪಾಯಿಂಟ್ ಇರುವ ಕಾರಣ ನಾವು ದಿನದಲ್ಲಿ ಮೂರು ರಿಂದ ನಾಲ್ಕು ಗಂಟೆಗಳಾದರೂ ಬರೀ ಪಾದಗಳಲ್ಲಿ ನಡೆದಾಡುವುದರಿಂದ ನರಗಳು ಆ್ಯಕ್ಟಿವ್ ಆಗಿ ನಮ್ಮ ಆರೋಗ್ಯವನ್ನು ಕಾಪಾಡಲು ಸಹಕರಿಸುವುದರ ಜೊತೆಗೆ ನಾವು ಆ್ಯಕ್ಟೀವ್ ಆಗಿರಲು ಕೂಡ ಸಹಕರಿಸುತ್ತದೆ.ಹೀಗೆ ಚಪ್ಪಲಿಗಳನ್ನು ಹಾಕಿಕೊಳ್ಳುವುದರಿಂದ ಇರುವ ಪ್ರಯೋಜನಗಳಿಗಿಂತ ಚಪ್ಪಲಿಯನ್ನು ಧರಿಸದೇ ಬರೀ ಪದಗಳಲ್ಲಿ ನಡೆಯುವುದು ಆರೋಗ್ಯಕರ ಎಂದು ಹೇಳಲಾಗಿದೆ. ನಿಮಗೆ ಮಾಹಿತಿ ಉಪಯುಕ್ತವಾಗಿದ್ದರೆ ತಪ್ಪದೇ ಮಾಹಿತಿಗೆ ಒಂದು ಲೈಕ್ ನೀಡಿ ಧನ್ಯವಾದ.

Leave a Reply

Your email address will not be published.