ನಮಸ್ಕಾರ ಸ್ನೇಹಿತರೇ ,ನಮ್ಮ ಭಾರತ ದೇಶದಲ್ಲಿ ಅನೇಕ ಹಿಂದೂ ದೇವಾಲಯಗಳು ಇವೆ .ಇನ್ನು ಹಲವಾರು ದೇವಸ್ಥಾನಗಳಲ್ಲಿ ವಿಚಿತ್ರ ವಿಸ್ಮಯಗಳು ಇಂದಿಗೂ ಕೂಡ ನಡೆಯುತ್ತಲೇ ಇವೆ .ಇಂದು ನಾವು ಹೇಳಹೊರಟಿರುವ ದೇವಾಲಯದಲ್ಲಿಯೂ ಕೂಡ ಹಾಗೆಯೆ ಬೇಡಿದ್ದನ್ನು ವರವಾಗಿ ನೀಡುತ್ತದೆಯಂತೆ ಈ ದೇವಾಲಯ ಹಾಗಾದ್ರೆ ಈ ದೇವಾಲಯದ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ನೋಡೋಣ .
ಈ ಸ್ಥಳವನ್ನು ಅದ್ಭುತವನ್ನು ಅವಿತುಕೊಂಡಿರುವಂತಹ ಹಾಗೂ ಈ ಸ್ಥಳವನ್ನು ವಿಸ್ಮಯಕಾರಿ ವಿಚಾರಗಳನ್ನು ಅವಿತುಕೊಂಡಿರುವಂತಹ ಸ್ಥಳ ಅಂತ ಕೂಡ ನಾವು ಹೇಳಬಹುದು.ಈ ಕ್ಷೇತ್ರಕ್ಕೆ ಬಂದು ನೀವೇನಾದರು ಬೇಡಿಕೊಂಡರೆ ನಿಮಗೆ ಹಾಗೂ ನಿಮ್ಮ ಜೀವನದಲ್ಲಿ ಯಾವುದಾದರೂ ಕಷ್ಟಗಳು ಇದ್ದರೆ ಪವಾಡದ ರೂಪದಲ್ಲಿ ಇಲ್ಲಿ ಪರಿಹಾರ ದೊರಕುತ್ತದೆ. ಹೀಗೆ ಕಲಿಗಾಲದಲ್ಲಿ ಕೂಡ ಪವಾಡ ಮಾಡುತ್ತಿರುವಂತಹ ಈ ಧಾರ್ಮಿಕ ಸ್ಥಳವಾದರೂ ಯಾವುದು ಎನ್ನುವ ಪ್ರಶ್ನೆಗೆ ಉತ್ತರ,
ಚಿತ್ರದುರ್ಗದಲ್ಲಿ ಇರುವಂತಹ ಶ್ರೀ ಹಾಲು ರಾಮೇಶ್ವರ ದೇವಸ್ಥಾನ. ಈ ದೇವಸ್ಥಾನಕ್ಕೆ ನೀವೇನಾದರೂ ಹೋಗಬೇಕಾದರೆ ಚಿತ್ರದುರ್ಗದಿಂದ ಐವತ್ತು ಕಿಲೋಮೀಟರ್ ಕ್ರಮಿಸಬೇಕಾಗುತ್ತದೆ, ಹಾಗೆ ಹೊಸದುರ್ಗದಿಂದ 12 ಕಿಲೋಮೀಟರ್ ದೂರದಲ್ಲಿದೆ ಈ ದೇವಸ್ಥಾನ.
ಈ ಪ್ರದೇಶವನ್ನು ಪುರಾಣದ ಕಾಲದಿಂದಲೂ ಕೂಡ ಹಿಡಂಬಿ ವನ ಎಂದು ಕರೆಯುತ್ತಿದ್ದರು. ಈ ದೇವಸ್ಥಾನಕ್ಕೆ ಭಕ್ತರು ನಾನಾ ರಾಜ್ಯಗಳಿಂದ ಈ ದೇವಸ್ಥಾನಕ್ಕೆ ಬರುತ್ತಿದ್ದಾರೆ ಯಾಕೆಂದರೆ ಇಲ್ಲಿ ನಡೆಯುತ್ತಿರುವಂತಹ ಒಂದು ಪವಾಡ ಸದೃಶ ನಡೆಯುವುದರಿಂದ ಇಲ್ಲಿ ಬಂದು ಹಲವಾರು ಭಕ್ತರು ತಮ್ಮ ಕಷ್ಟಗಳನ್ನು ಕೋರಿ ಕೊಂಡು ಹೋಗುತ್ತಾರೆ.ಇಲ್ಲಿರುವಂತಹ ಶಿವಲಿಂಗ ತೇತ್ರಾಯುಗದಲ್ಲಿ ಶಿವನ ಸ್ವತಹ ಶಿವಲಿಂಗವನ್ನು ಇಲ್ಲಿ ಸ್ಥಾಪನೆ ಮಾಡಿದ್ದಾರೆ ಎನ್ನುತ್ತದೆ ಪುರಾಣ. ಅದಲ್ಲದೆ ನೀವು ಈ ದೇವಸ್ಥಾನದ ಎದುರುಗಡೆ ನಂದಿ ವಿಗ್ರಹವನ್ನು ಕೂಡ ನೋಡಬಹುದಾಗಿದೆ. ಈ ದೇವಸ್ಥಾನದ ಎದುರುಗಡೆ ಒಂದು ಗಂಗಾ ಕೊಳ ಎನ್ನುವಂತಹ ಒಂದು ಸ್ಥಳವಿದೆ, ಬೆಳಗಿನ ಜಾವ 7 ರಿಂದ 7.30 ರವರೆಗೆ ಇಲ್ಲಿ ಸ್ಥಾನವನ್ನು ಮಾಡಿಕೊಂಡು ದೇವರ ದರ್ಶನವನ್ನು ಮಾಡಿದರೆ ನಿಮಗೆ ಒಳ್ಳೆಯದಾಗುತ್ತದೆ ಎನ್ನುವಂತಹ ಒಂದು ಮಾತಿದೆ.
ಹಾಗಾದರೆ ಇನ್ನೇಕೆ ತಡ ಈ ದೇವಸ್ಥಾನಕ್ಕೆ ಬಂದು ನೀವು ಕೂಡ ಗಂಗೆಯಲ್ಲಿ ಸ್ನಾನವನ್ನು ಮಾಡಿ ನಿಮ್ಮ ಕೋರಿಕೆಗಳನ್ನು ಹಾಗೂ ನಿಮ್ಮ ಜೀವನದಲ್ಲಿ ಕಷ್ಟ ಪಡುವಂತಹ ವಿಚಾರಗಳನ್ನು ಈ ದೇವರಲ್ಲಿ ಹೇಳಿಕೊಂಡರೆ ನಿಜವಾಗಲೂ ನಿಮ್ಮ ಕಷ್ಟಗಳು ದೂರವಾಗುತ್ತದೆ ಎನ್ನುವುದು ಇಲ್ಲಿನ ಜನರ ಅಭಿಪ್ರಾಯ.ನಿಮಗೇನಾದರೂ ಸಮಯ ಸಿಕ್ಕಲ್ಲಿ ಚಿತ್ರದುರ್ಗಕ್ಕೆ ಹೋದರೆ ಈ ಕ್ಷೇತ್ರಕ್ಕೆ ಬಂದು ಈ ದೇವಸ್ಥಾನವನ್ನು ಭೇಟಿ ನೀಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ. ಹಾಗೆ ಭೇಟಿ ನೀಡಿದ ನಂತರ ನಿಮ್ಮ ಜೀವನದಲ್ಲಿ ಯಾವುದಾದರೂ ಒಂದು ಪವಾಡ ರೀತಿಯಲ್ಲಿ ಏನಾದರೂ ನಡೆದರೆ ಅದನ್ನು ಕಮೆಂಟ್ ಮಾಡುವುದರ ಮುಖಾಂತರ ನಮಗೆ ತಿಳಿಸಿ.
ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಈ ಲೇಖನವನ್ನು ಹಾಗೂ ನಮ್ಮ ಪೇಜ್ ಅನ್ನು ಯಾವುದೇ ಕಾರಣಕ್ಕೂ ಶೇರ್ ಮಾಡೋದನ್ನು ಹಾಗೂ ಲೈಕ್ ಮಾಡುವುದನ್ನು ಮರೆಯಬೇಡಿ. ನ್ಯೂ ಲೈಕ್ ಮಾಡುವುದರಿಂದ ಹಾಗೂ ಶೇರ್ ಮಾಡೋದ್ರಿಂದ ನಮಗೆ ಇನ್ನಷ್ಟು ಲೇಖನವನ್ನು ಬರೆಯಲು ನಮಗೆ ಉತ್ತೇಜನವನ್ನು ನೀಡಿದಂತೆ ಆಗುತ್ತದೆ ನೋಡಿದ್ರಲ್ಲಾ ಸ್ನೇಹಿತರೇ, ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ಕಾಮೆಂಟ್ ಮೂಲಕ ತಿಳಿಸಿಕೊಡಿ ಧನ್ಯವಾದಗಳು ಶುಭದಿನ .