ಮನೆಯಲ್ಲಿ ಪೂಜೆಯನ್ನು ಮಾಡುವಾಗ ಗಣಪತಿ ದೇವರಿಗೆ ಈ ಮಂತ್ರ ವನ್ನು ಹೇಳಿ ಪೂಜೆಯನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ನೆಮ್ಮದಿ ನೆಲೆಸುತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಲಕ್ಷ್ಮಿದೇವಿ ಮತ್ತು ಕುಬೇರ ದೇವರು ಸಿರಿ ಸಂಪತ್ತಿಗೆ ಅದಿದೇವತೆ ಆದರೆ ಮಂಗಳಮೂರ್ತಿಯಾದ ವಿಘ್ನವಿನಾಯಕ ಗಣೇಶನು ಬುದ್ದಿಗೆ ಅದಿದೇವತೆ ಆಗಿದ್ದಾರೆ ವಿಘ್ನ ವಿನಾಯಕನನ್ನು ಪೂಜಿಸುವುದರಿಂದ, ವಿಘ್ನ ವಿನಾಶಕ ಆಗುತ್ತದೆ ಎಂದು ಹೇಳಲಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಸಹ ಮನೆಯಲ್ಲಿ ವಿನಾಯಕನ ಆರಾಧನೆಯನ್ನು ಮಾಡುತ್ತಾರೆ. ಅಷ್ಟೇ ಅಲ್ಲ ಯಾರೂ ಮನೆಯಲ್ಲಿ ವಿಘ್ನವಿನಾಶಕನ ಮೂರುತಿಯನ್ನು ಸಿಂಹದ್ವಾರದ ಬಳಿ ಇಟ್ಟು, ಆ ಮೂರ್ತಿಯನ್ನು ಪ್ರತಿ ದಿವಸ ಪೂಜೆ ಮಾಡುತ್ತಾರೆ ಅಂಥವರ ಮನೆಗೆ ದುಷ್ಟ ಶಕ್ತಿಯ ಪ್ರವೇಶ ಆಗುವುದಿಲ್ಲ ಅಂತ ಕೂಡ ಹೇಳಲಾಗುತ್ತದೆ.

ಹಾಗಾದರೆ ಇಂದಿನ ಮಾಹಿತಿಯಲ್ಲಿ ವಿನಾಯಕನ ಆರಾಧನೆ ಮಾಡುವಾಗ ಪಠಿಸುವ ಮಂತ್ರಗಳಲ್ಲಿ ವಿಶೇಷ ಮಂತ್ರವೊಂದನ್ನು ನಿಮಗೆ ತಿಳಿಸಿಕೊಡುತ್ತೇವೆ. ಈ ಮಂತ್ರವನ್ನು ನೀವು ಕೂಡ ತಪ್ಪದೆ ತಿಳಿಯಿರಿ ಪ್ರತಿದಿವಸ ವಿನಾಯಕನ ಆರಾಧನೆ ಅಲ್ಲಿ ಈ ಮಂತ್ರ ಪಠಣೆ ಮಾಡಿ.ವಿನಾಯಕನಾದ ಗಣಪನೂ ವಿಘ್ನವಿನಾಶಕನಾದ ಕಾರಣ ಯಾವಾಗಲೂ ಆದಿ ಪೂಜೆ ವಿನಾಯಕನಿಗೆ ಸಲ್ಲುತ್ತದೆ ಅದೇ ರೀತಿ ಯಾರೂ ತಮ್ಮ ಕೆಲಸಕ್ಕೆ ಹೋಗುತ್ತಾ ಇರುತ್ತಾರೆ,

ಆ ಕೆಲಸಕ್ಕೆ ಹೋಗುವ ಮುನ್ನ ತಪ್ಪದೇ ಗಣೇಶನ ದರ್ಶನ ಪಡೆದು ಗಣೇಶನ ಈ ಮಂತ್ರವನ್ನು ಪಠಿಸಿ ಮಾಡಿಕೊಂಡು ಹೋದರೆ, ರಸ್ತೆಯಲ್ಲಿ ಹೋಗುವಾಗ ಆಗಲಿ ಅಥವಾ ಕೆಲಸಕ್ಕೆ ಹೋಗುವ ದಾರಿಯಲ್ಲಿ ಆಗಲಿ, ಯಾವ ಅಡೆತಡೆಗಳೂ ಸಹ ನಿಮ್ಮನ್ನು ತಡೆಯುವುದಿಲ್ಲ ಮತ್ತು ನಿಮ್ಮ ಕೆಲಸಗಳು ವಿಘ್ನಗಳು ಇಲ್ಲದೆ ನೆರವೇರುತ್ತದೆ. ಇನ್ನೂ ಆ ಮಂತ್ರ ಯಾವುದು ಅಂದರೆ ಓ ವಿಘ್ನ ನಾಶ ನಮಃ ಓಂ ವಿಜ್ಞಾನ ಶಾಹ್ ನ ಮಹಾ ಈ ರೀತಿ ಈ ಮಂತ್ರವನ್ನು ತಪ್ಪದೆ ಪ್ರತಿ ದಿವಸ ಪಟನೆ ಮಾಡಬೇಕು.

ಎಷ್ಟು ಬಾರಿ ಅಂದರೆ ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖಗೊಂಡಿರುವ ಹಾಗೆ ಯಾವುದೇ ಮಂತ್ರವನ್ನಾಗಲಿ ನೂರ ಎಂಟು ಬಾರಿ ಪಠಣೆ ಮಾಡಿದರೆ, ಆ ಮಂತ್ರದ ಪೂರ್ಣ ಫಲವು ನಿಮಗೆ ದೊರೆಯುತ್ತದೆ ಎಂದು ಹೇಳಲಾಗಿದೆ. ಆದ್ದರಿಂದ ವಿಘ್ನವಿನಾಶಕನಾದ ಗಣಪತಿಯ ಈ ಮಂತ್ರವನ್ನು ಸಹ ನೀವು ಪ್ರತಿದಿವಸ ಮಾಡಿ ಎಷ್ಟು ಬಾರಿ ಅಂದರೆ ನೂರ ಎಂಟು ಬಾರಿ. ಇದರಿಂದ ನಿಮ್ಮ ಜೀವನದಲ್ಲಿ ಉಂಟಾಗುವ ಅಡೆತಡೆಗಳು ನಿವಾರಣೆಯಾಗಿ ನಿಮ್ಮ ಕೆಲಸಗಳು ಪರಿಪೂರ್ಣವಾಗಿ ಸಾಗುತ್ತದೆ ಆ ಕೆಲಸದಿಂದ ನೀವು ಒಳ್ಳೆಯ ಫಲವನ್ನು ಸಹ ಪಡೆದುಕೊಳ್ಳುತ್ತೀರ.

ಮನೆಯಲ್ಲಿ ಗಣಪತಿ ಆರಾಧನೆ ಅನ್ನು ತಪ್ಪದೇ ಮಾಡಿ ಇನ್ನೂ ಸೂರ್ಯೋದಯದ ಸಮಯದಲ್ಲಿ ಗಣಪತಿ ಆರಾಧನೆ ಮಾಡುವುದು ಶ್ರೇಷ್ಠ ಎಂದು ಹೇಳಲಾಗಿದೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಒಂದಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ವಿನಾಯಕನ ಮೂರ್ತಿಯನ್ನು ಇಡಬೇಡಿ ಅಷ್ಟೇ ಅಲ್ಲ ವಿನಾಯಕ ಆರಾಧನೆ ಯಿಂದ ಬುದ್ಧಿಯು ಸಹ ಹೆಚ್ಚುತ್ತದೆ, ವಿದ್ಯಾಭ್ಯಾಸದಲ್ಲಿ ಮಕ್ಕಳು ಎದುರಿಸುವ ಸಕಲ ತೊಂದರೆಗಳು ನಿವಾರಣೆ ಆಗುತ್ತದೆ, ವಿನಾಯಕನ ಪೂಜೆಯಿಂದಾಗಿ.

ಆದ್ದರಿಂದ ತಪ್ಪದೆ ಮನೆಯಲ್ಲಿ ಮಕ್ಕಳ ಕೈನಲ್ಲಿ ಗಣೇಶನ ಆರಾಧನೆ ಅನ್ನು ಮಾಡಿಸಿ ಇದರಿಂದ ಮನೆಗೂ ಕೂಡ ಒಳಿತಾಗುತ್ತದೆ ಹಾಗೂ ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಉನ್ನತಿ ಅನ್ನೂ ಸಹ ಕಾಣುತ್ತಾರೆ ಹಾಗೂ ಸಮಾಜಕ್ಕೆ ಒಳ್ಳೆಯ ವ್ಯಕ್ತಿಗಳಾಗುತ್ತಾರೆ. ಆದ್ದರಿಂದಲೇ ಹೇಳುವುದು ಶಾಸ್ತ್ರಗಳು ಕೂಡ ತಿಳಿಸುವುದು, ವಿನಾಯಕನ ಪೂಜೆಯನ್ನು ಮಕ್ಕಳ ಕೈನಿಂದ ಮಾಡಿಸಿದರೆ ಶ್ರೇಷ್ಠ ಎಂದು. ನೀವು ಸಹ ಈ ದಿನ ತಿಳಿಸಿದ ಈ ಮಂತ್ರವನ್ನು ಪಠಣೆ ಮಾಡಿ ವಿನಾಯಕನ ಅನುಗ್ರಹಕ್ಕೆ ಪಾತ್ರರಾಗಿ ಧನ್ಯವಾದಗಳು.

Leave a Reply

Your email address will not be published.