ನಿಮಗೇನಾದ್ರು ಅಜೀರ್ಣ ಆಗಿ ಹೊಟ್ಟೆ ನೋವು ಬರುತ್ತಿದ್ದರೆ ಈ ಚಿಕ್ಕ ಕೆಲಸ ಮಾಡಿ ಒಂದೇ ದಿನದಲ್ಲಿ ಕಮ್ಮಿ ಆಗತ್ತೆ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮಗೆ ಏನಾದರೂ ಅಜೀರ್ಣ ಸಮಸ್ಯೆಯಿಂದ ಓಟನ್ನು ಆದರೆ ಅದರಿಂದ ಯಾವ ರೀತಿಯಾದ ಒಂದು ಉಪಯೋಗಗಳನ್ನು ಬಳಸಿಕೊಂಡು ನೀವು ಅದರಿಂದ ಹೊರ ಬರಬಹುದು ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ

ಹೊಟ್ಟೆ ಉಬ್ಬರ ಇರುವಾಗ ನಿಂಬೆಹಣ್ಣಿನ ರಸದೊಂದಿಗೆ ಅಪ್ಪಟ ಹರಳೆಣ್ಣೆಯನ್ನು ( ರಸದ ಅರ್ಧ ಭಾಗದಷ್ಟು ) ಬೆರೆಸಿ ಕುಡಿದರೆ ವಾಸಿಯಾಗುತ್ತದೆ . ಉಷ್ಟ್ರಕ್ಕೆ ಹೊಟ್ಟೆನೋವು , ಆದಾಗ ಜೀರಿಗೆ , ಸಕ್ಕರೆ , ಒಣಶುಂಠಿ ಮತ್ತು ಅಡಿಗೆ ಉಪ್ಪನ್ನು ಒಂದೊಂದು ಟೀ ಸ್ಪೂನಿನಷ್ಟು ತೆಗೆದುಕೊಂಡು , ನುಣ್ಣಗೆ ಪುಡಿ ಮಾಡಿ , ಅರ್ಧ ಬಟ್ಟಲು ಬಿಸಿನೀರಿಗೆ ಒಂದು ಹೋಳು ನಿಂಬೆಹಣ್ಣಿನೊಂದಿಗೆ ಸೇರಿಸಿ ಕುಡಿದರೆ ಹೊಟ್ಟೆನೋವು ಕಡಿಮೆ ಆಗುವುದು .

ನೇರಳೆಹಣ್ಣು ಹೋಳುಮಾಡಿ , ಜೀರಿಗೆ ಪುಡಿ ತುಂಬಿ , ಮಂಜು ಬೀಳುತ್ತಿರುವ ರಾತ್ರಿಯಲ್ಲಿ ಇಡಿ , ಮರುಬೆಳಿಗ್ಗೆ ಅದರ ರಸ ಕುಡಿಯಿರಿ . ತುಂಬಾ ದಿನಗಳಿಂದ ಹೊಟ್ಟೆನೋವಿನಿಂದ ನರಳುವವರಿಗೆ ವಾಸಿ ಎನಿಸುವುದು .ಬರಿಯ ಜೀರಿಗೆ ಕಾಳನ್ನು ಅಗಿದು ತಿನ್ನುತ್ತಿದ್ದರೆ ಹೊಟ್ಟೆನೋವು ಇಳಿಮುಖ ಆಗುವುದು . ಒಂದು ಟೀ ಚಮಚ ಮೆಣಸನ್ನು ಹದವಾಗಿ ಹುರಿದು , ಹುರಿದ ಮೆಣಸಿಗೆ ಒಂದು ಹಿಡಿ ತುಳಸಿ ಎಲೆ ಸೇರಿಸಿ ಕುದಿಯುವ ಒಂದು ಬಟ್ಟಲು ನೀರಿನಲ್ಲಿ ಬೆರೆಸಿಡಿ ,

ಕೊಂಚ ಕಾಲದ ನಂತರ ಶೋಧಿಸಿ , ಸ್ವಲ್ಪ ಜೇನುತುಪ್ಪ ಬೆರೆಸಿ , ಮೂರು ನಾಲ್ಕು ದಿನಗಳ ಕಾಲ ಈ ಕಷಾಯವನ್ನು ಸೇವಿಸುತ್ತಿದ್ದರೆ ಅಜೀರ್ಣದಿಂದ ಸಂಭವಿಸುವ ಹೊಟ್ಟೆನೋವು ದೂರ ಆಗುವುದು .ಒಂದು ಊಟದ ಚಮಚದಷ್ಟು ಕಾದ ಹಸುವಿನ ತುಪ್ಪಕ್ಕೆ ಮೆಣಸಿನ ಕಾಳಿನಪುಡಿ ಮತ್ತು ಉಪ್ಪು ಸೇರಿಸಿ , ಕುದಿಸಿ , ಬಿಸಿ ಅನ್ನಕ್ಕೆ ಮಿಶ್ರಣವನ್ನು ಹಾಕಿಕೊಂಡು , ಕಲಸನ್ನದಂತೇಊಟ ಮಾಡಿದರೆ ನಾಲಿಗೆಗೂ ರುಚಿ , ಅಜೀರ್ಣ ಹಾಗೂ ಹೊಟ್ಟೆ ಉಬ್ಬರವೂ ಕಡಿಮೆ ಆಗುವುದು .

ಸಕ್ಕರೆ ಬೆರೆಸಿದ ಕೊತ್ತುಂಬರಿ ಬೀಜದ ಕಷಾಯ ಸೇವಿಸಿದರೆ ಅಜೀರ್ಣ ಹಾಗೂ ಹುಳಿತೇಗು ಬರುವಿಕೆ ಕಡಿಮೆ ಆಗುವುದು . ಊಟಕ್ಕೆ ಮುಂಚೆ ಕೊಂಚ ಹಸಿಶುಂಠಿಯನ್ನು ಅಗಿದು ಹರಳು ಉಪ್ಪು ಸಹಿತ ಅಗಿದು , ತಿಂದರೆ ಅಜೀರ್ಣದಿಂದ ಉಂಟಾದ ಹೊಟ್ಟೆನೋವು ಕಡಿಮೆ ಆಗುವುದು .ಎರಡು ಅಂಗುಲದಷ್ಟು ಉದ್ದ ಹಸಿಶುಂಠಿಯನ್ನು ನೀರಿನಲ್ಲಿ ಚೆನ್ನಾಗಿ ಅರೆದು ಕದಡಿ ಶೋಧಿಸಿದ ನಂತರ ಜೇನುತುಪ್ಪ , ನಿಂಬೆಹಣ್ಣಿನ ರಸವನ್ನು ಬೆರೆಸಿ ಸೇವಿಸುವುದರಿಂದ ಜೀರ್ಣದಿಂದ ಉಂಟಾಗುವ ಹೊಟ್ಟೆನೋವು ನಿವಾರಣೆ ಆಗುವುದು

ಕೊತ್ತುಂಬರಿ ಬೀಜ , ಒಣಶುಂಠಿಯ ಕಷಾಯ ತಯಾರಿಸಿ , ಸೇವಿಸುವುದ ರಿಂದ ಹೊಟ್ಟೆನೋವು ಕಡಿಮೆ ಆಗುವುದು . ಒಂದು ಚೂರು ಹಸಿಶುಂಠಿಯನ್ನು ಚೆನ್ನಾಗಿ ಅರೆದು , ನೀರಿನಲ್ಲಿ ಕದಡಿ ಶೋಧಿಸಿದ ನಂತರ ಜೇನುತುಪ್ಪ , ನಿಂಬೆಹಣ್ಣಿನ ರಸ ಬೆರೆಸಿ ಸೇವಿಸುವುದ ರಿಂದ ಹೊಟ್ಟೆನೋವು ಹಾಗೂ ಹೊಟ್ಟೆ ಉಬ್ಬರ ಕಡಿಮೆ ಆಗುವುದು .ಮಕ್ಕಳಿಗೆ ಹಸಿಶುಂಠಿಯ ರಸವನ್ನು ಜೇನುತುಪ್ಪದಲ್ಲಿ ಬೆರೆಸಿ ಕೊಡುವುದರಿಂದ ಕರುಳು ಮತ್ತು ಜಠರಕ್ಕೆ ಸಂಬಂಧಿಸಿದ ಖಾಯಿಲೆ ದೂರ ಆಗುವುದು . ಅತಿಯಾದ ಹೊಟ್ಟೆನೋವು ಆದಾಗ ಸೀಬೆಹಣ್ಣನ್ನು ಉಪ್ಪು ಮತ್ತು ಕಾಳು ಮೆಣಸಿನ ಪುಡಿಯೊಂದಿಗೆ ತಿಂದರೆ ನೋವು ನಾಶವಾಗಿ ಹೊಟ್ಟೆ ಹಗುರ ಆಗುತ್ತದೆ .

ಬೆಳ್ಳುಳ್ಳಿ ಬಳಕೆ ಹೊಟ್ಟೆನೋವನ್ನು ಹತ್ತಿರ ಬಾರದಂತೆ ತಡೆಯುತ್ತದೆ . 16. ಸಕ್ಕರೆಯೊಂದಿಗೆ ನೆಲ್ಲಿಕಾಯಿ ರಸ ಕುಡಿಯುವುದರಿಂದ ಹೊಟ್ಟೆನೋವು ಕಡಿಮೆ ಆಗುತ್ತದೆ .ಬಿಳಿ ದ್ರಾಕ್ಷಿಯನ್ನು ಯಥೇಚ್ಛವಾಗಿ ಊಟ ಆದ ನಂತರ ತಿನ್ನುತ್ತಿದ್ದರೆ ಹೊಟ್ಟೆನೋವು ಕಡಿಮೆ ಆಗುವುದು . 18. ತೆಂಗಿನತುರಿ ಮತ್ತು ಎಳೆನೀರಿನೊಂದಿಗೆ ಗಟ್ಟಿ ಕಲ್ಲುಸಕ್ಕರೆ , ಏಲಕ್ಕಿಪುಡಿ ಸೇರಿಸಿ , ದಿನವೂ ಒಂದೊಂದು ಬಾರಿ ಸೇವಿಸುತ್ತಿದ್ದರೆಹೊಟ್ಟೆನೋವು ಕಡಿಮೆ ಆಗುವುದಲ್ಲದೆ ಹೊಟ್ಟೆಹುಣ್ಣು ಗುಣ ಆಗುವುದು .ಊಟಕ್ಕೆ ಮೊದಲು ಅನಾನಸ್ ರಸಕ್ಕೆ ಉಪ್ಪು , ಮೆಣಸು ಪುಡಿ ಮಿಶ್ರ ಮಾಡಿ ಕುಡಿದರೆ ಹೊಟ್ಟೆನೋವು ವಾಸಿ ಆಗುವುದು .

Leave a Reply

Your email address will not be published.