ನಮಸ್ಕಾರ ಸ್ನೇಹಿತರೇ ,ದೇವರು ಎಲ್ಲಾ ಕಡೆ ಇದ್ದಾನೆ . ಆದರೆ ಕೆಲವೊಂದು ಜಾಗದಲ್ಲಿ ದೇವರು ಜೀವಂತ ಇದ್ದಾರೆ ಎಂದು ಹೇಳಲಾಗುತ್ತದೆ . ಹಾಗಾಗಿ ಇಲ್ಲಿರುವ ಒಂದು ಹನುಮಂತ ಸ್ವಾಮಿಯ ದೇವಸ್ಥಾನದಲ್ಲಿ ಹನುಮಂತನ ವಿಗ್ರಹದಿಂದ ಆಂಜನೇಯ ಎನ್ನುವ ಶಬ್ದ ಕೇಳಿ ಬರುತ್ತದೆ ಎಂದು ಹೇಳಲಾಗುತ್ತದೆ .ಹಾಗಾದ್ರೆ ಈ ಒಂದು ಅಚ್ಚರಿ ಮೂಡಿಸುವ ದೇವಸ್ಥಾನ ಇರುವುದು ಎಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇನೆ
ಹನುಮಂತನ ಅನೇಕ ದೇವಾಲಯಗಳನ್ನು ನಾವು ನಮ್ಮ ಭಾರತದೇಶದಲ್ಲಿ ಹಾಗೂ ನಮ್ಮ ಕರ್ನಾಟಕದಲ್ಲಿ ನಾವು ನೋಡಬಹುದು ಕೆಲವೊಂದು ಹನುಮಂತನ ದೇವಸ್ಥಾನಗಳು ಸಿಕ್ಕಾಪಟ್ಟೆ ಪವಾಡವನ್ನು ಮಾಡುತ್ತಿರುವಂತಹ ಶಕ್ತಿಯನ್ನು ಹೊಂದಿರುತ್ತವೆ .ಹಾಗೂ ಈ ದೇವಸ್ಥಾನಕ್ಕೆ ನೀವೇನಾದರೂ ಹೋಗಿದ್ಯಾ ನಲ್ಲಿ ನಿಮ್ಮ ಕಷ್ಟಗಳನ್ನು ನಿರ್ವಹಣೆ ಮಾಡುವಂತಹ ಶಕ್ತಿ ಹನುಮಂತ ದೇವರಿಗೆ ಇದೆ, ಹಲವಾರು ದೇವಸ್ಥಾನಗಳು ಕೇವಲ ಹನುಮಂತ ನೆಲೆಸಿರುವಂತಹ ದೇವಸ್ಥಾನಗಳು ಮಾತ್ರ ಸಿಕ್ಕಾಪಟ್ಟೆ ಪವರ್ಫುಲ್ ಹಾಗೂ ಇಲ್ಲಿ ಯಾವುದೇ ಮಾಟ-ಮಂತ್ರ ಅಥವಾ ಕಷ್ಟಗಳು ಇದ್ದಲ್ಲಿ.ನೀವು ಹನುಮಂತನ ದೇವಸ್ಥಾನಕ್ಕೆ ಹೋಗಿ ನಿಷ್ಠೆಯಿಂದ ಈ ದೇವರನ್ನು ಬೇಡಿಕೊಂಡರೆ ಹನುಮಂತನ ನಿಮ್ಮ ಕಷ್ಟಗಳನ್ನು ನಿವಾರಣೆ ಮಾಡಿ ನೀವು ಯಾವಾಗಲೂ ಭಯ ಇಲ್ಲದೆ ಜೀವನವನ್ನು ಸಾಧಿಸುವಂತಹ ವರವನ್ನ ಕೊಡುವಂತಹ ಶಕ್ತಿ ಏಕೆ ದೇವರು ಅಂದರೆ ಹನುಮಂತನಿಗೆ ಮಾತ್ರವೇ ಇದೆ…
ಹಾಗಾದರೆ ಬನ್ನಿ ಇಲ್ಲಿರುವಂತಹ ಹನುಮಂತನ ವಿಗ್ರಹದಲ್ಲಿ ರಾಮ ರಾಮ ಎನ್ನುವಂತಹ ಶಬ್ದ ಕೇಳಿಬರುತ್ತದೆ ಹೀಗೆ ಈ ರೀತಿಯಾದಂತಹ ವಿಸ್ಮಯವನ್ನ ಮಾಡುತ್ತಿರುವಂತಹ ದೇವಸ್ಥಾನ ಆದರೂ ಎಲ್ಲಿದೆ ಎನ್ನುವಂತಹ ಮಾಹಿತಿ ನಾವು ತಿಳಿದುಕೊಳ್ಳೋಣ ಬನ್ನಿ.ಈ ಪ್ರದೇಶ ಇರುವುದು ಉತ್ತರಪ್ರದೇಶದ ಇತವಾದಿಂದ 21 ಕಿಲೋ ಮೀಟರ್ ಕ್ರಮಿಸಿದ ನಂತರ ರೋರ ಎಂಬ ಹಳ್ಳಿಯಲ್ಲಿ ಈ ರೀತಿಯಾದಂತಹ ಒಂದು ದೇವಸ್ಥಾನವನ್ನು ನಾವು ನೋಡಬಹುದು, ರಾಮ ಭಕ್ತ ಆಗಿರುವಂತಹ ಹನುಮಂತನ ದೇವಸ್ಥಾನ ಪಿಲುವ ರಾಮಮಂದಿರ ಅಂತ ಕೂಡ ಕರೆಯುತ್ತಾರೆ.ಈ ದೇವಸ್ಥಾನ ಯಮುನಾ ನದಿಯ ದಂಡೆಯ ಮೇಲೆ ಸ್ಥಾಪಿತವಾಗಿದ್ದು ಇಲ್ಲಿ ದಿನಕ್ಕೆ ಸಾವಿರಾರು ಜನರು ಇಲ್ಲಿ ಬಂದು ತಮ್ಮ ಕಷ್ಟವನ್ನ ನೆರವೇರಿಸಿಕೊಳ್ಳಲು ದೇವರ ಹತ್ತಿರ ಮೊರೆಹೋಗುತ್ತಾರೆ ಹೀಗೆ ಭಕ್ತರ ಕೋರಿಕೆಯನ್ನು ಸ್ವೀಕರಿಸುವಂತಹ ಇಲ್ಲಿನ ದೇವರು ಅವರ ಕಷ್ಟಗಳನ್ನು ನಿವಾರಣೆ ಮಾಡುವಂತಹ ಶಕ್ತಿ ಮುಂದಿದ್ದಾನೆ ಎನ್ನುವುದು ಅಲ್ಲಿನ ಭಕ್ತರ ಒಂದು ಗಾಢವಾದ ನಂಬಿಕೆಯಾಗಿದೆ.
ಈ ದೇವಸ್ಥಾನದಲ್ಲಿ ಒಂದು ವಿಚಾರ ಏನಪ್ಪಾ ಅಂದರೆ ಯಾವುದೇ ಭಕ್ತರಲ್ಲಿ ಇರುವಂತಹ ಯಾವುದೇ ಕಾಯಿಲೆಗಳು ಆಗಿರಬಹುದು ಈ ದೇವಸ್ಥಾನಕ್ಕೆ ಬಂದು ಭಕ್ತಿಯಿಂದ ದೇವರನ್ನು ಮೊರೆ ಹೋದರೆ, ಯಾವುದೇ ಕಾಯಿಲೆಗಳನ್ನು ನಿವಾರಣೆ ಮಾಡುವಂತಹ ಶಕ್ತಿ ಈ ದೇವರಿಗಿದೆ ಎನ್ನುವಂತಹ ನಂಬಿಕೆ ಇಲ್ಲಿನ ಜನರದ್ದು…ಇನ್ನೊಂದು ವಿಚಾರ ಏನಪ್ಪಾ ಅಂದರೆ ಈ ದೇವಸ್ಥಾನದ ಸುತ್ತಮುತ್ತ ರಾಮ ರಾಮ ಎನ್ನುವಂತಹ ಶಬ್ದವನ್ನು ನಾವು ಕೇಳಬಹುದು ಅದಲ್ಲದೆ ಇನ್ನೊಂದು ವಿಚಿತ್ರವಾದ ವಿಚಾರ ಏನಪ್ಪಾ ಅಂದರೆ ನೀವು ಇಡುವಂತಹ ಪ್ರಸಾದ ಎಲ್ಲಿಗೆ ಹೋಗುತ್ತದೆ ಎನ್ನುವುದು ಯಾರಿಗೂ ಕೂಡ ಇಲ್ಲಿ ಗೊತ್ತಾಗುವುದಿಲ್ಲ ಆರೋಗ್ಯದಂತಹ ಒಂದು ವಿಚಿತ್ರವಾದ ಚಮತ್ಕಾರವನ್ನು ಮಾಡುವಂತಹ ದೇವಸ್ಥಾನ ಎಂದಾಗಿದೆ. ಈ ದೇವಸ್ಥಾನವು ಹಲವಾರು ವರ್ಷಗಳ ಒಂದು ಹಿನ್ನೆಲೆಯನ್ನು ಹೊಂದಿದ್ದು ಇದು ರಾಜ ಚಕ್ರ ಹುಕ್ಕ ಚಂದ್ರ ಪ್ರತಾಪಸಿಂಹ ಕಾಲದಲ್ಲಿ ನಿರ್ಮಾಣ ಆಗಿರುವಂತಹ ದೇವಸ್ಥಾನವಾಗಿದೆ.
ಈ ದೇವಸ್ಥಾನವನ್ನು ದಕ್ಷಿಣ ಮುಖವಾಗಿ ಸ್ಥಾಪನೆ ಮಾಡಿದ್ದು ಇಲ್ಲಿರುವಂತಹ ಹನುಮಂತನ ವಿಗ್ರಹ ಮಲಗಿರುವ ಅಂತಹ ಒಂದು ರೀತಿಯಲ್ಲಿ ಇದನ್ನ ಕಟ್ಟಲಾಗಿದೆ ನೀವೇನಾದರೂ ನಿಮ್ಮ ಕಿವಿಯನ್ನು ಮಲಗ್ ಇರುವಂತಹ ಮೂರ್ತಿಯ ಹತ್ತಿರ ಏನಾದರೂ ನೀವು ಗಮನಿಸಿದ್ದೇ ಅದಲ್ಲಿ ನಿಮಗೆ ರಾಮ ರಾಮ ಎನ್ನುವಂತಹ ಕೆಲವೊಂದು ಶಬ್ದವನ್ನು ನೀವು ನೋಡಬಹುದು ಹಾಗೂ ಹನುಮಂತದೇವರ ಉಸಿರಾಟವನ್ನು ಕೂಡ ನೀವು ಗಮನಿಸಬಹುದು…ಆದುದರಿಂದಲೇ ಇಲ್ಲಿದೆ ಬರುವಂತಹ ಜನರು ಹನುಮಂತ ದೇವರು ಇವರು ಕೂಡ ಇಲ್ಲೇ ಇದ್ದಾರೆ ಹಾಗೂ ಇವರು ನಮ್ಮ ಜೀವನ ಕಷ್ಟವನ್ನು ಕೂಡ ಪಾರು ಮಾಡುತ್ತಾರೆ ಎನ್ನುವಂತಹ ನಂಬಿಕೆಯಿಂದ ಇಲ್ಲಿಗೆ ಸಾವಿರಾರು ಜನರು ದಿನನಿತ್ಯ ಬರುತ್ತಾರೆ ಹಾಗೂ ತಮ್ಮ ಕಷ್ಟವನ್ನು ನಿವಾರಣೆ ಮಾಡುವಂತಹ ಹರಿಕೆಯನ್ನು ಕೂಡ ಮಾಡಿಕೊಂಡು ಹೋಗುತ್ತಾರೆ….ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ …