ಪ್ರತೀ ಶನಿವಾರ ಈ ಮರವನ್ನು ಪೂಜೆ ಮಾಡಿದರೆ ಸಾಕು ನೀವು ಹೋದ ಜನ್ಮದಲ್ಲಿ ಮಾಡಿದ ಪಾಪಗಳೆಲ್ಲ ಪರಿಹಾರ ಆಗುತ್ತವೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಜೀವನದಲ್ಲಿ ಎದುರಾಗುವ ಕಷ್ಟ ಕಾರ್ಪಣ್ಯಗಳಿಗೆ ತೊಂದರೆಗಳಿಗೆ ಕೆಲವೊಮ್ಮೆ ನಾವು ಮಾಡಿದಂತಹ ಪಾಪಕರ್ಮಗಳು ಕೂಡ ಕಾರಣವಾಗುತ್ತವೆ, ಈ ಪಾಪಕರ್ಮಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಯಾವ ಪರಿಹಾರವನ್ನು ಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತೇನೆ ಇಂದಿನ ಈ ಮಾಹಿತಿಯಲ್ಲಿ.ಜೀವನದಲ್ಲಿ ಕೆಲವೊಮ್ಮೆ ತಿಳಿದೋ ತಿಳಿಯದೆಯೋ ಕೆಲವೊಂದು ಪಾಪ ಕೃತ್ಯಗಳನ್ನು ಮಾಡಿರುತ್ತೇವೆ ಹಾಗೂ ನಾವು ಬದುಕುತ್ತಿರುವ ಈ ಜೀವನದಲ್ಲಿ ನಮ್ಮ ಹಿಂದಿನ ಜನ್ಮದ ಪಾಪ ಕರ್ಮಗಳ ಪ್ರಭಾವವು ಕೂಡ ಇರುತ್ತದೆ ಹಿಂದಿನ ಜನ್ಮದ ಪಾಪ ಕರ್ಮಗಳಿಂದ ಕೂಡ ನಾವು ಇಂದಿನ ಜನ್ಮದಲ್ಲಿ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.ಆದ ಕಾರಣ ಜೀವನದಲ್ಲಿ ಕಷ್ಟ ಕಾರ್ಪಣ್ಯಗಳು ಎದುರಾಗುತ್ತಿದ್ದರೆ, ಅದಕ್ಕೆ ನಾವು ಈ ಜನ್ಮದಲ್ಲಿ ಅಥವಾ ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಕರ್ಮಗಳೇ ಕಾರಣ ಅನ್ನುವುದಾದರೆ ಅದಕ್ಕೆ ಸುಲಭವಾದ ಪರಿಹಾರವನ್ನು ಮಾಡಬಹುದು ಹೌದು ಶಮಿವೃಕ್ಷ ಅಂದರೆ ಬನ್ನಿ ಮರವನ್ನು ಸ್ಪರ್ಶಿಸಿ ದೇವರ ಪೂಜೆಯನ್ನು ಮಾಡುವುದರಿಂದ ನಮ್ಮ ಸಕಲ ಪಾಪಗಳು ನಿವಾರಣೆಗೊಳ್ಳಲಿದೆ ಎಂಬ ನಂಬಿಕೆ ಉಂಟು.

ಈ ಬನ್ನಿ ಮರದಲ್ಲಿ ದೈವಿ ಗುಣವಿದ್ದು, ಬನ್ನಿ ಮರವನ್ನು ಶ್ರೀ ಶಿವನ ಪತ್ನಿಯಾದ ರಾಜರಾಜೇಶ್ವರಿ ತಾಯಿಗೆ ಹೋಲಿಸಲಾಗುತ್ತದೆ, ಈ ಬನ್ನಿ ಮರಕ್ಕೆ ಶನಿವಾರದ ದಿವಸದಂದು ಪೂಜೆ ಮಾಡುತ್ತಾ ಬರುವುದರಿಂದ ಜೀವನದಲ್ಲಿ ಎದುರಾಗುವ ಕಷ್ಟ ಕಾರ್ಪಣ್ಯಗಳು ನಿವಾರಣೆ ಗೊಳ್ಳುತ್ತದೆ .ಮತ್ತು ನಾವು ಮಾಡುವ ಪಾಪ ಕರ್ಮಗಳಿಗೆ ಕೂಡ ಪರಿಹಾರ ದೊರೆಯುತ್ತದೆ ಎಂದು ಶಾಸ್ತ್ರಗಳು ತಿಳಿಸಿ ಹೇಳುತ್ತಿದ್ದು, ಪ್ರತಿ ಶನಿವಾರ ಬನ್ನಿ ಮರದ ಪೂಜೆಯನ್ನು ಮಾಡುವುದರಿಂದ ಉತ್ತಮ ಪರಿಹಾರವೂ ದೊರೆಯುತ್ತದೆ, ಜೀವನದಲ್ಲಿ ಮಾಡಿದಂತಹ ಪಾಪಕರ್ಮಗಳು ಕೂಡ ನಿವಾರಣೆಗೊಳ್ಳಲಿದೆ.ಬನ್ನಿ ಮರದ ತೊಗಟೆಯನ್ನು ತೆಗೆದುಕೊಂಡು ಬಂದು ಬಹಳ ದಿವಸದಿಂದ ಹಾಸಿಗೆ ಹಿಡಿದಂತಹ ವ್ಯಕ್ತಿಗೆ ಅಥವಾ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತ ಇರುವಂತಹ ವ್ಯಕ್ತಿಗಳಿಗೆ ಒಂದು ಕೆಲಸವನ್ನು ಮಾಡಬೇಕಾಗುತ್ತದೆ ಅದೇನೆಂದರೆ ಬನ್ನಿ ಮರದ ತೊಗಟೆಯನ್ನು ನೀರಿನಿಂದ ಸ್ವಚ್ಛ ಪಡಿಸಿ ಅದಕ್ಕೆ ಧೂಪವನ್ನು ಹಾಕಬೇಕು ನಂತರ ಈ ತೊಗಟೆಯ ಸಹಾಯದಿಂದ, ಆ ಹುಷಾರಿಲ್ಲದ ವ್ಯಕ್ತಿಗೆ ದೃಷ್ಟಿಯನ್ನು ತೆಗೆಯಬೇಕು.

ಈ ರೀತಿ ಮಾಡುವುದರಿಂದ ಆ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ಆರೋಗ್ಯದಲ್ಲಿ ಚೇತರಿಕೆ ಆಗುವುದನ್ನು ನಾವು ಗಮನಿಸಬಹುದು. ಶನಿವಾರದ ದಿವಸದಂದು ಬನ್ನಿ ಮರಕ್ಕೆ ಪೂಜೆಯನ್ನು ಮಾಡುವಾಗ, ಅರಿಶಿಣ ಕುಂಕುಮ ಮತ್ತು ಗಂಧವನ್ನು ಹಚ್ಚಿ ಅಲಂಕರಿಸಿ ಬನ್ನಿ ಮರವನ್ನು ಪೂಜಿಸುವಾಗ ಒಂದು ಮಂತ್ರವನ್ನು ಹನ್ನೊಂದು ಬಾರಿ ಪಠಿಸಬೇಕು.ಆ ಮಂತ್ರವೂ ಹೀಗಿದೆ ” ಓಂ ಶಮೀನ್ ಶಿವ ಸ್ವರೂಪಿಣಿಯೆ ನಮಃ ” ಈ ಒಂದು ಮಂತ್ರವನ್ನು ಹನ್ನೊಂದು ಬಾರಿ ಪಠಿಸುವುದರಿಂದ ಶಮಿವೃಕ್ಷದ ಬನ್ನಿ ಮರದ ಸ್ವರೂಪ ಆಗಿರುವ ರಾಜರಾಜೇಶ್ವರಿ ತಾಯಿಯ ಆಶೀರ್ವಾದವೂ ನಮಗೆ ದೊರೆಯುತ್ತದೆ ಎಂದು ಶಾಸ್ತ್ರವೂ ತಿಳಿಸುತ್ತದೆ.ಈ ರೀತಿಯಾಗಿ ಬನ್ನಿ ಮರದಲ್ಲಿರುವ ದೈವೀ ಸ್ವರೂಪವನ್ನು ದೈವಿ ಶಕ್ತಿಯನ್ನು ಪೂಜಿಸುವುದರಿಂದ ಬಹಳಾನೇ ದೊಡ್ಡ ಪ್ರಯೋಜನವನ್ನು ನಾವು ಪಡೆದುಕೊಳ್ಳಬಹುದಾಗಿದೆ.

ಈ ದಿನ ತಿಳಿಸಿದಂತಹ ಮಾಹಿತಿ ನಿಮಗೆ ಉಪಯುಕ್ತವಾಗಿ ಇದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ, ಇನ್ನೂ ಇಂತಹ ಅನೇಕ ಆಚಾರ ವಿಚಾರಗಳಿಗೆ ಸಂಬಂಧಪಟ್ಟ ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕಾಗಿ, ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಹಾಗೂ ಲೈಕ್ ಮಾಡಿ ಶುಭ ದಿನ ಶುಭವಾಗಲಿ ಧನ್ಯವಾದ.

Leave a Reply

Your email address will not be published.