ನಮಸ್ಕಾರ ಸ್ನೇಹಿತರೇ ,ಇಂದಿನ ಆಹಾರ ಪದ್ಧತಿಗಳ ಏರುಪೇರಿನಿಂದ ನಮ್ಮ ಆರೋಗ್ಯದಲ್ಲಿ ಹಲವಾರು ಬದಲಾವಣೆಗಳು ಉಂಟಾಗಯುತ್ತಿರುತ್ತವೆ ಅದರಲ್ಲಿ ಮೊದಲ ಸಮಸ್ಯೆ ಏನೆಂದರೆ ಚಿಕ್ಕ ವಯಸ್ಸಿಗೆ ಕೂದಲೆಲ್ಲ ಬೆಳ್ಳಗಾಗುವುದು .ಹೌದು ಈ ಸಮಸ್ಯೆ ಈಗ ಸಾಮಾನ್ಯವಾಗಿ ಬಿಟ್ಟಿದೆ ಹಾಗಾಗಿ ಈ ಸಮಸ್ಯೆಯನ್ನು ನಾವು ಆರಾಮಾಗಿ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಬೆಳ್ಳಗಾಗಿರುವ ಕೂದಲನ್ನು ಒಂದೇ ದಿನದಲ್ಲಿ ಕಪ್ಪಾಗಿ ಮಾಡಿಕೊಳ್ಳಬಹುದು .ಹಾಗಾದ್ರೆ ಆ ಒಂದು ಮನೆ ಮದ್ದನ್ನು ಯಾವ ರೀತಿ ಉಪಯೋಗಿಸಬೇಕು ಎನ್ನುವ ಮಾಹಿತಿಯನ್ನು ಸಂಪೂರ್ಣವಾಗಿ ಈ ಒಂದು ಲೇಖನದಲ್ಲಿ ತಿಳಿಯೋಣ ಸ್ನೇಹಿತರೇ
ಇಂದಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡಲು ಇದ್ದೇನೆ ಈ ಕೂದಲು ಉದುರುವ ಸಮಸ್ಯೆಗೆ ಕೆಲವೊಂದು ಮನೆ ಮದ್ದುಗಳು ಕೂದಲು ಉದುರುವ ಸಮಸ್ಯೆ ಒಮ್ಮೆ ಶುರುವಾದರೆ ಅದಕ್ಕೆ ನೀವು ತುಂಬಾ ಕಾಳಜಿ ಮಾಡಿ ಆ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಕೂದಲು ಉದುರುವ ಸಮಸ್ಯೆ ಮತ್ತೆ ಮತ್ತೆ ಹೆಚ್ಚುತ್ತಲೆ ಇರುತ್ತದೆ.ಆದ ಕಾರಣ ಕೂದಲು ಉದುರುವ ಸಮಸ್ಯೆ ನಿಮ್ಮನ್ನು ಕೂಡ ಕಾಡುತ್ತಾ ಇದ್ದರೆ ಇಂದಿನ ಈ ಲೇಖನವನ್ನು ನೀವು ಸಂಪೂರ್ಣವಾಗಿ ತಿಳಿಯಿರಿ. ಆ ನಂತರ ಈ ಮನೆ ಮದ್ದುಗಳಲ್ಲಿ ನಿಮ್ಮ ಕೂದಲಿಗೆ ಹೊಂದುವ ಒಂದು ಮನೆ ಮದ್ದನ್ನು ಪಾಲಿಸಿ ಉತ್ತಮವಾದ ಫಲಿತಾಂಶದೊಂದಿಗೆ ದಪ್ಪವಾದ ಕಪ್ಪಾದ ಸುಂದರವಾದ ಕೇಶ ರಾಶಿಯನ್ನು ನೀವು ಪಡೆದುಕೊಳ್ಳಬಹುದು ಹಾಗಾದರೆ ತಿಳಿಯೋಣ ಇಂದಿನ ಮಾಹಿತಿಯಲ್ಲಿ ಕೂದಲುದುರುವ ಸಮಸ್ಯೆಗೆ ಕೆಲವೊಂದು ಮನೆ ಮದ್ದುಗಳನ್ನು.
ಮೊದಲನೆಯದಾಗಿ ಮೆಂತೆಕಾಳುಗಳನ್ನು ತೆಗೆದುಕೊಂಡು ಅದನ್ನು ರಾತ್ರಿಯೆಲ್ಲ ನೀರಿನಲ್ಲಿ ನೆನೆಸಿಡಿ ನಂತರ ಮಾರನೇ ದಿವಸ ಅದನ್ನು ಪೇಸ್ಟ್ ಮಾಡಿ ಅದಕ್ಕೆ ಮೊಸರನ್ನು ಬೆರೆಸಿ ಈ ಒಂದು ಪ್ಯಾಕ್ ಅನ್ನು ಹೇರ್ ಪ್ಯಾಕ್ ಆಗಿ ಕೂದಲಿಗೆ ಲೇಪನ ಮಾಡಿಕೊಳ್ಳಿ. ಇದೀಗ ಒಂದು ಗಂಟೆಗಳ ಕಾಲ ಹೇರ್ ಪ್ಯಾಕ್ ಅನ್ನು ಹಾಗೆ ಬಿಟ್ಟು ನಂತರ ಬೆಚ್ಚಗಿನ ನೀರಿನಿಂದ ಕೂದಲನ್ನು ಸ್ವಚ್ಛ ಪಡಿಸಿಕೊಳ್ಳಿ.ಎರಡನೆಯದಾಗಿ ಕೂದಲುದುರುವ ಸಮಸ್ಯೆಗೆ ಮೆಂತೆ ಕಾಳಿನ ಪುಡಿ ಅನ್ನ ಮಾಡಿಕೊಳ್ಳಿ ನಂತರ ಈ ಮೆಂತೆ ಕಾಳುಗಳ ಪುಡಿಯನ್ನು ನೀವು ತಿಂಗಳಿನವರೆಗೂ ಶೇಖರಣೆ ಮಾಡಿ ಇಟ್ಟುಕೊಳ್ಳಬಹುದು ಕೂದಲಿಗೆ ಎಣ್ಣೆಯ ನಾ ಲೇಪನ ಮಾಡಿಕೊಳ್ಳುವಾಗ ನಾಲ್ಕೈದು ಚಮಚ ಕೊಬ್ಬರಿ ಎಣ್ಣೆಗೆ ಒಂದು ಚಮಚ ಮೆಂತ್ಯೆ ಕಾಳಿನ ಪುಡಿಯನ್ನು ಬೆರೆಸಿ. ಕೂದಲಿಗೆ ಹಚ್ಚಿಕೊಳ್ಳಬೇಕು ಈ ರೀತಿ ಮಾಡುವುದರಿಂದ ಕೂದಲುದುರುವ ಸಮಸ್ಯೆ ಕ್ರಮೇಣವಾಗಿ ಕಡಿಮೆಯಾಗುತ್ತದೆ ಮತ್ತು ಬಿಳಿ ಕೂದಲಿನ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ.
ಮೂರನೆಯದಾಗಿ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ ನಂತರ ಇದಕ್ಕೆ ಕರಿಬೇವಿನ ಸೊಪ್ಪನ್ನು ಉರಿದು ಪುಡಿ ಮಾಡಿಕೊಂಡ ಪುಡಿಯನ್ನು ಹಾಕಿ ಮಿಶ್ರ ಮಾಡಿ. ನಂತರ ಈ ಸಾಸಿವೆ ಎಣ್ಣೆಯನ್ನು ಕರಿಬೇವಿನ ಸೊಪ್ಪಿನ ಪುಡಿಯೊಂದಿಗೆ ಬೆರೆಸಿ ಕೂದಲಿಗೆ ಲೇಪನ ಮಾಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತಾ ಬರುತ್ತದೆ.ಕೊಬ್ಬರಿ ಎಣ್ಣೆಗೆ ಒಂದು ಚಮಚ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಇದನ್ನು ಕೂದಲಿಗೆ ಲೇಪನ ಮಾಡಿ ಒಂದು ಗಂಟೆಗಳ ನಂತರ ಕೂದಲನ್ನು ತೊಳೆಯಬೇಕು. ಈ ಒಂದು ಪರಿಹಾರವೂ ಕೂಡ ಕೂದಲು ಉದುರುವ ಸಮಸ್ಯೆಯನ್ನು ಪರಿಹರಿಸುತ್ತದೆ ಹೊಟ್ಟಿನಂತಹ ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ.
ಕೂದಲಿಗೆ ಮೆಂತೆ ಕಾಳು ಕರಿಬೇವಿನ ಸೊಪ್ಪು ಕೊಬ್ಬರಿ ಎಣ್ಣೆ ಹರಳೆಣ್ಣೆ ಸಾಸಿವೆ ಎಣ್ಣೆ ಈ ಕೆಲವೊಂದು ಪದಾರ್ಥಗಳನ್ನು ಬಳಸಿ ಪೋಷಣೆ ಮಾಡಿ. ಇದರಿಂದ ಕೂದಲು ಉದುರುವ ಸಮಸ್ಯೆ ಕೂಡ ಪರಿಹಾರವಾಗುತ್ತದೆ. ಕೂದಲು ದಪ್ಪವಾಗಿ ಬೆಳೆಯುತ್ತದೆ ಹಾಗೆ ಕೂದಲಿಗೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ನಿವಾರಣೆಗೊಳ್ಳುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ …