ಯಾವುದೇ ಕಾರಣಕ್ಕೂ ಮದುವೆಯಾದ ಹೆಣ್ಣುಮಕ್ಕಳು ಈ ತಪ್ಪನ್ನು ಮಾಡಬಾರದು ಒಂದು ವೇಳೆ ಮಾಡಿದ್ರೆ ಒಂದರ ಮೇಲೆ ಒಂದು ಕಷ್ಟಗಳು ಬರುತ್ತವೆ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೇ ,ಹೆಣ್ಣು ಸಂಸಾರದ ಕಣ್ಣು ಎಂದು ಹೇಳಲಾಗುತ್ತದೆ ಹಾಗಾಗಿ ಮನೆಯಲ್ಲಿ ಇರುವಂತ ಮದುವೆ ಆದ ಹೆಣ್ಣುಮಕ್ಕಳು ಕೆಲವೊಂದು ಕೆಲಸಗಳನ್ನು ಗಂಡನ ಮನೆಯಲ್ಲಿ ಮಾಡಬಾರದು ಎಂದು ಹೇಳಲಾಗುತ್ತದೆ. ಹಾಗಾಗಿ ಮನೆಯ ಲಕ್ಷ್ಮಿ ಯಾದ ಹೆಣ್ಣುಮಕ್ಕಳು ಮನೆಯಲ್ಲಿ ಈ ರೀತಿಯ ಕೆಲವು ಕೆಲಸಗಳನ್ನು ಮಾಡಬಾರದು ಹಾಗಾದ್ರೆ ಆ ಕೆಲಸಗಳು ಯಾವುವು ಎನ್ನುವುದರ ಸಂಪೂರ್ಣ ಮಾಹಿತಿಯನ್ನು ನಾನು ನಿಮಗೆ ಇಂದಿನ ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ

ಮುತ್ತೈದೆಯರು ಅಂದರೆ ಮನೆಯಲ್ಲಿರುವ ದೇವತೆಗೆ ಸಮಾನ ಹೌದು ಲಕ್ಷ್ಮೀದೇವಿಗೆ ಸಮಾನವಾಗಿರುವ ಮುತ್ತೈದೆಯರು ಇಂತಹ ಕೆಲಸಗಳನ್ನು ಮನೆಯಲ್ಲಿ ಮಾಡಲೇಬೇಡಿ. ಇತ್ತೀಚಿನ ಹೆಣ್ಣುಮಕ್ಕಳಿಗೆ ನಮ್ಮ ಹಿರಿಯರು ರೂಢಿಸಿಕೊಂಡು ಬಂದಿರುವಂತಹ ಆಚಾರ ವಿಚಾರಗಳ ಬಗ್ಗೆ ಅಷ್ಟಾಗಿ ಮಾಹಿತಿ ಇರುವುದಿಲ್ಲ ಪಾಶ್ಚಾತ್ಯರ ಮೊರೆ ಹೋಗಿ ನಮ್ಮ ಶಾಸ್ತ್ರ ಸಂಪ್ರದಾಯಗಳನ್ನು ದೂರ ಮಾಡ್ತಾ ಇದ್ದಾರೆ. ಆದರೆ ನಾವು ನಮ್ಮ ಸಂಪ್ರದಾಯವನ್ನು ನಮ್ಮ ಆಚಾರ ವಿಚಾರಗಳನ್ನು ಬೆಳೆಸಬೇಕು ಉಳಿಸಬೇಕು. ಮುಂದಿನ ಪೀಳಿಗೆಯವರಿಗೆ ಕೊಡುಗೆಯಾಗಿ ನೀಡಬೇಕು ಆಗಲೆ ನಮ್ಮ ಸಂಪ್ರದಾಯ ಉಳಿಯುವುದು ನಮ್ಮ ಸಂಪ್ರದಾಯ ಬೆಳೆಯುವುದು.

ಮನೆಯಲ್ಲಿರುವ ಮುತ್ತೈದೆಯರು ಮಾಡಬೇಕಾಗಿರುವ ಪಾಲಿಸ ಬೇಕಾಗಿರುವಂತಹ ಕೆಲವೊಂದು ವಿಚಾರಗಳ ಬಗ್ಗೆ ತಿಳಿಸಿಕೊಡುತ್ತೇನೆ ಹೆಣ್ಣು ಮಕ್ಕಳು ಇದನ್ನು ಅರಿತು ಈ ರೀತಿ ಮನೆಯಲ್ಲಿ ನಡೆದುಕೊಳ್ಳುವುದರಿಂದ ಆ ಮನೆಗೆ ಶ್ರೇಯಸ್ಸು ಆ ಮನೆಗೆ ಏಳಿಗೆಯಾಗುತ್ತದೆ. ಮೊದಲಿಗೆ ಹೆಣ್ಣು ಮಕ್ಕಳು ಮಾಡಬೇಕಾಗುವಂತಹ ಕೆಲಸವೇನು ಅಂದರೆ ಅದರಲ್ಲಿ ಮುತ್ತೈದೆಯರು ಮನೆಯಲ್ಲಿ ತಡವಾಗಿ ಎದ್ದೇಳಬಾರದು ಮತ್ತು ಯಾವುದೆಂದರೆ ಆ ಸಮಯದಲ್ಲಿ ನಿದ್ರಿಸಬಾರದು. ಇದರಿಂದ ಮನೆಗೆ ಒಳಿತಾಗುವುದಿಲ್ಲ.ಅಷ್ಟೇ ಅಲ್ಲದೆ ಮನೆಯಲ್ಲಿ ಹೆಣ್ಣು ಮಕ್ಕಳು ಸಂಜೆ ಸಮಯದಲ್ಲಿ ಬಟ್ಟೆಗಳನ್ನು ಹೋಗಬಾರದಂತೆ ಹೌದು ಕೆಲಸ ಅಂತ ಕೆಲವರು ಸಂಜೆ ಸಮಯದಲ್ಲಿ ಬಟ್ಟೆಗಳನ್ನು ಒಗೆಯುತ್ತಾ ಇರ್ತಾರೆ ಈ ರೀತಿ ಮಾಡಬಾರದು ಯಾಕೆ ಏಕೆಂದರೆ ಸಂಜೆ ಸಮಯದಲ್ಲಿ ಲಕ್ಷ್ಮೀದೇವಿಯು ಸಂಚಾರ ಮಾಡುತ್ತಾ ಇರುತ್ತಾಳೆ. ಆ ಸಮಯದಲ್ಲಿ ಹೆಣ್ಣುಮಕ್ಕಳು ಬಟ್ಟೆಯನ್ನು ಒಗೆಯಬಾರದು ಮತ್ತು ಮನೆಯಲ್ಲಿ ಹೆಚ್ಚು ನೀರನ್ನು ಖರ್ಚು ಮಾಡಬಾರದು.

ಮನೆಯಲ್ಲಿ ಹೆಣ್ಣು ಮಕ್ಕಳು ಮಾಡಬೇಕಾಗಿರುವ ಮತ್ತೊಂದು ಕೆಲಸ ಏನು ಅಂದರೆ ಸಂಜೆ ಸಮಯದಲ್ಲಿ ಅಂದರೆ ಸೂರ್ಯಾಸ್ತದ ಬಳಿಕ ಮನೆಯಲ್ಲಿ ಕಸ ಗುಡಿಸಬಾರದು ಅಷ್ಟೇ ಅಲ್ಲದೆ ಮನೆಯಲ್ಲಿ ಹೆಣ್ಣು ಮಕ್ಕಳು ಕೂದಲನ್ನು ಬಿಟ್ಟುಕೊಂಡು ಓಡಾಡಬಾರದು ಇದರಿಂದ ಮನೆಗೆ ಶ್ರೇಯಸ್ಸಲ್ಲ ಇನ್ನು ಕೆಲವರು ದೇವರ ಪೂಜೆಯನ್ನು ಮಾಡುವಾಗ ಕೂದಲನ್ನು ಬಿಟ್ಟುಕೊಂಡು ಪೂಜೆಯನ್ನು ಮಾಡ್ತಾರೆ.ಕೆಲವರು ಸ್ನಾನ ಮಾಡಿದ ಕೂಡಲೆ ತಲೆಯನ್ನು ಒಣಗಿಸಿ ಕೊಳ್ಳುವುದಿಲ್ಲ ತಲೆಯಲ್ಲಿರುವ ನೀರು ಮನೆಯಲ್ಲ ಅಳುಕುತ್ತಾ ಇರುತ್ತದೆ ಇದರಿಂದ ಮನೆಗೆ ಶ್ರೇಯಸ್ಸಲ್ಲ ಮತ್ತು ಕೆಲವರು ಬಟ್ಟೆಯನ್ನು ಕೂದಲಿಗೆ ಕಟ್ಟಿಕೊಂಡು ಹಾಗೆ ಪೂಜೆ ಮಾಡ್ತಾ ಇರ್ತಾರೆ ಈ ರೀತಿ ಮನೆಯಲ್ಲಿ ಹೆಣ್ಣು ಮಕ್ಕಳು ಮಾಡಬಾರದು ಕೂದಲನ್ನು ಒಣಗಿಸಿ ಒಂದು ಜಡೆಯನ್ನು ಕಟ್ಟಿ ನಂತರ ದೇವರ ಪೂಜೆಯನ್ನು ಮಾಡಬೇಕು.

ಯಾಕೆ ಅಂದರೆ ನಾವು ಸ್ನಾನ ಮಾಡುವುದೇ ಮೈಲಿಗೆಯನ್ನು ಕಳೆದು ಕೊಳ್ಳುವುದಕ್ಕಾಗಿಯೇ ಈ ಮೈಲಿಗೆಯ ನೀರು ಮನೆಯೆಲ್ಲಾ ಹರಡಬಾರದು ಮತ್ತು ದೇವರ ಮನೆಯಲ್ಲಿಯೂ ಕೂಡ ಈ ಒಂದು ಕೂದಲಿನಿಂದ ನೀರು ತೊಟ್ಟಿಕ್ಕಬಾರದು. ಆದ ಕಾರಣ ಮನೆಯಲ್ಲಿ ಹೆಣ್ಣು ಮಕ್ಕಳು ಸ್ನಾನ ಆದ ಬಳಿಕ ತಲೆ ಕೂದಲನ್ನು ಚೆನ್ನಾಗಿ ಒಣಗಿಸಿ ನಂತರ ಪೂಜೆ ಮಾಡುವುದು ಉತ್ತಮ ಒಳ್ಳೆಯದು.ಮುತ್ತೈದೆ ಯಾದವರು ಮತ್ತು ಅದು ಅಂದರೆ ಆಕೆಗೆ ಸಲ್ಲಬೇಕಾಗಿರುವ ಐದು ಮುತ್ತುಗಳನ್ನು ಅಂದರೆ ಹರಿಶಿಣ ಕುಂಕುಮ ಬಳೆಗಳು ತಾಳಿಸರ ಮೂಗುತ್ತಿ ಇವುಗಳನ್ನು ಯಾವಾಗಲೂ ಧರಿಸಿರಬೇಕು ಇದು ಗಂಡನಿಗೆ ಶ್ರೇಯಸ್ಸು ಅಂತ ಹೇಳಲಾಗುತ್ತದೆ. ಮನೆಯಲ್ಲಿ ಹೆಣ್ಣು ಮಕ್ಕಳು ಶುಕ್ರವಾರ ಮತ್ತು ಮಂಗಳವಾರ ದಿವಸದಂದು ಕಣ್ಣೀರನ್ನು ಹಾಕಲೇಬಾರದು. ಇದರಿಂದ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳೆ ಲಕ್ಷ್ಮೀದೇವಿ ಅಂತಹ ಮನೆಗಳಲ್ಲಿ ನೆಲೆಸುವುದಿಲ್ಲ ಇದು ಮನೆಗೆ ದಾರಿದ್ರ ಅಂತ ಹೇಳ್ತಾರೆ. ನಮಸ್ಕಾರ ಸ್ನೇಹಿತರೇ ,ಹೆಣ್ಣು ಸಂಸಾರದ ಕಣ್ಣು ಎಂದು ಹೇಳಲಾಗುತ್ತದೆ ಹಾಗಾಗಿ ಮನೆಯಲ್ಲಿ ಇರುವಂತ ಮದುವೆ ಆದ ಹೆಣ್ಣುಮಕ್ಕಳು ಕೆಲವೊಂದು ಕೆಲಸಗಳನ್ನು ಗಂಡನ ಮನೆಯಲ್ಲಿ ಮಾಡಬಾರದು ಎಂದು ಹೇಳಲಾಗುತ್ತದೆ. ಹಾಗಾಗಿ ಮನೆಯ ಲಕ್ಷ್ಮಿ ಯಾದ ಹೆಣ್ಣುಮಕ್ಕಳು ಮನೆಯಲ್ಲಿ ಈ ರೀತಿಯ ಕೆಲವು ಕೆಲಸಗಳನ್ನು ಮಾಡಬಾರದು ಹಾಗಾದ್ರೆ ಆ ಕೆಲಸಗಳು ಯಾವುವು ಎನ್ನುವುದರ ಸಂಪೂರ್ಣ ಮಾಹಿತಿಯನ್ನು ನಾನು ನಿಮಗೆ ಇಂದಿನ ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ

Leave a Reply

Your email address will not be published.