ಯಾವುದೇ ಕಾರಣಕ್ಕೂ ತುಳಸಿ ಕಟ್ಟೆ ಹತ್ತಿರ ಈ ವಸ್ತುಗಳನ್ನ ಇಡಬೇಡಿ ಹಾಗೆ ಇಟ್ಟರೆ ಆರ್ಥಿಕ ನಷ್ಟ ಗ್ಯಾರಂಟಿ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸ್ನೇಹಿತರೇ ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಕೂಡ ಗೃಹಿಣಿಯರು ಬೆಳಗ್ಗೆ ಎದ್ದ ತಕ್ಷಣ ಪೂಜೆ ಮಾಡುವುದು ಸಾಮಾನ್ಯ ಅದರಲ್ಲೂ ಕೂಡ ಪ್ರತಿಯೊಬ್ಬರೂ ಕೂಡ ಎದ್ದ ತಕ್ಷಣ ತುಳಸಿ ಪೂಜೆಯನ್ನು ಮಾಡುತ್ತಾರೆ. ಈ ತುಳಸಿ ಪೂಜೆಯನ್ನು ಮಾಡುವುದು ಮನೆಯಲ್ಲಿ ಎಲ್ಲವೂ ಸರಿ ಹೋಗಲಿ ಎಂದು ಮತ್ತು ಯಾವುದೇ ರೀತಿಯ ದಂತಹ ಕೆಟ್ಟ ಘಟನೆಗಳು ಸಂಭವಿಸದೇ ಇರಲಿ ಯಾವುದೇ ನಕಾರಾತ್ಮಕ ಶಕ್ತಿಗಳು ಮನೆಯಲ್ಲಿ ಇಲ್ಲದೇ ಇರಲಿ ಎಂದು ನಾವು ಸಾಮಾನ್ಯವಾಗಿ ಬೆಳಗ್ಗೆ ಎದ್ದ ತಕ್ಷಣ ತುಳಸಿ ಪೂಜೆಯನ್ನು ಮಾಡುತ್ತೇವೆ.ಯಾವುದೇ ಕೆಟ್ಟ ಶಕ್ತಿಗಳು ಮನೆಯನ್ನು ಪ್ರವೇಶ ಮಾಡದಂತೆ ತುಳಸಿ ಗಿಡ ತಡೆಯುತ್ತದೆ ಎಂಬುದು ಎಲ್ಲರ ನಂಬಿಕೆಯಾಗಿದೆ ಆದರೆ ಕೆಲವೊಬ್ಬರು ಎಷ್ಟೇ ತುಳಸಿ ಗಿಡವನ್ನು ಹಾಕಿದರೂ ಕೂಡ ಅದು ಮನೆಯ ಬಳಿಯಲ್ಲಿ ಬೆಳೆಯುತ್ತಿರುವುದಿಲ್ಲ ಬೆಳೆದರೂ ಕೂಡ ಸ್ವಲ್ಪ ದಿನದಲ್ಲಿಯೇ ಒಣಗಿ ಹೋಗುತ್ತದೆ ಆ ರೀತಿ ಆಗಲು ಯಾವ ಕಾರಣವಿದೆ ಎಂದು ತಿಳಿದುಕೊಳ್ಳದೆ .

ಎಲ್ಲರೂ ಕೂಡಾ ಒಂದೊಂದು ಮಾತನಾಡುತ್ತಾರೆ ಅಯ್ಯೋ ಮನೆಗೆ ಹೆಚ್ಚು ದೃಷ್ಟಿಯಾಗಿದೆ ಆದ್ದರಿಂದ ಈ ರೀತಿ ಆಗುತ್ತಿದೆ ಎಂಬ ಏನೇನೋ ಕಾರಣಗಳನ್ನು ಹೇಳುವುದು ಸರ್ವೇ ಸಾಮಾನ್ಯ ಆದರೆ ಈ ದಿನ ನಾವು ನಿಮಗೆ ನೀವು ತುಳಸಿ ಗಿಡದ ಬಳಿ ಯಾವ ವಸ್ತುಗಳನ್ನು ಇಡಲೇ ಬಾರದು ಇಟ್ಟರೆ ಏನಾಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ.ಸ್ನೇಹಿತರೇ ಸಾಮಾನ್ಯವಾಗಿ ತುಳಸಿ ಗಿಡದ ಹತ್ತಿರ ಅಂದರೆ ನಾವು ತುಳಸಿ ಗಿಡವನ್ನು ಮನೆಯ ಬಾಗಿಲಲ್ಲಿ ಅಥವಾ ಕಾಂಪೌಂಡ್ ಒಳಗಡೆ ಹಾಕಿದ್ದೇವೆ ಎಂದರೆ ಆ ತುಳಸಿ ಗಿಡದ ಬಳಿ ಎಂದು ನಾವು ಖಾಲಿ ಬಟ್ಟಲು ಮತ್ತು ಖಾಲಿ ತಟ್ಟೆಯನ್ನು ಇಡಬಾರದು ಅದರ ಜೊತೆಯಲ್ಲಿ ಎಂದೂ ಕೂಡ ನಾವು ಸ್ನಾನ ಮಾಡದೆ ತುಳಸಿ ಗಿಡಕ್ಕೆ ನೀರನ್ನು ಹಾಕಬಾರದು ಸ್ನಾನ ಮಾಡಿದ ನಂತರ ಸಾಧ್ಯವಾದರೆ ,

ತಾಮ್ರದ ಚೊಂಬಿನಿಂದ ನೀರನ್ನು ಹಾಕಿದರೆ ಒಳ್ಳೆಯದು ಇಲ್ಲವಾದರೆ ಮಾಮೂಲಿ ಪಾತ್ರೆಯಿಂದ ನೀರು ಹಾಕಿದರೂ ನಡೆಯುತ್ತದೆ ಆದರೆ ಸ್ನಾನ ಮಾಡಿದ ನಂತರ ನೀರನ್ನು ಹಾಕುವುದು ಉತ್ತಮ ಎಂದೂ ಕೂಡ ತಾಮ್ರದ ಖಾಲಿ ಬಿಂದಿಗೆ ಚೊಂಬು ಇವುಗಳನ್ನು ತುಳಸಿ ಗಿಡದ ಹತ್ತಿರ ಸುಳಿಯದಂತೆ ನೋಡಿಕೊಳ್ಳಬೇಕು.ದೀಪಾರಾಧನೆ ಯನ್ನು ಪ್ರತಿನಿತ್ಯ ನಾವು ತುಳಸಿ ಗಿಡಕ್ಕೆ ಮಾಡುತ್ತೇವೆ ಅದಾಗಿ ದೀಪವು ಹಾರಿಹೋದ ಮೇಲೆ ದೀಪವನ್ನು ಅಲ್ಲಿ ಇಡಬಾರದು ಅದು ಅಪಶಕುನದ ಸಂಕೇತ ತೆಗೆದು ಬೇರೆ ಸ್ಥಳದಲ್ಲಿ ಇಡುವುದು ಉತ್ತಮ ಸಾಮಾನ್ಯವಾಗಿ ತುಳಸಿ ಗಿಡವನ್ನು ಹಾಕಿದ ಜಾಗದಲ್ಲಿ ಕೆಲವೊಬ್ಬರು ಬಟ್ಟೆಯನ್ನು ಒಣ ಹಾಕುವ ಸ್ಥಳವನ್ನಾಗಿ ಮಾಡಿಕೊಂಡಿರುತ್ತಾರೆ ಎಂದೂ ಕೂಡ ಒದ್ದೆ ಬಟ್ಟೆಯ ನೀರು ತುಳಸಿ ಗಿಡಕ್ಕೆ ತಾಕದಂತೆ ನೋಡಿಕೊಳ್ಳಬೇಕು ಆ ರೀತಿ ಮಾಡುವುದರಿಂದಾಗಿ ಮನೆಯಲ್ಲಿ ಕೆಟ್ಟ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತದೆ.

ಈಗ ನಾನು ಹೇಳಿದಂತಹ ವಿಷಯಗಳು ಎಲ್ಲರಿಗೂ ಕೂಡ ಸಾಮಾನ್ಯವಾಗಿದೆ ಎಂದು ಕಂಡು ಬಂದರೂ ಸಾಧ್ಯವಾದಷ್ಟು ಇವುಗಳು ನಡೆಯದಂತೆ ನೋಡಿಕೊಳ್ಳಿ ಏಕೆಂದರೆ ತುಳಸಿಯನ್ನು ದೇವರ ಸಮಾನ ಎಂದು ಹೇಳುತ್ತೇವೆ ತುಳಸಿ ಗಿಡಕ್ಕೆ ಎಂದೂ ಕೂಡ ನಾವು ಅಪಮಾನವನ್ನು ಮಾಡಬಾರದು ಮುಖ್ಯವಾಗಿ ತುಳಸಿ ಗಿಡವನ್ನು ಯಾವುದೇ ಕಾರಣಕ್ಕೂ ಮುಟ್ಟಿನ ಸಂದರ್ಭದಲ್ಲಿ ಮುಟ್ಟಬಾರದು ಆ ರೀತಿ ಮುಟ್ಟಿದರೆ ತುಳಸಿ ಗಿಡ ಒಣಗಿ ಹೋಗುವ ಸಾಧ್ಯತೆ ಇರುತ್ತದೆ ಈಗ ಹೇಳಿದಂತಹ ಮಾರ್ಗಗಳನ್ನು ಅನುಸರಿಸಿ ನಿಮ್ಮ ಮನೆಯಲ್ಲಿ ಖಂಡಿತವಾಗಿಯೂ ತುಳಸಿ ಗಿಡ ಬೆಳೆಯುವುದರಲ್ಲಿ ಯಾವುದೇ ಸಂದೇಹವಿಲ್ಲ ಧನ್ಯವಾದಗಳು.

Leave a Reply

Your email address will not be published.