ದಿನಾಲೂ ನೀವು ಸ್ನಾನ ಮಾಡುವಾಗ ಈ ಒಂದು ಶಕ್ತಿಶಾಲಿಯಾದ ಮಂತ್ರವನ್ನು ಹೇಳಿದರೆ ಸಾಕು ನಿಮ್ಮ ಜೀವನ ಬದಲಾಗಿ ಅದೃಷ್ಟದ ದಿನಗಳು ನಿಮ್ಮದಾಗುತ್ತವೆ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ಪ್ರತಿ ದಿನ ಸ್ನಾನ ಮಾಡುವುದರಿಂದ ನಮ್ಮ ದೇಹ ಮಾತ್ರ ಸ್ವಚ್ಛವಾಗಿರುವುದಿಲ್ಲ ನಮ್ಮ ಮನಸ್ಸು ಕೂಡ ಉಲ್ಲಾಸದಿಂದ ಚೈತನ್ಯದಿಂದ ಇರಲು ಸಹಾಯ ಮಾಡುತ್ತದೆ ಹಾಗೇ ಪ್ರತಿದಿನ ಸ್ನಾನ ಮಾಡದೆ ಇದ್ದರೆ ಹಲವಾರು ರೋಗ ರುಜಿನಗಳಿಗೆ ನಾವು ಒಳಗಾಗಬೇಕಾಗುತ್ತದೆ .ಆದ್ದರಿಂದ ಪ್ರತಿದಿನ ಸ್ನಾನ ಮಾಡುವುದು ಒಳ್ಳೆಯದು ಉತ್ತಮ ಹಾಗೂ ಉತ್ತಮ ಆರೋಗ್ಯಕ್ಕೆ ಪ್ರತಿ ದಿನ ಸ್ನಾನ ಅವಶ್ಯಕವಾದುದು .
ಹೌದು ಸ್ನೇಹಿತರೇ ಯಾಕೆ ಪ್ರತಿದಿನ ಸ್ನಾನ ಮಾಡಲೇಬೇಕು ಎಂಬ ಪ್ರಶ್ನೆಗೆ ಮೊದಲು ಉತ್ತರವನ್ನು ತಿಳಿದುಕೊಳ್ಳೋಣ ನಾವು ಪ್ರತಿದಿನ ಆಚೆ ಹೋದಾಗ ಸಾಕಷ್ಟು ಧೂಳಿನಾಂಶ ನಮ್ಮ ಚರ್ಮದ ಮೇಲೆ ಕೂರುತ್ತದೆ.

ಹಾಗೂ ರೋಗವನ್ನು ಉಂಟು ಮಾಡುವಂತಹ ಬ್ಯಾಕ್ಟೀರಿಯಾಗಳು ವೈರಸ್ ಗಳು ಕೂಡ ಈ ದೂರಿನ ಜೊತೆಗೆ ಚರ್ಮದ ಮೇಲೆ ಕೂರುತ್ತದೆ ಇದರಿಂದಾಗಿ ಚರ್ಮರೋಗ ಸಮಸ್ಯೆ ಕೂಡ ಉಂಟಾಗಬಹುದು .ಆದುದರಿಂದ ನಮ್ಮ ಹಿರಿಯರು ಹೇಳುತ್ತಿದ್ದರೂ ಆಚೆ ಹೋಗಿ ಬಂದ ಕೂಡಲೇ ಕಾಲುಗಳಿಗೆ ನೀರನ್ನು ಹಾಕಿ ಕೈಗಳನ್ನು ಚೆನ್ನಾಗಿ ಶುಚಿಗೊಳಿಸಿಕೊಳ್ಳ ಬೇಕು.

ಎಂದು , ಹಾಗೆಯೇ ಮತ್ತೊಂದು ಕಾರಣವೂ ಕೂಡ ಇದೇ ಮನೆಗೆ ಬಂದ ಕೂಡಲೇ ಕೈ ಕಾಲುಗಳನ್ನು ತೊಳಿದುಕೊಳ್ಳಬೇಕು ಅಂತ ಯಾಕೆ ಹೇಳುತ್ತಾರೆ ಅಂದರೆ ನಾವು ಆಚೆ ಹೋದಾಗ ದುಷ್ಟ ಶಕ್ತಿಗಳಾಗಲಿ ಕೆಟ್ಟ ಶಕ್ತಿಗಳಾಗಲಿ ನಮ್ಮನ್ನು ಸೋಂಕಿರುತ್ತದೆ ಆಗ ನಾವು ಮನೆಗೆ ಬಂದ ಕೂಡಲೇ ಕೈ ಕಾಲುಗಳನ್ನು ಸ್ವಚ್ಛ ಮಾಡಿಕೊಂಡಿದ್ದಲ್ಲಿ ಈ ನಕಾರಾತ್ಮಕ ಶಕ್ತಿಗಳು ನಮ್ಮನ್ನು ಬಿಟ್ಟು ತೊಲಗಿ ಬಿಡುತ್ತದೆ ಎಂಬ ಕಾರಣದಿಂದಾಗಿ .

ಇನ್ನು ಪ್ರತಿ ದಿನ ಯಾಕೆ ಸ್ನಾನ ಮಾಡಬೇಕು ಅಂತ ಹೇಳುತ್ತಾರೆ ಅಂದರೆ ನಮ್ಮ ಚರ್ಮದ ಮೇಲೆ ಕುಳಿತಿರುವಂತಹ ಧೂಳಿನ ಅಂಶವೂ ಹೊರಹಾಕುವುದಕ್ಕಾಗಿ ಹಾಗೂ ಹಿಂದಿನ ದಿವಸ ಕೆಲಸ ಮಾಡಿ ಸುಸ್ತಾದ ಕಾರಣದಿಂದಾಗಿ ಬೆಳಗ್ಗೆ ಎಂಟು ಗಂಟೆಗಳ ಒಳಗೆ ಸ್ನಾನ ಮಾಡುವುದರಿಂದ ಹಿಂದಿನ ದಿವಸದ ಆಯಾಸ ಹೋಗುತ್ತದೆ.

ಜೊತೆಗೆ ದೇಹದಲ್ಲಿ ಇರುವಂತಹ ದುರ್ಗಂಧವೂ ಕೂಡ ಕಡಿಮೆಯಾಗುತ್ತದೆ .ಇನ್ನು ಪ್ರತಿದಿನ ಸ್ನಾನ ಮಾಡುವುದರಿಂದ ಅದರಲ್ಲಿಯೂ ಬೆಳಗ್ಗಿನ ಜಾವ ಸ್ನಾನ ಮಾಡುವುದರಿಂದ ಆ ದಿನವೆಲ್ಲ ಉಲ್ಲಾಸದಿಂದ ಇರಲು ನಮ್ಮ ದೇಹ ಸಹಕರಿಸುತ್ತದೆ ಆದ್ದರಿಂದ ಬೆಳಗ್ಗೆ ಎತ್ತ ಕೂಡಲೇ ಅಂದರೆ ಎಂಟು ಗಂಟೆಗಳ ಒಳಗೆ ಬೆಚ್ಚಗಿನ ನೀರಿನ ಸ್ನಾನವನ್ನು ಮಾಡುವುದರಿಂದ ನಮ್ಮ ದೇಹ ಚೈತನ್ಯದಿಂದ ಇರುವುದರ ಜೊತೆಗೆ ಯಾವುದೇ ಚರ್ಮರೋಗ ಸಮಸ್ಯೆ ಕೂಡ ಬರುವುದಿಲ್ಲ .

ಇನ್ನು ಸ್ನಾನ ಮಾಡುವ ವೇಳೆಯಲ್ಲಿ ಯಾವುದೋ ವಿಚಾರಗಳನ್ನು ನೆನೆಸಿಕೊಂಡು ಸ್ನಾನವನ್ನು ಮಾಡಬಾರದು , ಈ ಸಂದರ್ಭದಲ್ಲಿ ಏಳು ನದಿಗಳನ್ನು ನೆನೆಯುತ್ತಾ ಒಂದು ಮಂತ್ರವನ್ನು ನೆನೆಸಿಕೊಂಡು ಸ್ನಾನ ಮಾಡುವುದರಿಂದ ದೇಹಕ್ಕೆ ಒಳ್ಳೆಯ ಪ್ರಯೋಜನಗಳು ದೊರೆಯುವುದರ ಜೊತೆಗೆ ಮೆದುಳಿನ ಆರೋಗ್ಯ ವೃದ್ಧಿಸುತ್ತದೆ ಜೊತೆಗೆ ಏಕಾಗ್ರತೆ ಕೂಡ ಹೆಚ್ಚುತ್ತದೆ .

ಆ ಮಂತ್ರ ಯಾವುದು ಅಂದರೆ ” ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರುವೇ “.ಈ ಮೇಲೆ ತಿಳಿಸಿದಂತಹ ಮಂತ್ರವನ್ನು ಪ್ರತಿದಿನ ಸ್ನಾನ ಮಾಡುವಾಗ ಪಠಿಸಿ ಸ್ನಾನ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳುವುದರ ಜೊತೆಗೆ ಆ ದಿನವೆಲ್ಲ ಉತ್ತಮವಾಗಿರುತ್ತದೆ ಎಂದು ನಂಬಲಾಗಿದೆ .

ಆದ್ದರಿಂದ ನೀವು ಕೂಡ ಇನ್ನು ಪ್ರತಿದಿನ ಸ್ನಾನ ಮಾಡುವ ಸಂದರ್ಭದಲ್ಲಿ ಈ ಒಂದು ಮಂತ್ರವನ್ನು ಪಠಿಸಿ ಸ್ನಾನ ಮಾಡಿ ಉತ್ತಮ ದಿನವನ್ನು ನಿಮ್ಮದಾಗಿಸಿಕೊಳ್ಳಿ ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಧನ್ಯವಾದ .

Leave a Reply

Your email address will not be published.