ನಾವು ಕೆಲವೊಂದು ನಮ್ಮ ದೈನಂದಿನ ವಿಚಾರಗಳಲ್ಲಿ ತಪ್ಪುಗಳನ್ನು ಮಾಡುತ್ತಿರುತ್ತವೆ ಹಾಗೆ ನಾವು ಈ ವಿಚಾರಗಳನ್ನು ಅರಿತು ಅದನ್ನು ಸರಿಪಡಿಸಿಕೊಂಡರೆ ನಮ್ಮ ಜೀವನದಲ್ಲಿಯೂ ಕೂಡ ಅದೃಷ್ಟ ಎಂಬುದು ಹರಿದುಬರುತ್ತದೆ.ಹಾಗೆ ಅಂತಹ ಕೆಲವೊಂದು ವಿಚಾರಗಳಲ್ಲಿ ಮನೆಯಲ್ಲಿ ಗಡಿಯಾರವನ್ನು ಇಡುವಂತಹ ದಿಕ್ಕನ್ನು ನಾವು ಸರಿಯಾಗಿ ತಿಳಿಯದೆ ಎಲ್ಲೆಂದರೆ ಅಲ್ಲಿ ಗಡಿಯಾರಗಳನ್ನು ಹಾಕುತ್ತಿರುತ್ತೇವೆ .ಹಾಗಾದರೆ ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಹಾಕಬೇಕು ಯಾವ ದಿಕ್ಕಿನಲ್ಲಿ ಇಡಬಾರದು ಎಂಬುದನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ ಇಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ನೀವು ಕೂಡ ಇದನ್ನು ಇನ್ನು ಮುಂದೆ ಪಾಲಿಸಲು ಮುಂದಾಗಿ.
ನಾವು ಅಂದುಕೊಳ್ಳುತ್ತಾ ಇರುತ್ತವೆ ಮನೆಯಲ್ಲಿ ಎಲ್ಲ ಸರಿಯಿದೆ ಆದರೂ ಕೂಡ ಯಾಕೆ ಈ ರೀತಿ ಆಗ್ತಾ ಇದೆ ಮನೆಯಲ್ಲಿ ಸಮಸ್ಯೆಗಳು ನೆಮ್ಮದಿ ಇಲ್ಲ ಮನಸ್ಸಿಗೆ ಶಾಂತಿ ಇಲ್ಲ ಅಂತ ಜೊತೆಗೆ ಮಾಡುವ ಕೆಲಸ ಪರಿಪೂರ್ಣ ಆಗುತ್ತಿಲ್ಲ ಅಂತೆಲ್ಲ ಯೋಚಿಸುತ್ತಿರುತ್ತೇವೆ,ಅದಕ್ಕೂ ಕೂಡ ಕೆಲವೊಂದು ಕಾರಣಗಳಿರುತ್ತದೆ ಕೆಲವೊಂದು ದೋಷಗಳಿರುತ್ತವೆ ನಾವು ಅಂತಹ ಕೆಲವೊಂದು ತೊಂದರೆಗಳನ್ನು ಅಡೆತಡೆಗಳನ್ನು ಸರಿಪಡಿಸಿ ಕೊಳ್ಳುವುದಕ್ಕಾಗಿ ನಮ್ಮಲ್ಲಿಯೂ ಬದಲಾವಣೆ ಮಾಡಿಕೊಳ್ಳುವುದರ ಜೊತೆಗೆ ಮನೆಯಲ್ಲಿ ವಾಸ್ತುವಿನಲ್ಲಿ ಕೂಡ ಕೆಲವೊಂದು ಬದಲಾವಣೆಯನ್ನು ಮಾಡಿಕೊಳ್ಳುವುದರಿಂದ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ ನಾವು ಕೈಗೊಂಡ ಕೆಲಸ ಬೇಗನೇ ಪರಿಪೂರ್ಣವಾಗುತ್ತದೆ.ಮನೆಯಲ್ಲಿ ವಾಸ್ತು ಪ್ರಕಾರ ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಯಾವ ದಿಕ್ಕಿನಲ್ಲಿ ಇಡಬಾರದು ಎಂದು ಹೇಳುವುದಾದರೆ ಮನೆಯಲ್ಲಿ ಗಡಿಯಾರವನ್ನು ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿನಲ್ಲಿ ಇಡಬಾರದು.ಯಾಕೆ ಅಂತ ಕಾರಣವನ್ನು ಕೂಡ ತಿಳಿಸುತ್ತೇನೆ, ವಾಸ್ತುಶಾಸ್ತ್ರ ತಿಳಿಸಿ ಹೇಳುತ್ತಿದೆ ಮನೆಯಲ್ಲಿ ಗಡಿಯಾರವನ್ನು ದಕ್ಷಿಣ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚುತ್ತದೆ ಹಾಗೇ ನಮ್ಮ ಸಮಯವೂ ಕೂಡ ಕೇಳುತ್ತದೆ ಎಂದು ಹೇಳಲಾಗಿದೆ.
ವಾಸ್ತು ಶಾಸ್ತ್ರವು ಹೇಳುತ್ತದೆ ಇರುವ ನಾಲ್ಕು ದಿಕ್ಕುಗಳಲ್ಲಿ ದಕ್ಷಿಣ ದಿಕ್ಕು ನಕಾರಾತ್ಮಕತೆಯನ್ನು ಸೂಚಿಸುವ ಅಂದರೆ ಈ ದಿಕ್ಕಿನಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಿರುತ್ತದೆ .ಹಾಗೆ ಈ ಒಂದು ದಿಕ್ಕಿನಲ್ಲಿ ಭೂಮಿಯ ಗುರುತ್ವಾಕರ್ಷಣೆ ಎಂಬುದು ಹೆಚ್ಚು ಇರುವ ಕಾರಣ ಮನೆಯ ದಕ್ಷಿಣ ದಿಕ್ಕಿನಲ್ಲಿ ಗಡಿಯಾರವನ್ನು ಇರಿಸಬಾರದು ಎಂದು ಕೂಡ ಹೇಳಲಾಗಿತ್ತು ಯಾವ ದಿಕ್ಕಿನಲ್ಲಿ ಗಡಿಯಾರವನ್ನು ಇಟ್ಟರೆ ಶ್ರೇಷ್ಠ ಒಳ್ಳೆಯದು ಎಂದರೆ ದಕ್ಷಿಣ ದಿಕ್ಕನ್ನು ಹೊರತುಪಡಿಸಿ ಮನೆಯ ಯಾವ ದಿಕ್ಕಿನಲ್ಲಿ ಆದರೂ ಗಡಿಯಾರವನ್ನು ಇರಿಸಬಹುದಾಗಿದೆ.ಮತ್ತೊಂದು ವಿಚಾರವೇನು ಅಂದರೆ ಗಡಿಯಾರವನ್ನು ನಾವು ಓಡಾಡುವ ಮುಖ್ಯ ದ್ವಾರದ ಗೋಡೆಯ ಮೇಲೆ ಹಾಕಬಾರದು ಯಾಕೆ ಅಂದರೆ ಈ ರೀತಿ ಮುಖ್ಯ ದ್ವಾರದ ಬಾಗಿಲಿನ ಮೇಲೆ ಗಡಿಯಾರವನ್ನು ಹಾಕುವುದರಿಂದ ಆ ಗಡಿಯಾರದ ಕೆಳಗೆ ನಾವು ಓಡಾಡುವುದರಿಂದ ನಾವು ಕೂಡ ಜೀವನ ಪರಿ ಅಂತ ಅಲೆದಾಡುತ್ತಲೇ ಇರಬೇಕಾಗುತ್ತದೆ ಆದ ಕಾರಣ ನಾವು ಗಡಿಯಾರದ ಕೆಳಗೆ ಓಡಾಡಬಾರದು.
ಹೀಗೊಂದು ನಿಯಮವನ್ನು ಜ್ಯೋತಿಷ್ಯಶಾಸ್ತ್ರವು ತಿಳಿಸಿ ಹೇಳುತ್ತಿದ್ದು ಮನೆಯಲ್ಲಿ ಎಂತಹ ಗಡಿಯಾರವನ್ನು ಇಡಬೇಕು ಅಂದರೆ ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಪೆಂಡುಲಮ್ ಗಡಿಯಾರಗಳನ್ನು ಬಳಸುತ್ತಿದ್ದರು ಈ ಗಡಿಯಾರಗಳು ಸಮಯಕ್ಕೆ ಅಂದರೆ ಒಂದು ಗಂಟೆಗಳ ನಂತರ ಸುಮಧುರವಾದ ಸ್ವರವನ್ನು ಭರಿಸುತ್ತಿತ್ತು, ಇದರಿಂದ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚು ಮಾಡಿ ಮನೆಯ ಸದಸ್ಯರಲ್ಲಿ ಕೂಡ ಉತ್ಸಾಹ ತುಂಬುತ್ತಿತ್ತು.ಆದ ಕಾರಣ ಮನೆಯಲ್ಲಿ ಪೆಂಡ್ಯುಲಮ್ ಗಡಿಯಾರ ವೃತ್ತಾಕಾರದ ಗಡಿಯಾರ ಇಂತಹ ಗಡಿಯಾರಗಳನ್ನು ಇಟ್ಟುಕೊಳ್ಳುವುದರಿಂದ ಉತ್ತಮ ಎಂದು ಹೇಳಲಾಗಿದ್ದು ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.