ಶುಕ್ರವಾರದ ದಿನ ಮನೆ ಮುಂದೆ ಇದನ್ನ ದಾನ ಮಾಡಿದ್ರೆ ದೇವರು ಈ ಸೂಚನೆ ಕೊಡ್ತಾನಂತೆ ..!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮನೆಔಷಧಿ

ದಾನ ಎಂಬುದು ಅದೆಂತಹ ವೈಶಿಷ್ಟ್ಯತೆಯನ್ನು ಹೊಂದಿದೆ ಎಂದರೆ, ನಮ್ಮ ಹಿಂದೂ ಸಂಪ್ರದಾಯದಲ್ಲಿ ಅಂತೂ ದಾನ ಎಂಬ ಪದಕ್ಕೆ ಒಂದು ವಿಶೇಷವಾದ ಸ್ಥಾನವನ್ನು ನೀಡಲಾಗಿದೆ, ಆದರೆ ಕೆಲವರು ಮಾತ್ರ ಈ ದಾನ ಧರ್ಮವನ್ನೆಲ್ಲ ನಂಬದೇ ದಾನ ನೀಡುವವನು ದೊಡ್ಡ ವ್ಯಕ್ತಿ ದಾನ ಪಡೆಯುವವನು ಚಿಕ್ಕ ವ್ಯಕ್ತಿ ಎಂಬ ಭಾವನೆಯಲ್ಲಿ ದಾನ ಮಾಡಲು ಮುಂದಾಗ್ತಾರೆ,ಆದರೆ ದಾನದಲ್ಲಿ ಇರುವಂತಹ ಕೆಲವೊಂದು ವಿಚಾರವನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು, ಆ ನಂತರ ದಾನ ಧರ್ಮವನ್ನು ಮಾಡಲು ಮುಂದಾಗಬೇಕು ದಾನದ ಬಗ್ಗೆ ಅರಿತು ಆ ನಂತರ ದಾನ ಮಾಡುವವನೇ ಶ್ರೇಷ್ಠ ವ್ಯಕ್ತಿ ಅಂತ ಕರೆಸಿಕೊಳ್ಳುತ್ತಾನೆ.

ಹಾಗಾದರೆ ದಾನ ಮಾಡುವ ಮುನ್ನ ನಾವು ಅರಿಯಬೇಕಾದ ಕೆಲವೊಂದು ವಿಚಾರಗಳೇನು ಅಂತ ತಿಳಿಯೋಣ ಬನ್ನಿ, ನಮ್ಮ ಜನರು ದಾನ ಧರ್ಮವನ್ನು ಮಾಡಲು ಮುಂದಾಗ್ತಾರೆ, ಆದರೆ ಯಾವಾಗ ಹಬ್ಬದ ಸಮಯದಲ್ಲಿ ಹೋಮ ಹವನಗಳ ಸಮಯದಲ್ಲಿ, ಆದರೆ ಅಂತಹ ಸಮಯದಲ್ಲಿ ಮಾತ್ರ ದಾನ ಮಾಡುವವರು ವ್ಯಕ್ತಿಗೆ ಅವಶ್ಯಕ ಇರುವಾಗ ಆತನಿಗೆ ಸಹಾಯ ಮಾಡುವುದರಿಂದ, ಅವನ ಒಂದು ಒಳ್ಳೆಯ ನುಡಿಗಳು ಅವನ ಒಳ್ಳೆಯ ಮಾತುಗಳು ನಮಗೆ ಪುಣ್ಯವನ್ನು ಲಭಿಸುವಂತೆ ಮಾಡುತ್ತದೆ, ನಮ್ಮ ಜೀವನದಲ್ಲಿ ಸಾರ್ಥಕತೆಯನ್ನು ಆಗ ನಾವು ಪಡೆದುಕೊಳ್ಳಬಹುದು.

ದಾನವನ್ನು ಕುರಿತು ಒಂದು ಕಥೆಯನ್ನು ನಾನು ನಿಮಗೆ ಹೇಳ್ತೇನೆ, ಒಮ್ಮೆ ಯಜ್ಞ ಹೋಮ ಹವನಗಳು ನಡೆಯುತ್ತಿರುತ್ತದೆ, ಈ ಹೋಮದಲ್ಲಿ ಕೆಜಿಗಟ್ಟಲೆ ಲೆಕ್ಕಿಸದೆ ತುಪ್ಪವನ್ನು ಬೆಂಕಿಗೆ ಸುರಿಸುತ್ತಿರುತ್ತಾರೆ, ಆಗ ಅಲ್ಲಿಗೆ ಒಬ್ಬ ಭಿಕ್ಷುಕ ಭಿಕ್ಷೆ ಬೇಡಿಕೊಂಡು ಬರುತ್ತಾನೆ, ಅಲ್ಲಿದ್ದ ಪುರೋಹಿತರೂ ಆ ವ್ಯಕ್ತಿಗೆ ಅವಮಾನ ಮಾಡಿ ಕಳುಹಿಸುತ್ತಾರೆ, ಆಗ ಅಲ್ಲೊಬ್ಬ ತಿಳಿದಂತಹ ವ್ಯಕ್ತಿ ಹೇಳ್ತಾನೆ ವ್ಯರ್ಥವಾಗಿ ಅಗ್ನಿಕುಂಡಕ್ಕೆ ನೀವು ಇಷ್ಟೆಲ್ಲ ತುಪ್ಪವನ್ನು ಸುರಿಯುವುದರ ಬದಲು,ಇಡೀ ಪ್ರಪಂಚದಲ್ಲಿ ಹೊಟ್ಟೆ ತುಂಬಾ ಅಲ್ಲದೆ ಇದ್ದರೂ ಒಂದೊತ್ತು ಊಟಕ್ಕೋಸ್ಕರ ಪರದಾಡುತ್ತಿರುತ್ತಾರೆ ಅವಶ್ಯಕ ಇರುವವರಿಗೆ ದಾನ ಮಾಡುವುದರಿಂದ ಏನಿದೆ ತಪ್ಪು ನೀವು ಈ ಹೋಮಕ್ಕೆ ಬಳಸುವಂತಹ ತುಪ್ಪವಾಗಿ ಅಥವಾ ಈ ಹೋಮದಲ್ಲಿ ನೀಡುವಂತಹ ನೈವೇದ್ಯೆಯನ್ನೇ ಆ ಭಿಕ್ಷುಕರಿಗೆ ನೀಡಿದರೆ ಅವನ ಒಂದು ತೃಪ್ತಿಗೆ ನಮ್ಮನ್ನು ಕಾಯುತ್ತದೆ ನಮ್ಮನ್ನು ಜೀವನದಲ್ಲಿ ಎತ್ತರದ ಮಟ್ಟಕ್ಕೆ ಕರೆದೊಯ್ದು ಸಹಕರಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಭಿಕ್ಷುಕರು ಕೂಡ ದಾನ ಕೇಳುವುದರಲ್ಲಿ ಲಾಜಿಕ್ನ ಹುಡುಕ್ತಾರೆ ಅದೇನೆಂದರೆ ಜನರು ಮಂಗಳವಾರ ಶುಕ್ರವಾರದಂದು ದಾನವನ್ನು ನೀಡುವುದಿಲ್ಲ, ಎಂದು ಅರಿತು ಆ ಒಂದು ದಿವಸ ದಾನ ಕೇಳುವುದಕ್ಕೆ ಹೋಗುವುದಿಲ್ಲ. ಅದೆಷ್ಟೋ ಜನರು ಈ ಒಂದು ವಿಚಾರದಿಂದಲೇ ಹಸಿದು ಆ ದಿನವನ್ನು ಕಳೆದುಬಿಡುತ್ತಾರೆ .ಆದರೆ ನಾವು ದಾನ ಧರ್ಮವನ್ನು ಮಾಡುವಾಗ ಯಾವ ದಿವಸವನ್ನು ನೋಡಬಾರದು ವ್ಯಕ್ತಿಯ ಸ್ಥಿತಿಯನ್ನು ಗಮನಿಸಬೇಕು, ಆತ ಯಾವ ಸ್ಥಿತಿಯಲ್ಲಿದ್ದಾನೆ ಅವನ ಪರಿಸ್ಥಿತಿ ಹೇಗಿದೆ ಎಂದು ಅರಿತು ಆ ನಂತರ ಅವನಿಗೆ ದಿನವನ್ನೂ ಲೆಕ್ಕಿಸದೆ ಆತನಿಗೆ ದಾನವನ್ನು ಮಾಡುವುದರಿಂದ ಆಧಾರಕ್ಕೆ ಒಂದು ಅರ್ಥವಿರುತ್ತದೆ.

ಶಾಸ್ತ್ರಗಳಲ್ಲಿಯೂ ಈ ದಾನದ ವಿಚಾರವಾಗಿ ಒಂದು ಪದವನ್ನು ಹೇಳ್ತಾರೆ, ಅದೇನೆಂದರೆ ಅಪಾತ್ರದಾನ ಎಂದು, ಇದರ ಅರ್ಥವೇನು ಅಂದರೆ ದಾನ ನೀಡುವಂತಹ ವ್ಯಕ್ತಿ ದಾನವಾಗಿ ವಸ್ತುಗಳನ್ನಾಗಲಿ ಆಹಾರವನ್ನಾಗಲಿ ಪಡೆದುಕೊಳ್ಳುತ್ತಿರುವ ವ್ಯಕ್ತಿ ಯಾವ ಸ್ಥಿತಿಯಲ್ಲಿದ್ದಾನೆ ಮತ್ತು ದಾನ ಪಡೆಯುವುದಕ್ಕಾಗಿ ಆ ವ್ಯಕ್ತಿ ಯೋಗ್ಯವೇ ಎಂಬುದನ್ನು ಯೋಚಿಸಿ ತದನಂತರ ದಾನವನ್ನು ಮಾಡುವುದು ಒಳ್ಳೆಯದು ಎಂದು ಹೇಳುತ್ತದೆ ಶಾಸ್ತ್ರ.

Leave a Reply

Your email address will not be published.