ಈಗಾಗಲೇ ಆಷಾಢ ಮಾಸ ಶುರುವಾಗಿದೆ ಈ ಒಂದು ಮಾಸದಲ್ಲಿ ಯಾವ ಕೆಲಸವನ್ನು ಮಾಡಬಾರದು ಏನನ್ನು ಮಾಡಬೇಕು ಹಾಗೆ ಈ ಮಾಸದಲ್ಲಿ ಯಾವ ದೇವರ ಪೂಜೆಯನ್ನು ಕೈಗೊಳ್ಳಬೇಕು.ಯಾವ ರೀತಿಯ ಆಹಾರ ಪದ್ಧತಿಯನ್ನು ಪಾಲಿಸಬೇಕು ಅನ್ನೋದರ ಪ್ರತಿ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ ತಪ್ಪದೇ ಇಂದಿನ ಈ ಉಪಯುಕ್ತ ಮಾಹಿತಿಯನ್ನು ತಿಳಿಯಿರಿ.ಹಾಗೆ ನೀವು ಕೂಡ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಇದನ್ನು ಶೇರ್ ಮಾಡುವುದನ್ನು ಮರೆಯದಿರಿ ಕೊನೆಗೆ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ.ಆಷಾಢ ಮಾಸ ಇನ್ನೇನು ಈ ಮಾಸದಲ್ಲಿ ಮಳೆ ಶುರುವಾಗುತ್ತದೆ ಮಳೆ ಗಾಳಿಯಿಂದ ವಾತಾವರಣವೂ ತಂಪಾಗಿರುತ್ತದೆ ಈ ಕಾರಣದಿಂದಾಗಿಯೇ ನಮ್ಮ ಹಿರಿಯರು ಈ ಮಾಸದಲ್ಲಿ ಮದುವೆ ಕಾರ್ಯಗಳನ್ನು ಮಾಡುವುದಿಲ್ಲ,
ವಾತಾವರಣವೂ ತಂಪಾಗಿರುವುದರಿಂದ ಅನಾರೋಗ್ಯ ಸಮಸ್ಯೆ ಕಾಡಬಹುದು ಹಾಗೆ ವರ್ಷ ಋತುವು ಶುರುವಾದ ಈ ಮಾಸದಲ್ಲಿ ಮಳೆಯಿಂದ ವಾತಾವರಣದಲ್ಲಿ ಅನಾರೋಗ್ಯ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಆದ ಕಾರಣ ಆದಷ್ಟು ಈ ಮಾಸದಲ್ಲಿ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಉತ್ತಮ.ಹೀಗೆ ಆಷಾಢ ಮಾಸದಲ್ಲಿ ನಾವು ವಾತಾವರಣವನ್ನೂ ಶುಚಿಯಾಗಿಟ್ಟು ಕೊಳ್ಳುವುದರ ಜೊತೆಗೆ ಈ ಮಾಸದಲ್ಲಿ ನಾವು ಪೂಜೆ ಮಾಡ ಬೇಕಾಗಿರುವಂತಹ ದೇವರು ಅಂದರೆ ಉಗ್ರ ದೇವರನ್ನು ಪೂಜಿಸಬೇಕು ಉಗ್ರ ದೇವರು ಅಂದರೆ ಉಗ್ರ ನರಸಿಂಹ ಉಗ್ರ ದುರ್ಗಾದೇವಿ ಇಂತಹ ದೇವರುಗಳನ್ನು ಪೂಜಿಸುವುದರಿಂದ ವಿಶೇಷ ಆಶೀರ್ವಾದ ನಮಗೆ ದೊರೆಯುತ್ತದೆ ಎಂದು ಹಿರಿಯರು ಉಲ್ಲೇಖಿಸಿದ್ದಾರೆ.ಈ ಮಾಸದಲ್ಲಿ ಆಷಾಢದ ಏಕಾದಶಿಯಂದು ವಿಷ್ಣುವಿನ ನಾಮ ಸ್ಮರಣೆಯನ್ನು ಮಾಡುತ್ತೇವೆ ವಿಷ್ಣುವಿನ ಪೂಜೆಯನ್ನು ಕೈಗೊಳ್ಳುತ್ತೇವೆ ಈ ರೀತಿ ಆಷಾಢ ಮಾಸದಲ್ಲಿ ವಿಷ್ಣುವಿನ ಪೂಜೆ ಮಾಡುವುದರಿಂದ ಕೂಡ ನಮಗೆ ತುಂಬಾನೇ ಒಳ್ಳೆಯದಾಗುತ್ತದೆ ವಿಷ್ಣು ದೇವನ ಆಶೀರ್ವಾದವು ನಮ್ಮ ಮೇಲೆ ಇರುತ್ತದೆ ಹಾಗೆ ಈ ಮಾಸದಲ್ಲಿ ನಾವು ಹೆಚ್ಚು ಪ್ರಾಮುಖ್ಯತೆಯನ್ನು ನೀಡಬೇಕಾಗಿರುವುದು ದಾನ ಧರ್ಮಗಳಿಗೆ.
ಈ ರೀತಿಯಾಗಿ ನಮ್ಮಲ್ಲಿರುವ ಸಂಪತ್ತಿಗೆ ತಕ್ಕ ಹಾಗೆ ಇರೋದನ್ನು ಹಂಚಿಕೊಂಡು ತಿನ್ನುವುದರಿಂದ ಮತ್ತು ಬೇರೆಯವರಿಗೆ ದಾನ ಮಾಡುವುದರಿಂದ ವಿಶೇಷ ಆಶೀರ್ವಾದವೂ ಕೂಡ ದೊರೆಯುತ್ತದೆ ಹಾಗೆ ಈ ರೀತಿ ನಮ್ಮಲ್ಲಿ ಇರುವುದನ್ನು ಹಂಚಿಕೊಂಡು ತಿನ್ನುವುದರಿಂದ ಗ್ರಹದೋಷ ಮತ್ತು ಜಾತಕದಲ್ಲಿ ಇರುವಂತಹ ಯಾವುದೇ ದೋಷಗಳಾಗಲಿ ಪರಿಹಾರಗೊಳ್ಳುವುದು.ಈ ಮಾಸದಲ್ಲಿ ಪಾಲಿಸ ಬೇಕಾಗಿರುವಂತಹ ಆಹಾರ ಪದ್ಧತಿಯ ಬಗ್ಗೆ ಹೇಳುವುದಾದರೆ ಯಾವ ಪದಾರ್ಥಗಳನ್ನು ಸೇವಿಸಬಾರದು ಎಂದು ತಿಳಿಸಿಕೊಡುತ್ತೇನೆ,ಇಂತಹಾ ಪದಾರ್ಥಗಳನ್ನು ಆಹಾರ ಪದ್ಧತಿಯಲ್ಲಿ ಬಳಸುವುದನ್ನು ಆದಷ್ಟು ಕಡಿಮೆ ಮಾಡಿ. ಎಣ್ಣೆ ಕುಂಬಳೆ, ಪಡವಳೆ, ಹುಣಸೆ ,ಮೂಲಂಗಿ ,ಹುರುಳಿಕಾಯಿ, ಅಲಸಂದೆ ಇಂತಹಾ ಪದಾರ್ಥಗಳನ್ನು ಸೇವಿಸದೆ ಇರುವುದು ಉತ್ತಮ ಹಾಗೂ ಉತ್ತಮ ಆರೋಗ್ಯಕ್ಕೂ ಕೂಡ ಇದು ಪರಿಣಾಮಕಾರಿ.
ಒಟ್ಟಾರೆಯಾಗಿ ಆಷಾಢ ಮಾಸದಲ್ಲಿ ಒಂದು ನಿಯಮ ಒಂದು ಪದ್ಧತಿಯನ್ನು ಪಾಲಿಸುವುದರಿಂದ ದೇವರ ಕೃಪೆ ನಮ್ಮ ಮೇಲೆ ಆಗುತ್ತದೆ. ಪದ್ಧತಿಗಳೆಂದರೆ ದೇವರ ಮನೆಯನ್ನು ಶುಚಿಯಾಗಿಟ್ಟುಕೊಳ್ಳುವುದು ರಂಗೋಲಿಯನ್ನು ಬಿಡುವ ಪದ್ಧತಿಯನ್ನು ಪಾಲಿಸುವುದು ಜೊತೆಗೆ ತುಳಸಿ ಗಿಡವನ್ನು ಬೆಳೆಸುವುದು ಇಂತಹ ಕೆಲವೊಂದು ಪದ್ಧತಿ ನಿಯಮಗಳನ್ನು ಪಾಲಿಸುವುದರಿಂದ ಆದಷ್ಟು ಉತ್ತಮ ಎಂದು ಹೇಳಲಾಗುತ್ತದೆ.ಈ ದಿನ ತಿಳಿಸಿದ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ ನಿಮಗೂ ಕೂಡ ಮಾಹಿತಿ ಇಷ್ಟವಾದಲ್ಲಿ ಇನ್ನೂ ಇಂತಹ ಅನೇಕ ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ತಿಳಿಯುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜನ್ನು ಲೈಕ್ ಮಾಡಿ ಹಾಗೂ ತಪ್ಪದೇ ಮಾಹಿತಿಗೆ ಒಂದು ಮೆಚ್ಚುಗೆಯನ್ನು ನೀಡಿ