ನೀವೇನಾದ್ರು ಹೀಗೆ ಲಕ್ಷ್ಮೀ ದೇವಿಯ ಒಂದು ಸಾವಿರ ನಾಮಗಳಿರುವ ಶ್ರೀ ಲಲಿತ ಸಹಸ್ರನಾಮ ಸ್ತೋತ್ರಂ ಜಪಿಸುವುದರಿಂದ ನಿಮ್ಮ ಜೀವನದಲ್ಲಿ ಉತ್ತಮ ಬದಲಾವಣೆಗಳು ಆಗುತ್ತವೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ಈ ಸಹಸ್ರನಾಮದಲ್ಲಿ ಸರಿಯಾಗಿ ಒಂದು ಸಾವಿರ ನಾಮಗಳಿವೆ ಮತ್ತು ಇದರಲ್ಲಿ ಯಾವುದೇ ನಾಮವು ಪುನರಾವೃತವಾಗಿಲ್ಲ, ಶಿವ ಸಹಸ್ರನಾಮದಲ್ಲಿ 1008ನಾಮಗಳಿವೆ ಮತ್ತು ವಿಷ್ಣು ಸಹಸ್ರನಾಮದಲ್ಲಿ 1000 ನಾಮಗಳಿದ್ದು ಅದರಲ್ಲಿ ಅನೇಕ ನಾಮಗಳು ಪುನರಾವೃತವಾಗಿವೆ ಲಲಿತಾ ಸಹಸ್ರನಾಮವು ಅತ್ಯಂತ ನಿಗೂಢವಾಗಿದ್ದು ಲಲಿತಾಂಬಿಕೆಯು ಈ ಸಹಸ್ರನಾಮದ ಕುರಿತು ಬಹಳ ಅಕ್ಕರೆಯುಳ್ಳವಳಾಗಿದ್ದಾಳೆ, ಯಾವುದೇ ಮಂತ್ರವನ್ನು ರಹಸ್ಯಾತ್ಮಕವಾದದ್ದು ಎಂದು ಪರಿಗಣಿಸಲಾಗುತ್ತದೆ, ಅದರೊಳಗೆ ಅಡಕವಾಗಿರುವ ಬೀಜಾಕ್ಷರಗಳಿಂದಾಗಿ ಲಲಿತಾ ಸಹಸ್ರನಾಮದ ಪ್ರತಿಯೊಂದು ನಾಮದಲ್ಲೂ ರಹಸ್ಯವಾದ ಬೀಜಾಕ್ಷರಗಳು ಹುದುಗಿವೆ ಎಂದು ಹೇಳಲಾಗುವುದರಿಂದ ಸಂಪೂರ್ಣ ಸಹಸ್ರನಾಮವು ಮಂತ್ರದ ಸ್ಥಾನವನ್ನು ಪಡೆಯುತ್ತದೆ.ಲಲಿತಾ ಸಹಸ್ರನಾಮವನ್ನು ಉಚ್ಛರಿಸುವುದರಿಂದ ಕೆಳಗಿನ ಫಲಗಳು ದೊರೆಯುತ್ತವೆ.ಇದು ಸರ್ವರೋಗಗಳನ್ನು ನಾಶ ಮಾಡವುದು ಮತ್ತು ಸರ್ವವಿಧ ಸಂಪತ್ತನ್ನು ಹೆಚ್ಚಿಸುವುದು.ಇದು ಅಪಮೃತ್ಯುಗಳನ್ನು ತಪ್ಪಿಸುವುದು, ಅಪಘಾತಗಳನ್ನು ನಿವಾರಿಸುವುದು, ಸರ್ವ ಜ್ವರವೇದನೆಯನ್ನು ಉಪಶಮನ ಮಾಡವುದು.

ಇದು ಮಕ್ಕಳಿಲ್ಲದವರಿಗೆ ಉತ್ತಮ ಸಂತಾನವನ್ನು ಕರುಣಿಸುತ್ತದೆ ಮತ್ತು ಪುರುಷಾರ್ಥವನ್ನು ಕೊಡುವುದು.ವಾಚನದ ವಿಧಾನ : ಲಲಿತೋಪಾಸಕನು ಇದನ್ನು ನಿತ್ಯವೂ ಪ್ರಯತ್ನಪೂರ್ವಕವಾಗಿ ಮಾಡಬೇಕು, ಪ್ರಾತಃಕಾಲದಲ್ಲಿ ಸ್ನಾನವನ್ನು ಮಾಡಿ ಸಂಧ್ಯಾದಿಕರ್ಮಗಳನ್ನು ವಿಧಿಪ್ರಕಾರ ಮುಗಿಸಿ, ಶ್ರೀ ಚಕ್ರದ ಅರ್ಚನೆಯನ್ನು ಮಾಡಬೇಕು,ಶ್ರೀ ಚಕ್ರವನ್ನು ಪೂಜಿಸಿದ ನಂತರ ಒಬ್ಬನು ಪಂಚದಶೀ (ಷೋಡಶೀ) ಮಂತ್ರಗಳನ್ನು ಸಾವಿರ ಸಲವಾಗಲಿ, ಮುನ್ನೂರು ಸಲವಾಗಲಿ ಅಥವಾ ನೂರು ಸಲವಾಗಲಿ ಜಪಿಸಬೇಕು, ನಿಗದಿತ ಸಂಖ್ಯೆಯ ಮಂತ್ರ ಜಪದ ಬಳಿಕ ಒಬ್ಬನು ಈ ಸಹಸ್ರನಾಮವನ್ನು ಪಠಿಸಬೇಕು,ಸಹಸ್ರನಾಮವು ಸಂಪೂರ್ಣಗೊಂಡ ಮೇಲೆ ಒ‌ಬ್ಬನು ಲಲಿತಾಂಬಿಕೆಗೆ ಪುಷ್ಪಗಳನ್ನು ಸಮರ್ಪಿಸಬೇಕು, ಒಂದು ವೇಳೆ ಒಬ್ಬನು ಮಂತ್ರ ಜಪ ಅಥವಾ ಶ್ರೀ ಚಕ್ರೋಪಾಸನೆಯ ದೀಕ್ಷೆಯನ್ನು ಪಡೆಯದಿದ್ದಲ್ಲಿ ಅವನು ಕೇವಲ ಈ ಸಹಸ್ರನಾಮವೊಂದನ್ನೇ ಪಠಿಸಬಹುದು.

ಒಬ್ಬನು ಜೀವಿತಕಾಲದಲ್ಲಿ ಒಂದೇ ಒಂದು ಬಾರಿ ಈ ಸಹಸ್ರನಾಮವನ್ನು ಪಠಿಸಿದರೆ ಉಂಟಾಗುವ ಫಲಗಳು ಹೀಗಿವೆ.ಗಂಗಾದಿ ಸರ್ವತೀರ್ಥಗಳಲ್ಲಿ ಕೋಟಿ ಜನ್ಮಗಳಲ್ಲಿ ಸ್ನಾನ ಮಾಡುವುದರಿಂದ ದೊರೆಯುವ ಫಲಕ್ಕಿಂತ ಅಧಿಕ ಫಲವನ್ನು ಪಡೆಯುತ್ತಾನೆ.ಕಾಶಿಯಲ್ಲಿ ಕೋಟಿ ಲಿಂಗಗಳನ್ನು ಪ್ರತಿಷ್ಠಾಪಿಸುವುದಕ್ಕಿಂತ ಹೆಚ್ಚಿನ ಪುಣ್ಯವನ್ನು ಪಡೆಯುತ್ತಾನೆ.ಕುರುಕ್ಷೇತ್ರದಲ್ಲಿ ಸೂರ್ಯ ಗ್ರಹಣದ ಸಮಯದಲ್ಲಿ ಶ್ರೋತ್ರೀಯರಾದ ಬ್ರಾಹ್ಮಣರಿಗೆ ಕೋಟಿ ಸಲ ಕೋಟಿ ಸುವರ್ಣ ಭಾರಗಳನ್ನು ದಾನ ಮಾಡಿ ಲಭಿಸುವ ಪುಣ್ಯಕ್ಕಿಂತ ಅಧಿಕವಾದ ಪುಣ್ಯವು ದೊರೆಯು‌ತ್ತದೆ.ಗಂಗೆಯ ತಟದಲ್ಲಿ ಮಾಡುವ ಕೋಟಿ ಅಶ್ವಮೇಧಯಾಗಕ್ಕಿಂತ ಅಧಿಕವಾದ ಪುಣ್ಯವು ಲಭಿಸುತ್ತದೆ.ಸಹಸ್ರನಾಮದಲ್ಲಿನ ಯಾವುದಾದರೂ ಒಂದು ನಾಮವನ್ನು ಉಚ್ಛರಿಸಿದರೂ ಸಹ ಅವನ ಮಹಾಪಾಪಗಳು ನಾಶವಾಗುವುವು.

ಸಹಸ್ರನಾಮದ ಒಂದು ನಾಮಕ್ಕೆ ಪಾತಕ ನಾಶಮಾಡಲು ಇರುವ ಶಕ್ತಿಯನ್ನು ಹದಿನಾಲ್ಕು ಲೋಕಗಳ ಸಮಸ್ತ ಜೀವರಾಶಿಗಳೂ ತಮ್ಮ ಪಾಪಾಚರಣೆಯಿಂದ ನಿವಾರಿಸಲಾರವು.ಯಾವನು ಪಾಪನಾಶವನ್ನು ಮಾಡಿಕೊಳ್ಳಲು ಸಹಸ್ರನಾಮವನ್ನು ಬಿಟ್ಟು ಇತರೇ ಪ್ರಾಯಶ್ಚಿತ್ತ ಕರ್ಮಗಳನ್ನು ಆಶ್ರಯಿಸುವನೋ ಅವನು ಶೀತವನ್ನು ಹೋಗಲಾಡಿಸಿಕೊಳ್ಳಲು ಹಿಮಾಲಯವನ್ನು ಆಶ್ರಯಿಸಿದ ಮನುಷ್ಯನಂತೆ.ಒಬ್ಬನು ಈ ಸಹಸ್ರನಾಮವನ್ನು ನಿತ್ಯವೂ ಪಠಿಸುತ್ತಿದ್ದರೆ ಲಲಿತಾಂಬಿಕೆಯು ಅವನ ಬಗೆಗೆ ಅತೀವ ಸಂತೋಷವನ್ನು ಹೊಂದಿ ಅವನ ಎಲ್ಲಾ ಆಸೆಗಳನ್ನು ಪೂರೈಸುತ್ತಾಳೆ, ಈ ಸಹಸ್ರನಾಮವನ್ನು ಒಬ್ಬನು ನಿತ್ಯವೂ ಪಠಿಸದೇ ಇದ್ದರೆ ಅವನನ್ನುಭಕ್ತನೆಂದು ಪರಿಗಣಿಸಲಾಗದು ಎಂದು ಹೇಳಲಾಗುತ್ತದೆ,ಒಬ್ಬನು ಭಕ್ತನೆನಿಸಿಕೊಳ್ಳಬೇಕಾದರೆ ತಾನು ಪೂಜಿಸುವ ದೈವದ ಬಗೆಗೆ ಅವನಿಗೆ ಎಣೆಯಿಲ್ಲದಷ್ಟು ಪ್ರೀತಿ ಇರಬೇಕು, ಈ ಸಹಸ್ರನಾಮವನ್ನು ನಿತ್ಯವೂ ಸಂಪೂರ್ಣವಾಗಿ ಪಠಿಸಿದರೆ ಮಾತ್ರ ಲಲಿತಾಂಬಿಕೆಯು ಅಂತಹ ಭಕ್ತಿಯನ್ನು ಹುಟ್ಟುಹಾಕುತ್ತಾಳೆ.

ಒಬ್ಬನಿಗೆ ಇದನ್ನು ನಿತ್ಯವೂ ಪಠಿಸಲು ಆಗದಿದ್ದರೆ ಅವನು ಇದನ್ನು ಕಡೇಪಕ್ಷ ಹಬ್ಬ ಹರಿದಿನಗಳಲ್ಲಾದರೂ ಪಠಿಸಬೇಕು, ಮುಖ್ಯವಾದ ದಿವಸಗಳೆಂದರೆ, ಸಂಕ್ರಾಂತಿ ಅಥವಾ ವಿಷುವತ್ಸಂಕ್ರಾಂತಿಯಲ್ಲಿ, ಉತ್ತಾರಾಯಣ ಹಾಗು ದಕ್ಷಿಣಾಯನ ಪುಣ್ಯಕಾಲ, ಮೊದಲಾದವುಗಳು, ಸಹಸ್ರನಾಮವನ್ನು ಪಠಿಸಲು ಇತರೇ ಶುಭದಿನಗಳೆಂದರೆ ಅಷ್ಟಮೀ, ನವಮೀ ಮತ್ತು ಚತುರ್ದಶೀ ತಿಥಿಗಳು ಮತ್ತು ಶುಕ್ರವಾರಗಳು.ಎಲ್ಲದಕ್ಕಿಂತ ಹೆಚ್ಚು ಪ್ರಶಸ್ತವಾದ ಸಮಯವು ಹುಣ್ಣಿಮೆಯಾಗಿದೆ, ಪೂರ್ಣ ಚಂದ್ರನ ದರ್ಶನವನ್ನು ಪಡೆದ ನಂತರ ಒಬ್ಬರು ಲಲಿತಾಂಬಿಕೆಯನ್ನು ಚಂದ್ರಬಿಂಬದಲ್ಲಿ ಧ್ಯಾನಿಸಿ ಪಂಚೋಪಚಾರಗಳಿಂದ (ಗಂಧ, ಪುಷ್ಪ, ದೀಪ, ಧೂಪ, ನೈವೇದ್ಯ) ಶ್ರೀ ಚಕ್ರವನ್ನು ಪೂಜಿಸಿ ಈ ಸಹಸ್ರನಾಮವನ್ನು ಪಠಿಸಿದಲ್ಲಿ ಅವರ ಸರ್ವರೋಗಗಳು ಪರಿಹಾರವಾಗಿ ಅವರು ದೀರ್ಘಾಯು‌ಷ್ಯವನ್ನು ಪಡೆಯುತ್ತಾರೆ.ತನ್ನ ಹಾಗು ತನ್ನ ಸಂಗಾತಿಯ ಮತ್ತು ಮಕ್ಕಳ ಜನ್ಮ ನಕ್ಷತ್ರಗಳಿರುವ ದಿನಗಳೂ ಸಹ ಲಲಿತಾ ಸಹಸ್ರನಾಮ ಪಠಣಕ್ಕೆ ಅತ್ಯಂತ ಪ್ರಶಸ್ತ ದಿನಗಳೆಂದು ಪರಿಗಣಿತವಾಗಿವೆ.ಇತರೇ ಒಳಿತುಗಳು ಪರಶುರಾಮಕಲ್ಪದಲ್ಲಿ ಹೇಳಿರುವಂತೆ ಸರ್ವರೋಗನಾಶಕ್ಕಾಗಿ ಮತ್ತು ದೀರ್ಘಾಯುಸ್ಸಿಗಾಗಿ ಆಯಷ್ಕರವೆಂಬ ಪೂಜಾ ಪದ್ಧತಿಯಂತೆ, ಜ್ವರದ ತಾಪದಿಂದ ಬಳಲುತ್ತಿರುವವರ ತಲೆಯ ಮೇಲೆ ಕೈಯಿರಿಸಿ ಲಲಿತಾ ಸಹಸ್ರನಾಮದ ಪಠಣವನ್ನು ಕೈಗೊಂಡಲ್ಲಿ ಅವರ ದೇಹದ ಉಷ್ಣತೆಯು ಶಮನಗೊಂಡು ಇತರೇ ವಿಧವಾದ ಬಾಧೆಗಳು ನಾಶವಾಗುತ್ತವೆ.

ಭಸ್ಮದ ಮೇಲೆ ಕೈಯಿರಿಸಿ ಈ ಸಹಸ್ರನಾಮವನ್ನು ಪಠಿಸಿದ ನಂತರ ಆ ಪವಿತ್ರ ಭಸ್ಮವನ್ನು ಯಾತನೆಯಿಂದ ನರಳುತ್ತಿರುವವರ ದೇಹಕ್ಕೆ ಲೇಪಿಸಿದಲ್ಲಿ ಅವರ ಯಾತನೆಗಳು ಕಡಿಮೆಯಾಗುತ್ತವೆ.ಒಂದು ವೇಳೆ ಒಬ್ಬನು ಗ್ರಹದೋಷಗಳಿಂದ ಪೀಡಿತನಾಗಿದ್ದರೆ, ಕುಂಭದಲ್ಲಿ ನೀರನ್ನು ಸಹಸ್ರನಾಮದಿಂದ ಸಂಮಂತ್ರಿಸಿ ಪ್ರೋಕ್ಷಿಸಿದಲ್ಲಿ ಬಾಲಗ್ರಹ, ದುಷ್ಟಸ್ಥಾನದಲ್ಲಿರುವ ನವಗ್ರಹಗಳ ದೋಷಗಳು, ಪಿಶಾಚಪೀಡೆಗಳು ದೂರವಾಗುತ್ತವೆ.ಮಕ್ಕಳಿಲ್ಲದವರಿಗೆ, ಈ ಸಹಸ್ರನಾಮದಿಂದ ಪವಿತ್ರಗೊಂಡ ನವನೀತವನ್ನು (ಬೆಣ್ಣೆ) ತಿನ್ನಲು ಕೊಟ್ಟರೆ ಅವರಿಗೆ ಪುತ್ರಲಾಭವಾಗುವುದು.ಭಗವಾನ್ ಶರಭೇಶ್ವರನು, ಯಾರು ಈ ಸಹಸ್ರನಾಮವನ್ನು ನಿತ್ಯವೂ ಪಠಿಸುತ್ತಾರೆಯೋ ಅವರ ಶತ್ರುಗಳನ್ನು ಸರ್ವನಾಶ ಮಾಡುತ್ತಾನೆ.ಈ ಸಹಸ್ರನಾಮವನ್ನು ನಿತ್ಯವೂ ಜಪಿಸುವವರ ಮೇಲೆ ಉಂಟಾಗುವ ದುಷ್ಟ ಶಕ್ತಿಗಳ ಪೀಡನೆಯನ್ನು ಪ್ರತ್ಯಂಗಿರಾ ದೇವಿಯು ನಾಶಮಾಡುತ್ತಾಳೆ, ಪ್ರತ್ಯಂಗಿರಾ ದೇವಿಯು ಶರಭೇಶ್ವರನ ಸಂಗಾತಿಯಾಗಿದ್ದಾಳೆ.

ಈ ಸಹಸ್ರನಾಮವನ್ನು ಪಠಿಸುವವರನ್ನು ಕ್ರೂರದೃಷ್ಟಿಯಿಂದ ನೋಡಿದವರನ್ನು ಮಾರ್ತಾಂಡ ಭೈರವನು (ನಾಮ ೭೮೫) ಕುರಡನನ್ನಾಗಿಸುತ್ತಾನೆ.ಈ ಸಹಸ್ರನಾಮವನ್ನು ನಿತ್ಯವೂ ಪಠಿಸುವವರ ಸಂಪತ್ತನ್ನು ಯಾರಾದರೂ ಅಪಹರಿಸುವುದಾಗಲಿ ಅಥವಾ ಇತರೇ ವಿಧಾನಗಳ ಮೂಲಕ ಹಾನಿಯುಂಟು ಮಾಡಿದರೆ ಅವರನ್ನು ಕ್ಷೇತ್ರಪಾಲನು (ನಾಮ ೩೪೪) ಸಂಹರಿಸುತ್ತಾನೆ.ಈ ಸಹಸ್ರನಾಮವನ್ನು ನಿತ್ಯವೂ ಪಠಿಸುವವರೊಂದಿಗೆ ಯಾರಾದರೂ ಅನಗತ್ಯವಾದ ವಾದವಿವಾದಕ್ಕಿಳಿದರೆ ನಕುಲೀಶ್ವರೀ ದೇವಿಯು ಅಂತಹ ವ್ಯಕ್ತಿಯ ವಾಕ್ಕನ್ನು (ಮಾತನ್ನು) ನಿಷ್ಪ್ರಯೋಜನಗೊಳಿಸುತ್ತಾಳೆ, ನಕುಲೀಶ್ವರೀ ದೇವಿಯನ್ನು ನವಾವರಣದಲ್ಲೂ ಪೂಜಿಸಲಾಗುತ್ತದೆ ಮತ್ತು ಈಕೆಯು ಮಂತ್ರಿಣೀ ದೇವಿ ಎಂದು ಕರೆಯಲ್ಪಡುವ ಶ್ಯಾಮಲಾ ದೇವಿಯ (ನಾಮ ೬೯, ೭೫) ಸಹಾಯಕಿಯಾಗಿದ್ದಾಳೆ.

ಈ ಲಲಿತಾ ಸಹಸ್ರನಾಮವನ್ನು ನಿತ್ಯವೂ ಜಪಿಸುವವರ ಮೇಲೆ ಶತ್ರುತ್ವವನ್ನು ಒಬ್ಬ ರಾಜನೇ ತೆಳೆದಿದ್ದರೂ ಸಹ ಅವನ ಸೈನ್ಯವನ್ನು ಲಲಿತಾಂಬಿಕೆಯ ಸೇನಾ ಪ್ರಮುಖಳಾಗಿರುವ ದಂಡಿನೀ ದೇವಿಯೇ (ವಾರಾಹೀ – ನಾಮ ೭೦, ೭೬) ಸ್ವಯಂ ನಾಶಪಡಿಸುತ್ತಾಳೆ ಈ ವಿಷಯವಾಗಿ ಅವಳಲ್ಲಿ ಭಕ್ತನು ಬೇಡದಿದ್ದರೂ ಸಹ ಮತ್ತು ಅದಕ್ಕೆ ಲಲಿತಾಂಬಿಕೆಯ ಆಜ್ಞೆಯಿಲ್ಲದಿದ್ದರೂ ಸಹ.ಯಾರು ಈ ಸಹಸ್ರನಾಮವನ್ನು ಕನಿಷ್ಠ ಆರು ತಿಂಗಳ ಕಾಲ ನಿತ್ಯವೂ ಪಠಿಸುತ್ತಾರೆಯೋ ಅವರ ಮನೆಯಲ್ಲಿ ಲಕ್ಷ್ಮೀದೇವಿಯು ಚಾಂಚಲ್ಯರಹಿತಳಾಗಿ ಸ್ಥಿರವಾಗಿ ನಿಲ್ಲುತ್ತಾಳೆ.ಯಾರು ಈ ಲಲಿತಾ ಸಹಸ್ರನಾಮವನ್ನು ಒಂದು ತಿಂಗಳ ಕಾಲ ತ್ರಿಕಾಲವೂ ಪಠಿಸುತ್ತಾರೋ ಅಂತಹವರ ನಾಲಿಗೆಯ ಮೇಲೆ ವಾಗ್ದೇವಿಯಾದ ಸರಸ್ವತಿಯು ನಲಿಯುತ್ತಾಳೆ.

ಯಾರು ಈ ಸಹಸ್ರನಾಮವನ್ನು ಹದಿನೈದು ರಾತ್ರಿಗಳು ಜಾಗರೂಕರಾಗಿ ಪಠಿಸುತ್ತಾರೋ ಅವರು ಇತರೇ ಲಿಂಗದ ವ್ಯಕ್ತಿಗಳನ್ನು ಮೋಹಪರವಶಗೊಳಿಸುವ ವ್ಯಕ್ತಿತ್ವವನ್ನು ಪಡೆಯುತ್ತಾರೆ.ಈ ಸಹಸ್ರನಾಮವನ್ನು ಒಂದೇ ಒಂದು ಬಾರಿ ಪಠಿಸಿದವರ ದರ್ಶನವನ್ನು ಯಾರು ಮಾಡುತ್ತಾರೋ ಅವರು ಪಾಪಗಳಿಂದ ಮುಕ್ತರಾಗುತ್ತಾರೆ.ಯಾರು ಈ ಸಹಸ್ರನಾಮವನ್ನು ಅರ್ಥಮಾಡಿಕೊಂಡಿರುತ್ತಾರೋ ಅವರಿಗೆ ಕಾಣಿಕೆ ಮತ್ತು ದಾನಗಳನ್ನು ಕೊಡುವುದರಿಂದ ಲಲಿತಾಂಬಿಕೆಯು ಸಂತುಷ್ಟಗೊಳ್ಳುತ್ತಾಳೆ, ಯೋಗ್ಯ ವ್ಯಕ್ತಿಗಳಿಗೆ ದಾನವನ್ನು ಕೊಡುವುದೂ ಸಹ ಒಬ್ಬನ ಪ್ರಮುಖ ಕರ್ತವ್ಯವಾಗಿದೆ,ಅಪಾತ್ರರಿಗೆ ಮಾಡಿದ ದಾನವು ಅಧಿಕವಾದ ಪಾಪಕರ್ಮವನ್ನುಂಟು ಮಾಡುತ್ತದೆ, ದಾನಕ್ಕಿಂತ ದಾನವನ್ನು ಕೊಡಲು ಯೋಗ್ಯ ವ್ಯಕ್ತಿಯನ್ನು ಆರಿಸುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ.

ಯಾರು ಶ್ರೀ ವಿದ್ಯಾ ದೀಕ್ಷೆಯನ್ನು ಪಡೆದು ಶ್ರೀ ಚಕ್ರದ ಪೂಜೆಯನ್ನು ಕೈಗೊಂಡು ಲಲಿತಾ ಸಹಸ್ರನಾಮದ ಪಠಣವನ್ನು ಮಾಡುತ್ತಾರೋ ಅಂತಹವರು ಅತ್ಯಂತ ಪೂಜನೀಯರು ಎಂದು ಪರಿಗಣಿಸಲ್ಪಡುತ್ತಾರೆ, ಮೂಲ ಶ್ಲೋಕದಲ್ಲಿ ಶ್ರೀ ವಿದ್ಯೆಯನ್ನು ಸೂಚಿಸಲು ಮಂತ್ರರಾಜಂ ಶಬ್ದವನ್ನು ಬಳಸಲಾಗಿದೆ, (ಲಕ್ಷ್ಮೀನರಸಿಂಹ ಮಂತ್ರವನ್ನೂ ಸಹ ಮಂತ್ರರಾಜಂ ಹೆಸರಿನಿಂದ ಕರೆಯುತ್ತಾರೆ).ಈ ಸಹಸ್ರನಾಮದ ಅರ್ಥವನ್ನು ತಿಳಿಯದೇ ಪಠಿಸಿದಲ್ಲಿ ಅದು ಆರಿದ ಬೆಂಕಿಯಲ್ಲಿ ಕಟ್ಟಿಗೆಯ ಕೊರಡನ್ನಿಡುವುದಕ್ಕೆ ಸಮನಾದುದು ಆದರೆ ನಾಮಗಳ ಅರ್ಥಗಳನ್ನು ತಿಳಿಯದವರೂ ಸಹ ಲಲಿತಾಸಹಸ್ರನಾಮವನ್ನು ಪಠಿಸಬಹುದೆಂದು ಹೇಳಲಾಗಿದೆ,ಇದರ ಒಟ್ಟಾರೆ ಉದ್ದೇಶವೇನೆಂದರೆ ಯಾರು ಸಹಸ್ರನಾಮದ ಅರ್ಥಗಳನ್ನು ತಿಳಿಯಲು ಶಕ್ಯರಾಗಿದ್ದಾರೋ ಅವರು ಅದರ ಅರ್ಥಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು, ಯಾರಿಗೆ ಇದರ ಅರ್ಥಗಳನ್ನು ತಿಳಿದುಕೊಳ್ಳುವ ಸಾಮರ್ಥ್ಯವಿಲ್ಲವೋ ಅವರಿಗೆ ಮಾತ್ರ ಇದರಿಂದ ವಿನಾಯತಿಯನ್ನು ಕೊಡಲಾಗಿದೆ, ಅವರಿಗೆ ಇದನ್ನು ಅರಿಯಲು ಬೇಕಾಗಿರುವ ಅವಶ್ಯವಾದ ಜ್ಞಾನವು ಮುಂದಿನ ಜನ್ಮದಲ್ಲಿ ದೊರೆಯುತ್ತದೆ.

ಯಾರು ಜೀವಿತಕಾಲದಲ್ಲಿ ಒಮ್ಮೆ ಶ್ರೀ ಚಕ್ರದ ಪೂಜೆಯನ್ನು ಸಹಸ್ರನಾಮಪೂರ್ವಕವಾಗಿ ಸುವಾಸನೆಯುಳ್ಳ ಪುಷ್ಟಗಳಿಂದ ಪೂಜಿಸುವರೋ ಅವರಿಗೆ ಉಂಟಾಗುವ ಪುಣ್ಯಫಲವನ್ನು ಶಿವನಿಂದಲೂ ಸಹ ವಿವರಿಸಲು ಸಾಧ್ಯವಿಲ್ಲ, ಇದನ್ನೇ ಅರ್ಚನೆ ಎಂದು ಕರೆಯುತ್ತಾರೆ,ಪ್ರತಿಯೊಂದು ನಾಮದ ಕೊನೆಯಲ್ಲಿ ನಮಃ ಶಬ್ದವನ್ನು ಹೇಳಬೇಕು ಪದ್ಮ, ತುಲಸೀಪುಷ್ಪ, ಕಲ್ಹಾರ, ಕದಂಬ, ಚಂಪಕ, ಜಾಜಿ, ಮಲ್ಲಿಕಾ, ಕರವೀರ, ಉತ್ಪಲ, ಬಿಲ್ವಪತ್ರ, ಕುಂದ, ಕೇಸರ, ಪಾಟಲ, ಕೇತಕೀ ಮತ್ತು ಮಾಧವೀ ಎಂದು ಹದಿನೈದು ವಿಧವಾದ ಪುಷ್ಟಗಳನ್ನು ಹೆಸರಿಸಲಾಗಿದೆ,ಆದರೆ ಯಾವುದೇ ವಿಧವಾದ ಪರಿಮಳಭರಿತ ಹೂವುಗಳನ್ನು ಅರ್ಚನೆಗೆ ಬಳಸಬಹುದು ಆದರೆ, ಎಲ್ಲಕ್ಕಿಂತ ಶ್ರೇಷ್ಠವಾದ ಪುಷ್ಪವೆಂದರೆ ಕೇಸರೀ ಹೂವು ( ತುಳಸೀ ಗಿಡದ ಹೂಗುಚ್ಛವನ್ನು ಬಳಸಬೇಕು ದಳಗಳನ್ನಲ್ಲ ).

ಅರ್ಚನೆ ಎಂದರೆ ಪ್ರತಿ ನಾಮಕ್ಕೂ ಓಂ-ಐಂ-ಹ್ರೀಂ-ಶ್ರೀಂ ಮಂತ್ರವನ್ನು ಪೂರ್ವಪ್ರತ್ಯಯವಾಗಿ ಮತ್ತು ನಮಃ ಎನ್ನುವುದನ್ನು ಉತ್ತರ ಪ್ರತ್ಯಯವಾಗಿ ಜೋಡಿಸಬೇಕು, ಉದಾಹರಣೆಗೆ ಮೊದಲನೇ ನಾಮವನ್ನು ‘ಓಂ-ಐಂ-ಹ್ರೀಂ-ಶ್ರೀಂ-ಶ್ರೀ ಮಾತ್ರೇ ನಮಃ ಎಂದು ಉಚ್ಛರಿಸಬೇಕು.ಅರ್ಚನೆಯನ್ನು ಕೈಗೊಳ್ಳುವ ಮುನ್ನ ಒಬ್ಬರು ಸಂಕಲ್ಪವನ್ನು ಮಾಡಬೇಕು, ಅದನ್ನನುಸರಿಸಿ ನ್ಯಾಸ, ಅರ್ಚನೆ ಮತ್ತು ಪುನಃ ಓಂ ಎಂದು ಕಡೆಯ ನಾಮದ ಅರ್ಚನೆಯಲ್ಲಿ ಹೇಳಬೇಕು (ಓಂ-ಐಂ-ಹ್ರೀಂ-ಶ್ರೀಂ-ಲಲಿತಾಂಬಿಕಾಯೈ ನಮಃ ಓಂ), ನಾವು ಹೂವುಗಳನ್ನು ಇರಿಸುವ ಕ್ರಮಕ್ಕೂ ಪ್ರಾಮುಖ್ಯತೆಯನ್ನು ಕೊಡಲಾಗಿದೆ, ಹೂವುಗಳು ಅರಳುವ ವಿಧಾನದಲ್ಲಿಯೇ ಅವುಗಳನ್ನು ಶ್ರೀ ಚಕ್ರದ ಮೇಲೆ ಇರಿಸಬೇಕು, ಅವುಗಳ ದಳಗಳು ಮೇಲ್ಮುಖವಾಗಿರಬೇಕು.ಯಾರು ಮೇಲೆ ತಿಳಿಸಿದ ಪ್ರಕಾರ ಪೂಜೆಯನ್ನು ಹುಣ್ಣಿಮೆಯಂದು ಮಾಡುತ್ತಾರೋ ಅವರು ಲಲಿತಾಂಬಿಕೆಯ ಸ್ವರೂಪವನ್ನು ಪಡೆಯುತ್ತಾರೆ, ಒಂದು ವೇಳೆ ಅಂತಹ ವ್ಯಕ್ತಿಗಳನ್ನು ಯಾರು ಲಲಿತಾಂಬಿಕೆಯ ಸ್ವರೂಪವೆಂದು ಭಾವಿಸುವುದಿಲ್ಲವೋ ಅವರು ಪಾಪ ಪೀಡಿತರಾಗುತ್ತಾರೆ.

ಯಾರು ಮೇಲೆ ತಿಳಿಸಿದ ಪೂಜೆಯನ್ನು ದಸರೆಯ ಒಂಬತ್ತನೇ ದಿನವಾದ ಮಹಾನವಮಿಯಂದು ಕೈಗೊಳ್ಳುತ್ತಾರೋ ಅವರು ಮುಕ್ತಿಯನ್ನು ಹೊಂದುತ್ತಾರೆ, ಮಹಾನವಮಿಯು ಶಿವ ಮತ್ತು ಶಕ್ತಿಯರ ಸಾಮರಸ್ಯರೂಪವಾಗಿದೆ, ಅಷ್ಟಮಿಯು ರುದ್ರನಿಗೆ ಮತ್ತು ನವಮಿಯು ಶಕ್ತಿಗೆ ಶ್ರೇಷ್ಠವೆಂದು ಪರಿಗಣಿಸಲಾಗಿದೆ,ಇವೆರಡೂ ದಿನಗಳ ಸಂಧಿಕಾಲವಾದ ಮಹಾನವಮಿಯು ಲಲಿತಾಂಬಿಕೆಯನ್ನು ಪೂಜಿಸಲು ಅತ್ಯಂತ ಪ್ರಶಸ್ತ ಸಮಯವೆಂದು ಪರಿಗಣಿಸಲ್ಪಟ್ಟಿದ್ದು ಅಂದು ಪೂಜಿಸಿದವರ ಬೇಡಿಕೆಗಳು ಇಡೇರುತ್ತವೆ, ಅವರು ಸಕಲ ಸೌಭಾಗ್ಯಗಳನ್ನು ಪಡೆದು ಪುತ್ರ-ಪೌತ್ರಾದಿಗಳೊಂದಿಗೆ ಬಹುಕಾಲ ಜೀವಿಸಿ, ಅಂತಿಮವಾಗಿ ಲಲಿತಾಂಬಿಕೆಯ ಪದತಲದಲ್ಲಿ ಸ್ಥಾನ ಪಡೆಯುತ್ತಾರೆ (ನಾಮ ೯೧೨).

ಯಾರು ಇಂತಹ ಆಚರಣೆಗಳನ್ನು ಪ್ರತಿ ಶುಕ್ರವಾರಗಳಂದು ಕೈಗೊಳ್ಳುತ್ತಾರೆಯೋ ಅಂತಹವರು ಶ್ರೀ ವಿದ್ಯಾ ಉಪಾಸನೆಯಲ್ಲಿ ಪರಿಣಿತರಾದವರಿಗೆ ಪಾಯಸ-ಅಪೂಷ-ಷಡ್ರಸೋಪೇತವಾದ ಭೋಜನವನ್ನು ಉಣಬಡಿಸಬೇಕು,ಹೀಗೆ ಮಾಡಿದಲ್ಲಿ ಲಲಿತಾಂಬಿಕೆಯು ಅತ್ಯಂತ ಸಂತುಷ್ಟಳಾಗಿ ಅವರು ಬೇಡಿದ ವರಗಳನ್ನೆಲ್ಲಾ ದಯಪಾಲಿಸುತ್ತಾಳೆ, ಅವರು ಸ್ವಯಂ ಲಲಿತಾಂಬಿಕೆಯ ಶಕ್ತಿಗಳನ್ನೇ ಪಡೆಯುವರೆಂದು ಹೇಳಲಾಗುತ್ತದೆ, (ಇದಕ್ಕೆ ಸಂಬಂಧಿಸಿದ ಅನುಷ್ಠಾನ ವಿಧಿಗಳು ಬಹಳ ದೀರ್ಘವಾಗಿವೆ).ಯಾರು ಈ ಲಲಿತಾ ಸಹಸ್ರನಾಮವನ್ನು ಯಾವುದೇ ವಿಧವಾದ ಬಯಕೆಗಳಿಲ್ಲದೆ ಪಠಿಸುತ್ತಾರೋ ಅವರು ಸಂಸಾರ ಬಂಧನದಿಂದ ಮುಕ್ತರಾಗಿ ಅಂತಿಮವಾಗಿ ಆಕೆಯಲ್ಲಿ ಐಕ್ಯರಾಗುತ್ತಾರೆ.

ಈ ಸಹಸ್ರನಾಮವು ಭುಕ್ತಿ-ಮುಕ್ತಿ ಪ್ರದಾಯಕವಾಗಿದೆ, ಒಬ್ಬನಿಗೆ ಶ್ರೀ ವಿದ್ಯಾ ದೀಕ್ಷೆಯು ಅವನ ಅಂತಿಮ ಜನ್ಮದಲ್ಲಿ ಕೊಡಮಾಡಲ್ಪಡುತ್ತದೆ ಎಂದು ಹೇಳಲಾಗುತ್ತದೆ, ಇಂತಹ ಅವಕಾಶವು ದೊರೆಯಲು ಅವನು ಪೂರ್ವ ಜನ್ಮಗಳಲ್ಲಿ ಅನೇಕ ದೇವ-ದೇವಿಯರನ್ನು ಪೂಜಿಸಿ ಪುಣ್ಯವನ್ನು ಸಂಪಾದಿಸಿರಬೇಕು.ಒಬ್ಬನಿಗೆ ಸಹಸ್ರನಾಮದ ಉಪದೇಶವನ್ನು ಶ್ರೀ ವಿದ್ಯಾ ದೀಕ್ಷೆಯ ಮೊದಲೇ ಕೊಟ್ಟರೆ, ಅವನಿಗೆ ದೀಕ್ಷೆಯನ್ನು ಕೊಟ್ಟವರು ಮತ್ತು ದೀಕ್ಷೆಯನ್ನು ಪಡೆದುಕೊಂಡವರು ಇಬ್ಬರೂ ದೋಷಗ್ರಸ್ತರಾಗುತ್ತಾರೆ, ಅದೇ ವಿಧವಾಗಿ ಯಾರ ಮನಸ್ಸು ಪರಿಶುದ್ಧವಾಗಿಲ್ಲವೋ ಅಂತಹವರಿಗೆ ಶ್ರೀ ವಿದ್ಯಾ ದೀಕ್ಷೆಯನ್ನು ಕೊಟ್ಟರೆ ಆಗಲೂ ಸಹ ಇಬ್ಬರಿಗೂ ದೋಷವುಂಟಾಗುವುದು.ಅಂತಿಮವಾಗಿ ಹಯಗ್ರೀವನು ಈ ರಹಸ್ಯವನ್ನು ಅಗಸ್ತ್ಯನೊಂದಿಗೆ ಹಂಚಿಕೊಂಡದ್ದು ಲಲಿತಾಂಬಿಕೆಯ ಆಜ್ಞೆಯ ಮೇರೆಗೆ ಎಂದು ಹೇಳುತ್ತಾನೆ, ಹಯಗ್ರೀವನು ಅಗಸ್ತ್ಯನಿಗೆ ಈ ಸಹಸ್ರನಾಮವನ್ನು ನಿತ್ಯವೂ ಪಠಿಸುವಂತೆ ಹೇಳಿ, ಅದರ ಮೂಲಕ ಅವನು ಬೇಡಿದ್ದನ್ನು ದೇವಿಯು ಕರುಣಿಸುತ್ತಾಳೆ.

Leave a Reply

Your email address will not be published.