ಈ ಹುಡುಗಿಯರಿಗೆ ಬೆಂಗಳೂರಿನಲ್ಲಿ ಲಕ್ಷ ಲಕ್ಷ ಸಂಬಳ ಆದರೂ ಆ ಸಂಬಳವನ್ನು ಬಿಟ್ಟು ಇಂಜಿನಿಯರಿಂಗ್ ಪದವಿ ಮುಗಿಸಿದ ಈ ಹೆಣ್ಣುಮಕ್ಕಳು ಕೃಷಿಯಲ್ಲಿ ಮಾಡುತ್ತಿರುವ ಐಡಿಯಾ ಸೂಪರ್!!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ

ಇಂದಿನ ದಿನಗಳಲ್ಲಿ ತೊಂಬತ್ತು ಭಾಗದಷ್ಟು ಜನರಿಗೆ ಹಣವೇ ಮುಖ್ಯ ಈ ಹಣದ ಹಿಂದೆ ಓಡಿ ಓಡಿ ಮನುಷ್ಯ ತನ್ನ ಬಗ್ಗೆ ತಾನು ಯೋಚನೆ ಮಾಡುವುದಕ್ಕೂ ಸಮಯ ಸಿಗದಷ್ಟು ದುಡಿಯುತ್ತಿದ್ದಾನೆ,ಇಂದಿನ ಈ ಒತ್ತಡದ ಜೀವನದಿಂದಾಗಿ ನೂರು ವರ್ಷ ಆಯಸ್ಸು ಹೊಂದಿರುವ ಮನುಷ್ಯ ಕೇವಲ ಅರುವತ್ತು ವರುಷಕ್ಕೆ ಅನಾರೋಗ್ಯ ಸಮಸ್ಯೆಗಳಿಂದ ಕಾಡುತ್ತಾ ಮಾತ್ರೆ, ಆಸ್ಪತ್ರೆ ಇವುಗಳಲ್ಲಿ ಜೀವನ ಕಳೆದು ಒಂದು ದಿನ ಭೂಮಿಯನ್ನು ತೊರೆದು ಹೋಗಿ ಬಿಡುತ್ತಾನೆ.ಇಂದಿನ ಒತ್ತಡದ ಜೀವನ ಯಾಂತ್ರಿಕ ಬದುಕು ಲ್ಯಾಪ್ ಟಾಪ್ ಮುಂದೆಯೇ ಅರ್ಧದಷ್ಟು ಸಮಯ ಕಳೆಯುವುದು ನಮ್ಮವರೊಂದಿಗೆ ಇರುವ ಸಮಯವನ್ನು ಆಫೀಸಿನಲ್ಲಿ ಅಥವಾ ಕಂಪ್ಯೂಟರ್ನೊಂದಿಗೆ ಕಲಿಯುವುದು ಇದೆ ಆಗಿದೆ.

ಇಂದಿನ ಜೀವನ ಆದರೆ ಈ ಇಬ್ಬರು ಹೆಣ್ಣು ಮಕ್ಕಳು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಜೀವನದ ಪಾಠವನ್ನು ಕಲಿತು ನಿಜವಾದ ನೆಮ್ಮದಿ ಎಲ್ಲಿ ಇದೆ ಎಂಬುದನ್ನು ಅರಿತುಕೊಂಡು ಇದೀಗ ಕೃಷಿಯಲ್ಲಿ ತಮ್ಮ ಆಸಕ್ತಿಯನ್ನು ತೋರಿಸಿ ಎಂಜಿನಿಯರಿಂಗ್ ಮುಗಿದಿದ್ದರೂ ಕೂಡ ತಮ್ಮ ಜೀವನವನ್ನು ವ್ಯವಸಾಯದಲ್ಲಿ ಕಳೆಯುತ್ತಿದ್ದಾರೆ ಇದೇ ಇವರಿಗೆ ಇಷ್ಟವಾದ ಬದುಕು ಅಂತ ಕೂಡ ಹೇಳಿಕೊಳ್ಳುತ್ತಿದ್ದಾರೆ.ಹೌದು ಆ ಹುಡುಗಿಯರು ಯಾರು ಅಂದರೆ ಅವಳಿ ಜವಳಿ ಯಾದ ಮೇಘಾ ಮತ್ತು ಗಗನ ಇವರು ಶಿವಮೊಗ್ಗಕ್ಕೆ ಸೇರಿದ ಸಾಗರ ತಾಲ್ಲೂಕಿನ ಹೊಸಹಳ್ಳಿಗೆ ಸೇರಿದವರಾಗಿದ್ದು ಉನ್ನತ ಶ್ರೇಣಿ ಪಡೆದಿದ್ದರೂ ತಮ್ಮ ತಂದೆಯ ಜಮೀನಿನಲ್ಲಿ ಕೆಲಸ ಮಾಡಿ ತನ್ನ ತಂದೆ ತಾಯಿಯ ಆರೋಗ್ಯವನ್ನು ನೋಡಿಕೊಂಡು ಇದೀಗ ಪ್ರಕೃತಿಯ ಮಡಿಲಲ್ಲಿ ನೆಮ್ಮದಿಯ ಜೀವನವನ್ನು ಸಾಗಿಸುತ್ತಿದ್ದಾರೆ.

ಈ ಹೆಣ್ಣು ಮಕ್ಕಳ ತಂದೆ ರಾಜೇಂದ್ರ ಎಂದು ಇವರು ತಮಗೆ ಸೇರಿದ ಜಮೀನಿನಲ್ಲಿ ಔಷಧೀಯ ಗಿಡಗಳನ್ನು ಬೆಳೆಯುತ್ತಿದ್ದಾರೆ ಇದರಿಂದ ಸಾಕಷ್ಟು ಲಾಭವನ್ನು ಕೂಡ ಪಡೆದುಕೊಳ್ಳುತ್ತಿರುವ ಈ ರೈತ .ತಮ್ಮ ಮಕ್ಕಳು ಫಾರಿನ್ಗೆ ಹೋಗುವ ಅವಕಾಶವಿದ್ದರೂ ಕೂಡ ಅವರ ಆಸೆಯಂತೆ ವ್ಯವಸಾಯದಲ್ಲಿಯೆ ಮುಂದುವರಿಯಬೇಕೆಂಬ ಮಕ್ಕಳ ಆಸೆಯನ್ನು ಬೇಡ ಅನ್ನದೇ ಮಕ್ಕಳಿಗೆ ಬೆನ್ನಲುಬಾಗಿದ್ದಾರೆ ರಾಜೇಂದ್ರ ಅವರು,ಇನ್ನೂ ಗಗನ ಮತ್ತು ಮೇಘಾ ಕೂಡ ವ್ಯವಸಾಯದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದು ತನ್ನ ತಂದೆಗೆ ಜಮೀನಿನಲ್ಲಿ ಸಹಾಯ ಮಾಡಿ ಇದೀಗ ಹೆಚ್ಚು ಲಾಭವನ್ನು ಕೂಡ ವ್ಯವಸಾಯದಿಂದ ಪಡೆದುಕೊಳ್ಳುತ್ತಿದ್ದಾರೆ.

ಇದನ್ನೆಲ್ಲ ತಿಳಿದರೆ ನಿಜಕ್ಕೂ ಇಷ್ಟು ಚಿಕ್ಕ ವಯಸ್ಸಿನಲ್ಲಿಯೆ ಈ ಮಕ್ಕಳು ಇಷ್ಟು ದೊಡ್ಡ ಚಿಂತನೆಯನ್ನು ಮಾಡಿ ಜೀವನದ ನಿಜವಾದ ನೆಮ್ಮದಿಯನ್ನು ಪಡೆದುಕೊಳ್ಳುವುದಕ್ಕಾಗಿ ಒಳ್ಳೆಯ ಮಾರ್ಗವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.ಅಂತ ಹೇಳಬಹುದು ಹಾಗಾದರೆ ಈ ಒಂದು ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ನಮಗೆ ತಪ್ಪದೇ ಕಾಮೆಂಟ್ ಮಾಡಿ ಮತ್ತು ರೈತಾಪಿ ಜೀವನವು ನಿಮಗೂ ಕೂಡ ಇಷ್ಟವಾಗಿದ್ದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಬೇರೆಯವರಿಗೂ ಶೇರ್ ಮಾಡಿ.ಆಧುನಿಕ ಬದುಕಿನಲ್ಲಿ ಪ್ರತಿಯೊಬ್ಬರೂ ಕೂಡ ತಾಂತ್ರಿಕ ಜೀವನವನ್ನು ನಡೆಸುತ್ತಿದ್ದಾರೆ ಹಾಗೆ ಆಫೀಸಿನಲ್ಲಿ ನಾವು ನಮ್ಮ ಬುದ್ಧಿಯನ್ನು ಬಳಸುವಷ್ಟು ಅರ್ಧದಷ್ಟು ಯೋಜನೆಗಳನ್ನು ಬುದ್ಧಿಯನ್ನು ವ್ಯವಸಾಯದಲ್ಲಿ ಬಳಸಿದರೆ ವರ್ಷಕ್ಕೆ ಲಕ್ಷ ಲಕ್ಷ ಹಣವನ್ನು ಸಂಪಾದಿಸಬಹುದು.

ಜೊತೆಗೆ ನೆಮ್ಮದಿಯ ಜೀವನವನ್ನು ಕೂಡ ನಡೆಸಬಹುದು, ಹಾಗಾದರೆ ಗಗನ ಮತ್ತು ಮೇಘನಾಳ ಈ ಒಂದು ನಿರ್ಧಾರ ಸರಿಯಾಗಿದ್ದರೆ ತಪ್ಪದ ಮಾಹಿತಿಗೆ ಲೈಕ್ ಮಾಡಿ ಮತ್ತು ಪ್ರತಿಯೊಬ್ಬರಿಗೂ ಶೇರ್ ಮಾಡಿ,ಇಂದಿನ ಯುವಪೀಳಿಗೆ ಮಂದಿಗೆ ಯಾರೂ ಬುದ್ಧಿವಾದವನ್ನು ಹೇಳುವ ಅವಶ್ಯಕತೆ ಇರುವುದಿಲ್ಲ ಅವರುಗಳ ಜೀವನವನ್ನು ರೂಪಿಸಿಕೊಳ್ಳುವ ಶಕ್ತಿ ಅವರಲ್ಲಿಯೇ ಇರುತ್ತದೆ ಎನ್ನಂತ್ತೀರಾ ಫ್ರೆಂಡ್ಸ್ .

Leave a Reply

Your email address will not be published.