ಸ್ನೇಹಿತರೆ ನಾವು ದೈನಂದಿನ ದಿನಗಳಲ್ಲಿ ಅನೇಕ ರೀತಿಯ ತಪ್ಪುಗಳನ್ನು ಮಾಡುತ್ತೇವೆ ಅದೇ ರೀತಿಯಲ್ಲಿ ನಾವು ಪೂಜೆ ಮಾಡುವ ಸಮಯದಲ್ಲಿ ಅನೇಕ ತಪ್ಪುಗಳನ್ನು ಮಾಡುತ್ತೇವೆ. ಈ ರೀತಿ ತಪ್ಪುಗಳನ್ನು ಮಾಡುವುದರಿಂದ ನಮಗೆ ಅನೇಕ ರೀತಿಯ ತೊಡಕುಗಳು ಆಗುತ್ತ ಇರುತ್ತವೆ.ಆ ತಪ್ಪುಗಳು ಏನೆಂದರೆ ನಾವು ನಮ್ಮ ಮನೆಯಲ್ಲಿ ಇರುವಂತಹ ಯಜಮಾನರುಗಳು ತಿಂಡಿಯನ್ನು ತಿನ್ನುವ ಮೊದಲು ದೇವರಿಗೆ ಪೂಜೆ ಮಾಡಿ ದೇವರಲ್ಲಿ ಪೂಜೆ ಮಾಡುವಾಗ ಗಾಯತ್ರಿ ಮಂತ್ರವನ್ನು ಜಪಿಸಿ ಪೂಜೆ ಆದ ನಂತರ ತಿಂಡಿಯನ್ನು ತಿನ್ನುವುದರಿಂದ ನಮ್ಮ ಮನೆಯಲ್ಲಿ ಅನೇಕ ರೀತಿಯ ಒಳ್ಳೆಯ ರೀತಿಯ ಬದಲಾವಣೆಗಳು ಆಗುತ್ತವೆಮತ್ತು ಕಿರಿಯ ವಯಸ್ಸಿನವರು ಮನೆಯಲ್ಲಿ ಪೂಜೆ ಮಾಡುವಾಗ ತಮ್ಮ ತಮ್ಮ ಮನೆ ದೇವರುಗಳನ್ನು ನೆನೆದು ಭಕ್ತಿಯಿಂದ ದೇವರಿಗೆ ನೈವೇದ್ಯವನ್ನು ಇಟ್ಟು ದೇವರಿಗೆ ನೈವೇದ್ಯವನ್ನು ಇಟ್ಟ ನಂತರ ನೀವು ತಿಂಡಿಯನ್ನು ತಿನ್ನುವುದರಿಂದ ನಿಮ್ಮ ಮನೆಗೆ ಒಳ್ಳೆಯದಾಗುತ್ತದೆ ಮತ್ತು ಮನಸ್ಸಿಗೆ ಶಾಂತಿ ದೊರೆಯುತ್ತದೆ.
ಕೆಲವರು ಕಾರ್ತಿಕ ಮಾಸದಲ್ಲಿ ಲಿಂಗವನ್ನು ಪೂಜಿಸುವಾಗ ಬೆಳಿಗ್ಗೆ 9ಗಂಟೆಗೆ ಪೂಜೆಯನ್ನು ಶುರುಮಾಡಿದರೆ ಸಂಜೆ ಆರು ಗಂಟೆಗೆ ಮುಗಿಯುತ್ತದೆ. ಈ ರೀತಿ ಮಾಡುವಾಗ ಪೂಜೆಗೆ ಮುನ್ನ ಸ್ವಲ್ಪ ಉಪಾಹಾರವನ್ನು ತೆಗೆದುಕೊಂಡು ಮಾಡುವುದು ತಪ್ಪಾಗುವುದಿಲ್ಲ.ಉಪಾಹಾರ ವೆಂದರೆ ಸ್ವಲ್ಪ ಉಪ್ಪಿಟ್ಟು ಅಥವಾ ಫಲಾಹಾರ ತೆಗೆದುಕೊಂಡು ಪೂಜೆಯನ್ನು ಮಾಡುವುದರಿಂದ ನಮಗೆ ಯಾವುದೇ ರೀತಿಯ ಕೆಡುಕು ಆಗುವುದಿಲ್ಲ ಮತ್ತು ಈ ಪೂಜೆಯ ಫಲ ನಮಗೆ ದೊರೆಯುತ್ತದೆಅಥವಾ ಪೂಜೆಗೂ ಮುನ್ನ ಒಂದು ಲೋಟ ಹಾಲನ್ನು ಕುಡಿದು ಪೂಜೆಗೆ ಕುಳಿತುಕೊಳ್ಳುವುದರಿಂದ ನಮಗೆ ಆ ಪೂಜೆಯ ಪೂರ್ಣ ಫಲ ನಮಗೆ ದೊರೆಯುತ್ತದೆ ಹಾಗೆಯೇ ಕೆಲವರು ಮನೆಯಲ್ಲಿ ಎದ್ದ ತಕ್ಷಣ ಕಾಫಿ ಅನ್ನು ಮಾಡುತ್ತಾರೆ. ಈ ರೀತಿ ಎದ್ದ ತಕ್ಷಣ ಕಾಫಿ ಯನ್ನು ಮಾಡುವುದರಿಂದ ಅಂತಹ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ.
ಏಕೆಂದರೆ ನಾವು ಎದ್ದ ತಕ್ಷಣ ಮೊದಲು ಮನೆಯನ್ನು ಶುಭ್ರಗೊಳಿಸಿ ಗುಡಿಸಿ ಅದನ್ನು ನೀಟಾಗಿ ಸಾರಿಸಿ ಮತ್ತು ಮನೆಯ ಮುಂಬಾಗಿಲನ್ನು ತೊಳೆದು ಅದಕ್ಕೆ ಕುಂಕುಮವನ್ನು ಇಟ್ಟು ಮನೆಯ ಬಾಗಿಲನ್ನು ಅಲಂಕರಿಸಿ ನಂತರ ಅಡುಗೆಯನ್ನು ಮಾಡುವುದರಿಂದ ಅಂತಹ ಮನೆಗೆ ಲಕ್ಷ್ಮಿಯು ಸದಾಕಾಲ ಬರುತ್ತಾಳೆ ಮತ್ತು ನೆಲಸಿರುತ್ತಾಳೆ.ನಾವು ಲಕ್ಷ್ಮಿಯನ್ನು ಬಳಸಿಕೊಳ್ಳುವ ಒಲಿಸಿಕೊಳ್ಳಬೇಕೆಂದರೆ ಅನೇಕ ರೀತಿಯ ಕೆಲಸಗಳನ್ನು ಮಾಡಬೇಕು ಅದೇ ರೀತಿಯಲ್ಲಿ ಮನೆಯನ್ನು ಶುಭ್ರವಾಗಿ ಇಟ್ಟುಕೊಂಡರೆ ನಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯೂ ನೆಲೆಸಿರುತ್ತಾಳೆ. ಈ ರೀತಿ ನಾವು ಸಣ್ಣ ಸಣ್ಣ ತಪ್ಪುಗಳನ್ನು ಮಾಡದೇ ಹೋದರೆ ನಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸದಾಕಾಲ ನೆಲೆಸಿರುತ್ತದೆ.
ನೋಡಿದಿರಲ್ಲ ಸ್ನೇಹಿತರೆ ಈ ರೀತಿಯ ಸಣ್ಣ ಸಣ್ಣ ತಪ್ಪುಗಳನ್ನು ನೀವು ಏನಾದರೂ ನಿಮ್ಮ ದೈನಂದಿನ ದಿನಗಳಲ್ಲಿ ಮಾಡುತ್ತಿದ್ದರೆ ಇನ್ನು ಮುಂದೆ ಈ ತಪ್ಪುಗಳನ್ನು ಮಾಡುವುದನ್ನು ನಿಲ್ಲಿಸಿ ಈ ರೀತಿ ಮಾಡುವುದರಿಂದ ನಿಮ್ಮ ಮನೆಗಳಲ್ಲಿ ಆರ್ಥಿಕ ಸಮಸ್ಯೆ ಯಾವುದೇ ಕಾರಣಕ್ಕೂ ಬರುವುದಿಲ್ಲಾ ಮತ್ತು ದಾರಿದ್ರ್ಯತನ ಹೋಗುತ್ತದೆ ಹಾಗೆಯೇ ಮನಸ್ಸಿಗೆ ನೆಮ್ಮದಿ ಆರೋಗ್ಯ ಎಲ್ಲವೂ ಕೂಡ ನಿಮಗೆ ಪ್ರಾಪ್ತಿಯಾಗುತ್ತದೆ ಧನ್ಯವಾದಗಳು ಸ್ನೇಹಿತರೆ.