ಐದು ತಿಂಗಳ ನಂತರ ಆಡಿದ ಮೊದಲ ಪಂದ್ಯದಲ್ಲಿ ಎ ಬಿ ಡಿ ಕಮಾಲ್

NewsDesk

ಎಬಿಡಿ ರವರು ಕಳೆದ 5 ತಿಂಗಳಿನ ಹಿಂದೆ ಕ್ರಿಕೆಟ್ ಅಭಿಮಾನಿಗಳಿಗೆ ತಮ್ಮ ದಿಢೀರ್ ನಿವೃತ್ತಿಯಿಂದ ಶಾಕ್ ನೀಡಿದ್ದರು. ತನ್ನ ಕುಟುಂಬದ ಜೊತೆ  ಸಮಯವನ್ನು ಕಳೆಯುವ ಉದ್ದೇಶದಿಂದ ತಮ್ಮ ನೆಚ್ಚಿನ ಕ್ರಿಕೆಟ್ ಗೆ ವಿದಾಯ ಹೇಳಿದ್ದ ಸೌತ್ ಆಫ್ರಿಕಾ ಹಾಗೂ ರಾಯಲ್ ಚಾಲೆಂಜರ್ಸ್ ತಂಡದ ಆಟಗಾರ ಇದೇ ಮೊದಲ ಬಾರಿಗೆ ತಮ್ಮ ನಿವೃತ್ತಿಯ ನಂತರ ಪಂದ್ಯವನ್ನು ಆಡಿದ್ದಾರೆ.

ಆದರೆ ಮೊದಲ ಪಂದ್ಯದಲ್ಲಿಯೇ ತಮ್ಮ ಬ್ಯಾಟಿಂಗ್ ಶೈಲಿಯನ್ನು ಮುಂದುವರಿಸಿರುವ ಎಬಿಡಿ ರವರು ತಮ್ಮಲ್ಲಿ ಇನ್ನೂ ಕ್ರಿಕೆಟ್ ಉಳಿದಿದೆ ಎಂಬುದನ್ನು ಸಾಬೀತುಪಡಿಸಿದರು. ಅಷ್ಟೇ ಅಲ್ಲದೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಐದು ತಿಂಗಳ ನಂತರ ಮೊದಲ ಪಂದ್ಯದಲ್ಲಿ ಮಿಂಚಿ ಎಲ್ಲರ ಹುಬ್ಬೇರಿಸಿದ್ದಾರೆ.

ಹೌದು ಇದೇ ಮೊದಲ ಬಾರಿಗೆ ಟಿ ಟ್ವೆಂಟಿ ಪಂದ್ಯವಾಡಿದ ಎಬಿಡಿ ರವರು ಕೇವಲ 36 ಎಸೆತದಲ್ಲಿ 93 ರನ್ ಸಿಡಿಸಿದ್ದಾರೆ. ಸೌತ್ ಆಫ್ರಿಕಾದಲ್ಲಿ ನಡೆದ ಟೂರ್ನಿಯ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಅಭಿಮಾನಿಗಳ ಸಂತಸವನ್ನು ಇಮ್ಮಡಿಗೊಳಿಸಿದ್ದಾರೆ.

Leave a Reply

Your email address will not be published.