ಆಶಿಕಾ ರಂಗನಾಥ್ ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಾ ಇರುವಂತಹ ಈ ನಟಿ ಯಾರಿಗೆ ಗೊತ್ತಿಲ್ಲ ಹೇಳಿ ತಮ್ಮ ಒಂದೆರಡು ಸಿನಿಮಾಗಳಲ್ಲಿ ಭಾರೀ ಸದ್ದನ್ನು ಮಾಡುವ ಮೂಲಕ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಆಶಿಕಾ ರಂಗನಾಥ್, ಸದ್ಯಕ್ಕೆ ಲಾಕ್ ಡೌನ್ ಇಂದ ಮನೆಯಲ್ಲಿ ಸಮಯ ಕಳೆಯುತ್ತಾ ಇದ್ದಾರೆ ತಮ್ಮ ಕಸಿನ್ಸ್ ಒಡನೆ ಆಟ ಆಡುವ ಮೂಲಕ ಲಾಕ್ ಡೌನಲ್ಲಿ ಸಮಯ ಕಳೆಯುತ್ತ ಇರುವ ಆಶಿಕಾ ರಂಗನಾಥ್ ಸ್ವಲ್ಪ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಇವರ ಫೋಟೋಗಳು ಹರಿದಾಡುತ್ತಾ ಇವೆ.
ಹೌದು ಸೆಲೆಬ್ರಿಟಿಗಳು ಅಂದರೆ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಅವರ ಫೋಟೋಗಳು ವೀಡಿಯೋಗಳು ವೈರಲ್ ಆಗುತ್ತಾ ಇರುತ್ತದೆ. ಇನ್ನು ಇನ್ ಸ್ಟಗ್ರಾಂನಲ್ಲಿ ಹೆಚ್ಚು ಆ್ಯಕ್ಟಿವ್ ಇರುವ ಆಶಿಕಾ ರಂಗನಾಥ್ ತಮ್ಮ ಕಸಿನ್ಸ್ ಜೊತೆಗೆ ತೋಟದ ಮನೆಯಲ್ಲಿ ಕಳೆದ ಸಮಯ ಒಂದರ ಫೋಟೋವನ್ನು ಅಪ್ಲೋಡ್ ಮಾಡಿದ್ದು, ಇವರ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೀವ್ಸ್ ಹಾಗೂ ಲೈಕ್ಸ್ ಪಡೆದುಕೊಂಡಿದೆ.
ಸದ್ಯಕ್ಕೆ ಆಶಿಕಾ ರಂಗನಾಥ್ ಅವರು ಕೋಟಿಗೊಬ್ಬ 3 ಅವತಾರ ಪುರುಷ ಸಿಕ್ಸ್ತ್ ಸೆನ್ಸ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದು ಸಿನಿಮಾ ಚಿತ್ರೀಕರಣವೂ ಬಹಳಷ್ಟು ಪಾಲು ಮುಗಿದಿವೆ, ಆದರೆ ಲಾಕ್ ಡೌನ್ ಯಿಂದಾಗಿ ಚಿತ್ರೀಕರಣವು ಅರ್ಧಕ್ಕೆ ಬಂದಾಗಿತ್ತು ಸಿನಿಮಾದ ರಿಲೀಸ್ ಗಾಗಿ ಕಾಯಬೇಕಾಗಿದೆ, ಅಷ್ಟೇ ಅಲ್ಲ ಆಶಿಕಾ ರಂಗನಾಥ್ ಈಗಾಗಲೇ ಉತ್ತಮ ನಟರೊಂದಿಗೆ ಅಭಿನಯ ಮಾಡಿದ್ದು ಸುದೀಪ್ ಅವರೊಂದಿಗೆ ಅವತಾರ ಪುರುಷ ಎಂಬ ಚಲನಚಿತ್ರದಲ್ಲಿ ಅಭಿನಯ ಮಾಡಿದ್ದಾರೆ ಹಾಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಆಶಿಕಾ ರಂಗನಾಥ್. ಒಟ್ಟಾರೆಯಾಗಿ ಆಶಿಕಾ ರಂಗನಾಥ್ ಅವರ ಅಭಿಮಾನಿಗಳಿಗೆ ಲಾಕ್ ಡೌನ್ ನಂತರ ಒಳ್ಳೆಯ ಸಿನಿಮಾಗಳ ಹಬ್ಬವೇ ಇದೆಯೆಂದು ಹೇಳಬಹುದು.
ತಮ್ಮ ತೋಟದ ಮನೆ ಅಲ್ಲಿ ಸಮಯ ಕಳೆಯುತ್ತಾ ಇರುವ ಆಶಿಕಾ ರಂಗನಾಥ್ ಸೀತಾಫಲ ಹಣ್ಣು ಮಾವು ಮುಂತಾದ ಹಣ್ಣುಗಳನ್ನು ಕೀಳುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ ಇದರ ಜೊತೆಗೆ ಬೆಂಡೆಕಾಯಿ ಕಿತ್ತು ಪುಟ್ಟಿಗೆ ಆ ಫೋಟೋ ಸಹ ವೈರಲ್ ಆಗಿದ್ದು ಸದ್ಯಕ್ಕೆ ಆಶಿಕಾ ರಂಗನಾಥ್ ಚಿತ್ರೀಕರಣ ಇಲ್ಲದೆ ಇರುವ ಕಾರಣ ತಮ್ಮ ಸಮಯವನ್ನು ತೋಟದ ಮನೆ ಅಲ್ಲಿ ಕಳೆಯುತ್ತಾ ಇದ್ದಾರೆ ತರಕಾರಿ ಕೇಳುವ ಮೂಲಕ ಕೃಷಿ ಅಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಆಶಿಕಾ ರಂಗನಾಥ್ ಅವರ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ ಇನ್ನು ನಿಮಗೂ ಕೂಡ ಕೃಷಿ ಇಷ್ಟಾನಾ ಎಂಬುದನ್ನು ತಪ್ಪದೇ ಕಾಮೆಂಟ್ ಮಾಡಿ ಹಾಗೂ ಆಶಿಕಾ ರಂಗನಾಥ್ ಅವರ ಯಾವ ಸಿನಿಮಾ ನಿಮಗೆ ಫೇವರಿಟ್ ಅನ್ನುವುದನ್ನು ಮರೆಯದೆ ಕಾಮೆಂಟ್ ಮಾಡಿ ಧನ್ಯವಾದಗಳು.