ವೀಕ್ಷಕರೆ ಇಂದು ನಾವು ನಿಮಗೆ ತಿಳಿಸಿಕೊಡುವ ವಿಷಯ ಏನು ಅಂದರೆ ನಮ್ಮ ಪೀಳಿಗೆಯ ಯುವ ಮಂದಿಗೆ ಬಹು ದೊಡ್ಡ ಸವಾಲೆಂದರೆ ತಾವು ಓದಿರುವುದನ್ನು ನೆನಪಿನಲ್ಲಿಟ್ಟುಕೊಳ್ಳಲು ಆಗುತ್ತಿಲ್ಲ, ನಾವು ಪರೀಕ್ಷೆ ಸಮಯದಲ್ಲಿ ಎಷ್ಟೆ ಓದಿದರೂ ಪರೀಕ್ಷೆ ಬರೆಯುವ ಸಮಯದಲ್ಲಿ ಅದು ನೆನಪಿಗೆ ಬರುವುದಿಲ್ಲ ಎಂಬುದು ದೊಡ್ಡ ಸಮಸ್ಯೆ ಆಗಿಬಿಟ್ಟಿದೆ.ಇಂತಹ ಸಮಸ್ಯೆ ನಮ್ಮ ಯುವಪೀಳಿಗೆಯನ್ನು ತುಂಬಾ ಕಾಡುತ್ತಿದೆ. ಇಂತಹ ಸಮಸ್ಯೆಗೆ ನಮ್ಮ ಬಳಿ ಒಂದು ಉತ್ತಮವಾದ ಪರಿಹಾರ ಇದೆ, ವಿಜ್ಞಾನಿಗಳ ಪ್ರಕಾರ ನಾವು ಒಂದು ಸಲ ಬರೆಯುವುದು, ಹತ್ತು ಸಲ ಓದುವುದಕ್ಕೆ ಸಮವಾಗಿರುತ್ತದೆ.
ಮೊದಲು ನಾವು ಓದುವುದನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಅದನ್ನು ಬೇರೆಯವರಿಗೆ ಹೇಳಿಕೊಡುವುದರಿಂದ ನಮಗೆ ತೊಂಬತ್ತು ಪರ್ಸೆಂಟ್ ನಾವು ಓದಿರುವುದು ನೆನಪಿನಲ್ಲಿರುತ್ತದೆ. ನಾವು ಬೈಹಾರ್ಟ್ ಮಾಡುವುದಕ್ಕಿಂತ, ಓದಿರುವುದನ್ನು ಬೇರೊಬ್ಬರ ಬಳಿ ಡಿಸ್ಕಸ್ ಮಾಡಬೇಕು ಈ ರೀತಿ ಮಾಡುವುದರಿಂದ ನಾವು ಓದಿರುವುದು ನಮ್ಮ ನೆನಪಿನಲ್ಲಿ ಬಹುಕಾಲದವರೆಗೂ ಇರುತ್ತದೆ.ಖ್ಯಾತ ವಿಜ್ಞಾನಿ ನ್ಯೂಟನ್ ಅವರ ಪ್ರಕಾರ ನಾವು ಮೊದಲು ಓದಿ ಅದನ್ನು ಚೆನ್ನಾಗಿ ಅರ್ಥ ಮಾಡಿಕೊಂಡು, ಅದನ್ನು ನಮ್ಮ ಸ್ನೇಹಿತರೊಂದಿಗೆ ಡಿಸ್ಕಸ್ ಮಾಡುವುದರಿಂದ ಅಥವಾ ಅವರಿಗೆ ಹೇಳಿಕೊಡುವುದರಿಂದ, ಅದನ್ನು ನಾವು ಎಂದಿಗೂ ಮರೆಯುವುದಿಲ್ಲ.
ಉದಾಹರಣೆಗೆ ನಾವು ಒಂದು ಮೊಬೈಲ್ ನಂಬರನ್ನು ಎಷ್ಟು ಸಲ ಓದಿದರೂ ಅದು ನಮಗೆ ನೆನಪಿಗೆ ಬರುವುದಿಲ್ಲ. ನಾವು ಅಷ್ಟು ಸಲ ಬೈಹಾರ್ಟ್ ಒಡೆಯುವುದರ ಬದಲು ಎರಡು ಅಥವಾ ಮೂರು ಸಲ ಅದನ್ನು ನೋಟ್ ಪ್ಯಾಡ್ ಮೇಲೆ ಬರೆಯುವುದರಿಂದ, ನಾವು ಅದನ್ನು ಮರೆಯುವುದಿಲ್ಲ. ಅದೆ ರೀತಿ ನಾವು ಓದುವುದನ್ನು ಕೂಡ ಪದೇ ಪದೇ ಪದೇ ಪದೇ ಬಾಯ್ಪಟ ಮಾಡುವ ಬದಲು ಒಂದು ಅಥವಾ ಎರಡು ಸಲ ಬರೆದರೆ ಅದು ನಮಗೆ ಚೆನ್ನಾಗಿ ಅರ್ಥವಾಗುತ್ತದೆ.
ತುಂಬಾ ಮುಖ್ಯವಾದುದೆಂದರೆ ನಾವು ಓದಲು ಕುಳಿತುಕೊಳ್ಳುವ ಮುಂಚೆ ನಮ್ಮ ಮನಸ್ಸು ಸ್ಟ್ರೆಸ್ ಫ್ರೀ ಆಗಿರಬೇಕು ಸ್ಟ್ರೆಸ್ ಫ್ರೀ ಆಗಬೇಕೆಂದರೆ, ನಾವು ಪ್ರತಿ ದಿನ ಮೂವತ್ತು ನಿಮಿಷವಾದರೂ ಧ್ಯಾನ ಮಾಡಬೇಕು. ಈ ರೀತಿ ಧ್ಯಾನ ಮಾಡುವ ಸಮಯದಲ್ಲಿ ನಾವು ಕೈಗಳಿಂದ ಜ್ಞಾನ ಮುದ್ರೆಯನ್ನು ಹಾಕಿ ಜ್ಞಾನ ಮಾಡುವುದರಿಂದ., ತುಂಬಾ ಉಪಯುಕ್ತವಾಗುತ್ತದೆ. ಪ್ರತಿ ದಿನ ಏಳು ಅಥವಾ ಎಂಟು ಗಂಟೆಗಳ ಕಾಲ ನಾವು ನಿದ್ರಿಸಬೇಕು ಈ ರೀತಿ ಏಳು ಅಥವಾ ಎಂಟು ಗಂಟೆಗಳ ಕಾಲ ನಿದ್ರೆ ಮಾಡುವುದರಿಂದ ನಮ್ಮ ಮನಸ್ಸು ಸ್ಟ್ರೆಸ್ ಫ್ರೀ ಆಗುತ್ತದೆ. ಆ ಸಮಯದಲ್ಲಿ ಓದುವುದರಿಂದ ನಾವು ಓದಿರುವ ಎಲ್ಲ ವಿಷಯಗಳು ನಮ್ಮ ನೆನಪಿನಲ್ಲಿ ಉಳಿದುಕೊಳ್ಳುತ್ತವೆ. ನಾವು ಓದುವ ಸಮಯದಲ್ಲಿ ಇಂಪಾರ್ಟೆಂಟ್ ಎನಿಸುವಂತಹ ಲೈನ್ಗಳನ್ನು ಅಂಡರ್ಲೈನ್ ಮಾಡಬೇಕು, ಅಥವಾ ಹೈಲೈಟರ್ ಸಹಾಯದಿಂದ ಹೈಲೈಟ್ ಮಾಡಬೇಕು.
ನಾವು ಓದಿ ಮುಗಿದ ನಂತರ ಮತ್ತೊಮ್ಮೆ ಹೈಲೈಟ್ ಮಾಡಿರುವಂತಹ ಹೈಲೈಟರ್ ಗಳನ್ನು ಪುನಃ ಒಂದು ಬಾರಿ ಓದಬೇಕು ಮತ್ತು ಓದಿದ ಪ್ರತಿಯೊಂದನ್ನೂ ನಾವು ಒಂದು ನೋಟ್ ಪ್ಯಾಡ್ನಲ್ಲಿ ಬರೆಯಬೇಕು. ಈ ರೀತಿ ಮಾಡುವುದರಿಂದ ನಾವು ಎಂದಿಗೂ ಕೂಡ ನಾವು ಓದಿರುವುದನ್ನು ಮರೆಯುವುದಿಲ್ಲ. ಈಗ ನಾವು ಹೇಳಿರುವ ಎಲ್ಲ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಓದಿದರೆ, ನಾವು ಓದಿರುವುದು ಎಂದಿಗೂ ನಮಗೆ ಮರೆತು ಹೋಗುವುದು ಇಲ್ಲ ಮತ್ತು ಸುದೀರ್ಘ ಕಾಲದವರೆಗೆ ಅದು ನಮ್ಮ ನೆನಪಿನಲ್ಲಿ ಉಳಿದುಕೊಳ್ಳುತ್ತದೆ.