ಸ್ನೇಹಿತರೇ ಸಬ್ಬಕ್ಕಿ , ಸಬ್ಬಕ್ಕಿಯನ್ನು ನೀವೆಲ್ಲರೂ ನೋಡೆ ಇರುತ್ತೀರಿ ಮತ್ತು ಸಬ್ಬಕ್ಕಿಯಿಂದ ಮಾಡುವ ಪಾಯಸವನ್ನು ಎಲ್ಲರೂ ಸವಿದಿರುತ್ತೇವೆ. ನಾವು ಮನೆಗಳಲ್ಲಿ ಹೆಚ್ಚು ಸಬ್ಬಕ್ಕಿಯನ್ನು ಉಪಯೋಗಿಸುವುದಿಲ್ಲ ಏಕೆಂದರೆ ಈ ಸಬ್ಬಕ್ಕಿಯನ್ನು ನಾವು ಯಾವ ಅಡುಗೆಗಳನ್ನು ಹೆಚ್ಚಾಗಿ ಮಾಡುವುದಿಲ್ಲ.ಬನ್ನಿ ಸ್ನೇಹಿತರೆ ಈ ದಿನ ನಾವು ಸಬ್ಬಕ್ಕಿಯಿಂದ ಆಗುವಂತಹ ಉಪಯೋಗಗಳನ್ನು ತಿಳಿದುಕೊಳ್ಳೊಣ ಸಬ್ಬಕ್ಕಿ ನಮ್ಮ ದೇಹಕ್ಕೆ ಅತಿ ಮುಖ್ಯವಾದದ್ದು ಮತ್ತು ಇದರಲ್ಲಿರುವ ಕ್ಯಾಲ್ಶಿಯಂ ಐರನ್ ಮತ್ತು ಪ್ರೊಟೀನ್ ಅಂಶವು ನಮ್ಮ ದೇಹಕ್ಕೆ ತುಂಬಾ ಅವಶ್ಯಕವಾಗಿರುತ್ತದೆ ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವವರು ಸಬ್ಬಕ್ಕಿ ಅನ್ನು ಸೇವಿಸುವುದರಿಂದ, ಅವರ ಜೀರ್ಣಕ್ರಿಯೆಯಲ್ಲಿ ಉತ್ತಮವಾದ ಬದಲಾವಣಿ ಕಂಡುಬರುತ್ತದೆ.
ನಮ್ಮ ಮನೆಗಳಲ್ಲಿ ಹಬ್ಬ ಹರಿದಿನಗಳನ್ನು ಆಚರಿಸುವ ಸಂದರ್ಭಗಳಲ್ಲಿ ಕೆಲವರು ಉಪವಾಸವನ್ನು ಮಾಡುತ್ತಾರೆ, ಇಂತಹ ಸಂದರ್ಭಗಳಲ್ಲಿ ಉಪವಾಸವನ್ನು ಮಾಡುವವರು ಈ ಸಬ್ಬಕ್ಕಿಯನ್ನು ಸ್ವಲ್ಪ ಸೇವಿಸಿದರೆ ನಮಗೆ ಹಸಿವು ಆಗುವುದಿಲ್ಲ. ಶಾಲಾ ಕಾಲೇಜುಗಳಲ್ಲಿ ಮಕ್ಕಳು ಸಾಮಾನ್ಯವಾಗಿ ಹಲವು ಕ್ರೀಡೆಗಳಲ್ಲಿ ಭಾಗವಹಿಸುತ್ತಾರೆ, ಕೆಲವು ಮಕ್ಕಳಿಗೆ ಆಟವನ್ನು ಆಡುವಾಗ ಸಾಮಾನ್ಯವಾಗಿ ಸುಸ್ತಾಗುತ್ತದೆ ಅಥವಾ ಆಯಾಸವಾಗುತ್ತದೆ. ಈ ತರಹ ಆಯಾಸವಾದ ಮಕ್ಕಳು ಆಟವಾಡುವ ಮೊದಲು ಅಥವಾ ಆಟವಾಡಿದ ನಂತರ ಈ ಸಬ್ಬಕ್ಕಿಯನ್ನು ಉಪಯೋಗಿಸಿದರೆ ಅವರಿಗೆ ಆಯಾಸ ಕಡಿಮೆ ಆಗುತ್ತದೆ.
ಸಬ್ಬಕ್ಕಿಯನ್ನು ತಿನ್ನುವುದು ಷ್ಟಕ್ಕೆ ಅಲ್ಲದೆ ನಮ್ಮ ಮುಖದ ಮೇಲಾಗಿರುವ ಕಲೆಗಳು ಸುಕ್ಕು ಪಿಂಪಲ್ ಗಳು ಮತ್ತು ಮುಖದಲ್ಲಿರುವ ಟ್ಯಾನನ್ನು ಕೂಡ ಇದು ತೆಗೆಯುತ್ತದೆ. ಸಬ್ಬಕ್ಕಿ ಅನ್ನು ಮೊದಲು ಪುಡಿ ಮಾಡಿ ಮೊಸರು ಜೇನುತುಪ್ಪ ಸಬ್ಬಕ್ಕಿ ಪುಡಿ ಅನ್ನು ಮಿಶ್ರಣ ಮಾಡಿ ಪೇಸ್ಟ್ ಹಾಗೆ ತಯಾರಿಸಿಕೊಂಡು, ಮುಖಕ್ಕೆ ಹಚ್ಚುವುದರಿಂದ ನಮ್ಮ ಮುಖ ಹೊಳೆಯುತ್ತದೆ ಕಾಂತಿ ಆಗುತ್ತದೆ ಮತ್ತು ಸಬ್ಬಕ್ಕಿ ಪುಡಿ ಅನ್ನು ಹಾಲಿನಲ್ಲಿ ಬೆರೆಸಿ ಹಚ್ಚುವುದರಿಂದ ನಮ್ಮ ಕೂದಲು ಉದುರುವಿಕೆಯನ್ನು ಈ ಸಬ್ಬಕ್ಕಿ ನಿಯಂತ್ರಿಸುತ್ತದೆ.
ಜೇನುತುಪ್ಪ ಅರಿಶಿನ ಪುಡಿ ಮತ್ತು ಸಬ್ಬಕ್ಕಿಯ ಪುಡಿಯನ್ನು ಮಿಶ್ರಣ ಮಾಡಿ ಹಚ್ಚುವುದರಿಂದ ನಮ್ಮ ಮುಖದಲ್ಲಿರುವ ಮೊಡವೆಗಳನ್ನು ನಿವಾರಿಸಬಹುದು. ಅದೇ ರೀತಿ ಸಬ್ಬಕ್ಕಿಯನ್ನು ಮೊಟ್ಟೆಯ ಹಳದಿ ಭಾಗವನ್ನು ಸೇರಿಸಿ ಮುಖಕ್ಕೆ ಹಚ್ಚುವುದರಿಂದ ನಮ್ಮ ಮುಖದಲ್ಲಿರುವ ಸುಕ್ಕನ್ನು ಈ ಸಬ್ಬಕ್ಕಿ ಮತ್ತು ಮೊಟ್ಟೆಯ ಹಳದಿ ಭಾಗ ಮಿಶ್ರಣ ತೆಗೆದು ಹಾಕುತ್ತವೆ.
ನೋಡಿದ್ರಲ್ಲ ಸ್ನೇಹಿತರೇ ಈ ಸಬ್ಬಕ್ಕಿಯು ನಮ್ಮ ದೇಹದ ಆರೋಗ್ಯವನ್ನು ಎಷ್ಟೆಲ್ಲ ವೃದ್ಧಿಸುತ್ತದೆ ಅಂತ ಮತ್ತು ನಮ್ಮ ಮುಖದ ಸೌಂದರ್ಯವನ್ನು ಕೂಡ ವೃದ್ಧಿ ಮಾಡುತ್ತದೆ ಹಾಗೆ ಕಂಗೊಳಿಸುತ್ತದೆ. ಆದ್ದರಿಂದ ನಾವು ಪ್ರತಿ ದಿನ ಈ ಸಬ್ಬಕ್ಕಿ ಅನ್ನು ಊಟದಲ್ಲಿ ಉಪಯೋಗಿಸಿದರೆ ನಾವು ಹೆಚ್ಚು ಲಾಭವನ್ನು ಪಡೆದುಕೊಳ್ಳಬಹುದು ಮತ್ತು ಮುಖಕ್ಕೆ ಹಚ್ಚಿದರೆ ನಮ್ಮ ತ್ವಚೆ ಚೆನ್ನಾಗಿ ಕಾಣಿಸುತ್ತದೆ.
ಇಷ್ಟೊಳ್ಳೆ ಮಾಹಿತಿ ಅನ್ನು ನೀಡಿದ್ದಕ್ಕೆ ಈ ಮಾಹಿತಿಗೆ ತಪ್ಪದೇ ಒಂದು ಲೈಕ್ ಮಾಡ್ತೀರಾ ಅಲ್ವಾ. ಹಾಗಾದರೆ ನೀವು ಕೂಡ ಮಾಹಿತಿಯನ್ನು ತಿಳಿದು ನಿಮ್ಮ ಫ್ರೆಂಡ್ಸ್ ಗಳಿಗೂ ಕೂಡ ಈ ಒಂದು ಮಾಹಿತಿಯನ್ನು ಶೇರ್ ಮಾಡಿ. ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಕಾಮೆಂಟ್ ಮಾಡುವುದನ್ನು ಮರೆಯದಿರಿ.ಇನ್ನು ಇಂತಹ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ಮಿಸ್ ಮಾಡದೇ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಎಲ್ಲರಿಗೂ ಶುಭವಾಗಲಿ ಆರೋಗ್ಯದಿಂದಿರಿ ಶುಭ ದಿನ ಧನ್ಯವಾದ.