ಇಲ್ಲಿ ಜೀವಂತ ಬಸವ ಕಲ್ಲಾಗಿದ್ದಾನೆ ಈ ದೇವಸ್ಥಾನ ಇರುವುದು ಎಲ್ಲಿ ಗೊತ್ತ ….!!!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಬೆಂಗಳೂರಿನ ಪ್ರತಿಷ್ಠಿತ ನಗರಗಳಲ್ಲಿ ಒಂದಾಗಿರುವ ಈ ಒಂದು ಬಸವನಗುಡಿ ಬೆಂದಕಾಳೂರಿನ ಮೊದಲನೆಯ ಬಡಾವಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಈ ಬಸವನಗುಡಿ ಈ ಹೆಸರಿನಿಂದ ಪ್ರಖ್ಯಾತಿ ಹೊಂದಲು ಕೂಡ ಕಾರಣವಿದೆ ಅದೇನೆಂದರೆ ಈ ನಗರದಲ್ಲಿ ದೊಡ್ಡ ಬಸವನು ಜೀವಂತವಾಗಿ ಕಲ್ಲಾದ ಹಿನ್ನೆಲೆಯಿಂದ ಈ ಒಂದು ಬಡಾವಣೆಗೆ ಬಸವನಗುಡಿ ಎಂದು ಹೆಸರು ಬಂತು ಹಾಗೇ ಈ ನಗರದಲ್ಲಿರುವ ದೇವಸ್ಥಾನವು ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ,ಇಂದಿಗೂ ಕೂಡಾ ಬಸವನಗುಡಿ ದೇವಾಲಯದಲ್ಲಿ ಕಾರ್ತಿಕ ಮಾಸದಲ್ಲಿ ವಿಶೇಷ ಜಾತ್ರೆ ಕೂಡ ನಡೆಯುತ್ತದೆ ಈ ಬಸವನಗುಡಿ ಹಿಂದಿರುವ ಇನ್ನಷ್ಟು ಆಸಕ್ತಿಕರ ವಿಚಾರಗಳನ್ನು ತಿಳಿಯೋಣ ಬನ್ನಿ ಇಂದಿನ ಮಾಹಿತಿಯಲ್ಲಿ.ಬಸವನಗುಡಿ ಬಡಾವಣೆಯನ್ನು ಕುರಿತು ಇನ್ನಷ್ಟು ವಿಚಾರಗಳನ್ನು ತಿಳಿಯುವುದಕ್ಕಿಂತ ಮೊದಲು ಈ ಬಡಾವಣೆಯ ಹಿಂದಿರುವ ಒಂದು ಕಥೆಯನ್ನು ತಿಳಿಯಯೋಣ, ಅದೇನೆಂದರೆ ಈ ಬಸವನಗುಡಿಗೆ ಮೊದಲು ಹೆಸರು ಸುಂಕೇನಹಳ್ಳಿ ಎಂದು .

ಇಲ್ಲಿಯ ಜನರು ರೈತಾಪಿ ಜೀವನವನ್ನು ನಡೆಸುತ್ತಿದ್ದರೂ ಕಡಲೆಕಾಯಿಯನ್ನು ಬೆಳೆದು ತಮ್ಮ ಜೀವನವನ್ನು ಸಾಗಿಸುತ್ತಿದ್ದರು ಹಾಗೆ ಕಡಲೆಕಾಯಿಯನ್ನು ಬೆಳೆದ ರೈತರುಗಳು ಸಹಬಾಳ್ವೆ ಇಂಥ ಬಾಳುತ್ತಿದ್ದರು ತಾವು ಬೆಳೆದ ಕಡಲೆಕಾಯಿಯನ್ನು ರಾಶಿ ಹಾಕಿ ಅದನ್ನು ಪೂಜೆ ಮಾಡಿ ಮಾರನೆ ದಿವಸ ಹಂಚಿಕೊಳ್ಳುತ್ತಿದ್ದರು.ಇಲ್ಲಿಯ ರೈತರು ಬೆಳೆದ ಕಡಲೆಕಾಯಿಯನ್ನು ಒಂದು ಬಸವ ಬಂದು ತಿಂದು ಹೋಗುತ್ತಿತ್ತು ಒಂದು ದಿನ ಹಳ್ಳಿಯ ಜನರು ತಾವು ಬೆಳೆದ ಕಡಲೆಕಾಯಿಯನ್ನು ತಿಂದು ನಷ್ಟವನ್ನು ಉಂಟು ಮಾಡುತ್ತಿರುವ ಬಸವನನ್ನು ಹೊಡೆಯಬೇಕೆಂದು ರಾತ್ರಿಯೆಲ್ಲಾ ಕಾದು ಕುಳಿತರೂ ರೈತರ ನಿರೀಕ್ಷೆಯಂತೆ ಕಡಲೆಕಾಯಿಯನ್ನು ತಿನ್ನಲು ಆ ಬಸವ ಬರುತ್ತಾನೆ,

ಆಗ ರೈತರುಗಳು ಬಸವನನ್ನು ಹೊಡೆಯಲು ಕೋಲುಗಳನ್ನು ತೆಗೆದುಕೊಂಡು ಅದನ್ನು ಓಡಿಸಿಕೊಂಡು ಹೋಗುತ್ತಾರೆ ಆಗ ಅಲ್ಲಿಯೇ ಇದ್ದ ಬೆಟ್ಟವನ್ನು ಏರಿ ಬಸವ ಜೀವಂತವಾಗಿ ಕಲ್ಲಾಗಿ ಬಿಡುತ್ತಾರೆ.ಈ ಒಂದು ದೃಶ್ಯವನ್ನು ಕಣ್ಣಾರೆ ಕಂಡ ರೈತರುಗಳು ಇದು ಸಾಕ್ಷಾತ್ ಶಿವನ ವಾಹನವಾದ ನಂದಿ ಇದನ್ನು ನಾವು ಹೊಡೆದು ಬೆಟ್ಟವಲ್ಲ ಎಂದು ಪ್ರಾಯಶ್ಚಿತಕ್ಕಾಗಿ ತಾವು ಬೆಳೆದ ಕಡಲೆಕಾಯಿಯನ್ನು ತಪ್ಪು ಕಾಣಿಕೆಯಾಗಿ ಸಲ್ಲಿಸುತ್ತಾರೆ.

ಹೀಗೆ ಪ್ರತಿ ಕಾರ್ತಿಕದಲ್ಲಿ ತಾವು ಬೆಳೆದ ಕಡಲೆಕಾಯಿಯನ್ನು ಇಂದಿಗೂ ಕೂಡ ರೈತರುಗಳು ಈ ದೇವಾಲಯಕ್ಕೆ ಬಂದು ಅರ್ಪಿಸಿ ಹೋಗುತ್ತಾರೆ. ಈ ಜಾತ್ರೆಯ ದಿವಸ ಬಸವ ಪ್ರಿಯರು ಇಲ್ಲಿಗೆ ಬಂದು ಕಡಲೆಕಾಯಿಯನ್ನು ತಿಂದು ಹೋಗಬೇಕು ಆ ಸಿಪ್ಪೆಯನ್ನು ರಾತ್ರಿ ಸಮಯದಲ್ಲಿ ಸಾಕ್ಷಾತ್ ಶಿವನ ವಾಹನವಾದ ನಂದಿ ಬಂದು ತಿನ್ನುತ್ತಾರೆ ಎಂಬ ನಂಬಿಕೆ ಇದೆ.ಈ ಕಥೆಯ ಹಿನ್ನೆಲೆಯಿಂದಲೇ ಈ ಬಡಾವಣೆಗೆ ಬಸವನಗುಡಿ ಎಂಬ ಹೆಸರು ಬಂದಿದೆ, 1537ರಲ್ಲಿ ಕೆಂಪೇಗೌಡರು ಈ ಒಂದು ಬಡಾವಣೆಯನ್ನು ಕಟ್ಟಿಸಿದ್ದರೂ ಈ ಬಸವನಗುಡಿಯ ದೇವಾಲಯದ ಮುಂದೆಯೇ ಧ್ವಜಸ್ತಂಭವಿದೆ, ಈ ಧ್ವಜ ಸ್ತಂಭದಲ್ಲಿ ತಂತಿ ವಾದ್ಯವನ್ನು ನುಡಿಸುತ್ತಿರುವ ಸ್ತ್ರೀಯ ಶಿಲೆ ಇದೆ ಹಾಗೆ ಇದರ ಜೊತೆಗೆ ತುಂಬಾ ಶಿಲೆಯು ಕೂಡ ಇದೇ.

ದೇವಾಲಯದೊಳಗೆ ದ್ವಾರಪಾಲಕರ ಶಿಲ್ಪದ ಜೊತೆ ಪ್ರದಕ್ಷಿಣಾ ಪಥವು ಕೂಡ ಇದು ಈ ದೇವಾಲಯದ ಮೇಲ್ಭಾಗದಲ್ಲಿ ಭವ್ಯವಾದ ಗೋಪುರವನ್ನು ನಾವು ಕಾಣಬಹುದಾಗಿದ್ದು ಈ ದೇವಾಲಯದಲ್ಲಿ ಇರುವ ನಂದಿಯನ್ನು ಉದ್ಭವ ಬಸವ ಅಂತ ಕೂಡ ಕರೆಯಲಾಗುತ್ತದೆ.ಇದಿಷ್ಟು ಇಂದಿನ ಮಾಹಿತಿಯ ಇಂಟ್ರೆಸ್ಟಿಂಗ್ ವಿಚಾರವಾಗಿದ್ದು ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ತಪ್ಪದೇ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಹಾಗೂ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದ.

Leave a Reply

Your email address will not be published.