ಪಪ್ಪಾಯ ಹಣ್ಣಿನಿಂದ ಇಷ್ಟೆಲ್ಲ ಪ್ರಯೋಜನ ಇದೆ ಅಂತ ನಿಮಗೇನಾದ್ರು ಗೊತ್ತಾದ್ರೆ ಖಂಡಿತಾ ಆಶ್ಚರ್ಯ ಪಡುತ್ತೀರಾ

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಪಪ್ಪಾಯ ಎಂದರೆ ಯಾರಿಗಿಷ್ಟ ಇಲ್ಲ ಹೇಳಿ.ಚಿಕ್ಕ ಮಕ್ಕಳಿಂದ ಇಡಿದು ದೊಡ್ಡವರ ತನಕ ಪಪ್ಪಾಯ ಬಲು ಅಚ್ಚುಮೆಚ್ಚು. ಇದರಲ್ಲಿ ನಾರಿನಾಂಶ ಹೆಚ್ಚಾಗಿರುವುದರಿಂದ ನಮ್ಮ ದೇಹದಲ್ಲಿನ ಜೀರ್ಣಕ್ರಿಯೆಗೆ ಅತಿ ಉಪಯುಕ್ತವಾಗಿದೆ.

ವಿಟಮಿನ್ ಸಿ,ಖನಿಜಗಳು ಪಪ್ಪಾಯದಲ್ಲಿ ಹೇರಳವಾಗಿ ದೊರೆಯುತ್ತವೆ. ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ ಪಪ್ಪಾಯ.ಇದರ ಬೀಜ ಸೇವನೆಯಿಂದ ಚರ್ಮ ಹಾಗೂ ಹೊಟ್ಟೆಯಲ್ಲಿ ಜಂತುಹುಳಗಳಿದ್ದರೆ ದೂರಾಗುವುದು ಖಚಿತ.

ಪಪ್ಪಾಯ ಎಂದರೆ ಅದೊಂದು ವಿಶಿಷ್ಠವಾದ ಹಣ್ಣು.ಪಪ್ಪಾಯದಲ್ಲಿ ಪ್ರೋಟಿನ್,ಕೊಬ್ಬು,ನಿಯಾಸಿನ್ ಶನಿಜಾಂಶಗಳು ಹೆಚ್ಚಾಗಿರುತ್ತದೆ. ಪಪ್ಪಾಯ ಸೇವನೆಯಿಂದ ಯಾವ ರೀತಿಯ ಆರೋಗ್ಯಕರ ಉಪಯೋಗಗಳನ್ನು ಪಡೆಯಬಹುದು ತಿಳಿಯೋಣ ಬನ್ನಿ.

ಪಪ್ಪಾಯ ಎಂಬುದು ಒಂದು ನೈಸರ್ಗಿಕವಾದ ಶಕ್ತಿ ಎಂದರೆ ತಪ್ಪಾಗಲಾರದು.ನಮ್ಮ ಮನೆಯಲ್ಲೇ ಸಿಗುವ ಔಷದೀಯ ಸಂಪತ್ತು ಇದಾಗಿದೆ.ಪ್ರತಿದಿನ ಇದನ್ನು ಬಳಸಿದರೆ ಉತ್ತಮ ಆರೋಗ್ಯ ಪಡೆಯುವಲ್ಲಿ ಎರಡು ಮಾತಿಲ್ಲ.

ನಿಮ್ಮ ತಲೆಯಲ್ಲಿ ಹೊಟ್ಟು ಏನಾದರು ಇದ್ದರೆ ಮೊಸರು ಹಾಗೂ ಪಪ್ಪಾಯ ಮಿಕ್ಸ್ ಮಾಡಿದ ಪೇಸ್ಟನ್ನು ತಲೆಗೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ತೊಳೆದರೆ ತಲೆಯಲ್ಲಿರುವ ಸಂಪೂರ್ಣ ಹೊಟ್ಟು ಮಾಯವಾಗುತ್ತದೆ.

ಮುಖದ ಕಾಂತಿ ಹೆಚ್ಚಿಸಲು ಪಪ್ಪಾಯ ಸಹಕಾರಿ ಹೌದು ಪಪ್ಪಾಯ ಬೀಜ ಹಾಗೂ ಸ್ವಲ್ಪ ಪಪ್ಪಾಯ ಮಿಕ್ಸಿಯಲ್ಲಿ ರುಬ್ಬಿಕೊಂಡು ಮುಖಕ್ಕೆ ಹಚ್ಚಿ ಸ್ಬಲ್ಪ ಸಮಸಯದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದರೆ ಮುಖದ ಕಲೆಗಳು ದೂರವಾಗಿ ಕಾಂತಿ ಕೂಡ ಹೆಚ್ಚಾಗುತ್ತದೆ.

ಹೊಟ್ಟೆಯಲ್ಲಿ ಜಂತು ಹುಳಗಳು ಏನಾದರೂ ಇದ್ದರೆ ಪಪ್ಪಾಯ ಹಣ್ಣಿನ ಬೀಜದ ರಸಕ್ಕೆ ಹತ್ತು ಹನಿ ನಿಂಬೆ ರಸ ಸೇರಿಸಿ ಸೇವಿಸಿದರೆ ಹೊಟ್ಟೆಯಲ್ಲಿಮ ಜಂತುಹುಳಗಳಿಂದ ಮುಕ್ತಿಹೊಂದಬಹುದು.

ಅಥವಾ ಪಪ್ಪಾಯ ಹಣ್ಣಿನ ಜೊತೆಗೆ ಪಪ್ಪಾಯ ಬೀಜವನ್ನು ಸೇವಿಸಿದರೆ ಜಂತುಹುಳ ಸಮಸ್ಯೆಯಿಂದ ದೂರಾಗಬಹುದು.ಕಪ್ಪು ಚಹಾವನ್ನು ಸೋಸಿಕೊಂಡು ಅದಕ್ಕೆ ಪಪ್ಪಾಯ ಪೇಸ್ಟ್ ಬೆರೆಸಿಕೊಂಡು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆದರೆ ಮುಖದಲ್ಲಿರುವ ಜಿಡ್ಡು ದೂರಾಗುತ್ತದೆ‌.

ಮಕ್ಕಳಿಗೆ ನರದೌರ್ಬಲ್ಯ ಇದ್ದರೆ ಪಪ್ಪಾಯ ಹಣ್ಣು ,ಹಾಲು,ಜೇನುತುಪ್ಪವನ್ನು ಸೇರಿಸಿ ತಿನ್ನಿಸಿದರೆ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.ಮೂತ್ರಜನಕದಲ್ಲಿ ಕಲ್ಲುಗಳು ಏನಾದರೂ ಇದ್ದರೆ ಪಪ್ಪಾಯ ಸೇವನೆ ತುಂಬಾ ಒಳ್ಳೆಯದು.ನಮ್ಮ ಮೂತ್ರಜನಕಾಂಗ ಸರಿಯಾಗಿ ಕೆಲಸ ಮಾಡಲು ಪಪ್ಪಾಯ ಸಹಕಾರಿಯಾಗಿದೆ.

ನಮ್ಮ ದೇಹದಲ್ಲಿನ ಕೊಬ್ಬಿನ ಅಂಶವನ್ನು ಕಡಿಮೆ ಮಾಡಲು ಪಪ್ಪಾಯ ತುಂಬಾ ಸಹಕಾರಿ‌.ಪಪ್ಪಾಯದಲ್ಲಿ ಉತ್ತಮ ಫೈಬರ್ ಅಂಶಗಳು ಹೇರಳವಾಗಿದೆ.ಪಪ್ಪಾಯ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಪಪ್ಪಾಯದಲ್ಲಿ ವಿಟಮಿನ್ ಸಿ ಹೆಚ್ಚಾಗಿರಿವುದರಿಂದ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಪಪ್ಪಾಯ ಸಹಕಾರಿ.ಮುಧುಮೇಹವನ್ನು ನಿಯಂತ್ರಣದಲ್ಲಿಡಲು ಪಪ್ಪಾಯ ತುಂಬಾ ಸಹಕಾರಿ.ಸಂಶೋಧನೆಗಳ ಪ್ರಕಾರ ಪಪ್ಪಾಯ ಟೈಪ್ 2 ಮಧುಮೇಹವನ್ನು ನಿಯಂತ್ರಿಸಲು ಸಹಕಾರಿಯಂತೆ.

ಕಣ್ಣುಗಳನ್ನು ರಕ್ಷಿಸಲು ಪಪ್ಪಾಯ ಬಹಳ ಮುಖ್ಯ .ಕ್ಯಾನ್ಸರ್ ತಡೆಗಟ್ಟಲು ಪಪ್ಪಾಯ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕ್ಯಾನ್ಸರ್ ಗೆ ಕಾರಣವಾಗುವ ಕೋಶಗಳ ವಿರುದ್ದ ಹೋರಾಡಲು ಪಪ್ಪಾಯ ನಮ್ಮ ದೇಹಕ್ಕೆ ಸಹಾಯ ಮಾಡುತ್ತದೆ .

ಕೂದಲಿನ ಬೆಳವಣಿಗೆಯನ್ನು ಕಾಪಾಡಲು ಪಪ್ಪಾಯ ಸೇವನೆ ಹಾಗೂ ಪಪ್ಪಾಯ ಪೇಸ್ಟ್ ಹಚ್ವಿದರೆ ತುಂಬಾ ಉಪಯೋಗ.ನಮ್ಮ ಮೈಮೇಲಿನ ಚರ್ಮದ ಕಲೆಗಳನ್ನು ದೂರಮಾಡಲು ಪಪ್ಪಾಯದ ಹಣ್ಣನ್ನು ಚರ್ಮದ ಮೇಲೆ ತಿಕ್ಕಬೇಕು.

Leave a Reply

Your email address will not be published.