ಕುದುರೆ ಲಾಳ ಇದರ ಹೆಸರನ್ನು ನೀವು ಕೇಳಿರ್ತೀರಿ ಅಲ್ವಾ ಇದನ್ನು ಕುದುರೆಗೆ ಹಾಕಿರುತ್ತಾರೆ. ಇದು ಎಷ್ಟು ಅದೃಷ್ಟ ಅಂದರೆ ಈ ಕುದುರೆ ಲಾಳ ಎಲ್ಲಿಯಾದರೂ ದೊರೆತರೆ ಅವರಿಗೆ ಅದೃಷ್ಟ ಒಲಿದು ಬರುತ್ತದೆ ಲಕ್ಷ್ಮೀದೇವಿ ಒಲಿದಿದ್ದಾಳೆ ಅಂತಹ ಹಿರಿಯರು ಹೇಳ್ತಾ ಇದ್ರು. ಆದರೆ ಇತ್ತೀಚಿನ ದಿನಗಳಲ್ಲಿ ಕುದುರೆಯ ಸಂಖ್ಯೆ ಕಡಿಮೆಯಾಗಿರಬಹುದು ಮತ್ತು ಈ ಕುದುರೆ ಪೇಟೆಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ ಕುದುರೆ ಸವಾರಿ ಕುದುರೆ ಟಾಂಗಾ ಇಂತಹ ಎಲ್ಲ ವಿಚಾರಗಳು ಸದ್ಯಕ್ಕೆ ಮರೆಯಾಗಿವೆ.
ಆದರೆ ಈ ಕುದುರೆ ಲಾಳವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಏಷ್ಟೆಲ್ಲಾ ಲಾಭ ಇದೆ ಅಂದರೆ. ವಾಸ್ತು ಶಾಸ್ತ್ರದಲ್ಲಿ ಈ ಲಾಳ ಅಂದರೆ ಕುದುರೆ ಲಾಳಕ್ಕೆ ಒಂದು ಪ್ರತ್ಯೇಕವಾದ ಸ್ಥಾನವನ್ನು ನೀಡಲಾಗಿದ್ದು. ವಾಸ್ತುಶಾಸ್ತ್ರದಲ್ಲಿ ಹೇಗೆ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಡಬೇಕಾಗಿರುವಂತಹ ಜಾಗದಲ್ಲಿ ಇಡಬೇಕೊ ಮತ್ತು ಪ್ರತ್ಯೆಕವಾದ ಮೂಲೆಗಳಲ್ಲಿ ಇಡುತ್ತಾ ಬರುವುದರಿಂದ ಮನೆಗೆ ಲಾಭವು ಮನೆಗೆ ಅದೃಷ್ಟವೂ ಮತ್ತು ಮನೆಯಲ್ಲಿ ಒಂದು ಶಕ್ತಿ ನೆಲೆಸಿರುತ್ತದೆ.
ಅದೆ ರೀತಿಯಲ್ಲಿ ಈ ವಾಸ್ತು ಶಾಸ್ತ್ರದಲ್ಲಿ ಕೆಲವೊಂದು ವಸ್ತುಗಳನ್ನು ಮನೆಯಿಂದ ಆಚೆ ಇಡುವುದರಿಂದ ಅದಕ್ಕಿಂತ ಹೆಚ್ಚು ಲಾಭ ದೊರೆಯುತ್ತದೆ ಅಂತ ಹೇಳಲಾಗುತ್ತದೆ. ಆ ಕೆಲವೊಂದು ವಸ್ತುಗಳಲ್ಲಿ ಕುದುರೆ ಲಾಳ ಕೂಡ ಒಂದಾಗಿದ್ದು. ಈ ಕುದುರೆ ಲಾಳವನ್ನು ಮನೆಯಿಂದ ಆಚೆ ಕಟ್ಟುವುದರಿಂದ ಅಂದರೆ ಮನೆಯ ಸಿಂಹ ದ್ವಾರದಲ್ಲಿ ಕಟ್ಟುವುದರಿಂದ ಮನೆಗೆ ಯಾವ ಕೆಟ್ಟ ಶಕ್ತಿಗಳ ಪ್ರವೇಶ ಆಗುವುದಿಲ್ಲ ಅಂತ ಹೇಳ್ತಾರೆ ಮತ್ತು ಮನೆಗೆ ಯಾವುದೆ ತರಹದ ದೃಷ್ಟಿ ಆಗುವುದಿಲ್ಲ ಅಂತ ಹೇಳಲಾಗುತ್ತದೆ. ನೀವು ಗಮನಿಸಿ ಕೆಲವರ ಮನೆಯಲ್ಲಿ ಮನೆಯ ಮುಖ್ಯ ದ್ವಾರದ ಬಳಿ ಈ ಕುದುರೆ ಲಾಳವನ್ನು ಮೇಲ್ಭಾಗದಲ್ಲಿ ಕಟ್ಟಿರುತ್ತಾರೆ.
ಹೀಗೆ ಮನೆಯಲ್ಲಿ ಈ ಕುದುರೆ ಲಾಳವನ್ನು ಮುಖ್ಯ ದ್ವಾರದ ಬಳಿ ಕಟ್ಟುವುದರಿಂದ ಮನೆಯಲ್ಲಿ ಒಂದು ಸಕಾರಾತ್ಮಕತೆ ನೆಲೆಸಿರುತ್ತದೆ ಮನೆಯಲ್ಲಿ ಒಂದು ರೀತಿಯ ನೆಮ್ಮದಿ ಇರುತ್ತದೆ ಅಂತ ವಾಸ್ತುಶಾಸ್ತ್ರವು ಹೇಳುತ್ತದೆ. ಅದೇ ಕಾರಣ ನಿಮಗೂ ಕೂಡ ಕುದುರೆ ಲಾಳ ದೊರೆತರೆ ಅಥವಾ ಕುದುರೆ ಲಾಳ ಸಿಕ್ಕರೆ ಅದನ್ನು ತಂದು ತಪ್ಪದೇ ಮನೆಯಲ್ಲಿ ಇಟ್ಟು ಅದನ್ನು ನೀವು ಪೂಜಿಸಬಹುದು. ಈ ಕುದುರೆ ಲಾಳ ಲಕ್ಷ್ಮೀದೇವಿಯ ಸ್ವರೂಪ ಅಂತ ಹೇಳ್ತಾರೆ. ಈ ಕುದುರೆ ಲಾಳ ದಿಂದ ಯಾರೂ ಉಂಗುರವನ್ನು ಧರಿಸಿ ಹಾಕಿಕೊಳ್ತಾರೆ ಅವರಿಗೂ ಕೂಡ ಯಾವುದೆ ದೃಷ್ಟಿ ದೋಷ ಆಗಲಿ ದೃಷ್ಟಿ ತಗಲುವುದು ಆಗಲಿ ಅಥವಾ ಅವರಿಗೆ ಯಾವ ಕೆಟ್ಟ ಶಕ್ತಿಗಳು ಸೋಕುವುದಿಲ್ಲ ಅನ್ನೋ ಒಂದು ಮಾತನ್ನು ಕೂಡ ಹಿರಿಯರು ಹೇಳ್ತಾರೆ.
ಈ ಕುದುರೆ ಲಾಳವನ್ನು ನೀವು ಮನೆಯ ಮುಖ್ಯದ್ವಾರದಲ್ಲಿ ಕಟ್ಟಿ ಇದನ್ನು ನೀವು ಪ್ರತಿದಿನ ಪೂಜೆ ಮಾಡಬಹುದು ಮನೆಯಲ್ಲಿ ವಿಪರೀತ ಜಗಳ ಮನೆಯಲ್ಲಿ ಶಾಂತಿಯಿಲ್ಲ ಅನ್ನೊರು ಬಿಳಿ ಬಟ್ಟೆಯೊಳಗೆ ಈ ಕುದುರೆ ಲಾಳವನ್ನು ಸೇರಿಸಿ. ಆ ಒಂದು ಬಿಳಿ ಬಟ್ಟೆಯನ್ನು ಕೂಡ ನೀವು ಮನೆಯ ಮುಖ್ಯದ್ವಾರದಲ್ಲಿ ಕಟ್ಟಿ ಪ್ರತಿದಿನ ಧೂಪಾರಾಧನೆ ಅನ್ನು ಮಾಡಬಹುದು. ಇದರಿಂದ ಮನೆಗೆ ಒಳಿತಾಗುತ್ತದೆ ಅನ್ನೋ ಒಂದು ವಿಚಾರವನ್ನು ವಾಸ್ತು ಶಾಸ್ತ್ರ ತಿಳಿಸುತ್ತದೆ.ಇವತ್ತು ನಾಯಿ ಮಾಹಿತಿ ನಿಮಗೆ ಉಪಯುಕ್ತವಾಗಿ ದ್ದಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಹಾಗೂ ನಿಮ್ಮ ಮನೆಯಲ್ಲಿಯೂ ಕೂಡ ಈ ಒಂದು ಕುದುರೆ ಲಾಳವನ್ನು ಇಟ್ಟಿದ್ದರೆ ತಪ್ಪದೇ ಮಾಹಿತಿಗೆ ಲೈಕ್ ಮಣಿ ಹಾಗೂ ಶೇರ್ ಮಾಡಿ.