ನಿಮ್ಮ ಕಿವಿಯಲ್ಲಿರುವ ಮಲಿನಗಳನ್ನ ನಿವಾರಣೆ ಮಾಡಿಕೊಳ್ಳುವುದಕ್ಕೆ ಇದೆ ಇಲ್ಲೊಂದು ಉತ್ತಮ ಉಪಾಯ …

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಾವು ಈ ಮುಂಚಿನ ಮಾಹಿತಿಯಲ್ಲಿ ನಿಮಗೆ ತಿಳಿಸಿದ್ದೇವೆ ನಮ್ಮ ದೇಹವನ್ನು ಸ್ವಚ್ಛವಾಗಿ ಇಟ್ಟುಕೊಳ್ಳದಿದ್ದರೆ ಅದರಿಂದ ಇನ್ನೂ ಅನೇಕ ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ ಅಂತ.ಅಂತಹದ್ದೇ ಒಂದು ಉಪಯುಕ್ತ ಮಾಹಿತಿಯನ್ನು ನಾವು ಈ ದಿನದ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ತಪ್ಪದೇ ಪೂರ್ತಿ ಮಾಹಿತಿಯನ್ನು ತಿಳಿಯಿರಿ ಹಾಗೂ ಮಾಹಿತಿ ಇಷ್ಟವಾದಲ್ಲಿ ಉಪಯುಕ್ತವಾದಲ್ಲಿ ನಿಮ್ಮ ಗೆಳೆಯರೊಂದಿಗೆ ಕೂಡ ಮಾಹಿತಿಯನ್ನು ಶೇರ್ ಮಾಡಿ .ಹೌದು ನಮ್ಮ ದೇಹದಲ್ಲೇ ಸಾಕಷ್ಟು ಸೂಕ್ಷ್ಮವಾದ ಅಂಗಾಂಗಗಳನ್ನು ನಾವು ಕಾಣಬಹುದಾಗಿದೆ ಇಂತಹ ಸೂಕ್ಷ್ಮ ಅಂಗಾಂಗಗಳ ನೋ ನಾವು ಎಷ್ಟು ಸೂಕ್ಷ್ಮವಾಗಿ ಕೇರ್ ಮಾಡುತ್ತೇವೋ ಅಷ್ಟು ಒಳ್ಳೆಯದು .

ನಮ್ಮ ದೇಹದಲ್ಲಿ ಇರುವಂತಹ ಸಾಕಷ್ಟು ಸೂಕ್ಷ್ಮ ಅಂಗಾಂಗಳಲ್ಲಿ ಕಿವಿಯೂ ಕೂಡ ಒಂದು ಕಿವಿಯಲ್ಲಿ ಸಾಕಷ್ಟು ಸೂಕ್ಷ್ಮವಾದ ನರಗಳನ್ನು ನಾವು ಕಾಣಬಹುದಾಗಿದೆ . ರೀತಿಯಾಗಿ ಸೂಕ್ಷ್ಮ ಅಂಗವಾದ ಕಿವಿಯನ್ನು ಸ್ವಚ್ಛ ಮಾಡಬೇಕೆಂದರೆ ಅದಕ್ಕಾಗಿ ಕಾಟನ್ ಬಡ್ಸ್ ಅಥವಾ ಪಿನ್ನುಗಳನ್ನು ಅಥವಾ ಕಡ್ಡಿಗಳನ್ನು ಬಳಸುವುದು ಒಳ್ಳೆಯದಲ್ಲ .ಈ ರೀತಿ ಬಡ್ಸ್ ಗಳನ್ನು ಕಡ್ಡಿಗಳನ್ನು ಅಥವಾ ಪಿನ್ನುಗಳನ್ನು ಬಳಸಿ ಕಿವಿಯನ್ನು ಸ್ವಚ್ಛ ಮಾಡಿದ ರ್ಯಾಪ್ ಸಾಕಷ್ಟು ತೊಂದರೆಗಳು ಎದುರಿಸಬೇಕಾಗುತ್ತದೆ ಹಾಗೂ ಸೂಕ್ಷ್ಮ ಮರಗಳಿರುವ ಕಾರಣದಿಂದಾಗಿ ಈ ರೀತಿಯ ವಸ್ತುಗಳನ್ನು ಬಳಸಿ ಕಿವಿಯನ್ನು ಸ್ವಚ್ಛ ಮಾಡಿದರೆ ಶ್ರವಣ ಶಕ್ತಿ ಕಡಿಮೆಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ .

ಹೌದು ಸ್ನೇಹಿತರೆ ಕಿವಿಗಳನ್ನು ಬಡ್ಸ್ ಗಳನ್ನು ಬಳಸಿ ಸ್ವಚ್ಛ ಮಾಡುವುದರ ಬದಲು ಸುಲಭವಾಗಿ ಒಂದು ಮನೆ ಮದ್ದನ್ನು ತಿಳಿಸುತ್ತೇವೆ ಹೀಗೆ ಮಾಡುವುದರಿಂದ ಕಿವಿಯಲ್ಲಿರುವ ಮಲಿನವನ್ನು ಸ್ವಚ್ಛ ಮಾಡಬಹುದಾಗಿದೆ .ಕಿವಿಯಲ್ಲಿರುವ ಈ ಮಲಿನವನ್ನು ಸ್ವಚ್ಛ ಮಾಡಬೇಕು ಅನ್ನುವ ನಿಯಮವೇನೂ ಇಲ್ಲ ಈ ಕಿವಿಯಲ್ಲಿರುವ ಮಲಿನ ಅಂತ ಏನೂ ಹೇಳುತ್ತೇವೋ ಅದು ಕಿವಿಗಳನ್ನು ರಕ್ಷಿಸುವುದರಲಿಯು ಮತ್ತು ಕಿವಿ ಅಲ್ಲಿರುವಂತಹ ಸೂಕ್ಷ್ಮ ನರಗಳನ್ನು ಕಾಪಾಡುತ್ತದೆ ಈ ಮಲಿನ .

ಈ ಕಿವಿಯಲ್ಲಿ ಇರುವಂತಹ ಮಲಿನದಲ್ಲಿ ಸೂಕ್ಷ್ಮ ನರಗಳನ್ನು ರಕ್ಷಿಸುವಂತಹ ಅಂಟು ಪದಾರ್ಥವೇ ಇರುತ್ತದೆ ಇವು ಕಿವಿಯೊಳಗೆ ಬ್ಯಾಕ್ಟೀರಿಯಾಗಳು ಧೂಳು ನೀರು ಬಾರದೇ ಇರುವ ಹಾಗೆಯೇ ನೋಡಿಕೊಳ್ಳುವುದರ ಜೊತೆಗೆ ಕಿವಿಯೊಳಗೆ ಇರುವಂತಹ ಸೂಕ್ಷ್ಮ ನರಗಳನ್ನು ಕೂಡ ಕಾಪಾಡುತ್ತದೆ .ಆದ್ದರಿಂದ ಈ ಕಿವಿಯೊಳಗೆ ಇರುವಂತಹ ಅಂಟು ಪದಾರ್ಥ ವೂ ಕಿವಿಗೆ ಯಾವುದೇ ಹಾನಿಯನ್ನು ಉಂಟು ಮಾಡುವುದಿಲ್ಲ ಸ್ನಾನ ಮಾಡುವಾಗ ಕಿವಿಯನ್ನು ಸ್ವಚ್ಛ ಪಡಿಸಿಕೊಂಡರೆ ಸಾಕು.ಆದರೆ ಕೆಲವರಲ್ಲಿ ಈ ಒಂದು ಅಂಟು ಪದಾರ್ಥವು ಹೆಚ್ಚಾಗಿ ಉತ್ಪತ್ತಿಯಾಗುತ್ತದೆ ಆಗ ಏನು ಮಾಡಬೇಕು ಅಂದರೆ ಕಡ್ಡಿಗಳನ್ನು ಪಿನ್ನುಗಳನ್ನು ಬಡ್ಸ್ ಗಳನ್ನು ಬಳಸದೇ ಸುಲಭವಾದ ಮನೆ ಮಾತನ್ನು ಪಾಲಿಸಿ .

ಹೇಗೆ ಕಿವಿಯೊಳಗೆ ಇರುವಂತಹ ಈ ಮಲಿನವನ್ನು ಸ್ವಚ್ಛ ಮಾಡುವುದು ಅಂದರೆ ಸ್ವಲ್ಪ ಬಿಸಿ ನೀರಿಗೆ ಚಿಟಿಕಿ ಉಪ್ಪನ್ನು ಬೆರೆಸಿ ಅದರಲ್ಲಿ ಸ್ವಲ್ಪ ಚಿಕ್ಕದಾದ ಕಾಟನ್ ಬಾಳನ್ನು ನೆನೆಯಲು ಬಿಡಬೇಕು ನಂತರ ಅದನ್ನು ತೆಗೆದುಕೊಂಡು ಮುಖವನ್ನು ಮೇಲ್ಮುಖವಾಗಿ ಸಿ ಮೇಲಿನ ಕಿವಿಗೆ ಆ ನೀರಿನ ಹನಿಯನ್ನು ನಿಧಾನವಾಗಿ ಬಿಡಬೇಕು ನಂತರ ಐದು ನಿಮಿಷಗಳ ಬಳಿಕ ಆ ನೀರನ್ನು ಹೊರ ಹಾಕಬೇಕು .ಈ ರೀತಿ ಮಾಡಿದ ನಂತರ ಮತ್ತೊಂದು ಕಿವಿಗೂ ಕೂಡ ಇದೇ ರೀತಿ ಮಾಡಬೇಕು , ಇದನ್ನು ಪಾಲಿಸುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಕೂಡ ಕಿವಿಗೆ ಆಗುವುದಿಲ್ಲ . ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ ಶುಭ ದಿನ ಧನ್ಯವಾದಗಳು

Leave a Reply

Your email address will not be published. Required fields are marked *