ನೀವು ಈ ಒಂದು ಕೋಲನ್ನು ನಿಮ್ಮ ದೇವರ ಕೋಣೆಯಲ್ಲಿಟ್ಟು ಅದಕ್ಕೆ ಪೂಜೆಯನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮೀ ದೇವಿಯ ಕಟಾಕ್ಷ ಆಗುತ್ತದೆ !!!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಯಾರ್ಯಾರೋ ಹೇಳುವಂತಹ ಪರಿಹಾರವನ್ನು ಮಾಡಿ ಹಣವನ್ನು ಕಳೆದುಕೊಳ್ಳುವುದಕ್ಕಿಂತ, ಸಮಯವನ್ನು ವ್ಯರ್ಥ ಮಾಡಿಕೊಳ್ಳುವುದಕ್ಕಿಂತ, ಪರಿಹಾರ ಸಿಕ್ಕಿಲ್ಲ ಅಂತ ಯೋಚನೆ ಮಾಡುವುದಕ್ಕಿಂತ, ನಿಮ್ಮ ಮನಸ್ಸಿಗೆ ಹೌದು ಈ ಒಂದು ಪರಿಹಾರ ಉತ್ತಮವಾಗಿದೆ ಮನೆಗೆ ಏಳಿಗೆಯನ್ನು ಮಾಡುತ್ತದೆಯೆ ಅನ್ನೋ ಒಂದು ಯೋಚನೆಯನ್ನು ಮಾಡಿ,ಯಾವುದೇ ಒಂದು ವಿಚಾರದಲ್ಲಿ ವಿಮರ್ಶೆಯನ್ನು ಮಾಡಿ ನಂತರ ನೀವು ಪರಿಹಾರವನ್ನು ಕೈಗೊಳ್ಳುವುದು ಅಥವಾ ನಿಮ್ಮ ಜೀವನದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗಲೂ, ಅದನ್ನು ಒಂದೆರಡು ಬಾರಿಯಲ್ಲ ಹತ್ತು ಬಾರಿ ಯೋಚನೆ ಮಾಡಿ, ನಂತರ ಅದನ್ನು ಪಾಲಿಸುವುದರಿಂದ ನಿಮ್ಮ ಜೀವನದಲ್ಲಿ ಒಂದೊಳ್ಳೆಯ ಬದಲಾವಣೆ ಆದಂತೆ ಆಗುತ್ತದೆ.

ಈ ದಿನದ ಮಾಹಿತಿಯಲ್ಲಿ ನಾನು ನಿಮಗೆ ತಿಳಿಸಿಕೊಡಲು ಹೊರಟಿರುವಂಥ ಒಂದು ವಿಚಾರವೇನು ಅಂದರೆ ಲಕ್ಷ್ಮೀದೇವಿಯನ್ನು ಮನೆಯಲ್ಲಿ ಹೇಗೆ ಪೂಜಿಸಬೇಕು ಲಕ್ಷ್ಮೀದೇವಿ ಅನುಗ್ರಹವನ್ನು ಪಡೆದುಕೊಳ್ಳಬೇಕು ಅಂದರೆ ಏನು ಮಾಡಬೇಕೋ ಹಾಗೆ ಲಕ್ಷ್ಮೀದೇವಿಯ ಕೃಪ ಕಟಾಕ್ಷ ವನ್ನು ಪಡೆದುಕೊಳ್ಳುವುದಕ್ಕಾಗಿ ನಾವು ಮನೆಯಲ್ಲಿ ಇಟ್ಟುಕೊಳ್ಳ ಬೇಕಾಗಿರುವಂತಹ ಆ ಒಂದು ವಸ್ತುಗಳು ಯಾವುವು ಅನ್ನೋದನ್ನ ನಾವು ನಿಮಗೆ ಈ ಮಾಹಿತಿಯ ಮುಖಾಂತರ ತಿಳಿಸಿಕೊಡುತ್ತೇವೆ,

ಇಂತಹ ಕೆಲವೊಂದು ವಿಚಾರವನ್ನು ನೀವು ಸರಿಯಾದ ಕ್ರಮದಲ್ಲಿ ಪಾಲಿಸುತ್ತಾ ಬಂದರೆ ಸಾಕು ನಿಮ್ಮ ಜೀವನದಲ್ಲಿಯೂ ಕೂಡ ನೀವು ಅಂದುಕೊಂಡವನ್ನು ಸಾಧಿಸಬಹುದು. ಹಾಗೆ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚಿರುತ್ತದೆ ಮತ್ತು ಮನೆಯಲ್ಲಿ ಆರ್ಥಿಕ ಬಿಕ್ಕಟ್ಟುಗಳು ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ.ಇನ್ನು ಲಕ್ಷ್ಮೀದೇವಿಯ ಕೃಪಕಟಾಕ್ಷ ಎಲ್ಲಿರುತ್ತದೆ ಅಂದರೆ ಎಲ್ಲಿ ಶುಭ್ರತೆಯನ್ನು ಕಾಪಾಡಿಕೊಂಡಿರುತ್ತಾರೆ ಎಲ್ಲಿ ಹೆಣ್ಣು ಮಕ್ಕಳು ಆನಂದವಾಗಿರುತ್ತಾನೆ ಎಲ್ಲೂ ನೆಮ್ಮದಿಯ ಜೀವನವನ್ನು ನಡೆಸುತ್ತಿರುತ್ತಾರೆ ಅಂತಹ ಮನೆಗಳಲ್ಲಿ ಲಕ್ಷ್ಮೀದೇವಿ ಸ್ಥಿರ ವಾಸವಾಗಿರುತ್ತಾಳೆ.

ಇಂದಿನ ಮಾಹಿತಿಯಲ್ಲಿ ನಾವು ಹೇಳಲು ಹೊರಟಿರುವಂಥ ಆ ಪರಿಹಾರ ಏನು ಅಂದರೆ ನೀವು ಹಳ್ಳಿಗಳಲ್ಲಿ ಹಳ್ಳಿಯ ಮನೆಗಳಲ್ಲಿ ಗಮನಿಸಿರಬಹುದು, ನಮ್ಮ ಪೂರ್ವಜರು ದೇವರ ಕೋಣೆಯಲ್ಲಿ ಕೆಲವೊಂದು ವಿಶೇಷವಾದ ವಸ್ತುಗಳನ್ನು ಇಟ್ಟುಕೊಳ್ಳುತ್ತಿದ್ದರು. ಹಾಗಾದರೆ ಯಾಕೆ ಈ ರೀತಿ ಆದಂತಹ ವಸ್ತುಗಳನ್ನು ಇಡುತ್ತಿದ್ದರು ಗೊತ್ತಾ ನಿಮಗೆ ಇದರ ಬಗ್ಗೆ ಎಂದಾದರೂ ನೀವು ಗಮನವನ್ನು ನೀಡಿದ್ದೀರಾ.ಹೌದು ದೇವರ ಕೋಣೆಯಲ್ಲಿ ಇಂತಹ ಕೆಲವೊಂದು ಪ್ರತ್ಯೇಕವಾದ ವಸ್ತುಗಳನ್ನು ಇರಿಸಬೇಕು ಅದನ್ನು ಪೂಜಿಸಬೇಕು ಅದೇನೆಂದರೆ ಮಜ್ಜಿಗೆ ಕಡಿಯುವಂಥ ಕೋಲು ಹೌದು ಈ ಮಜ್ಜಿಗೆ ಕೋಲನ್ನು ನೀವು ದೇವರ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಒಂದು ವಿಶೇಷವಾದ ಶಕ್ತಿ ಅಲ್ಲಿ ನೆಲೆಸಿರುತ್ತದೆ

ಈ ಮಜ್ಜಿಗೆ ಕಡಿಯುವಂಥ ಕೋಲನ್ನು ಸಾಗವಾನಿ ಮರದಿಂದ ಮಾಡಿರುವ ಅಥವಾ ಬಿಲ್ವಪತ್ರೆ ಮರದ ತುಂಡಿನಿಂದ ಈ ಮಜ್ಜಿಗೆ ಕಡಿಯುವ ಕೋಲನ್ನು ಮಾಡಿ ದೇವರ ಮನೆಯಲ್ಲಿ ಇರಿಸುವುದರಿಂದ ಅದೊಂದು ಶಕ್ತಿಯಾಗಿ ಮನೆಯನ್ನು ಕಾಪಾಡುತ್ತದೆ ಎಂಬ ನಂಬಿಕೆ ಇದೆ.ಹಾಗೆ ದೇವರ ಕೋಣೆಯಲ್ಲಿ ಇಡಬೇಕಾಗಿರುವ ಎರಡನೇ ವಸ್ತು ಯಾವುದು ಅಂದರೆ ಬೋನಾಸಿ ಇದನ್ನು ಗೋಪಾಲ ಅಂತ ಕೂಡ ಕರೆಯುತ್ತಾರೆ ಶನಿವಾರದ ಸಮಯದಲ್ಲಿ ಅಕ್ಕಿಯನ್ನು ಹಾಕಿಕೊಳ್ಳುವುದಕ್ಕೆ ದಾಸಯ್ಯ ನವರು ಇದನ್ನು ತರುತ್ತಾರೆ

ಇದನ್ನು ದೇವರ ಮನೆಯಲ್ಲಿ ಇಟ್ಟು ಇದರೊಳಗೆ ಪೂರ್ತಿಯಾಗಿ ಅಕ್ಕಿಯನ್ನು ತುಂಬಿಸಿ ಇಡಬೇಕು ಈ ರೀತಿ ಮಾಡುವುದರಿಂದ ಕೂಡ ಮನೆಯಲ್ಲಿ ಅನ್ನಪೂರ್ಣೇಶ್ವರಿಯ ನೆಲೆ ಇರುತ್ತದೆ ಎಂದು ಹೇಳಲಾಗುತ್ತದೆ ನಂಬಲಾಗುತ್ತದೆ ಕೂಡ.ಈ ದಿನ ತಿಳಿಸಿದಂತಹ ಈ ಮಾಹಿತಿ ನಿಮಗೆ ಉಪಯುಕ್ತವಾಗಿ ಇದ್ದಲ್ಲಿ ತಪ್ಪದೆ ಮಾಹಿತಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ ಧನ್ಯವಾದ ಶುಭ ದಿನ.

Leave a Reply

Your email address will not be published.