ಎಡಭಾಗಕ್ಕೆ ನಿಮ್ಮ ತಲೆ ತಿರುಗಿಸಿ ಮಲಗುಗುತ್ತೀರಾ … ಹುಷಾರ್ ಇದನ್ನ ತಿಳ್ಕೊಳ್ಳಲೇಬೇಕು ನೀವು …

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನೀವು ಮಲಗುತ್ತಿರುವಂತಹ ಭಂಗಿ ಯಾವ ರೀತಿ ಇದೆ ನೀವು ಮಲಗುತ್ತಿರುವ ಭಂಗಿ ನಿಮ್ಮ ಆರೋಗ್ಯದ ಮೇಲೆ ಅದೆಷ್ಟು ಪರಿಣಾಮ ಬೀರುತ್ತಿದೆ ಮತ್ತು ನಿಮ್ಮ ಮಲಗುವ ಭಂಗಿ ಯಾವ ರೀತಿ ಇದ್ದರೆ ನಿಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ, ಅನ್ನೋದನ್ನು ತಿಳಿಯೋಣ ಇವತ್ತಿನ ಮಾಹಿತಿಯಲ್ಲಿ. ಸಂಪೂರ್ಣ ಮಾಹಿತಿಯನ್ನು ತಿಳಿದು ಉತ್ತಮ ಆರೋಗ್ಯಕ್ಕಾಗಿ ಯಾವ ಭಂಗಿಯಲ್ಲಿ ನಿದ್ರಿಸಿದರೆ ಉತ್ತಮ ಅನ್ನುವುದನ್ನು ತಿಳಿಯಿರಿ, ಮುಂದಿನ ದಿನಗಳಲ್ಲಿ ಇದೆ ಭಂಗಿಯಲ್ಲಿ ನಿದ್ರಿಸಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ.

ಹೌದು ಒಬ್ಬ ವ್ಯಕ್ತಿಗೆ ನಿದ್ರೆ ಎಂಬುದು ಎಷ್ಟು ಅತ್ಯಗತ್ಯವಾಗಿರುತ್ತದೆ ಅಂದರೆ ದಿನಕ್ಕೆ ವ್ಯಕ್ತಿ ನಿರಂತರ ಕೆಲಸ ಮಾಡಿದ ನಂತರ ಆತನ ದೇಹ ಸುಸ್ತಿನಿಂದ ಬಳಲಿರುತ್ತದೆ, ಆಗ ಅವರಿಗೆ ಒಂದೊಳ್ಳೆ ನಿದ್ರೆ ಉತ್ತಮವಾದ ವಿಶ್ರಾಂತಿ ಅನ್ನು ನೀಡುತ್ತದೆ. ಕೆಲವರಿಗೆ ನಿದ್ರೆ ಎಂಬುದು ಸರಿಯಾಗಿ ಆಗುತ್ತಿರುವುದಿಲ್ಲ ಇದಕ್ಕೆ ಅವರು ಮಲಗುವ ಭಂಗಿ ಕಾರಣವಾಗಿರಬಹುದು ಆದ ಕಾರಣ ನಾವು ಯಾವ ಭಂಗಿಯಲ್ಲಿ ಮಲಗಿದರೆ ಉತ್ತಮ ಅದು ನಿದ್ರೆಗೆ ಒಳ್ಳೆಯದು ಮತ್ತು ಇದರಿಂದ ಆಗುವ ಪ್ರಯೋಜನಗಳೇನು ಅನ್ನುವುದನ್ನು ತಿಳಿಸುವುದೇ ಇಂದಿನ ಮಾಹಿತಿಯ ಉದ್ದೇಶ.

ಕೆಲವರು ಹೊಟ್ಟೆಯ ಮೇಲೆ ಮಲಗುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ ಈ ರೀತಿ ಹೊಟ್ಟೆಯ ಮೇಲೆ ಮಲಗುವ ಅಭ್ಯಾಸವನ್ನು ನೀವೇನಾದರೂ ಮಾಡಿಕೊಂಡಿದ್ದರೆ ಕೂಡಲೇ ಅವರು ಅಭ್ಯಾಸವನ್ನು ಬಿಟ್ಟುಬಿಡಿ ಯಾಕೆ ಅಂದರೆ ಈ ಒಂದು ಭಂಗಿಯಲ್ಲಿ ನಿದ್ರಿಸುವುದರಿಂದ ಅಜೀರ್ಣತೆ ಕಾಡಬಹುದು ಮತ್ತು ಉಸಿರಾಟದ ಸಮಸ್ಯೆಯಿಂದ ಅಸ್ತಮಾದಂತಹ ಸಮಸ್ಯೆಗಳು ಕೂಡ ಎದುರಾಗುತ್ತದೆ, ಮತ್ತು ಮೆದುಳಿಗೆ ಸರಿಯಾದ ಆಮ್ಲಜನಕದ ಸರಬರಾಜು ಆಗದೆ ಮೆದುಳಿನ ಚಟುವಟಿಕೆ ಕೂಡ ಕಡಿಮೆಯಾಗಬಹುದು.

ಇನ್ನು ಕೆಲವರು ಬಲಭಾಗಕ್ಕೆ ಮುಖವನ್ನು ಮಾಡಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ ಇದರಿಂದ ಕೂಡ ನಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಬೀರಬಹುದು ಯಾಕೆ ಅಂದರೆ ನಮ್ಮ ದೇಹದಲ್ಲಿ ಹೊಟ್ಟೆ ಮತ್ತು ಎದೆ ಭಾಗ ಎಡಭಾಗದಲ್ಲಿ ಸಂಕೀರ್ಣಗೊಂಡಿದ್ದು, ನಾವು ಯಾವಾಗ ಬಲಭಾಗಕ್ಕೆ ಮುಖ ಮಾಡಿ ಮಲಗುತ್ತೇವೆ ಭೂಮಿಯ ಗುರುತ್ವಾಕರ್ಷಣೆ ಜೀರ್ಣಕ್ರಿಯೆಯನ್ನು ಕುಂಠಿತ ಮಾಡಬಹುದು, ಹಾಗೆ ಹೃದಯವೂ ಕೂಡ ಈ ಎದೆಯ ಎಡಭಾಗದಲ್ಲಿ ಸಂಕೀರ್ಣಗೊಂಡಿದ್ದು, ಹೃದಯಕ್ಕೆ ಸರಿಯಾಗಿ ರಕ್ತ ಸಂಚಲನೆ ಆಗದೆ ಇರಬಹುದು, ಇದರಿಂದ ಹಾರ್ಟ್ ಅಟ್ಯಾಕ್ ನಂತಹ ಸಮಸ್ಯೆಗಳು ಹೆಚ್ಚಾಗುತ್ತದೆ.

ಆದ ಕಾರಣ ಮಲಗುವುದಕ್ಕೆ ಸರಿಯಾದ ಭಂಗಿ ಅಂದರೆ ಅದು ಎಡಭಾಗಕ್ಕೆ ತಿರುಗಿ ತಿರುಗಿ ಮಲಗುವುದು ಹೌದು ಎಡಭಾಗಕ್ಕೆ ತಿರುಗಿ ಮಲಗುವುದರಿಂದ ಉಸಿರಾಟದ ಸಮಸ್ಯೆ ಆಗುವುದಿಲ್ಲ ಜೊತೆಗೆ ಹೃದಯಕ್ಕೆ ಸರಿಯಾದ ಪ್ರಮಾಣದಲ್ಲಿ ರಕ್ತ ಪರಿಚಲನೆ ಆಗುತ್ತದೆ ಜೊತೆಗೆ ಜೀರ್ಣಕ್ರಿಯೆಯೂ ಕೂಡ ಉತ್ತಮವಾಗಿ ಆಗುತ್ತದೆ. ಈ ಎಲ್ಲ ಕಾರಣಗಳಿಂದ ವಿಜ್ಞಾನವೂ ಕೂಡ ಹೇಳುವುದು ಅದೆ ಎಡಭಾಗಕ್ಕೆ ತಿರುಗಿ ಮಲಗಬೇಕು ಅಂತ, ಮಲಗುವುದಕ್ಕೆ ಸರಿಯಾದ ಭಂಗಿ ಅಂದರೆ ಅದು ಎಡಭಾಗಕ್ಕೆ ತಿರುಗಿ ಮಲಗುವುದು.

ಇವತ್ತಿನ ಈ ಮಾಹಿತಿಯಲ್ಲಿ ತಿಳಿಸಿ ಕೊಟ್ಟಂತಹ ಈ ಒಂದು ವಿಚಾರ ನಿಮಗೆ ಉಪಯುಕ್ತವಾಗಿದೆ ಪ್ರಯೋಜನಕಾರಿಯಾಗಿದೆ ಅಂತ ನಾನು ಭಾವಿಸುತ್ತೇನೆ, ನಿಮಗೂ ಕೂಡ ಈ ಒಂದು ವಿಚಾರ ಉಪಯುಕ್ತವಾಗಿದ್ದಲ್ಲಿ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ. ಹಾಗೆ ಇನ್ನೂ ಇಂತಹ ಹಲವಾರು ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ಉಪಯುಕ್ತ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಧನ್ಯವಾದ.

Leave a Reply

Your email address will not be published.