ನೀವು ನಿಮ್ಮ ಮನೆಯಲ್ಲಿರುವ ದೇವರಕೋಣೆಯಲ್ಲಿ ಈ ವಸ್ತುಗಳನ್ನು ಏನಾದ್ರು ಇಟ್ಟರೆ ನಿಮ್ಮ ಮನೆಯಲ್ಲಿ ಲಕ್ಷ್ಮಿಯ ವಾಸ ಉಂಟಾಗಿ ದುಡ್ಡಿನ ಸುರಿಮಳೆ ಆಗುತ್ತದೆ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮಹಾಲಕ್ಷ್ಮೀ ದೇವಿ ಮತ್ತು ಕುಬೇರ ದೇವರ ಅನುಗ್ರಹಕ್ಕಾಗಿ ನೀವು ತಪ್ಪದೆ ಈ ಪರಿಹಾರವನ್ನು ಪಾಲಿಸಿ ಹೌದು ಇದು ಶ್ರೀಕೃಷ್ಣದೇವ ಹೇಳಿರುವ ಮಾತು ಮಹಾಭಾರತದ ಕಾಲದಲ್ಲಿ ಶ್ರೀಕೃಷ್ಣ ದೇವಾ ಹೇಳಿರುವ ಈ ಮಾತುಗಳನ್ನು ನೀವು ಕೂಡಾ ತಪ್ಪದೇ ಪಾಲಿಸಿಕೊಂಡು ಬನ್ನಿ. ಜೀವನದಲ್ಲಿ ಪ್ರತಿಯೊಬ್ಬರಿಗು ಕೂಡ ಹಣದ ಅವಶ್ಯಕತೆ ಇರುತ್ತದೆ ಹಾಗೂ ಸಿರಿ ಸಂಪತ್ತು ತಿನ ಆಶಯವಿರುತ್ತದೆ ಅಂತಹವರು ತಮ್ಮ ಸಿರಿ ಸಂಪತ್ತಿನ ವೃದ್ಧಿ ಗಾಗಿ ತಮ್ಮ ಹಣಕಾಸಿನ ವೃದ್ಧಿಗಾಗಿ ಮನೆಯಲ್ಲಿ ಅದರಲ್ಲಿಯೂ ಮನೆಯ ಪುಣ್ಯಸ್ಥಳವಾದ ದೇವರ ಮನೆಯಲ್ಲಿ ಈ ವಸ್ತುಗಳನ್ನು ತಪ್ಪದೇ ಇರಿಸಬೇಕೆಂದು ಶ್ರೀಕೃಷ್ಣದೇವ ಹೇಳಿದ್ದಾರೆ.

ಮನೆಯ ಶುದ್ಧವಾಗಿದ್ದರೆ ಮನಸ್ಸು ಶುದ್ಧವಾಗಿರುತ್ತದೆ ಮನಸ್ಸು ಶುದ್ಧವಾಗಿದ್ದರೆ ಕೆಲಸ ಮಾಡುವ ಆಸಕ್ತಿ ಇರುತ್ತದೆ ಆದ್ದರಿಂದ ಮನೆಯಲ್ಲಿ ಶುಭ್ರತೆ ಕಾಪಾಡುವುದರ ಜೊತೆಗೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ನೆಲೆಯು ಇದ್ದರೆ ಅಂತಹ ಮನೆ ಯಲ್ಲಿ ಯಶಸ್ಸು ವೃದ್ಧಿಸುತ್ತದೆ ಆ ಮನೆ ಲಕ್ಷ್ಮಿ ದೇವಿಯ ಅನುಗ್ರಹದಿಂದ ಇರುತ್ತದೆ ಯಾವ ಸಮಸ್ಯೆಗಳೂ ಕೂಡ ಮನೆಯಲ್ಲಿ ಯಾವ ತೊಂದರೆಗಳನ್ನು ಉಂಟು ಮಾಡದಿರುವ ಹಾಗೆ ಲಕ್ಷ್ಮೀದೇವಿಯ ಆಶೀರ್ವಾದದೊಂದಿಗೆ ಎಲ್ಲವೂ ಕೂಡ ಉತ್ತಮವಾಗಿ ಜರಗುತ್ತಾ ಇರುತ್ತದೆ

ಆದ್ದರಿಂದ ಲಕ್ಷ್ಮೀ ದೇವಿಗೆ ಪ್ರಿಯವಾದ ಹಾಗೂ ಶ್ರೀಕೃಷ್ಣದೇವರು ಹೇಳಿರುವ ಪ್ರಕಾರವಾಗಿ ಈ ವಸ್ತುಗಳನ್ನು ತಪ್ಪದೆ ದೇವರ ಕೋಣೆಯಲ್ಲಿ ಇರಿಸಿ ಪ್ರತಿ ದಿವಸ ಪೂಜೆಯನ್ನು ಮಾಡಿಕೊಂಡು ಬನ್ನಿ ಖಂಡಿತವಾಗಿಯೂ ನಿಮ್ಮ ಮನೆಯಲ್ಲಿ ಸಿರಿ ಸಂಪತ್ತು ವೃದ್ಧಿಯಾಗುತ್ತದೆ.ಸಾಮಾನ್ಯವಾಗಿ ಲಕ್ಷ್ಮಿ ಹಾಗೂ ಗಣಪತಿಯ ವಿಗ್ರಹವನ್ನು ಅಥವಾ ಪಟವನ್ನು ಮನೆಯಲ್ಲಿ ಇರಿಸಿ ಪೂಜಿಸುತ್ತಾರೆ ಆದರೆ ಎಷ್ಟೋ ಮಂದಿ ಕುಬೇರ ದೇವರ ಪೂಜೆಯನ್ನೂ ಮಾಡುವುದಿಲ್ಲ ಮನೆಯಲ್ಲಿಯೇ ಅದರಲ್ಲಿಯೂ ದೇವರ ಕೋಣೆಯಲ್ಲಿ ಕುಬೇರ ದೇವರ ಮೂರ್ತಿ ಅಥವಾ ಪಟವನ್ನು ಇರಿಸಿ

ಪ್ರತಿ ದಿವಸ ಪೂಜೆ ಮಾಡಿಕೊಂಡು ಬಂದದ್ದೇ ಆದಲ್ಲಿ ಕುಬೇರ ದೇವತಾನುಗ್ರಹದಿಂದಾಗಿ ನೀವು ಜೀವನದಲ್ಲಿ ಯಶಸ್ಸನ್ನು ಕಾಣುತ್ತೀರಾ ಆದರೆ ಕೆಲವರು ಮಾತ್ರ ದೀಪಾವಳಿಯ ಸಮಯದಲ್ಲಿ ಮಾತ್ರ ಕುಬೇರ ದೇವನ ಪೂಜೆ ಮಾಡುತ್ತಾರೆ ಆದರೆ ಸಿರಿಸಂಪತ್ತಿನ ಅಧಿಪತಿಯಾಗಿರುವ ಕುಬೇರ ದೇವರ ಪಟವನ್ನು ಮನೆಯಲ್ಲಿ ಇರಿಸಿ ಪ್ರತಿ ದಿನ ಕೂರಿಸಿಕೊಂಡು ಬಂದರೆ ಸಕಲ ಅಷ್ಟೈಶ್ವರ್ಯ ನಿಮ್ಮದಾಗುತ್ತದೆ.

ಇದರ ಜೊತೆಗೆ ಶ್ರೀಕೃಷ್ಣರು ಹೇಳಿರುವ ಹಾಗೆ ದೇವರ ಮನೆಯಲ್ಲಿ ಶಂಕುವನ್ನು ಇರಿಸಿ ಅದನ್ನು ಪೂಜೆ ಮಾಡಿಕೊಂಡು ಬರುವುದರಿಂದ ಲಕ್ಷ್ಮೀದೇವಿ ಸಂತಸಗೊಳ್ಳುತ್ತಾಳೆ. ಈ ಶಂಖು ಅಂಗೈನಲ್ಲಿ ಮುಚ್ಚುವಷ್ಟು ಗಾತ್ರದಲ್ಲಿ ಇರಬೇಕಾಗುತ್ತದೆ, ಅಂತಹ ಶಂಕುವನ್ನು ಮನೆಯಲ್ಲಿ ಇರಿಸಿ ಪೂಜೆಯನ್ನು ಮಾಡಬೇಕು ಇದರ ಜೊತೆಗೆ ದೇವರ ಮನೆಯಲ್ಲಿ ಶ್ರೀಗಂಧ ಜೇನುತುಪ್ಪ ಇರಿಸಬೇಕು ಅಷ್ಟೇ ಅಲ್ಲ ಪ್ರತಿ ದಿವಸ ದೇವರಕೋಣೆಯಲ್ಲಿ ಶುದ್ಧವಾದ ತುಂಬಿದ ನೀರನ್ನು ಹರಿಸಬೇಕು ಎಂದು ಹೇಳಿದ್ದಾರೆ.

ನಮ್ಮ ಸಂಪ್ರದಾಯದ ಪ್ರಕಾರ ಅತಿಥಿ ದೇವೋಭವ ಎಂದು ಹೇಳ್ತಾರ ಮನೆಗೆ ಬಂದ ಅತಿಥಿಗೆ ಶುದ್ಧವಾದ ಕುಡಿಯುವ ನೀರನ್ನು ನೀಡಬೇಕು, ಅತಿಥಿಯನ್ನು ಸತ್ಕರಿಸಬೇಕು ಬಂದ ಅತಿಥಿಗಳು ಸಂತಸಗೊಂಡರೆ ಅವರ ಆಶೀರ್ವಾದವೂ ನಮ್ಮ ಮನೆಗೆ ಏಳ್ಗೆ ತಂದು ನೀಡುತ್ತದೆ. ಹೀಗೆಂದು ಶ್ರೀಕೃಷ್ಣರು ಹೇಳುತ್ತಾರೆ ಆದ್ದರಿಂದ ಶ್ರೀಕೃಷ್ಣದೇವ ಹೇಳುವ ಪ್ರಕಾರ ಮನೆಯಲ್ಲಿ ಈ ಕೆಲವೊಂದು ವಸ್ತುಗಳನ್ನು ಇರಿಸುವುದರಿಂದ ಹಾಗೂ ಅತಿಥಿಗಳಿಗೆ ಮತ್ತು ಹಿರಿಯರಿಗೆ ಗೌರವವನ್ನು ನೀಡುವುದರಿಂದ ನಾವು ಜೀವನದಲ್ಲಿ ಯಶಸ್ಸನ್ನು ಕಾಣಬಹುದು ಮತ್ತು ಮನೆಯಲ್ಲಿ ಅಭಿವೃದ್ಧಿ ಆಗುತ್ತದೆ ಎಂದು ಹೇಳಿದ್ದಾರೆ.

Leave a Reply

Your email address will not be published.