ಈ ರಾಶಿಯಲ್ಲಿ ನೀವೇನಾದ್ರು ಹುಟ್ಟಿದ್ದರೆ ತುಂಬಾನೇ ಅದೃಷ್ಟವಂತರು ಶಿವನಿಗೆ ಅತ್ಯಂತ ಪ್ರಿಯ ಈ ನಾಲ್ಕು ರಾಶಿಗಳು ಆ ರಾಶಿಗಳು ಯಾವುವು ಗೊತ್ತಾ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸ್ನೇಹಿತರೇ ಸಾಮಾನ್ಯವಾಗಿ ನಾವು ಕೆಲವೊಂದು ಬಾರಿ ಜೀವನದಲ್ಲಿ ಎಂತಹ ಕಷ್ಟಗಳನ್ನು ಎದುರಿಸುತ್ತೇವೆ ಎಂಬುದು ನಮಗೆ ಅರಿವಿರುವುದಿಲ್ಲ. ಆದರೆ ಕೆಲವೊಂದು ಬಾರಿ ಸಮಸ್ಯೆಗಳಿಗೆ ಪರಿಹಾರ ಇದ್ದರೂ ಕೂಡ ನಮಗೆ ತಿಳಿಯುವುದಿಲ್ಲ.ರಾಶಿ ವಿಷಯದ ಆಧಾರದ ಮೇಲೆ ಕೆಲವೊಬ್ಬರ ಜೀವನ ಹೇಗಿದೆ ಗ್ರಹಗತಿಗಳು ಹೇಗಿದೆ ಎಂಬುದರ ಮೇಲೂ ಕೂಡ ಅವರ ಸುಖ ದುಃಖಗಳು ನಿರ್ಧಾರವಾಗುತ್ತದೆ ಎಂಬುದರಲ್ಲಿ ಯಾವುದೇ ರೀತಿಯ ದಂತಹ ಸಂಶಯವಿಲ್ಲ.ಕೆಲವೊಂದು ಬಾರಿ ಇದರಿಂದ ಹೊರಗೆ ಬರುವಂತಹ ಅನೇಕ ದಾರಿಗಳಿದ್ದರೂ ಕೂಡ ನಮಗೆ ಸರಿಯಾದ ಮಾರ್ಗ ಇಲ್ಲದೇ ಆ ದಾರಿಗಳು ತಿಳಿಯಲು ಸಾಧ್ಯವಿರುವುದಿಲ್ಲ .

ಸಾಮಾನ್ಯವಾಗಿ ಕೆಲವೊಂದು ದೇವರ ಅನುಗ್ರಹಕ್ಕೆ ಕೆಲವೊಂದು ರಾಶಿಯವರು ಒಳಗಾಗಿರುತ್ತಾರೆ ಆದರೆ ಅವರಿಗೆ ಅದರ ಮಾಹಿತಿ ಇರುವುದಿಲ್ಲ ಮತ್ತು ಯಾವ ದೇವರ ಅನುಗ್ರಹಕ್ಕೆ ಒಳಗಾಗಿದ್ದೇವೆ ಹೇಗೆ ಪೂಜೆ ಮಾಡಬೇಕು ಎಂಬ ಕನಿಷ್ಠ ಮಾಹಿತಿ ಕೂಡ ಇರುವುದಿಲ್ಲ .ಆದರೆ ಈ ದಿನ ನಾವು ನಿಮಗೆ ಶಿವನ ಅನುಗ್ರಹಕ್ಕೆ ಒಳಗಾಗಿರುವ ನಾಲ್ಕು ರಾಶಿಯವರ ಬಗ್ಗೆ ತಿಳಿಸಿಕೊಡುತ್ತೇವೆ. ಸಾಮಾನ್ಯವಾಗಿ ಪ್ರತಿಯೊಂದು ರಾಶಿಯ ಮೇಲೆ ಶಿವನ ಅನುಗ್ರಹ ಇದ್ದೇ ಇರುತ್ತದೆ .

ಆದರೆ ನಾವು ಈಗ ಹೇಳಹೊರಟಿರುವ ರಾಶಿಯವರೆಂದರೆ ಶಿವನಿಗೆ ಅತ್ಯಂತ ಪ್ರಿಯವಾದವರು ಅವರು ಯಾಕೆ ಶಿವನಿಗೆ ಪ್ರಿಯ ಎಂಬುದರ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ.ನೀವು ಕೂಡ ಆ ರಾಶಿಯಾಗಿದ್ದರೆ ಈ ಮಾಹಿತಿಯನ್ನು ತಿಳಿದುಕೊಳ್ಳಿ ಮತ್ತು ಈ ರಾಶಿಯವರು ಬೇರೆ ಬೇರೆ ಯಾರಾದರೂ ನಿಮ್ಮ ಕುಟುಂಬದಲ್ಲಿದ್ದರೆ ಅಥವಾ ಸ್ನೇಹಿತರಾಗಿದ್ದರೆ ಅವರಿಗೂ ಕೂಡ ಈ ಮಾಹಿತಿಯನ್ನು ತಿಳಿಸಿ.ಸಾಮಾನ್ಯವಾಗಿ ನಾವು ಈ ಕೆಳಗೆ ಹೇಳುವಂತಹ ರಾಶಿಯವರು ಶಿವನಿಗೆ ಅತ್ಯಂತ ಪ್ರಿಯವಾದ ರಾಶಿಯವರು ಎಂದರೆ ತಪ್ಪಾಗುವುದಿಲ್ಲ ಈ ರಾಶಿಯವರ ಮನಸ್ಥಿತಿ ಹೇಗಿರುತ್ತದೆ ಶಿವನಿಗೆ ಏಕೆ ಪ್ರಿಯ ಎಂಬ ಮಾಹಿತಿ ಇಲ್ಲಿದೆ.

ಮೊದಲು ಆ ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ ಮೊದಲನೆಯದಾಗಿ ಮೇಷ ರಾಶಿ ಈ ರಾಶಿಯವರೆಂದರೆ ಶಿವನಿಗೆ ಹೆಚ್ಚು ಪ್ರೀತಿ ಏಕೆಂದರೆ ಇವರು ಶಿವನ ಆರಾಧನೆಯಲ್ಲಿ ಹೆಚ್ಚು ಆಸಕ್ತಿಯಿಂದ ಮಾಡುತ್ತಾರೆ .ಮತ್ತು ಇವರು ಸಂಬಂಧಗಳಿಗೆ ಹೆಚ್ಚಿನ ಬೆಲೆಯನ್ನು ಕೊಡುತ್ತಾರೆ. ಯಾವುದೇ ರೀತಿಯ ದಂತಹ ಸಂಬಂಧವಾದರೂ ನಿಭಾಯಿಸುವ ಶಕ್ತಿ ಈ ರಾಶಿಯವರಿಗೆ ಇದೆ . ಆದ್ದರಿಂದ ಈ ರಾಶಿಯವರೆಂದರೆ ಶಿವನಿಗೆ ಅತ್ಯಂತ ಪ್ರಿಯ ಮತ್ತೊಂದು ರಾಶಿ ಎಂದರೆ ಕರ್ಕಾಟಕ ರಾಶಿ .

ಈ ರಾಶಿಯವರೆಂದರೆ ಕೂಡ ಶಿವನಿಗೆ ಅತ್ಯಂತ ಪ್ರಿಯ ಏಕೆಂದರೆ ಇವರು ಶಿವನ ಆರಾಧನೆಯಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ . ಮತ್ತು ಇವರು ದಾನದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ತಿಳಿಯಬಾರದು ಎಂಬ ಮನಸ್ಥಿತಿಯನ್ನು ಹೊಂದಿದವರು ಇವರಾಗಿದ್ದಾರೆ .ಈ ರಾಶಿಯವರು ಸೋಮವಾರದಂದು ತಮ್ಮ ಗೋಶಾಲೆಯಲ್ಲಿ ಅಂದರೆ ದನ ಕರುಗಳಿಗೆ ಸಂತೃಪ್ತಿ ಆಗುವಷ್ಟು ಆಹಾರವನ್ನು ತಿನ್ನಿಸುವುದರಿಂದ ಶಿವನಿಗೆ ಇನ್ನೂ ಹತ್ತಿರ ಆಗುವ ಸಾಧ್ಯತೆ ಇದೆ.

ಶಿವನಿಗೆ ಹತ್ತಿರವಾದಂತಹ ಮತ್ತೊಂದು ರಾಶಿಯ ಎಂದರೆ ಕನ್ಯಾ ರಾಶಿ ಈ ರಾಶಿಯವರು ಮನಸ್ಸಿನ ಒಳಗೊಂದು ಹೊರಗೊಂದು ಎಂದೂ ಮಾಡುವುದಿಲ್ಲ ಆದ್ದರಿಂದ ಈ ರಾಶಿಯವರೆಂದರೆ ಶಿವನಿಗೆ ಅತ್ಯಂತ ಪ್ರೀತಿ ಮನಸ್ಸಿನಲ್ಲಿ ಏನಿದೆ ಅದನ್ನು ಸಂಪೂರ್ಣವಾಗಿ ತಿಳಿಸುವ ಮನೋಭಾವವನ್ನು ಈ ರಾಶಿಯವರು ಹೊಂದಿದ್ದಾರೆ .ಮತ್ತೊಂದು ರಾಶಿ ಎಂದರೆ ಕುಂಭ ರಾಶಿ ಈ ರಾಶಿಯವರ ಮನಸ್ಥಿತಿ ಎಂದರೆ ಶಿವನಿಗೆ ಅತ್ಯಂತ ಪ್ರೀತಿ ಯಾವುದೇ ಕಾರಣಕ್ಕೂ ಯಾವುದೇ ರೀತಿಯ ದಂತಹ ಕಪಟ ಮೋಸಗಳನ್ನು ಅರಿಯದೆ ಇರುವವರು.

ಈ ರಾಶಿಯವರು ಶಿವನ ಕೃಪೆಗೆ ಅತ್ಯಂತ ಹೆಚ್ಚು ಪಾತ್ರರಾಗಿದ್ದಾರೆ ಈ ಮೇಲಿನ ನಾಲ್ಕು ರಾಶಿಯವರು ಕೂಡ ಶಿವನ ಪ್ರೀತಿಗೆ ಪಾತ್ರರಾಗಿದ್ದಾರೆ ಆದರೆ ಅವರ ಗುಣಸ್ವಭಾವಗಳು ಎಂದೂ ಕೂಡ ಬದಲಾಗದ ರೀತಿಯಲ್ಲಿ ಅವರು ನೋಡಿಕೊಳ್ಳಬೇಕು ಅಷ್ಟೇ ಧನ್ಯವಾದಗಳು.

Leave a Reply

Your email address will not be published.