ವೃಷಭ ರಾಶಿಯವರಿಗೆ ನೀವು ಅಂದುಕೊಂಡಕ್ಕಿಂತ ಹೆಚ್ಚು ಒಳ್ಳೆಯ ಫಲಗಳು ಸಿಕ್ಕು ಎಲ್ಲ ರೀತಿಯಲ್ಲಿ ಐಶ್ವರ್ಯ ನಿಮ್ಮದಾಗುತ್ತದೆ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ವೃಷಭರಾಶಿ ಅಲ್ಲಿ ಜನಿಸಿದವರ ವರ್ಷದ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳೋಣ ಮತ್ತು ಇದರ ಜೊತೆಗೆ ಯಾವ ಉದ್ಯೋಗ ಮಾಡಿದರೆ ಇವರಿಗೆ ಉತ್ತಮವಾಗಿದೆ ಹಾಗೆ ಆರೋಗ್ಯ ಸ್ಥಿತಿ ಹೇಗಿರುತ್ತದೆ ಈ ವರುಷದಲ್ಲಿ ವೃಷಭ ರಾಶಿಯಲ್ಲಿ ಜನಿಸಿರುವ ಉದ್ಯೋಗ ಪ್ರಾಪ್ತಿ ಆಗಲಿದೆ ಇದನ್ನೆಲ್ಲ ತಿಳಿಯೋಣ ಇಂದಿನ ಲೇಖನದಲ್ಲಿ. ನೀವು ಸಹ ವೃಷಭರಾಶಿ ಅಲ್ಲಿ ಜನಿಸಿದ್ದರೆ ಈ ಮಾಹಿತಿಯನ್ನು ತಿಳಿಯಿರಿ ಇನ್ನೂ ಕೃತಿಕಾ ನಕ್ಷತ್ರದ 2 3 4ನೇ ಪಾದ ರೋಹಿಣಿ ನಕ್ಷತ್ರದ 4ನೇ ಪಾದ ಮೃಗಶಿರಾ ನಕ್ಷತ್ರ ಒಂದು ಹಾಗೂ ಎರಡನೆ ಪಾದದಲ್ಲಿ ಜನಿಸಿದವರು ವೃಷಭ ರಾಶಿ ಇರುತ್ತದೆ.

ವೃಷಭ ರಾಶಿಯ ರಾಶಿಯ ಅಧಿಪತಿ ಶುಕ್ರ ಆಗಿರುತ್ತಾರೆ ಕಳೆದ ವರುಷಕ್ಕಿಂತಲೂ ವೃಷಭ ರಾಶಿಯವರಿಗೆ ಈ ವರುಷ ಉತ್ತಮವಾಗಿದೆ ಎಂದು ಹೇಳಲಾಗಿದೆ. ರಾಶಿಯ ಅಧಿಪತಿಯಾದ ಶುಕ್ರನು ರಾಜ ಸ್ಥಾನದಲ್ಲಿದ್ದಾನೆ ಆದ್ದರಿಂದಾಗಿ ಆರ್ಥಿಕವಾಗಿ ನೀವು ಅಭಿವೃದ್ಧಿ ಕಾಣಲಿದ್ದೀರಿ. ವೃಷಭ ರಾಶಿಯಲ್ಲಿ ಜನಿಸಿದವರಿಗೆ ಈ ವರುಷ ಉದ್ಯೋಗ ಕ್ಷೇತ್ರದಲ್ಲಿ ಒಳ್ಳೆಯ ಆದಾಯ ಇದೆ ಏಪ್ರಿಲ್ ನಿಂದ ಡಿಸೆಂಬರ್ ವರೆಗೆ ಸಮಯ ಉತ್ತಮವಾಗಿದ್ದು ನೀವೇನಾದರೂ ನಿರುದ್ಯೋಗಿಗಳಾಗಿದ್ದರೆ ಈ ವರುಷ ಕೆಲಸಕ್ಕಾಗಿ ಪ್ರಯತ್ನ ಮಾಡಿದರೆ ಖಂಡಿತವಾಗಿ ಉದ್ಯೋಗ ಪ್ರಾಪ್ತಿ ಆಗುತ್ತದೆ

ಶನಿದೇವನು ಭಾಗ್ಯ ಸ್ಥಾನದಲ್ಲಿ ಇರುವ ಕಾರಣ ಪ್ರಮೋಷನ್ ಕೂಡ ನಿಮಗೆ ಆಗಲಿದೆ. ಉದ್ಯೋಗ ಬದಲಾವಣೆ ಮಾಡಬೇಕೆಂದು ನೀವು ಯೋಚನೆ ಮಾಡುತ್ತಿದ್ದರೆ, ಈ ವರುಷ ನೀವು ಅಂದುಕೊಂಡಂತೆ ಉದ್ಯೋಗ ದೊರೆಯುತ್ತದೆ ಹಾಗು ನಿಮ್ಮ ವಿದ್ಯಾರ್ಹತೆ ತಕ್ಕ ಹಾಗೆ ನಿಮಗೆ ಕೆಲಸ ದೊರೆಯಲಿದೆ.ನೀವೇನಾದರೂ ಹಣ ಹೂಡಿಕೆ ಮಾಡಬೇಕೆಂದು ಯೋಚಿಸುತ್ತಿದ್ದರೆ ತಪ್ಪದೆ ಮೊದಲು ಅನುಭವಸ್ಥರ ಬಳಿ ಕೇಳಿ ನಂತರ ಹೂಡಿಕೆ ಮಾಡಬೇಕೋ ಬೇಡವೋ ಎಂದು ನಿರ್ಧರಿಸುವುದು ಉತ್ತಮ. ಈ ವರ್ಷ ಆದಷ್ಟು ಖರ್ಚು ಕಡಿಮೆ ಮಾಡಿದಲ್ಲಿ ನೀವು ಹೆಚ್ಚು ಹಣ ಉಳಿತಾಯ ಮಾಡಬಹುದಾಗಿದೆ

ಗುರುವಿನ ಒಳ್ಳೆಯ ದೃಷ್ಟಿಯಿಂದಾಗಿ ಶನಿದೇವನ ಅನುಗ್ರಹದಿಂದಾಗಿ ಹಣಕಾಸಿನ ವಿಚಾರದಲ್ಲಿ ನೀವು ಅಭಿವೃದ್ಧಿ ಕಾಣಲಿದ್ದೀರಿ ಈ ಕಾರಣದಿಂದಾಗಿಯೇ ನೀವು ಭೂ ಖರೀದಿ ಅಥವಾ ಮನೆ ಖರೀದಿ ಮಾಡುವ ಯೋಗವೂ ಸಹ ನಿಮಗೆ ಇದೆ.ಆರೋಗ್ಯ ವಿಚಾರದ ಬಗ್ಗೆ ಹೇಳಬೇಕೆಂದರೆ ಈ ವರುಷದಲ್ಲಿ ಆಗಸ್ಟ್ ನಿಂದ ಸೆಪ್ಟೆಂಬರ್ ತಿಂಗಳಿನ ನಡುವಿನಲ್ಲಿ ಆರೋಗ್ಯ ಕೆಡುವ ಸಾಧ್ಯತೆ ಇರುತ್ತದೆ ಆದ್ದರಿಂದ ಆರೋಗ್ಯದ ಬಗ್ಗೆ ಹೆಚ್ಚು ಗಮನ ವಹಿಸುವುದು ಉತ್ತಮವಾಗಿದೆ.

ಕೇತು ಸಪ್ತ ಸ್ಥಾನದಲ್ಲಿ ಇರುವ ಕಾರಣ ಗಂಡ ಹೆಂಡತಿಯ ನಡುವೆ ಜಗಳ ಉಂಟಾಗುವ ಸಾಧ್ಯತೆ ಇದೆ ಆದ್ದರಿಂದ ಅದೆಷ್ಟು ಗಂಡಹೆಂಡತಿ ಚರ್ಚೆ ಮಾಡಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಉತ್ತಮವಾಗಿದೆ ಆದಷ್ಟೂ ವೃಷಭ ರಾಶಿಯವರು ತಮ್ಮ ಸಂಗಾತಿಯೊಡನೆ ವಾಗ್ವಾದ ಮಾಡಬೇಡಿ ಇದರಿಂದ ಮುಂದಿನ ದಿವಸಗಳಲ್ಲಿ ಮನಸ್ಥಿತಿ ಹಾಳಾಗುವ ಸಾಧ್ಯತೆ ಕೂಡ ಇದೆ.

ಸೊಂಟ ಕಣ್ಣು ಹೃದಯ ಇಂತಹ ವಿಚಾರಗಳಿಗೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ ಇನ್ನೂ ಹೆಣ್ಣುಮಕ್ಕಳು ಋತುಚಕ್ರದ ವಿಚಾರದಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿದೆ. ಆದ್ದರಿಂದ ವೃಷಭ ರಾಶಿಯಲ್ಲಿ ಜನಿಸಿರುವ ಅವರು ಈ ವರುಷ ಆರೋಗ್ಯದ ಬಗ್ಗೆ ಹೆಚ್ಚು ಗಮನ ವಹಿಸುವುದು ಒಳ್ಳೆಯದು. ಉತ್ತಮ ಆರೋಗ್ಯಕ್ಕಾಗಿ ಮತ್ತು ಉಂಟಾದ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ತಪನ ಸೂರ್ಯ ನಮಸ್ಕಾರ ಮಾಡಿ ಹಾಗೂ ತಾಮ್ರದ ಲೋಹದ ಚೊಂಬಿನಲ್ಲಿ ಸೂರ್ಯನಿಗೆ ಜಲ ಸಮರ್ಪಣೆ ಮಾಡಿ

ಇದರಿಂದ ಉತ್ತಮ ಆರೋಗ್ಯವನ್ನು ನೀವು ಪಡೆದುಕೊಳ್ಳಬಹುದು. ಸಮಯ ಆದರೆ ರಾಹು ಮತ್ತು ಕೇತು ವಿನ ಮಂತ್ರ ಪಠನೆ ಮಾಡುವುದು ಉತ್ತಮವಾಗಿದೆ. ಇರುವೆಗೆ ಸಕ್ಕರೆ ಹಾಕುವುದು ಹಾಗೂ ಪ್ರತಿ ಮಂಗಳವಾರ ಆಂಜನೇಯ ಸ್ವಾಮಿಯ ದರ್ಶನ ಪಡೆಯುವುದರಿಂದ ಹಾಗೂ ಭಾನುವಾರದ ದಿವಸದಂದು ಕಾಲಭೈರವನ ಅಷ್ಟಕಂ ಪಠಣ ಮಾಡುವುದರಿಂದ ಈ ವರುಷ ಇನ್ನೂ ಉತ್ತಮವಾಗಿರಲಿದೆ.

Leave a Reply

Your email address will not be published.