ಪ್ರತಿದಿನ ಸಾಯಂಕಾಲ ದೀಪ ಹಚ್ಚಿದ ನಂತರ ಈ ಒಂದು ಜಪವನ್ನು ಮಾಡಿದರೆ ಸಾಕು ಮಹಾಲಕ್ಷ್ಮಿಯ ಅನುಗ್ರಹ ನಿಮ್ಮ ಮನೆಯ ಮೇಲೆ ಉಂಟಾಗಿ ಶ್ರೀಮಂತರಾಗುತ್ತೀರಾ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಲಕ್ಷ್ಮೀದೇವಿಯ ಈ ಶಕ್ತಿಶಾಲಿಯಾದ ಮಂತ್ರವನ್ನು ನೀವು ಕೂಡ ಪಠಣೆ ಮಾಡಿಕೊಂಡು ಬನ್ನಿ ಈ ಮಂತ್ರವನ್ನು ನೀವು ಪ್ರತಿ ದಿವಸ ಮನೆಯಲ್ಲಿ ಪೋಷಣೆ ಮಾಡಿಕೊಂಡು ಬಂದದ್ದೇ ಆದಲ್ಲಿ ಲಕ್ಷ್ಮೀ ದೇವಿಯ ಅನುಗ್ರಹ ವನ್ನು ನೀವು ಸಹ ಪಡೆದುಕೊಳ್ಳಬಹುದು ಲಕ್ಷ್ಮೀದೇವಿಯ ಆಶೀರ್ವಾದಕ್ಕೆ ನೀವು ಪಾತ್ರರಾಗಬಹುದು. ಹಾಗಾದರೆ ಈ ಶಕ್ತಿಶಾಲಿಯಾದ ಮಂತ್ರ ಯಾವುದು ಹಾಗೆ ಈ ಮಂತ್ರ ಪಠನೆ ಮಾಡುವಾಗ ಪಾಲಿಸಬೇಕಾದ ಕೆಲವೊಂದು ಪದ್ಧತಿಗಳೇನು ಈ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳೋಣ.

ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ಈ ಮಾಹಿತಿಯನ್ನು ತಿಳಿಯಿರಿ ಹಾಗೂ ನೀವು ಕೂಡ ಲಕ್ಷ್ಮೀ ದೇವಿಯ ಅನುಗ್ರಹಕ್ಕೆ ಪಾತ್ರನಾಗಬೇಕಾದರೆ ಈ ಮಂತ್ರವನ್ನು ತಪ್ಪದೆ ಪಠಿಸಿ.ಚಂಚಲೆಯಾದ ಲಕ್ಷ್ಮಿ ದೇವಿ ಅನ್ನು ವಿಧವಿಧವಾಗಿ ವಿಧವಿಧವಾಗಿ ಆರಾಧನೆಯನ್ನು ಮಾಡಬೇಕು ಆಕೆಯ ಆರಾಧನೆ ಮಾಡುವಾಗ ಆಕೆಯನ್ನು ಪದಗಳಿಂದ ವರ್ಣಿಸಬೇಕು ಮತ್ತು ಸುಗಂಧ ಭರಿತವಾದ ಪುಷ್ಪಗಳನ್ನು ಆಕೆಗೆ ಸಮರ್ಪಿಸಬೇಕು. ಆಗ ಲಕ್ಷ್ಮೀದೇವಿ ಒಲಿಯುತ್ತಾಳೆ.

ಅದೇ ರೀತಿ ಇಂದಿನ ಮಾಹಿತಿಯಲ್ಲಿ ಲಕ್ಷ್ಮೀದೇವಿಯನ್ನು ಸಂತಸಗೊಳಿಸುವಂತಹ, ಸುವರ್ಣ ಕಮಲಹಾಸಿನಿ ಮಂತ್ರವೊಂದನ್ನು ನಿಮಗೆ ತಿಳಿಸಿಕೊಡುತ್ತೇವೆ ಈ ಮಂತ್ರವನ್ನು ನೀವು ನಲವತ್ತು ದಿವಸಗಳ ಕಾಲ ಪಟಣೆ ಮಾಡಿಕೊಂಡು ಬರುವುದರಿಂದ, ಸಾಕ್ಷಾತ್ ಲಕ್ಷ್ಮೀ ದೇವಿಯ ಅನುಗ್ರಹವನ್ನು ನೀವು ಪಡೆಯಬಹುದು.

ಈ ಮಂತ್ರವನ್ನು ಸಂಜೆಯ ಸಮಯದಲ್ಲಿ ಅಂದರೆ ಸೂರ್ಯಾಸ್ತದ ಬಳಿಕ ನೀವು ಮನೆಯಲ್ಲಿ ದೀಪಾರಾಧನೆಯನ್ನು ಮಾಡುವ ಸಮಯದಲ್ಲಿ ಪಠಣೆ ಮಾಡಬೇಕಾಗುತ್ತದೆ ತಾಯಿಗೆ ಕುಂಕುಮಾರ್ಚನೆಯನ್ನು ಮಾಡುತ್ತಾ ನೈವೇದ್ಯಕ್ಕಾಗಿ ಹಾಲನ್ನು ಸಮರ್ಪಿಸಿ ತುಪ್ಪದ ದೀಪವನ್ನು ಹಚ್ಚಬೇಕು. ನಂತರ ಈ ಮಂತ್ರವನ್ನು ಪಠಣೆ ಮಾಡಿ ಸುಮಾರು ಹನ್ನೊಂದು ಬಾರಿ ಈ ಮಂತ್ರವನ್ನು ಪ್ರತಿ ದಿವಸ ಪಠಣೆ ಮಾಡಬೇಕು.

ಆನಂತರವೂ ಹೀಗಿದೆ “ಸೌಮ್ಯಾ ಭೋಗ್ಯ ಮಹಾಭಾಗ್ಯ ಭೋಗಿನಿ ಭಾಗ್ಯದಾಯಿನಿ ಸುಸೌಧ ಕಮಲ ಪ್ರಖ್ಯಾ ಸುವರ್ಣ ಕಮಲಹಾಸಿನಿ” ಈ ಮಂತ್ರವನ್ನು ಸ್ಪಷ್ಟವಾಗಿ ಭಜನೆ ಮಾಡಿಕೊಂಡು ಬನ್ನಿ ಇದರಿಂದ ಲಕ್ಷ್ಮೀದೇವಿಯು ಪ್ರಸನ್ನಳಾಗುತ್ತಾಳೆ ಹಾಗೂ ಲಕ್ಷ್ಮೀದೇವಿಯ ಆರಾಧನೆ ನಂತರ ಈ ಮಂತ್ರ ಪಠಣೆ ಮಾಡಿ ಯಾವುದೇ ಕಾರಣಕ್ಕೂ ಮಾಂಸಾಹಾರ ಪದಾರ್ಥಗಳನ್ನು ಸೇವನೆ ಮಾಡಿದ ದಿವಸ ಈ ಮಂತ್ರ ಪಠಿಸುವುದು ಶ್ರೇಷ್ಠವಲ್ಲ.

ಸಂಜೆಯ ಸಮಯದಲ್ಲಿ ಮನೆಯ ಮುಖ್ಯ ದ್ವಾರವನ್ನು ತೆರೆದು ಲಕ್ಷ್ಮೀ ದೇವಿಯ ಆರಾಧನೆಯನ್ನು ಮಾಡಿ ಮತ್ತು ಲಕ್ಷ್ಮೀ ದೇವಿಯ ಆರಾಧನೆಯ ಮಂತ್ರವಾಗಿರುವ ಈ ಸುವರ್ಣಕಮಲ ಹಾಸಿನಿ ಮಂತ್ರವನ್ನು ಸತತವಾಗಿ ನಲವತ್ತು ದಿವಸಗಳ ಕಾಲ ತಪ್ಪದೆ ಪಾಲನೆ ಮಾಡಿಕೊಂಡು ಬನ್ನಿ ಇದರಿಂದ ನೀವು ಅಂದುಕೊಂಡ ಕೆಲಸ ಕಾರ್ಯಗಳು ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ

ಹಾಗೂ ನಿಮ್ಮ ಮನೆಗೆ ಲಕ್ಷ್ಮಿ ತಾಯಿಯೂ ಪ್ರವೇಶ ಮಾಡಿ ನಿಮ್ಮ ಮನೆಯಲ್ಲಿ ಸ್ಥಿರ ನಿವಾಸಳಾಗುತ್ತಾಳೆ. ಪ್ರತಿ ದಿವಸ ಲಕ್ಷ್ಮೀದೇವಿಯ ಆರಾಧನೆ ಅನ್ನು ಮಾಡಿ, ಹಾಗೂ ಲಕ್ಷ್ಮೀ ದೇವಿಗೆ ತಪ್ಪದೆ ಕುಂಕುಮ ಹಾಗೂ ಸುಗಂಧ ಭರಿತವಾದ ಪುಷ್ಪವನ್ನು ಅರ್ಪಣೆ ಮಾಡುವುದನ್ನು ಮರೆಯದಿರಿ.

ತಪ್ಪದೆ ಸಾಯಂಕಾಲದ ಸಮಯದಲ್ಲಿಯೆ ಲಕ್ಷ್ಮೀ ದೇವಿಯನ್ನು ವಿಶೇಷವಾಗಿ ಪೂಜೆ ಮಾಡಿಕೊಳ್ಳುತ್ತಾ ಆಕೆಯ ನಾಮಸ್ಮರಣೆ ಮಾಡುತ್ತಾ ಮಂತ್ರ ಪಠನೆ ಮಾಡಬೇಕು ಹಾಗೂ ಲಕ್ಷ್ಮೀದೇವಿ ಬರುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಮನೆಯಲ್ಲಿ ಹೆಣ್ಣು ಮಕ್ಕಳು ಅವಾಚ್ಯ ಪದಗಳನ್ನು ಬಳಸುವುದಾಗಲಿ ಅಥವಾ ಮನೆಯಲ್ಲಿ ಜಗಳ ಮಾಡುವುದಾಗಲಿ ಮಾಡಬಾರದು ಲಕ್ಷ್ಮೀ ದೇವಿಯ ನಾಮಸ್ಮರಣೆ ಮಾಡುತ್ತಾ ತಾಯಿಯ ನೆನೆಯುತ್ತ ತಾಯಿಯನ್ನು ಆರಾಧನೆ ಮಾಡುವುದರಿಂದ ಖಂಡಿತವಾಗಿಯೂ, ಲಕ್ಷ್ಮೀದೇವಿ ಒಲಿಯುತ್ತಾಳೆ ಆಕೆಯ ಅನುಗ್ರಹಕ್ಕೆ ನೀವು ಪಾತ್ರರಾಗಬಹುದು ಧನ್ಯವಾದಗಳು.

Leave a Reply

Your email address will not be published.