ಬೆಳಿಗ್ಗೆ ಎದ್ದ ತಕ್ಷಣ ನೀವು ಖಾಲಿ ಹೊಟ್ಟೆಗೆ ಬಿಸಿ ನೀರು ಕುಡಿದರೆ ಏನಾಗುತ್ತೆ ಗೊತ್ತಾ …ಬಹಳಷ್ಟು ಜನರಿಗೆ ಇದು ಗೊತ್ತಿಲ್ಲ …!!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಮನುಷ್ಯನ ದೇಹವು ಶೇಕಡ 75ರಷ್ಟು ನೀರಿನಂಶದಿಂದ ನಿರ್ಮಾಣಗೊಂಡಿದ್ದು ದ್ರವ ಅಂಶವು ಪ್ರಮುಖ ಪಾತ್ರವಹಿಸುವುದು ಹೀಗಾಗಿ ಮನುಷ್ಯನಿಗೆ ನೀರಿನ ಸೇವನೆ ಅತ್ಯಗತ್ಯ ಆಗಿರುವುದು.ನೀರು ದೇಹದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳುವುದು ಮಾತ್ರವಲ್ಲದೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಂದಲೂ ಇದು ಕಾಪಾಡುವುದು ಹೀಗಾಗಿ ಪ್ರತಿನಿತ್ಯ ಅಗತ್ಯಕ್ಕೆ ಅನುಗುಣವಾಗಿ ನೀರು ಸೇವನೆ ಮಾಡಲೇಬೇಕು.ಒಂದು ಮಿತಿಯ ನೀರಿನ ಸೇವನೆ ಮಾಡದೇ ಇದ್ದರೆ ಆಗ ದೇಹವು ನಿರ್ಜಲೀಕರಣಕ್ಕೆ ಒಳಗಾಗುವುದು ಹೀಗಾಗಿ ನಮ್ಮ ದೇಹಕ್ಕೆ ನೀರು ಎನ್ನುವುದು ಅತಿ ಅಗತ್ಯ ನೀರನ್ನು ಸಾಮಾನ್ಯ. ನೀರು ತಣ್ಣಗಿನ ನೀರು ಮತ್ತು ಬಿಸಿನೀರು ಎಂದು ಮೂರು ವಿಧವಾಗಿ ವಿಂಗಡಿಸಬಹುದು .

ಹೆಚ್ಚಾಗಿ ಬೇಸಿಗೆಯಲ್ಲಿ ಸಾಮಾನ್ಯ ಹಾಗೂ ತಣ್ಣಗಿನ ನೀರು ಕುಡಿಯಲು ಇಷ್ಟಪಡುವರು.ಇನ್ನೂ ಮಳೆಗಾಲ ಮತ್ತು ಚಳಿಗಾಲದಲ್ಲಿ ಬಿಸಿ ನೀರು ಇಷ್ಟವಾಗುವುದು ಮುಂಜಾನೆ ಹೊಟ್ಟೆಗೆ ಬಿಸಿ ನೀರು ಕುಡಿದರೆ ದೇಹಕ್ಕೆ ಯಾವ ಪ್ರೀತಿಯ ಲಾಭಗಳು ಸಿಗಲಿದೆ ಎಂದು ನಿಮಗೆ ತಿಳಿಸಿ ಕೊಡಲಿದ್ದೇವೆ.ದೇಹಕ್ಕೆ ಬಿಸಿ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುವುದು. ಬಿಸಿ ನೀರು ಕುಡಿಯುವುದರಿಂದ ಸಿಗುವಂತಹ ಅತಿಮುಖ್ಯ ಲಾಭ ಎಂದರೆ ಜೀರ್ಣಕ್ರಿಯೆ ಸುಧಾರಣೆ ಮಾಡುವುದು.

ಬಿಸಿನೀರು ನಾವು ಸೇವಿಸಿದ ಆಹಾರವನ್ನು ವಿಘಟಿಸುವಲ್ಲಿ ನೆರವಾಗುವುದು ಮಾತ್ರವಲ್ಲದೆ ಇದರಿಂದ ಜೀರ್ಣಕ್ರಿಯೆ ಕೂಡ ಸರಾಗವಾಗಿ ಆಗುವುದು.ಬಿಸಿನೀರು ಕುಡಿದರೆ ಅದರಿಂದ ಮಲಬದ್ಧತೆ ನಿವಾರಣೆ ಮಾಡಬಹುದು ಯಾಕೆಂದರೆ ಬಿಸಿನೀರು ಕರುಳಿನ ಕ್ರಿಯೆಯನ್ನು ಸರಾಗವಾಗಿ ರಿಸುವುದು.ನಾವು ಬಿಸಿ ನೀರು ಕುಡಿಯುವುದರಿಂದ ತೂಕ ಇಳಿಸಲು ಕೂಡ ಸಹಾಯಕವಾಗುತ್ತದೆ. ಬಿಸಿ ನೀರು ಕುಡಿದರೆ ಅದರಿಂದ ತೂಕ ಇಳಿಸಿಕೊಳ್ಳಲು ನೆರವಾಗುವುದು ಎಂದು ಹಲವಾರು ಸಂಶೋಧನೆಗಳು ಹೇಳಿವೆ.

ಬಿಸಿ ನೀರು ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಪರಿಣಾಮಕಾರಿಯಾಗಿ ಹೊರಗೆ ಹಾಕುವುದು ಇದು ಹೊಟ್ಟೆ ತುಂಬಿದಂತೆ ಮಾಡುವುದು. ಯಾಕೆಂದರೆ ತಣ್ಣೀರಿಗೆ ಹೋಲಿಸಿದರೆ ಬಿಸಿನೀರು ಹೆಚ್ಚುಕಾಲ ಹೊಟ್ಟೆಯಲ್ಲಿ ಉಳಿಯುವುದು.ಬಿಸಿ ನೀರು ಕುಡಿಯುವುದರಿಂದ ಕಟ್ಟಿದ ಮೂಗಿನ ನಿವಾರಣೆಯಾಗುತ್ತದೆ. ಬಿಸಿ ನೀರನ್ನು ಕುಡಿಯುವುದರಿಂದ ಸಿಗುವ ಮತ್ತೊಂದು ಲಾಭವೆಂದರೆ ಅದು ಕಟ್ಟಿದ ಮೂಗಿನ ನಿವಾರಣೆ ಮಾಡುವುದು.

ಮುಚ್ಚಿ ಹೋಗಿರುವಂತಹ ಸೈನಸ್ ಅನ್ನು ಬಿಡಿಸುವುದು ಶೀತದ ವಿರುದ್ಧ ಹೋರಾಡಲು ಇದು ತುಂಬಾ ಪರಿಣಾಮಕಾರಿಯಾಗಿ ನೆರವಾಗುವುದು. ಬಿಸಿನೀರನ್ನು ಕುಡಿದರೆ ಆಗ ನಿಮಗೆ ಸೈನಸ್ ನಿಂದ ಬರುತ್ತಿರುವ ತಲೆನೋವಿನ ನಿವಾರಣೆ ಮಾಡಲು ನೆರವು ಸಿಗುವುದು.ಬಿಸಿ ನೀರು ಕೊಡುವುದರಿಂದ ರಕ್ತಸಂಚಾರ ಸುಧಾರಿಸುತ್ತದೆ. ಕೇವಲ ಹೊಟ್ಟೆಯ ಆರೋಗ್ಯ ಮಾತ್ರವಲ್ಲದೆ ಬಿಸಿ ನೀರಿನಿಂದಾಗಿ ದೇಹದಲ್ಲಿ ರಕ್ತ ಸಂಚಾರವು ಸುಗಮವಾಗಿ ಆಗಲು ನೆರವಾಗುವುದು.

ಬಿಸಿನೀರು ರಕ್ತನಾಳವನ್ನು ಹಿಗ್ಗಿಸುವ ಮೂಲಕವಾಗಿ ರಕ್ತವು ಸರಿಯಾಗಿ ಸಂಚಾರವಾಗುವಂತೆ ಮಾಡುವುದು ಇದರಿಂದ ಸಂಪೂರ್ಣ ದೇಹಕ್ಕೆ ರಕ್ತವು ಸರಿಯಾಗಿ ತಲುಪುವುದು.ಇದರಿಂದಾಗಿ ಹೃದಯದ ಆರೋಗ್ಯವು ಉತ್ತಮವಾಗುವುದು ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ಇದು ತಡೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದು. ಬಿಸಿ ನೀರನ್ನು ಕೊಡುವುದರಿಂದ ಈ ಬಿಸಿನೀರು ನೈಸರ್ಗಿಕವಾಗಿ ನಮ್ಮ ನೋವನ್ನು ನಿವಾರಣೆ ಮಾಡುತ್ತದೆ.

ಬಿಸಿನೀರು ರಕ್ತಸಂಚಾರವನ್ನು ಉತ್ತಮಪಡಿಸುವುದು ಇದರಿಂದಾಗಿ ರಕ್ತವು ದೇಹದೆಲ್ಲೆಡೆ ಸಂಚಾರವಾಗಿ ಸ್ನಾಯುಗಳಿಗೆ ಆರಾಮ ಸಿಗುವುದು ಮತ್ತು ತಲೆನೋವು ನಿವಾರಣೆಯಾಗುವುದು.ಇದು ದೇಹದ ಒಳಗಿನ ನೋವಿಗೂ ಕೂಡ ತುಂಬಾ ಪರಿಣಾಮಕಾರಿಯಾಗಿದೆ. ಬಿಸಿ ನೀರು ಕುಡಿಯುವುದರಿಂದ ಮಲಬದ್ಧತೆಯನ್ನು ತಡೆಯಬಹುದು. ಮೈದಾ ಹಾಗೂ ಇತರ ಅನಾರೋಗ್ಯಕರ ಸಿದ್ದ ಆಹಾರಗಳನ್ನು ಸೇವಿಸುವವರಿಗೆ ಮಲಬದ್ಧತೆ ನಿತ್ಯ ತೊಂದರೆ ಆಗಿದೆ.

ನಿತ್ಯವೂ ಬಿಸಿನೀರನ್ನು ಸೇವಿಸುವ ಮೂಲಕ ಕರುಳುಗಳು ಹೆಚ್ಚು ಸಂಕುಚಿತಗೊಳ್ಳುವುದು ಮೂಲಕ ದೇಹದಿಂದ ಕಲ್ಮಶಗಳು ಸುಲಭವಾಗಿ ಹೊರಹೋಗಲು ನೆರವಾಗುತ್ತದೆ.ಆದ್ದರಿಂದ ಮಲಬದ್ಧತೆಯ ತೊಂದರೆಯಿರುವವರು ತಕ್ಷಣ ತಮ್ಮ ನೀರಿನ ಅಗತ್ಯತೆಯನ್ನು ಬಿಸಿನೀರಿಗೆ ಬದಲಿಸಿಕೊಳ್ಳುವ ಮೂಲಕ ಶೀಘ್ರವೇ ಈ ತೊಂದರೆಯನ್ನು ನಿವಾರಣೆ ಮಾಡಿಕೊಳ್ಳಬಹುದು.

ಮಹಿಳೆಯರು ಬಿಸಿ ನೀರನ್ನು ಕುಡಿಯುವುದರಿಂದ ಮುಟ್ಟಿನ ವೇಳೆ ಆಗುವ ಸ್ನಾಯು ಸೆಳೆತವನ್ನು ನಿವಾರಣೆ ಮಾಡಿಕೊಳ್ಳಬಹುದು. ಮುಟ್ಟಿನ ವೇಳೆ ಸ್ನಾಯು ಸೆಳೆತದ ಸಮಸ್ಯೆಯನ್ನು ಎದುರಿಸುವವರು ಬಿಸಿನೀರನ್ನು ಕುಡಿದರೆ ಅದರಿಂದ ಪರಿಹಾರ ಪಡೆಯಬಹುದಾಗಿದೆ.ಇದು ಹೊಟ್ಟೆಯಲ್ಲಿನ ಸ್ನಾಯುಗಳನ್ನು ಶಮನಗೊಳಿಸಿ ರಕ್ತದ ಹರಿವನ್ನು ಹೆಚ್ಚಿಸಿ ಮತ್ತು ಸ್ನಾಯು ಸೆಳೆತದಿಂದ ಆರಾಮ ಸಿಗುವಂತೆ ಮಾಡುತ್ತದೆ.

ನೋಡಿದ್ರಲ್ಲ ಸ್ನೇಹಿತರೆ ಬಿಸಿನೀರಿನಿಂದ ನಿಂದ ಇಷ್ಟೆಲ್ಲಾ ಪ್ರಯೋಜನಗಳಿವೆಯೆಂದು.ನಮ್ಮ ಉಪಯುಕ್ತ ಆರೋಗ್ಯ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.