ಈ ದೇವಸ್ಥಾನಕ್ಕೆ ಪುರುಷರು ಭೇಟಿ ನೀಡಬೇಕಾದರೆ ಸೀರೆಯನ್ನು ಉಟ್ಟು, ಬಳೆ ತೊಟ್ಟು, ತುಟಿಗೆ ಲಿಪ್ಸ್ ಸ್ಟಿಕ್ ಹಚ್ಚಿಕೊಳ್ಳಬೇಕು..!!

ಭಕ್ತಿ

ದೇವಸ್ಥಾನ ನಮ್ಮ ನಂಬಿಕೆಯಾದರೆ, ಆ ನಂಬಿಕೆಗೆ ಅರ್ಥ ಒಳಗಿರುವ ದೇವರು ಎಂದರೆ ತಪ್ಪಾಗಲಾರದು, ಬದುಕಲ್ಲಿ ಏನೇ ಕಷ್ಟ ಬಂದರು ನಾವು ಮೊದಲು ದೇವರ ಮೊರೆ ಹೋಗುತ್ತೇವೆ ಅದರಿಂದ ಕೊಂಚ ಮಟ್ಟಿನ ನೆಮ್ಮೆದಿ ದೊರೆಯುತ್ತದೆ, ಜೀವನದಲ್ಲಿ ಹೊಸ ಆಶಾಭಾವ ಮೂಡುತ್ತದೆ, ಭಗವಂತ ನಮ್ಮ ಹಿಂದೆ ಇದ್ದಾನೆ ಎಂಬ ದೈರ್ಯವೂ ಮೂಡುವುದು, ಹಾಗು ಪಾಸಿಟಿವ್ ಎನರ್ಜಿ ದೊರೆಯುವುದು ಹೀಗೆ ಹೇಳುತ್ತಾ ಹೋದರೆ ದೇವಸ್ಥಾನಕ್ಕೆ ಹೋಗುವುದರಿಂದ ದೊರೆಯುವ ಲಾಭ ಅಧಿಕ.

ಕೆಲುವು ದೇವಾಲಯದಲ್ಲಿ ಹಲವು ನಿಮಯಗಳನ್ನು ನೋಡಿರುತ್ತೇವೆ, ಪುರುಷರು ಅಂಗಿಯನ್ನು ತೊಡಬಾರದು, ಚಡ್ಡಿ ತೊಡಬಾರದು, ಹುಡುಗಿಯರು ಜೀನ್ಸ್ ತೊಟ್ಟು ಬರಬಾರದು ಹೀಗೆ ಹಲವು ನಿಯಮಗಳನ್ನ ಪಾಲಿಸ ಬೇಕಾಗುತ್ತದೆ, ಆದರೆ ನಿಮಗೆ ಇಂದು ನಾವು ತಿಳಿಸುವ ದೇವಾಲಯದ ನಿಯಮ ಹಾಗು ಆಚರಣೆಯನ್ನ ಕೇಳಿದರೆ ಕೊಂಚ ನಿಮಗೆ ನಂಬಿಕೆ ಬರದೇ ಇರಬಹುದು ಆದರೆ ನೂರು ಪ್ರತಿಶತ ನಿಜವಾದ ಮಾಹಿತಿಯನ್ನೇ ನಿಮಗೆ ಇಂದು ನಾವು ನಿಮಗೆ ನೀಡುತ್ತೇವೆ.

ಅದೆಂದರೆ ಪುರುಷರಿಗೆ ಈ ದೇವಾಲಯದಲ್ಲಿ ಪ್ರವೇಶವಿಲ್ಲ, ಅಂದಹಾಗಿಯೂ ಪ್ರವೇಶ ಬೇಕಾದರೆ ಪುರುಷರು ಮಹಿಳೆಯಂತೆ ಸೀರೆ ಉಟ್ಟು, ಬಳೆ ತೊಟ್ಟು, ತುಟಿಗೆ ಲಿಪ್ಸ್ ಸ್ಟಿಕ್ ಹಚ್ಚಿಕೊಳ್ಳಬೇಕು ಸಂಪೂರ್ಣ ಹೆಣ್ಣಿನ ಹಾಗೆ ವಸ್ತ್ರ ತೊಡಬೇಕು ನಂತರವೇ ಅವರಿಗೆ ದೇವಾಲಯದ ಒಳಗೆ ಪ್ರವೇಶ, ಈ ರೀತಿ ಅಲಂಕಾರ ಮಾಡಲು ದೇವಾಲಯದ ಸುತ್ತಲೂ ಅನೇಕ ಮಳಿಗೆಗಳು ಇದೆ.

ಈ ಪದ್ಧತಿ ಸುಮಾರು ದಶಕಗಳಿಂದ ಕೇರಳಾದ ಕೊಲ್ಲಮ್ ಜಿಲ್ಲೆಯ ಕೊಟ್ಟಾನ್ ಕೊಲ್ಲಾರ ಎಂಬ ದೇವಾಲಯದಲ್ಲಿದೆ, ಈ ಆಚಾರದ ಹಿಂದೆ ಒಂದು ಕತೆ ಇದೆ. ಒಂದು ಸಲ ಹಸುಗಳನ್ನು ಮೇಯಿಸುವವರು ಸೀರೆಯನ್ನು ಉಟ್ಟು ಹತ್ತಿರದಲ್ಲಿದ ಒಂದು ಶಿಲೆಗೆ ಪೂಜೆ ಮಾಡುತ್ತಾರೆ ಎಂದು, ಆ ಶಿಲೆಯಲ್ಲಿ ದೈವಶಕ್ತಿ ಇರುವುದನ್ನು ಗಮನಿಸಿ ಮುಂದಿನ ದಿನಗಳಲ್ಲಿ ಆ ಶಿಲೆಗೆ ಗುಡಿಯನ್ನು ನಿರ್ಮಿಸಿ ಕೊಟ್ಟಾನ್ ಎಂದು ಹೆಸರಿಟಟ್ಟು, ಅಂದಿನಿಂದ ಅಲ್ಲಿ ಪುರುಷರು ಸ್ತ್ರೀ ವೇಷ ಧರಿಸಿ ಪೂಜೆ ಮಾಡುವುದನ್ನು ಪ್ರಾರಂಭಿಸಿದ್ದಾರೆ ಹಾಗೆಯೇ ಒಂದು ಸಲ ತೆಂಗಿನಕಾಯಿಯನ್ನು ಆ ಶಿಲೆಯ ಮೇಲೆ ಹೊಡೆದಾಗ ಅದರಿಂದ ರಕ್ತ ಸೋರಿತೆಂದು ತಿಳಿಸಿದರು, ಅಷ್ಟೇ ಅಲ್ಲದೆ ಆ ಶಿಲೆಯ ಗಾತ್ರವು ದಿನೇ ದಿನೇ ಬೆಳೆಯುತ್ತಿರುತ್ತದೆ ಎಂದು ದೇವಸ್ಥಾನದ ನಿರ್ವಾಹಕರು ಹೇಳುತ್ತಾರೆ ಆದ್ದರಿಂದ ಈ ದೇವಸ್ಥಾನದ ಒಳಗೆ ಪುರುಷರು ಸ್ತ್ರೀಯರಂತೆ ಹೋಗಿ ಪೂಜೆ ಸಲ್ಲಿಸಿ ಬೇಡಿಕೆಗಳು ನೆರವೇರಿದನಂತರ ಹರಕೆ ತೀರಿಸಿ ಬರುತ್ತಾರೆ.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published.