ನಿಮಗೆ ನೆನಪಿನ ಶಕ್ತಿ ಕಡಿಮೆ ಇದ್ದಲ್ಲಿ ಅದನ್ನು ಹೆಚ್ಚಿಸಿಕೊಳ್ಳಲು ಈ ರೀತಿಯಾಗಿ ಈ ಮನೆಮದ್ದನ್ನು ಮಾಡಿ ಇದನ್ನು ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಬಳಸಬಹುದು!!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಒಬ್ಬ ವ್ಯಕ್ತಿ ಆರೋಗ್ಯಕರವಾಗಿರಬೇಕೆಂದರೆ ಅವನ ದೇಹಕ್ಕೆ ಬೇಕಾಗಿರುವಂತಹ ಎಲ್ಲ ಪೋಷಕಾಂಶಗಳು ಪ್ರೊಟೀನ್ಸ್ ಗಳು ವಿಟಮಿನ್ಸ್ ಗಳು ಇದ್ದಾಗ ಆತ ಯಾವುದೇ ಅನಾರೋಗ್ಯ ಸಮಸ್ಯೆಯಿಂದ ಬಳಲದೆ ಆರೋಗ್ಯಕರವಾಗಿರುತ್ತಾನೆ, ಸದೃಢನಾಗುತ್ತಾನೆ.ಅದೇ ರೀತಿಯಲ್ಲಿ ಆ ವ್ಯಕ್ತಿಯಲ್ಲಿ ಬುದ್ಧಿ ಶಕ್ತಿ ಹೆಚ್ಚಾಗಿರಬೇಕು ಎಂದರೆ, ಆತನು ಆ ಒಂದು ಬುದ್ಧಿ ಶಕ್ತಿಗಾಗಿ ನೆನಪಿನ ಶಕ್ತಿಯಾಗಿಯೂ ಕೂಡ ಕೆಲವೊಂದು ಆಹಾರವನ್ನು ಅವನ ದೈನಂದಿನ ಆಹಾರ ಪದ್ಧತಿಯಲ್ಲಿ ಬಳಸಲೇಬೇಕಾಗುತ್ತದೆ. ಇಲ್ಲವಾದಲ್ಲಿ ನೆನಪಿನ ಶಕ್ತಿ ಕುಂಠಿತವಾಗಿ ಒಂದೆರಡು ದಿನಗಳ ಹಿಂದೆ ನಡೆದಂತಹ ಘಟನೆಗಳೇ ಮರೆತು ಬಿಡುತ್ತಾನೆ.

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನದ ನಡುವೆ ಅನೇಕ ವಿಚಾರಗಳನ್ನು ನಾವು ಮರೆತು ಬಿಡುತ್ತ ಇರುತ್ತೇವೆ, ಮತ್ತು ಮಕ್ಕಳು ಕೂಡ ಈ ಒಂದು ನೆನಪಿನ ಶಕ್ತಿಯ ವಿಚಾರವಾಗಿ ಸ್ವಲ್ಪ ಹಿಂದೆಯೇ ಉಳಿದಿರುತ್ತಾರೆ.ಮಕ್ಕಳಲ್ಲಿ ಒಂದು ಈ ಜ್ಞಾಪಕ ಶಕ್ತಿಯ ಅವಶ್ಯಕತೆ ತುಂಬಾನೆ ಇರುತ್ತದೆ ಇಲ್ಲವಾದಲ್ಲಿ ತಮ್ಮ ಓದಿನ ಕಡೆಗೆ ಗಮನ ಹರಿಸಲು ಕೂಡ ಮಕ್ಕಳಿಗೆ ಆಸಕ್ತಿ ಇರುವುದಿಲ್ಲ, ಆದ ಕಾರಣ ಈ ಒಂದು ನೆನಪಿನ ಶಕ್ತಿ ಚಿಕ್ಕವರಿಗೆ ಅವಶ್ಯಕ ಹಾಗೆ ದೊಡ್ಡವರಿಗೂ ಕೂಡ ತುಂಬಾನೇ ಅವಶ್ಯಕವಾಗಿರುತ್ತದೆ.

ಹಾಗಾದರೆ ನೆನಪಿನ ಶಕ್ತಿಯನ್ನು ವೃದ್ಧಿಸಿ ಕೊಳ್ಳಬೇಕಾದರೆ ನಾವು ಪಾಲಿಸ ಬೇಕಾಗಿರುವಂತಹ ಆಹಾರ ಪದ್ಧತಿಯು ಯಾವುದು ನಮ್ಮ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳ ಬೇಕಾಗಿರುವಂತಹ ಆ ಕೆಲವೊಂದು ಆಹಾರಗಳು ಯಾವುವು ಎಂಬುದನ್ನು ಆಹಾರ ಪಟ್ಟಿಯನ್ನು ಕೆಳಗಿನ ಮಾಹಿತಿಯಲ್ಲಿ ನೀಡಲಾಗಿದೆ.ಇದನ್ನು ಅರಿತು ನಿಮ್ಮ ಮಕ್ಕಳಿಗೂ ಈ ಒಂದು ಆಹಾರವನ್ನು ಹೆಚ್ಚಾಗಿ ನೀಡಿ ಮತ್ತು ನೀವು ಕೂಡ ಪ್ರತಿದಿನ ಈ ಕೆಲವೊಂದು ಆಹಾರಗಳನ್ನು ನೀವು ನಿಯಮಿತವಾಗಿ ಸೇವಿಸುತ್ತಾ ಬನ್ನಿ.

ಕೊತ್ತಂಬರಿ ಬೀಜ ಎಲ್ಲರ ಮನೆಯಲ್ಲಿಯೂ ಇರುತ್ತದೆ, ಇದನ್ನು ಹುರಿಯುವುದು ಬೇಡ, ಒಂದು ಚಮಚ ಕೊತ್ತಂಬರಿ ಬೀಜದ ಪುಡಿ ಅನ್ನು ತೆಗೆದುಕೊಂಡು, ಇದನ್ನು ಕುಟ್ಟಾಣಿ ಸಹಾಯದಿಂದ ಪುಡಿ ಮಾಡಿಕೊಂಡು ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಬೇಕು ಇದನ್ನು ನೀವು ಯಾವ ಸಮಯದಲ್ಲಿ ಬೇಕಾದರೂ ಸೇವಿಸಬಹುದು ಆದರೆ ಇದನ್ನು ಮಕ್ಕಳಿಗೆ ನೀಡುವುದು ಬೇಡ ದೊಡ್ಡವರು ಈ ಒಂದು ಪರಿಹಾರವನ್ನು ಕೈಗೊಳ್ಳಬಹುದು.

ಚಕ್ಕೆಯ ಕೂಡ ಪ್ರತಿಯೊಬ್ಬರ ಮನೆಯಲ್ಲೂ ಇರುತ್ತದೆ ಈ ಚೆಕ್ಕೆಯನ್ನು ಒಂದು ಇಂಚಿನಷ್ಟು ತೆಗೆದುಕೊಂಡು ಅಂದರೆ ಈ ಚಕ್ಕೆಯ ಪುಡಿಯನ್ನು ಅರ್ಧ ಚಮಚ ತೆಗೆದುಕೊಳ್ಳಬೇಕು ಈ ಅರ್ಧ ಚಮಚ ಚಕ್ಕೆ ಪುಡಿಗೆ ಒಂದು ಚಮಚ ಜೇನು ತುಪ್ಪವನ್ನು ಬೆರೆಸಬೇಕು ನಂತರ ಇದನ್ನು ಸೇರಿಸುತ್ತಾ ಬರಬೇಕು ಇದನ್ನು ಕೂಡ ಯಾವ ಸಮಯದಲ್ಲಾದರೂ ಸೇರಿಸಬಹುದು ಇದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ, ಆದರೆ ಈ ಒಂದು ಪರಿಹಾರವೂ ಕೂಡ ಮಕ್ಕಳಿಗೆ ಮಾಡುವುದು ಬೇಡ.

ಮಕ್ಕಳಿಗೆ ನೀಡಬಹುದಾದ ಪರಿಹಾರವೇನು ಅಂದರೆ ಒಂದು ಚಮಚ ಒಂದೆಲಗ ಸೊಪ್ಪಿನ ರಸವನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ನೀಡುತ್ತ ಬರಬೇಕು ಇದರಿಂದ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಜೊತೆಗೇ ಮಕ್ಕಳು ತೊದಲು ತ್ತಿದ್ದರೆ ಈ ಒಂದು ಸಮಸ್ಯೆಯೂ ಕೂಡ ಪರಿಹಾರವಾಗುತ್ತದೆ ಈ ಒಂದೆಲಗ ಸೊಪ್ಪಿನಿಂದ ಇದರಿಂದ ಚಟ್ನಿ ಅಥವಾ ತಂಬುಳಿ ಯನ್ನು ಕೂಡ ಮಾಡಿ ಸೇವಿಸಬಹುದು.

ಪ್ರತಿ ದಿನ ಬಾದಾಮಿಯನ್ನು ನೆನೆಸಿ ಮಾರನೆ ದಿವಸ ಮಕ್ಕಳಿಗೆ ಬೆಳಗ್ಗೆ ಈ ಬಾದಾಮಿಯನ್ನು ನೀಡಬೇಕು ಇದರಿಂದ ಕೂಡ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಜೊತೆಗೇ ಪ್ರತಿದಿನ ಎರಡು ಗೋಡಂಬಿಯನ್ನು ಮಕ್ಕಳಿಗೆ ನೀಡುವುದರಿಂದ ಇದು ಕೂಡ ಜ್ಞಾಪಕ ಶಕ್ತಿ ಹೆಚ್ಚುವಂತೆ ಮಾಡುತ್ತದೆ. ಒಂದು ಲೋಟ ಬಿಸಿ ಹಾಲಿಗೆ ಅರ್ಧ ಚಮಚ ಏಲಕ್ಕಿ ಪುಡಿ ಮತ್ತು ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಮಕ್ಕಳಿಗೆ ನೀಡುವುದರಿಂದ ಇದು ಕೂಡ ಜ್ಞಾಪಕ ಶಕ್ತಿಯನ್ನು ಹೆಚ್ಚಲು ಸಹಕರಿಸುತ್ತದೆ ಜೊತೆಗೆ ಆಹಾರ ಪದ್ಧತಿಯಲ್ಲಿ ನಿಮಿತ್ತವಾಗಿ ಮೆಂತೆ ಸೊಪ್ಪನ್ನು ಬಳಸುವುದರಿಂದ ಕೂಡ ಆರೋಗ್ಯಕ್ಕೂ ಉತ್ತಮ ಮತ್ತು ಜ್ಞಾಪಕ ಶಕ್ತಿ ಕೂಡ ಹೆಚ್ಚುತ್ತದೆ.

Leave a Reply

Your email address will not be published.