ಸ್ನೇಹಿತರೆ ಜೀವನದಲ್ಲಿ ಪ್ರತಿಯೊಬ್ಬರು ಕೂಡ ದೇವರಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಾರೆ ದೇವರು ಯಾವಾಗಲೂ ಮನೆಯಲ್ಲಿ ನೆಲೆಸಿರಲಿ ಎಂದು ಆಸೆಯನ್ನು ಪಡುತ್ತಾರೆ ಆದರೆ ದೇವರು ಮನೆಯಲ್ಲಿ ಯಾವಾಗಲೂ ನೆಲೆಸಿರಲು ಸಾಧ್ಯವಿಲ್ಲ ಏಕೆಂದರೆ ದೇವರು ನೇರವಾಗಿ ನಮ್ಮ ಜತೆ ಸಂಪರ್ಕಕದಲ್ಲಿ ಇರುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ.
ಆದರೆ ದೇವರ ಆಶೀರ್ವಾದ ನಮಗೆ ತುಂಬಾ ಮುಖ್ಯ ಈ ದೇವರ ಆಶೀರ್ವಾದವನ್ನು ನಾವು ಪಡೆಯಬೇಕು ಎಂದರೆ ಅನೇಕ ರೀತಿಯಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡಿ ದೇವರನ್ನು ಒಲಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತೇವೆ ಆದರೆ ಅದು ತುಂಬಾ ಕಠಿಣವಾದ ಮಾರ್ಗವಾಗಿರುವುದರಿಂದ ಅದನ್ನು ತುಂಬಾ ಜನ ಪಾಲನೆ ಮಾಡುವುದಿಲ್ಲ
ಈ ದಿನ ನಾವು ನಿಮಗೆ ಸುಲಭವಾಗಿ ನೀವು ದೇವರನ್ನು ಹೇಗೆ ಒಲಿಸಿಕೊಳ್ಳುವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅದು ಕೇವಲ ಈಗ ನಾವು ಹೇಳುವಂತಹ ಐದು ವಸ್ತುಗಳಿಂದ ಮಾತ್ರ ಸಾಧ್ಯ ಆ ವಸ್ತುಗಳು ಯಾವುವು ಎಂದರೆ ಪ್ರಾಣಿ ರೂಪದಲ್ಲಿರುವ ಮೂರ್ತಿಗಳು.
ಈ ಐದೂ ಪ್ರಾಣಿ ಮೂರ್ತಿಗಳನ್ನು ತಂದು ನಿಮ್ಮ ಮನೆಯಲ್ಲಿ ಇಟ್ಟರೆ ಸಾಕು ಖಂಡಿತವಾಗಿಯೂ ನೀವು ಅಂದುಕೊಂಡ ಕಾರ್ಯಗಳು ಸುಸೂತ್ರವಾಗಿ ನೆರವೇರುತ್ತವೆ ಅದರ ಜೊತೆಯಲ್ಲಿ ಯಾವುದೇ ಕಾರಣಕ್ಕೂ ನೀವು ಅಂದುಕೊಳ್ಳದೇ ಇರುವ ರೀತಿಯಲ್ಲಿ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಆ ಐದು ಪ್ರಾಣಿಗಳ ವಿಗ್ರಹ ಯಾವುದು ಎಂದು ಮುಂದೆ ನೋಡೋಣ ಬನ್ನಿ.
ಮೊದಲನೆಯದಾಗಿ ಆನೆ ಅಂದರೆ ಅದನ್ನ ಐರಾವತ ಎಂದು ಕರೆಯುತ್ತೇವೆ ಸೊಂಡಿಲು ಮೇಲಕ್ಕೆ ಎತ್ತಿಕೊಂಡಿರುವ ಆನೆಯ ವಿಗ್ರಹವನ್ನು ಮನೆಯಲ್ಲಿ ಇಟ್ಟುಕೊಳ್ಳಿ ಅಥವಾ ಫೋಟೋ ಆದರೂ ಇಟ್ಟುಕೊಳ್ಳುವ ಪ್ರಯತ್ನವನ್ನೂ ಮಾಡಿ ಖಂಡಿತವಾಗಿಯೂ ನಿಮ್ಮ ಮನೆಯಲ್ಲಿ ನೀವು ಅಂದುಕೊಂಡಂತೆ ಎಲ್ಲಾ ಕಾರ್ಯಗಳೂ ಕೂಡ ಸುಸೂತ್ರವಾಗಿ ನಡೆಯುತ್ತವೆ
ಮತ್ತು ಯಾವುದೇ ರೀತಿಯಾದಂತಹ ಗೊಂದಲ ಇಲ್ಲದೆ ನೆಮ್ಮದಿಯುತವಾದ ಜೀವನವನ್ನು ನೀವು ಮಾಡಬಹುದು ಮತ್ತೊಂದು ಪ್ರಾಣಿಯ ಮೂರ್ತಿಯೆಂದರೆ ಕುದುರೆ ಇದು ಕೂಡ ದೇವರ ಸ್ವರೂಪವಾಗಿರುವುದರಿಂದ ಸಾಧ್ಯವಾದಷ್ಟು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳುವ ಪ್ರಯತ್ನವನ್ನೂ ಮಾಡಿ.
ಮತ್ತೊಂದು ಪ್ರಾಣಿಯ ಮೂರ್ತಿ ಎಂದರೆ ಹಸು ಮತ್ತು ಕರು ಇದ್ದರಲ್ಲಿ ಮುಕ್ಕೋಟಿ ದೇವರುಗಳು ಇರುವುದರಿಂದ ಹಸು ಮತ್ತು ಕರುಗಳನ್ನು ಪೂಜೆ ಮಾಡುವುದು ನಿಮಗೆ ಶ್ರೇಷ್ಠ ಕರ ಮತ್ತು ಶ್ರೇಯಸ್ಸು ಕೂಡ ಈ ಹಸು ಕರುಗಳನ್ನ ಪೂಜೆ ಮಾಡುವುದರಿಂದಾಗಿ ನೀವು ಖಂಡಿತವಾಗಿಯೂ ಜೀವನದಲ್ಲಿ ಒಂದು ಉನ್ನತಸ್ಥಾನಕ್ಕೆ ಏರುತ್ತಿರ
ಮುಕ್ಕೋಟಿ ದೇವರುಗಳನ್ನು ಪೂಜೆ ಮಾಡಿದ ಫಲ ನಿಮಗೆ ಸಿಗುತ್ತದೆ ಮತ್ತೊಂದು ಎಂದರೆ ಆಮೆ. ಆಮೆಯನ್ನು ಮೂರ್ತಿಯನ್ನು ತಂದು ಪೂಜೆ ಮಾಡಬಹುದು ಅಥವಾ ನಿಜವಾದ ಆಮೆಯಾದರೂ ತಂದು ಪೂಜೆ ಮಾಡಬಹುದು ನಿಮ್ಮ ಅನುಕೂಲ ಹೇಗಿದೆಯೋ ಹಾಗೆ ತಂದು ಪೂಜೆ ಮಾಡಿದರೆ ಉತ್ತಮ ಸಾಮಾನ್ಯವಾಗಿ ಕೆಲವೊಬ್ಬರು ಮನೆಯಲ್ಲಿ ಆಮೆ ಸಾಕುವುದು ತಪ್ಪು ಎಂದು ಹೇಳುತ್ತಾರೆ.
ಆದರೆ ಮನೆಯಲ್ಲಿ ಆಮೆ ಸಾಕುವುದರಿಂದಾಗಿ ನಿಮ್ಮ ಜೀವನದಲ್ಲಿ ನೀವು ಅಂದುಕೊಂಡ ಎಲ್ಲ ಕಾರ್ಯಗಳು ಕೂಡ ಸುಸೂತ್ರವಾಗಿ ನಡೆಯಲು ಈ ಆಮೆ ಸಹಕಾರಿಯಾಗಿರುತ್ತದೆ ಮತ್ತು ಕಷ್ಟಗಳು ಸಾಧ್ಯವಾದಷ್ಟು ದೂರಮಾಡುವಲ್ಲೂ ಕೂಡ ಆಮೆ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಮತ್ತೊಂದು ಪ್ರಾಣಿ ಮೂರ್ತಿಯೆಂದರೆ ಮೀನು ಅಂದರೆ ಮತ್ಸ್ಯ ಇದೂ ಕೂಡ ಮನೆಯಲ್ಲಿ ಮುಖ್ಯವಾಗಿ ಇರಬೇಕಾದಂಥ ಪ್ರಾಣಿಗಳ ವಿಗ್ರಹಗಳಲ್ಲಿ ಒಂದು .ಈಗ ಮೇಲೆ ಹೇಳಿದಂತೆ 5 ವಿಗ್ರಹಗಳನ್ನ ಸಾಧ್ಯವಾದಷ್ಟು ಬೇಗ ನಿಮ್ಮ ಮನೆಯಲ್ಲಿ ತಂದು ಇಡೀ ನಿಮಗೆ ಅದರಿಂದ ಆಗುವಂತಹ ಉಪಯೋಗವನ್ನು ನೀವು ಊಹಿಸಲೂ ಸಾಧ್ಯವಿಲ್ಲ ಅದಾದ ನಂತರ ಅದರ ಪರಿಣಾಮ ನಿಮಗೆ ತಿಳಿಯುತ್ತದೆ ಧನ್ಯವಾದ.