ನಮಸ್ಕಾರ ಸ್ನೇಹಿತರೆ ,ನಾವು ಇಂದಿನ ಮಾಹಿತಿಯಲ್ಲಿ ಆಂಜನೇಯನಿಗೆ ಕುಂಕುಮದಲ್ಲಿ ಎಣ್ಣೆಯನ್ನು ಬೆರೆಸಿ ಹಚ್ಚಿದರೆ ನಿಮ್ಮ ಜೀವನದಲ್ಲಿರುವ ಕಷ್ಟಗಳು ನಿವಾರಣೆಯಾಗುತ್ತವೆ
ಅದನ್ನು ಹೇಗೆ ಮಾಡಬೇಕು ಅಂದರೆ ಆ ನಿಯಮವನ್ನು ಹೇಗೆ ಪಾಲಿಸಬೇಕು ಎಂದು ನಾನು ನಿಮಗೆ ಎಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ. ಹೌದು ಸ್ನೇಹಿತರೆ ಕುಂಕುಮಕ್ಕೆ ವಿಶೇಷವಾದ ಸ್ಥಾನಮಾನವಿದೆ.
ಮದುವೆ ಆದಂತಹ ಮುತ್ತೈದೆಯರು ಕುಂಕುಮವನ್ನು ಇಟ್ಟುಕೊಳ್ಳುವುದು ಪ್ರತೀತಿ. ಈ ಕುಂಕುಮದಿಂದ ಹೇಗೆ ಮಾಡಿದರೆ ಜೀವನದಲ್ಲಿರುವ ಹಲವಾರು ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳಬಹುದು.
ಹೌದು ನೀವು ಜೀವನದಲ್ಲಿ ತುಂಬಾನೇ ಕಷ್ಟವನ್ನು ಅನುಭವಿಸುತ್ತಿದ್ದರೆ ನೀವು ಆಂಜನೇಯನಿಗೆ ಮಲ್ಲಿಗೆ ಎಣ್ಣೆಯಲ್ಲಿ ಕುಂಕುಮವನ್ನು ಬೆರೆಸಿ 5 ಮಂಗಳವಾರ ಮತ್ತು 5 ಶನಿವಾರ ನೀಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಕಷ್ಟಗಳು ನಿವಾರಣೆಯಾಗುತ್ತವೆ.
ಅದಲ್ಲದೆ ನಿಮ್ಮ ಕಚೇರಿಯಲ್ಲಿ ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದರೆ, ಸಿಂಧೂರದಿಂದ ಈ ಪರಿಹಾರವನ್ನು ಮಾಡಿಕೊಳ್ಳಬಹುದು .ಅದು ಹೇಗೆಂದರೆ, ನೀವು ಒಂದು ವಿಳ್ಯದೆಲೆಯಲ್ಲಿ ಸ್ಪಟಿಕ ಮತ್ತು ಕುಂಕುಮವನ್ನು ಹಾಕಿ ಕಟ್ಟಬೇಕು. ಕಟ್ಟಿದ ನಂತರ ಅದನ್ನು ಬುಧವಾರ ಬೆಳಿಗ್ಗೆ ಅಥವಾ ಸಂಜೆ ಅಶ್ವಥ ಮರದ ಕೆಳಗೆ ಕಲ್ಲಿನ ಸಹಾಯದಿಂದ ನೆಲದಡಿ ಇಡಬೇಕು.
ಯಾವುದೇ ಕಾರಣಕ್ಕೂ ಹಿಂದಿರುಗಿ ಏನು ಮಾಡಬಾರದು. ಹೀಗೆ ಮಾಡುವುದರಿಂದ ಎಲ್ಲರಲ್ಲಿ ಕೂಡ ನಿಮ್ಮ ಮೇಲೆ ಇರುವಂತಹ ಗೌರವ ಹೆಚ್ಚಾಗುತ್ತದೆ. ಇದನ್ನು ನೀವು ಮೂರು ಬುಧವಾರ ಮಾಡ್ಬೇಕು.
ಸ್ನೇಹಿತರೆ ವಾಸ್ತುಶಾಸ್ತ್ರದಲ್ಲಿ ಕುಂಕುಮಕ್ಕೆ ವಿಶೇಷವಾದಂತಹ ಸ್ಥಾನಮಾನವಿದೆ.ಈ ಎಣ್ಣೆಯನ್ನು ಬೆರೆಸಿ ದಂತಹ ಕುಂಕುಮವನ್ನು ಮನೆಯ ಬಾಗಿಲಿಗೆ ಹಾಕುವುದರಿಂದ ಋಣಾತ್ಮಕ ಶಕ್ತಿಗಳು ಮನೆಯ ಬಳಿ ಸುಳಿಯುವುದಿಲ್ಲ.
ಸತತವಾಗಿ 40 ದಿನಗಳ ಕಾಲ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ವಾಸ್ತು ದೋಷಗಳು ನಿವಾರಣೆಯಾಗುತ್ತದೆ.ಸಿಂಧೂರವನ್ನು ಪರಿಹಾರ ಮಾಡಿಕೊಳ್ಳುವುದರ ಮೂಲಕ ಲಕ್ಷ್ಮಿ ಹಾಗೂ ದುರ್ಗಾಮಾತೆಯನ್ನು ಮೆಚ್ಚಿಸಬಹುದು.
ದೈನಂದಿನ ವಾಗಿ ಪೂಜೆಯನ್ನು ಮಾಡಿದ ನಂತರ ಕುಂಕುಮದ ಒಂದು ಬೊಟ್ಟನ್ನು ನಿಮ್ಮ ಮನೆಯ ಬಾಗಿಲಲ್ಲಿ ಇಡುವುದರಿಂದ ಲಕ್ಷ್ಮಿ ಯಾವಾಗಲೂ ನಿಮ್ಮ ಮನೆಯಲ್ಲೇ ನೆಲೆಸುತ್ತಾಳೆ. ಹಾಗೆಯೇ ಕುಂಕುಮವನ್ನು ರೂಪಿಸಿದಂತಹ ಗಣೇಶನ ಮೂರ್ತಿಯನ್ನು ನಿಮ್ಮ ಮನೆಯ ದ್ವಾರದಲ್ಲಿ ಇರಿಸಿದರೆ ನಿಮ್ಮ ಮನೆಯಲ್ಲಿ ಯಾವಾಗಲೂ ಸಂತೋಷಕರವಾದ ವಾತಾವರಣವು ಹೊಂದಿರುತ್ತದೆ.
ನೀವೇನಾದರೂ ದೀರ್ಘಕಾಲದಿಂದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿ ದ್ದರೇ,ದಿನದಿಂದ ದಿನಕ್ಕೆ ಸಾಲ ಹೆಚ್ಚಾಗುತ್ತಿದ್ದರೆ ಹಾಗೂ ತೆಗೆದುಕೊಂಡ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗದಿದ್ದರೆ ಈ ಒಂದು ಪರಿಹಾರವನ್ನು ಮಾಡಿ ನೋಡಿ.
ತೆಂಗಿನಕಾಯಿಗೆ ಸಿಂಧೂರದ ಲೇಪನ ಮಾಡಿ ಅದನ್ನು ಬಟ್ಟೆಯಿಂದ ಕಟ್ಟಿ ನಂತರ ಅದಕ್ಕೆ ಪೂಜೆ ಮಾಡಿ ಅದನ್ನು ಬೀರುವಿನಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ ಯಾವಾಗಲೂ ನಿಮ್ಮ ಮನೆಯಲ್ಲಿಯೇ ನೆಲೆಸುತ್ತಾಳೆ.
ಹೀಗೆ ಮೇಲೆ ಹೇಳಿದ ಹಾಗೆ ನೀವು ಪರಿಹಾರವನ್ನು ಮಾಡಿಕೊಂಡಿದ್ದೇ ಆದಲ್ಲಿ ನಿಮ್ಮ ಜೀವನದಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕಷ್ಟವನ್ನು ಪರಿಹಾರ ಮಾಡಿಕೊಳ್ಳಬಹುದು .
ಸ್ನೇಹಿತರೆ ಮನುಷ್ಯನಿಗೆ ಕಷ್ಟ ಬರುವುದು ಸಹಜ ಆದರೆ ಅದನ್ನು ಪರಿಹಾರ ಮಾಡಿಕೊಳ್ಳಲು ಮಾರ್ಗವನ್ನು ಕಂಡುಕೊಳ್ಳಬೇಕು. ಹೀಗೆ ಕಂಡುಕೊಂಡರೆ ನಿಮ್ಮ ಜೀವನದಲ್ಲಿ ಸಮಸ್ಯೆಗಳು ಬಂದರೂ ಕೂಡ ಅದನ್ನು ಪರಿಹರಿಸಿಕೊಳ್ಳುವ ಧೈರ್ಯವೂ ನಿಮಗಿರುತ್ತದೆ.
ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.