ನೀವೇನಾದ್ರು ಈ ರೀತಿಯಾಗಿ ಐದು ಕೆಲಸಗಳನ್ನು ಮಾಡಿದರೆ ಜನ್ಮದಲ್ಲಿ ನಿಮಗೆ ಹಣಕಾಸಿನ ತೊಂದರೆ ಬರುವುದಿಲ್ಲ !!!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮನೆಯಲ್ಲಿ ಸಿರಿಸಂಪತ್ತು ಹೆಚ್ಚಬೇಕೆಂದರೆ ಈ ಕೆಲವೊಂದು ನಿಯಮಗಳನ್ನು ಮನೆಯ ಗೃಹಲಕ್ಷ್ಮಿ ಆದವಳು ತಪ್ಪದೇ ಪಾಲಿಸಲೇಬೇಕು ಹಾಗೆ ಮನೆಯ ಗೃಹಲಕ್ಷ್ಮಿ ಮಾತ್ರ ಅಲ್ಲ ಮನೆಯ ಸದಸ್ಯರು ಕೂಡ ಈ ಕೆಲವೊಂದು ನಿಯಮಗಳನ್ನು ಪಾಲಿಸಿಕೊಂಡು ಬರುವುದರಿಂದ ಆ ಮನೆಯಲ್ಲಿ ಸಿರಿ ಸಂಪತ್ತು ಹೆಚ್ಚುತ್ತದೆ

ಮತ್ತು ಲಕ್ಷ್ಮೀದೇವಿಯ ಕೃಪಕಟಾಕ್ಷ ಆಗುತ್ತದೆ. ಹೌದು ನಮಗೆ ತಿಳಿದೇ ಇದೆ ಲಕ್ಷ್ಮೀದೇವಿ ಚಂಚಲೆ ಲಕ್ಷ್ಮಿ ದೇವಿಯನ್ನು ಪೂಜಿಸುವಾಗ ಕೆಲವೊಂದು ಕಟ್ಟುನಿಟ್ಟಿನ ಆಚಾರಗಳು ಪಾಲಿಸಲೇಬೇಕಾಗುತ್ತದೆ

ಆದಕಾರಣ ಲಕ್ಷ್ಮೀ ದೇವಿಯ ಪೂಜೆಯನ್ನು ಮಾಡುವಾಗ ಗಣಪತಿ ಮತ್ತು ಶ್ರೀ ನಾರಾಯಣನನ್ನು ಕೂಡ ಪೂಜಿಸಬೇಕು. ಆಗ ಲಕ್ಷ್ಮೀದೇವಿಯು ಮನೆಯಲ್ಲಿ ಸ್ಥಿರ ನಿವಾಸ ವಾಗುತ್ತಾಳೆ.

ಇನ್ನು ಇದರ ಜೊತೆಗೆ ಕೆಲವೊಂದು ಆಚಾರ ವಿಚಾರಗಳನ್ನು ಪದ್ದತಿಯನ್ನು ಮನೆಯಲ್ಲಿ ಪಾಲಿಸಬೇಕಾಗುತ್ತದೆ ಮತ್ತು ಮತ್ತೊಂದು ವಿಚಾರವೇನೆಂದರೆ ಯಾರೋ ಮನೆಯಲ್ಲಿಯೇ ಕೆಲವೊಂದು ಪುಣ್ಯ ಕಾರ್ಯಕ್ರಮಗಳನ್ನು ಮಾಡುತ್ತಾರೆ

ಅವರಿಗೆ ದೇವರ ಆಶೀರ್ವಾದ ಯಾವಾಗಲೂ ಕೂಡ ಇದ್ದೇ ಇರುತ್ತದೆ ಮತ್ತು ಪರಿಸರದಲ್ಲಿರುವ ಪ್ರಾಣಿ ಪಕ್ಷಿಗಳಿಗೆ ಆಹಾರವನ್ನು ನೀಡುವುದು ಉದಾಹರಣೆಗೆ ಕಪ್ಪು ಇರುವೆಗೆ ಸಕ್ಕರೆ ಹಾಕುವುದು

ಮತ್ತು ಗೋವಿಗೆ ಆಹಾರವನ್ನು ನೀಡುವುದು ಈ ರೀತಿಯ ಕೆಲವೊಂದು ಕ್ರಮಗಳನ್ನು ಪಾಲಿಸಬೇಕು ಇದರಿಂದ ದೇವರ ಆಶೀರ್ವಾದ ಯಾವಾಗಲೂ ಸದಾಕಾಲ ನಮ್ಮ ಮೇಲೆ ಇರುತ್ತದೆ.

ಇದರ ಜೊತೆಗೆ ಮನೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ದೀಪಾರಾಧನೆಯನ್ನು ತಪ್ಪದೆ ಮಾಡಬೇಕು ಈ ದೀಪಾರಾಧನೆಯನ್ನು ಮಾಡುವುದರಿಂದ ಮನೆಯಲ್ಲಿ ನಡೆಯುವ ಪಾಪಕರ್ಮಗಳು ತೀರಿಹೋಗುತ್ತದೆ

ಅನ್ನೋ ಸಂಕೇತವಾಗಿರುತ್ತದೆ ಆದುದರಿಂದ ತಪ್ಪದೆ ಮನೆಯಲ್ಲಿ 2ಬಾರಿ ದೀಪಾರಾಧನೆಯನ್ನು ಮಾಡಲೇಬೇಕು ಸಂಜೆಯ ಸಮಯದಲ್ಲಿ ದೇವರ ನಾಮಸ್ಮರಣೆ ಮಾಡುವುದು ಈ ರೀತಿಯ ಪುಣ್ಯ ಕಾರ್ಯಗಳನ್ನು ಮಾಡಬೇಕು.

ಯಾವ ಕೆಲವೊಂದು ಕೆಲಸಗಳನ್ನು ಮಾಡಬಾರದು ಅಂತ ಕೂಡ ಶಾಸ್ತ್ರಿಗಳಲ್ಲಿ ತಿಳಿಸಿದೆ ಅದೇನೆಂದರೆ ಸಂಜೆ ಸೂರ್ಯಾಸ್ತದ ಸಮಯದಲ್ಲಿ ಊಟ ಮಾಡುವುದು ಅಥವಾ ಮನೆಯಲ್ಲಿ ಜಗಳ ಮಾಡುವುದು

ಸಂಜೆ ಸಮಯದಲ್ಲಿ ಮಲಗುವುದು ಅಥವಾ ಮನೆಯಲ್ಲಿ ಸಂಜೆ ಸಮಯದಲ್ಲಿ ದಂಪತಿಗಳು ಸೇರುವುದು ಇಂತಹ ಕೆಲಸಗಳನ್ನು ಮಾಡಬಾರದು ಇದರ ಜೊತೆಗೆ ಸೂರ್ಯ ಉದಯದ ನಂತರ ಮನೆಯಲ್ಲಿ ಯಾವುದೇ ಕಾರಣಕ್ಕೂ ಮಲಗಬಾರದು.

ಹೀಗೆ ಕೆಲವೊಂದು ಪದ್ಧತಿಗಳನ್ನು ಕ್ರಮಬದ್ಧವಾಗಿ ಪಾಲಿಸಿಕೊಂಡು ಬರಲೇಬೇಕು ಮತ್ತು ಮನೆಯಲ್ಲಿ ದೀಪಾರಾಧನೆಯನ್ನು ಮಾಡುವಾಗ ತುಪ್ಪ ಅಥವಾ ಎಳ್ಳೆಣ್ಣೆಯನ್ನು ಬಳಸಿ ದೀಪಾರಾಧನೆಯನ್ನು ಮಾಡುವುದು ತುಂಬಾ ಉತ್ತಮವಾದ ಕೆಲಸ ಆಗಿರುತ್ತದೆ

ಈ ರೀತಿ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳುವುದಕ್ಕಾಗಿ ಮತ್ತು ಲಕ್ಷ್ಮೀದೇವಿ ಮನೆಯಲ್ಲಿ ಸ್ಥಿರ ನಿವಾಸ ವಾಗಬೇಕೆಂದರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಬೇಕೆಂದರೆ ಮನೆಯನ್ನು ಶುಭ್ರವಾಗಿಟ್ಟುಕೊಳ್ಳುವುದು ಇವೆಲ್ಲವನ್ನೂ ಕೂಡ ಮಾಡುವುದರಿಂದ ಸಿರಿಸಂಪತ್ತು ಒಲಿಯುತ್ತದೆ

ಅದಲ್ಲದೆ ಮನೆಯಲ್ಲಿ ಯಾವಾಗಲೂ ಅಳುತ್ತಾ ಇರುವುದು ಅಥವಾ ಬೇಸರದಿಂದ ಇರುವುದು ಅವಾಚ್ಯ ಪದಗಳಿಂದ ಮಾತನಾಡುವುದು ಇವೆಲ್ಲ ದಾರಿದ್ರ್ಯದ ಸಂಕೇತ ಆಗಿರುತ್ತದೆ. ಆ ಮನೆಯಲ್ಲಿ ಯಾವಾಗಲೂ ಕೂಡ ದಾರಿದ್ರ್ಯವೂ ನೆಲೆಸಿರುತ್ತದೆ ನೆಮ್ಮದಿ ಎನ್ನುವುದು ಅಂತಹ ಮನೆಗಳಲ್ಲಿ ಇರುವುದಿಲ್ಲ ಎಷ್ಟೇ ಹಣ ಒಲಿದು ಬಂದರೂ ಆ ಮನೇಲಿ ಯಾವತ್ತಿಗೂ ಸುಖ ಶಾಂತಿ ನೆಮ್ಮದಿ ನೆಲೆಸುವುದಿಲ್ಲ.

ಆದ್ದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಿರಬೇಕೆಂದರೆ ತಪ್ಪದೆ ಮನೆಯಲ್ಲಿ ಸೂರ್ಯಸ್ತದ ಸಮಯದಲ್ಲಿ ಅಥವಾ ಸೂರ್ಯೋದಯದ ಸಮಯದಲ್ಲಿ ಪಾಲಿಸಬೇಕಾಗಿರುವ ಕ್ರಮವನ್ನು ತಪ್ಪದೆ ಪಾಲಿಸಿ ಮನೆಯಲ್ಲಿ ದೀಪಾರಾಧನೆಯನ್ನು ಮಾಡುವುದನ್ನು ಎಂದಿಗೂ ತಪ್ಪಿಸಲೇ ಬೇಡಿ ಧನ್ಯವಾದ.

Leave a Reply

Your email address will not be published.