ಈ ಒಂದು ಮಂತ್ರವನ್ನು ನೀವು ದಿನನಿತ್ಯ ಪಠಿಸಿದರೆ ನಿಮಗೆ ಆರೋಗ್ಯ ಶಾಂತಿ ಸಿಗುವುದರ ಜೊತೆಗೆ ಅಖಂಡ ಜಯ ನಿಮ್ಮದಾಗುತ್ತದೆ !!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮ್ಮ ಸಂಪ್ರದಾಯದಲ್ಲಿ ಮಂತ್ರ ಪಠಣೆಗೆ ಒಂದು ವಿಶೇಷವಾದ ಸ್ಥಾನಮಾನವನ್ನು ನೀಡಲಾಗಿದೆ, ಕೆಲವೊಂದು ಮಂತ್ರಗಳನ್ನು ಪ್ರತಿನಿತ್ಯ ಜಪಿಸುವುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ಕೂಡ ಹೇಳಲಾಗಿದೆ,

ಇಂದಿನ ಮಾಹಿತಿಯಲ್ಲಿ ನಾನು ನಿಮಗೆ ಒಂದು ಮಂತ್ರ ಪಠನೆ ಮಾಡುವುದನ್ನು ತಿಳಿಸಿಕೊಡುತ್ತೇವೆ ಇದನ್ನು ನೀವು ಪ್ರತಿನಿತ್ಯ ಪಠಿಸುತ್ತಾ ಬರುವುದರಿಂದ ನಿಮ್ಮ ಆರೋಗ್ಯ ಸಮಸ್ಯೆಗಳು ನಿವಾರಣೆಗೊಳ್ಳಲಿದೆ.

ಅದು ಹೇಗೆ ಎಂಬುದನ್ನು ನಾನು ಇಂದಿನ ಮಾಹಿತಿಯಲ್ಲಿ ಕೂಡ ವಿವರಿಸಿ ಹೇಳುತ್ತೇನೆ ತಪ್ಪದೆ ಸಂಪೂರ್ಣ ಮಾಹಿತಿಯನ್ನು ತಿಳಿದು, ಪ್ರತಿಯೊಬ್ಬರಿಗೂ ಇದನ್ನು ಶೇರ್ ಮಾಡಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

“ಮನನಾತ್ ತಾಯತೇ ಇತಿ ಮಂತ್ರ” ಎಂಬ ಮಾತಿನಂತೆ ಎಲ್ಲಿ ಮಂತ್ರ ಪಠನೆ ಮಾಡಲಾಗುತ್ತದೆ ಅಲ್ಲಿ ಮನವನ್ನು ರಕ್ಷಣೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ ಆದ ಕಾರಣ ಪ್ರತಿ ದಿನ ನಾವು ಪೂಜೆ ಮಾಡುವಾಗ ಅಥವಾ ಬೆಳಿಗ್ಗೆ ಎದ್ದ ಕೂಡಲೇ ಸೂರ್ಯನನ್ನು ನೋಡುತ್ತಾ ಸೂರ್ಯ ನಮಸ್ಕಾರದ ವೇಳೆ ಕೆಲವೊಂದು ಮಂತ್ರವನ್ನು ಪಠಿಸುತ್ತಾ ಬರುವುದರಿಂದ ನಮ್ಮ ಆರೋಗ್ಯ ಸಮಸ್ಯೆ ನಿವಾರಣೆಯಾಗುತ್ತದೆ.

ಹಾಗೆ ಈ ಮಂತ್ರವನ್ನು ಪಠಿಸುವಾಗ ಪೂರ್ಣ ಏಕಾಗ್ರತೆಯನ್ನು ಹೊಂದಿರಬೇಕಾಗುತ್ತದೆ ಆಗಲೇ ಮಂತ್ರದ ಶಕ್ತಿ ನಮ್ಮ ಆರೋಗ್ಯವನ್ನು ವೃದ್ಧಿಸಲು ಸಾಧ್ಯ.

ಹಾಗಾದರೆ ಈ ಚಿಕ್ಕ ಮಂತ್ರವನ್ನು ನೀವು ನೆನಪಿನಲ್ಲಿಟ್ಟುಕೊಂಡು ಪ್ರತಿನಿತ್ಯ ಪಠಿಸುತ್ತಾ ಬನ್ನಿ ಆ ಮಂತ್ರ ಯಾವುದು ಅಂದರೆ ” ಸರ್ವೇ ಭವಂತು ಸುಖಿನಃ। ಸರ್ವೇ ಸಂತು ನಿರಾಮಯಃ। ಸರ್ವೇ ಭದ್ರಾನಿ ಪಶ್ಯಂತು ಮಾಕಸ್ಚಿದುಃಖ ಭಾಗ್ಧವೇತ್”

ಈ ಮಂತ್ರವನ್ನು ನೀವು ಬಾಯಿಬಿಟ್ಟು ಪಠನೆ ಮಾಡಬೇಕಾಗುತ್ತದೆ ಈ ಮಂತ್ರವನ್ನು ನೀವು ಪಠಿಸುವಾಗ ಏಕಾಗ್ರತೆಯಿಂದ ಪಠಿಸಿ ಜೊತೆಗೆ ಇದನ್ನು ನೀವು ಮನಸ್ಸಿನಲ್ಲಿಯೇ ಹೇಳಿಕೊಳ್ಳುವುದಕ್ಕಿಂತ ಬಾಯಿಬಿಟ್ಟು ಪಠನೆ ಮಾಡುವುದರಿಂದ ಅದರಲ್ಲಿಯೂ ಪದಗಳನ್ನು ಸ್ಪಷ್ಟವಾಗಿ ಉಚ್ಚರಿಸುವುದರಿಂದ ಆಗುತ್ತದೆ.

ಅನೇಕ ಲಾಭಗಳು, ಜೊತೆಗೆ ಈ ಮಂತ್ರವನ್ನು ಶಬ್ದ ಸಮೇತ ಸ್ಪಷ್ಟವಾಗಿ ಪಠಿಸುತ್ತಾ ಬರುವುದರಿಂದ, ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಎದುರಾಗುವುದಿಲ್ಲ ಹಾಗೆ ಆರೋಗ್ಯ ಸಮಸ್ಯೆಗಳು ಕೂಡ ನಿವಾರಣೆ ಆಗುತ್ತ ಬರುತ್ತದೆ.

ನಾನು ಈ ಮಾಹಿತಿಯಲ್ಲಿ ತಿಳಿಸಿಕೊಟ್ಟ ಮಂತ್ರವನ್ನೇ ಪಡಿಸಬೇಕು ಅಂತ ಏನೂ ಅಲ್ಲ ನಿಮ್ಮ ಇಷ್ಟದೇವರನ್ನು ನೀವು ಪ್ರತಿನಿತ್ಯ ನಿಮ್ಮ ಮನಸ್ಸಿನಲ್ಲಿ ಪಠಿಸುತ್ತಾ ಇರಬೇಕು ಈ ರೀತಿ ಇಷ್ಟದೇವರನ್ನು ಪಠಿಸುತ್ತಿರುವ ನಿಮ್ಮ ಮನವು ಶುದ್ಧವಾಗುತ್ತದೆ ನಿಮ್ಮ ಮನಸ್ಸು ಬೇರೆ ಕಡೆ ವಾಲುವುದಿಲ್ಲ ನೀವು ಚಂಚಲರಾಗದೆ ನಿಮ್ಮ ಕೆಲಸಗಳನ್ನು ನಿರ್ವಹಿಸಲು ಸಹಕಾರಿಯಾಗುತ್ತದೆ ಕೆಲವೊಂದು ಮಂತ್ರಗಳು.

ಆದ್ದರಿಂದಲೇ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠವನ್ನು ಶುರು ಮಾಡುವುದಕ್ಕಿಂತ ಮೊದಲು ಪ್ರಾರ್ಥನೆಯನ್ನು ಮಾಡಿಸಲಾಗುತ್ತದೆ, ಇದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ, ಇಂದಿನ ಒತ್ತಡದ ಜೀವನದಲ್ಲಿ ಜನರು ಒತ್ತಡದ ಸಮಸ್ಯೆಗಳಿಗೆ ಮಾತ್ರ ಏನು ತೆಗೆದುಕೊಳ್ಳುತ್ತಾರೆ ಆದರೆ ಕೆಲವೊಂದು ಮಂತ್ರ ಪಠಣೆಯಿಂದ ಮನಸ್ಸಿನ ನೆಮ್ಮದಿಯನ್ನು ಸಾಧಿಸಲು ಸಾಧ್ಯವಾಗುತ್ತದೆ.

ಆದ್ದರಿಂದ ದೊಡ್ಡವರೇ ಆಗಲಿ ಚಿಕ್ಕವರೇ ಆಗಲಿ, ಕೆಲವೊಂದು ಮಂತ್ರ ಪಠಣೆ ಮಾಡಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ, ಎಲ್ಲವೂ ಕೂಡ ಔಷಧಿಯಿಂದಲೂ ಸರಿ ಹೋಗಬೇಕೆಂದರೆ ಅದು ಸಾಧ್ಯವಾಗದ ಮಾತು, ಆದ ಕಾರಣ ಮಂತ್ರ ಪಠನೆಯನ್ನು ಮಾಡಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ.

ಇಂದಿನ ಮಾಹಿತಿ ನಿಮಗೆ ಪ್ರಯೋಜನಕಾರಿ ಆಗಿದ್ದರೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮುಖಾಂತರ ತಿಳಿಸಿ ಹಾಗೆ ಪ್ರತಿಯೊಬ್ಬರಿಗು ಮಾಹಿತಿಯನ್ನು ಶೇರ್ ಮಾಡಿ ಹಾಗೂ ಲೈಕ್ ಮಾಡಿ. ಇನ್ನೂ ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಧನ್ಯವಾದ.

Leave a Reply

Your email address will not be published.