ಹಲ್ಲಿ ನಿಮ್ಮ ಮೈ ಮೇಲೆ ಬಿದ್ದರೆ ನಿಮ್ಮ ಜೀವನದಲ್ಲಿ ಯಾವ ರೀತಿಯ ಘಟನೆಗಳು ನಡೆಯುತ್ತವೆ ಗೊತ್ತಾ !!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮನೆಔಷಧಿ ಮಾಹಿತಿ

ಸ್ನೇಹಿತರೆ ಸಾಮಾನ್ಯವಾಗಿ ನಾವು ದಿನನಿತ್ಯ ಶಕುನಗಳನ್ನು ಅವಲಂಬಿಸಿ ಜೀವನವನ್ನು ಮಾಡುತ್ತೇವೆ ಜೀವನದಲ್ಲಿ ಹಲವಾರು ಘಟನೆಗಳು ಹೇಗೆ ನಡೆಯುತ್ತವೆ ಎಂದರೆ ಅದು ಶಕುನಗಳ ಆಧಾರದ ಮೇಲೆ ನಡೆಯುತ್ತವೆ.

ಅದರಲ್ಲೂ ಕೂಡ ಹಲ್ಲಿಯೆ ಶಕುನದ ರಾಜ ಎಂದು ಕರೆಯಲಾಗುತ್ತದೆ. ಗೌಳಿ ಪಂಚಾಂಗದಲ್ಲಿ ಹೇಳಿರುವ ರೀತಿ ಶಕುನ ಎಂದರೆ ಮುಖ್ಯವಾಗಿ ಹಲ್ಲಿಯನ್ನು ನಾವು ಗಮನದಲ್ಲಿ ಇಟ್ಟುಕೊಳ್ಳಬಹುದು ಹಲ್ಲಿ ಅನ್ನು ನಾವು ಪ್ರತಿನಿತ್ಯವೂ ಕೂಡ ನಮ್ಮ ಮನೆಯಲ್ಲಿ ಕಾಣುತ್ತೇವೆ.

ಈ ಹಲ್ಲಿ ನಮ್ಮ ಮೇಲೆ ಬಿದ್ದರೆ ಯಾವ ರೀತಿಯಾದಂತಹ ಪರಿಣಾಮ ಆಗುತ್ತದೆ ಎಂಬುದೂ ನಮ್ಮ ಗಮನದಲ್ಲಿ ಇರುವುದಿಲ್ಲ. ಅದರಲ್ಲೂ ಕೂಡ ಮಹಿಳೆ ಮತ್ತು ಪುರುಷರಿಗೆ ವಿಭಿನ್ನವಾಗಿ ಹಲ್ಲಿ ಶಕುನಗಳನ್ನು ಹೇಳುತ್ತದೆ. ಆದರೆ ಅದು ಹಲವರಿಗೆ ತಿಳಿದಿಲ್ಲ ಈ ಕುರಿತು ನಾವು ಈ ದಿನ ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ.

ಸಾಮಾನ್ಯವಾಗಿ ದೇಹದ ಎಡಭಾಗದಲ್ಲಿ ಮಹಿಳೆಯರಿಗೆ ಬಿದ್ದರೆ ತುಂಬಾ ಒಳ್ಳೆಯದು ಅದೇ ರೀತಿ ದೇಹದ ಬಲಭಾಗದಲ್ಲಿ ಗಂಡು ಮಕ್ಕಳಿಗೆ ಬಿದ್ದರೆ ಅದು ತುಂಬಾ ಒಳ್ಳೆಯದು.

ಅದನ್ನು ಹೊರತು ಪಡಿಸಿ ದೇಹದ ಯಾವ ಯಾವ ಭಾಗದ ಮೇಲೆ ಬಿದ್ದರೆ ಹೆಣ್ಣುಮಕ್ಕಳಿಗೆ ಯಾವ ರೀತಿಯಾದಂತ ಫಲವಿದೆ ಮತ್ತು ಗಂಡು ಮಕ್ಕಳಿಗೆ ಯಾವ ರೀತಿಯಾದಂಥ ಫಲವಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ದಿನವು ನಿಮಗೆ ನೀಡಲಿದ್ದೇವೆ.

ಹೆಣ್ಣು ಮಕ್ಕಳಿಗೆ ಯಾವ ರೀತಿಯಾದಂತಹ ಲಾಭ ನಷ್ಟಗಳು ಎಂಬ ಮಾಹಿತಿಯನ್ನ ಈ ಕೆಳಗಿನಂತೆ ನೋಡೋಣ ಹೆಣ್ಣು ಮಕ್ಕಳ ಕೂದಲ ಮೇಲೆ ಬಿದ್ದರೆ ಅವರಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತದೆ

ಮತ್ತು ಮೊಣ ಕಾಲಿನ ಹಿಂಭಾಗದ ಮೇಲೆ ಬಿದ್ದರೆ ಯಾರಾದರೂ ಸಂದರ್ಶನಕ್ಕೆ ಆಗಮಿಸುತ್ತಾರೆ ಮತ್ತು ಹೆಣ್ಣುಮಕ್ಕಳ ಎಡಗಣ್ಣಿನ ಮೇಲೆ ಬಿದ್ದರೆ ನಿರೀಕ್ಷಿತ ವ್ಯಕ್ತಿಯಿಂದ ಪ್ರೀತಿ ಸಿಗುತ್ತದೆ. ಅದೇ ರೀತಿ ಬಲಗಣ್ಣಿನ ಮೇಲೆ ಬಿದ್ದರೆ ಮಾನಸಿಕ ಒತ್ತಡ ಹೆಚ್ಚಾಗುತ್ತದೆ

ಎದೆ ಭಾಗದ ಮೇಲೆ ಬಿದ್ದರೆ ಒಳ್ಳೆಯ ಶಕುನ ಪ್ರಾಪ್ತಿಯಾಗುತ್ತದೆ. ಬಲ ಕೆನ್ನೆಯ ಮೇಲೆ ಬಿದ್ದರೆ ಗಂಡುಮಗು ಪ್ರಾಪ್ತಿಯಾಗುತ್ತದೆ ಅದೇ ರೀತಿ ಬಲ ಕಿವಿಯ ಮೇಲೆ ಬಿದ್ದರೆ ಹಣಕಾಸಿನ ಲಾಭವಾಗುತ್ತದೆ.

ಮೇಲ್ದುಟಿಯ ಮೇಲೆ ಬಿದ್ದರೆ ವಿವಾದಗಳಿಗೆ ಸಿದ್ಧರಾಗಬೇಕು, ಅದೇ ರೀತಿ ಕೆಳ ತುಟಿಯ ಮೇಲೆ ಬಿದ್ದರೆ ಹೊಸ ವಸ್ತುಗಳನ್ನು ಖರೀದಿಸ ಬಹುದು ಎರಡೂ ತುಟಿಯ ಮೇಲೆ ಬಿದ್ದರೆ ತೊಂದರೆಗಳನ್ನು ಎದುರಿಸಲು ನೀವು ತಯಾರಾಗಬೇಕು. ಈ ರೀತಿ ಇನ್ನೂ ಹತ್ತು ಹಲವಾರು ಶಕುನಗಳನ್ನು ಹೇಳಲಾಗಿದೆ.

ಅದರ ಜೊತೆಯಲ್ಲಿ ಗಂಡು ಮಕ್ಕಳಿಗೆ ತಲೆಯ ಮೇಲ್ಭಾಗದ ಮೇಲೆ ಬಿದ್ದರೆ ಸಾವಿನ ಭಯ ಕಾಡುತ್ತಿರುತ್ತದೆ ಎಡಗಣ್ಣಿನ ಮೇಲೆ ಬಿದ್ದರೆ ಒಳ್ಳೆಯ ಸೂಚನೆ ಅದೇ ರೀತಿ ಬಲಗಣ್ಣಿನ ಮೇಲೆ ಬಿದ್ದರೂ ಕೂಡ ಅದು ಒಳ್ಳೆಯ ಸೂಚನೆಯೆ ಹಣೆಯ ಮೇಲೆ ಬಿದ್ದರೆ ಬೇರ್ಪಡಿಕೆ ಆರಂಭವಾಗಿದೆಯೆಂದು

ಬಲ ಕೆನ್ನೆಯ ಮೇಲೆ ಬಿದ್ದರೆ ದುಖಃ ಪ್ರಾಪ್ತಿಯಾಗಿದೆ ಎಡ ಕಿವಿಯ ಮೇಲೆ ಬಿದ್ದರೆ ಲಾಭದಾಯಕ ಅಂದರೆ ಆದಾಯದಲ್ಲಿ ನೀವು ಲಾಭವನ್ನ ಗಳಿಸುವಿರಿ ಮೇಲಿನ ತುಟಿ ಮೇಲೆ ಬಿದ್ದರೆ ವಿವಾದಕ್ಕೆ ಸಿಲುಕುವಿರಿ ಎರಡೂ ತುಟಿಯ ಮೇಲೆ ಬಿದ್ದರೆ ಕೆಟ್ಟ ಆರೋಗ್ಯದ ಭಯ ನಿಮ್ಮನ್ನು ಕಾಡುತ್ತಿರುತ್ತದೆ

ಮಣಿಕಟ್ಟಿನ ಮೇಲೆ ಬಿದ್ದರೆ ಹೊಸ ಮಾರ್ಪಾಡು ಆರಂಭವಾಗುತ್ತದೆ ತೋಳಿನ ಮೇಲೆ ಬಿದ್ದರೆ ಆರ್ಥಿಕ ನಷ್ಟ ಬೆರಳಿನ ಮೇಲೆ ಬಿದ್ದರೆ ತೊಂದರೆ ಹೀಗೆ ಇನ್ನೂ ಹತ್ತು ಹಲವಾರು ಶಕುನಗಳನ್ನು ನಾವು ಗಮನಿಸಬಹುದಾಗಿದೆ ಧನ್ಯವಾದಗಳು.

Leave a Reply

Your email address will not be published.