ನಿಮಗೇನಾದರೂ ದಿನ ದಾಳಿಂಬೆ ತಿನ್ನುವ ಅಭ್ಯಾಸ ಇದ್ದರೆ ಮೊದಲು ಇಲ್ಲಿ ಓದಿ..!!

ಅರೋಗ್ಯ

ಯಾವುದೇ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ಆ ಕಾಲದಲ್ಲಿ ಸಿಹಿ ದಾಳಿಂಬೆ ಹಣ್ಣನ್ನು ಸೇವಿಸುತ್ತ ಬಂದಲ್ಲಿ ರೋಗದಿಂದ ಬೇಗ ಮುಕ್ತರಾಗಬಹುದು ಸಿಹಿ ದಾಳಿಂಬೆ ಹಣ್ಣಿನ ರಸ ಪಿತ್ತ ಶಾಮಕ ಗುಣವುಳ್ಳದ್ದು ದೇಹಕ್ಕೆ ಶಕ್ತಿಯನ್ನು ಕೊಡುವುದು ಹೃದಯ ಯಕೃತ್ತು ಮತ್ತು ಮೂತ್ರ ಪಿಂಡಗಳ ಕ್ರಿಯೆಗೆ ಚೈತನ್ಯ ತಂದು ಕೊಡುವುದು ಮತ್ತು ರೋಗಿಯಲ್ಲಿ ಪ್ರಬಲ ರೋಗ ನಿರೋಧಕ ಶಕ್ತಿಯನ್ನು ಬೆಳೆಸುವುದು.

ಒಂದು ಊಟದ ಚಮಚ ಹುಳಿ ದಾಳಿಂಬೆ ಹಣ್ಣಿನ ರಸವನ್ನು ಅಷ್ಟೇ ಪ್ರಮಾಣ ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಹಲವಾರು ಶರೀರ ಸಂಬಂಧ ರೋಗಗಳು ಗುಣವಾಗುವುದು ಮಾನಸಿಕ ಒತ್ತಡ ಮತ್ತು ನರಗಳ ದೌರ್ಬಲ್ಯದಿಂದ ತಲೆದೋರುವ ತಲೆಶೂಲೆಗೆ ಇದು ಅತ್ಯುತ್ತಮ ಚಿಕಿತ್ಸೆ ಈ ಹಣ್ಣಿನ ರಸ ದೃಷ್ಟಿ ದೋಷಗಳನ್ನು ನಿವಾರಿಸಬಲ್ಲದು.

ಪಿತ್ತಾದಿಕ್ಯದಿಂದ ನರಗಳು ರೋಗಿಗಳು ಹುಳಿ ದಾಳಿಂಬೆಯನ್ನು ಸೇವಿಸುವುದರಿಂದ ಪಿತ್ತ ಪ್ರಕೋಪಗಳುವ ಸಂಭವಉಂಟು.

ದಾಳಿಂಬೆ ಹಣ್ಣಿನ ಬೀಜಗಳನ್ನು ಅಗಿದು ನುಂಗಿದರೂ ಸರಿಯೇ ಅಥವಾ ಉಗುಳಿದರೂ ಸರಿಯೇ ಆದರೆ ಬೀಜಗಳನ್ನು ಉಂಡೆಯಾಗಿ ನುಂಗಿದರೆ ಆರೋಗ್ಯ ಕೇಡುವುದು.

ದಾಳಿಂಬೆ ಹಣ್ಣಿನ ಬೀಜಗಳನ್ನು ಚೆನ್ನಾಗಿ ಅರೆದು ನೀರಿನೊಂದಿಗೆ ಕುದಿಸುವುದರಿಂದ ಆಮಶಂಕೆ ಅತಿಸಾರ ಹತೋಟಿಗೆ ಬರುವುದು.

ದಾಳಿಂಬೆ ಹಣ್ಣಿನಿಂದ ಬೀಜಗಳನ್ನು ತಿಳಿದುಕೊಂಡ ನಂತರ ಉಳಿಯುವ ದಿಂಡು ಆಮಶಂಕೆ ಮತ್ತು ಅತಿಸಾರ ತಡೆಗಟ್ಟಲು ಸಿದ್ಧೌಷಧಿ ದಿಂಡಿನ ಕಷಾಯವನ್ನು ಮೆಂತ್ಯದ ಕಷಾಯದೊಂದಿಗೆ ಮಿಶ್ರಮಾಡಿ ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಗುಣವಾಗುವುದು ಈ ದಿಂಡಿನ ಕಷಾಯಕ್ಕೆ ಅಡುಗೆ ಉಪ್ಪು ಸೇರಿಸಿ ಬಾಯಿಗ ಮುಕ್ಕಳಿಸಿದರೆ ಗಂಟಲು ನೋವು ಹಲ್ಲು ನೋವು ಬಾಯಿಹುಣ್ಣು ಗುಣವಾಗುವುದು.

ದಾಳಿಂಬೆ ಚಿಗುರನ್ನು ಹಲ್ಲುಗಳಿಂದ ಆಗಿರುವುದರಿಂದ ವಸಡಿನಿಂದಾಗುವ ರಕ್ತಸ್ರಾವ ನಿಲ್ಲುವುದು ಹಲ್ಲು ನೋವು ಕಡಿಮೆಯಾಗುವುದು.

ದಾಳಿಂಬೆ ಎಲೆಗಳನ್ನು ನುಣ್ಣಗೆ ಅರೆದು ಸುಟ್ಟಗಾಯಕ್ಕೆ ಲೇಪಿಸಿದರೆ ಉರಿ ಶಾಂತವಾಗುವುದು ಇದನ್ನು ಮೈಗೆ ಹಚ್ಚುವುದರಿಂದ ಚರ್ಮ ರೋಗಗಳ ನಿಮಿತ್ತ ದೇಹದಲ್ಲಿ ಹುಟ್ಟುವ ದುರ್ಗಂಧ ನಿವಾರಣೆಯಾಗುವುದು.

Leave a Reply

Your email address will not be published.