ಪೂಜಾ ಮಂದಿರದಲ್ಲಿ ದೇವರಿಗೆ ಇಟ್ಟಿರುವ ಹೂಗಳಿಂದ ಹೀಗೆ ಮಾಡಿದರೆ ಕೋಟ್ಯಾಧಿಪತಿ ಆಗುತ್ತೀರಿ!!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಪೂಜೆಯನ್ನು ಮಾಡ್ತಾರೆ ಈ ಪೂಜೆ ಮಾಡುವಾಗ ದೇವರನ್ನು ಅಲಂಕಾರ ಮಾಡುವುದು ಒಂದು ವಿಧಾನ ಆಗಿರುತ್ತದೆ ಮತ್ತು ದೇವರ ಪೂಜೆಯಲ್ಲಿ ದೇವರಿಗೆ ಅಲಂಕಾರ ಮಾಡುವುದು ನಮ್ಮ ಒಂದು ಪದ್ಧತಿಯು ಕೂಡ ಆಗಿದೆ.

ಪೂಜೆ ಮಾಡುವಂತಹ ಸಮಯದಲ್ಲಿ ನಾವು ಹೂವುಗಳನ್ನು ಬಳಸಿ ಪೂಜೆಯನ್ನು ಮಾಡ್ತೇವೆ. ಈ ಹೂವುಗಳನ್ನು ದೇವರಿಗೆ ಸಮರ್ಪಿಸಿ ದೇವರ ಫೋಟೋಗೆ ದೇವರ ಮೂರ್ತಿಗೆ ಅಲಂಕಾರ ಮಾಡ್ತೇವೆ

ಹಾಗೆ ನಾವು ಕೆಲವೊಂದು ದೇವರುಗಳಿಗೆ ಪ್ರತ್ಯೇಕವಾದ ಬಣ್ಣದ ಹೂವುಗಳನ್ನು ಸಮರ್ಪಿಸುವುದರಿಂದ ದೇವರು ಪ್ರಸನ್ನರಾಗಿ ನಮಗೆ ನಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಅನ್ನೋ ಒಂದು ನಂಬಿಕೆಯೂ ಕೂಡ ಇದೆ.

ಈ ಮೇಲೆ ತಿಳಿಸಿದ ಹಾಗೆ ದೇವರಿಗೆ ಪ್ರತ್ಯೇಕವಾದ ಬಣ್ಣದ ಹೂವುಗಳನ್ನು ಸಮರ್ಪಿಸುವುದರಿಂದ ನಮ್ಮ ಪಾಪ ಕರ್ಮಗಳು ಮತ್ತು ನಮ್ಮ ಜೀವನದಲ್ಲಿ ಕೆಲವೊಂದು ದೋಷಗಳು ಕೂಡ ನಿವಾರಣೆ ಆಗುತ್ತದೆ ಅಂತ ಹೇಳಲಾಗಿದ್ದು.

ನಾವು ದೇವರ ಪೂಜೆಯಲ್ಲಿ ಸಮರ್ಪಿಸುವಂತಹ ಹೂವುಗಳು ಬರೀ ದೇವರ ಅಲಂಕಾರಕ್ಕಾಗಿ ಮಾತ್ರ ಅಲ್ಲ ಅಥವಾ ದೇವರನ್ನು ಪ್ರಸನ್ನರಾಗಿ ಸುವುದಕ್ಕೆ ಮಾತ್ರ ಅಲ್ಲ ಕೆಲವರು ತಮ್ಮ ಇಷ್ಟಾರ್ಥಗಳನ್ನು ನೇರವೇರಿಸಿ ಕೊಳ್ಳುವುದಕ್ಕಾಗಿಯೇ ಕೂಡ ದೇವರಿಗೇ ಹೂವುಗಳನ್ನು ಸಮರ್ಪಣೆ ಮಾಡುವ ಮುಖಾಂತರ ತಮ್ಮ ಬೇಡಿಕೆಗಳನ್ನು ದೇವರ ಮುಂದೇ ಇಡುತ್ತಾರೆ.

ನಾವು ದೇವರ ಮೂರ್ತಿಗೆ ಅಥವಾ ದೇವರ ಪಟಕ್ಕೆ ಹೂವುಗಳನ್ನು ಇಟ್ಟು ಅಲಂಕಾರ ಮಾಡುವಾಗ ಬರೀ ದೇವರ ಫೋಟೋ ಮೇಲೆ ಮಾತ್ರ ಹೂವುಗಳನ್ನು ಇಡುತ್ತೇವೆ. ಆದರೆ ದೇವರ ಪಾದದ ಬಳಿಯೂ ಕೂಡ ಹೂವುಗಳನ್ನು ಇಟ್ಟು ಅಲಂಕರಿಸುವುದರಿಂದ ನಾವು ಸಮರ್ಪಿಸಿದಂತಹ ಹೂವುಗಳು ದೇವರ ಪಾದಾರ್ಪಣೆ ಆಗುತ್ತದೆ. ದೇವರು ಈ ರೀತಿಯಲ್ಲಿ ಕೂಡ ಪ್ರಸನ್ನರಾಗುತ್ತಾರೆ ನಮ್ಮ ಇಷ್ಟಾರ್ಥಗಳನ್ನು ನೆರವೇರಿಸುತ್ತಾರೆ.

ಅಷ್ಟೇ ಅಲ್ಲದೆ ದೇವರ ಪಾದಗಳಿಗೆ ಸಮರ್ಪಿಸಿ ದಂತಹ ಈ ಹೂವುಗಳನ್ನು ನಾವು ಹೇಗೆ ಬಳಸಿಕೊಳ್ಳಬೇಕು ಅಂದರೆ ದೇವರಿಗೆ ಪೂಜೆಯ ನಂತರ ಸಮರ್ಪಿತ ಮಾಡಿದಂತಹ ಈ ಹೂವುಗಳನ್ನು ನಾವು ಆಚೆ ಕೆಲಸಕ್ಕೆ ಹೋಗುವಾಗ ನಮ್ಮ ಬಳಿ ಒಂದು ಹೂವನ್ನು ಇಟ್ಟುಕೊಂಡು ಹೋಗಬೇಕು

ಹೌದು ಈ ರೀತಿ ದೇವರ ಪಾದಗಳಿಗೆ ಸಮರ್ಪಿಸಿ ದಂತಹ ಹೂವುಗಳನ್ನು ನಾವು ನಮ್ಮೊಟ್ಟಿಗೆ ಇಟ್ಟುಕೊಂಡು ಕೆಲಸ ಕಾರ್ಯಗಳಿಗೆ ತೆರಳುವುದರಿಂದ. ಆ ದೇವರ ಆಶೀರ್ವಾದ ನಮ್ಮೊಟ್ಟಿಗೆ ಇರುತ್ತದೆ.

ನಾವು ಮಾಡುವಂತಹ ಕೆಲಸ ಕಾರ್ಯಗಳು ಸುಸೂತ್ರವಾಗಿ ಜರಗುತ್ತದೆ. ಹೌದು ಕೆಲವರಿಗೆ ಅವರು ಹೋದಂತಹ ಕೆಲಸ ಕಾರ್ಯಗಳು ಯಾವುದಾದರೂ ಕಾರಣಗಳಿಂದ ವಿಘ್ನಗಳು ಆಗುತ್ತಾ ಇರುತ್ತದೆ

ಆಗ ನಾವು ದೇವರ ಆಶೀರ್ವಾದವನ್ನು ಪಡೆದುಕೊಂಡು ಕೆಲಸವನ್ನು ಮಾಡಿದರೆ ಆ ಕೆಲಸ ಕಾರ್ಯಗಳೆಲ್ಲ ಸುಸೂತ್ರವಾಗಿ ಜರಗಿ ಯಾವುದೆ ರೀತಿಯ ಅಡೆತಡೆಗಳು ಎದುರಾಗುವುದು ಇಲ್ಲ.

ನೀವು ಹೋಗುವಂತಹ ಕೆಲಸ ಕಾರ್ಯಗಳಲ್ಲಿ ಬಹಳಷ್ಟು ಅಡೆತಡೆಗಳು ಆಗುತ್ತಿದೆ ವಿಘ್ನಗಳೇ ಆಗುತ್ತಿದೆ ಅನ್ನುವುದಾದರೆ ನೀವು ಪೂಜೆ ಮಾಡುವಾಗ ದೇವರಿಗಾಗಿ ಸಮರ್ಪಿಸಿದ ಹೂವುಗಳ ನಿಮ್ಮೊಂದಿಗೆ ಇಟ್ಟುಕೊಳ್ಳಿ

ಅಂದರೆ ನೀವು ಪೂಜೆ ಮಾಡುವಾಗ ದೇವರ ಪಟಕ್ಕೆ ಹೇಗೆ ಹೂವುಗಳನ್ನು ಇರ್ತಾರೊ ಅದೇ ರೀತಿ ದೇವರ ಪಾದದ ಬಳಿಯಲ್ಲಿಯೂ ಕೂಡ ಹೂವುಗಳನ್ನು ಇಡಬೇಕು. ಪೂಜೆಯ ಬಳಿಕ ದೇವರ ಪ್ರಸಾದದ ರೀತಿಯಲ್ಲಿ ಈ ಪಾದದ ಬಳಿ ಇರುವಂತಹ ಒಂದು ಹೂವನ್ನು ತೆಗೆದುಕೊಂಡು ನಿಮ್ಮೊಟ್ಟಿಗೆ ಇಟ್ಟುಕೊಂಡು ಆಚೆ ಕೆಲಸ ಕಾರ್ಯಗಳಿಗೆ ತೆರಳುವುದರಿಂದ ನಿಮ್ಮ ಕೆಲಸಗಳು ಸಂಪೂರ್ಣವಾಗಿ ಜರುಗುತ್ತದೆ.

Leave a Reply

Your email address will not be published.