ದಿನಕೊಂದು ಕಿತ್ತಳೆ ತಿನ್ನುವ ಅಭ್ಯಾಸ ವಿದ್ದರೆವರಿಗೆ ಈ ರೋಗ ಅತ್ತಿರವು ಸುಳಿಯುವುದಿಲ್ಲಾ..!!

ಅರೋಗ್ಯ

ಕಿತ್ತಳೆ ಹಣ್ಣುಗಳು ಸರ್ವಶ್ರೇಷ್ಠ, ಈ ಹಣ್ಣನ್ನು ಸೇವಿಸುವುದರಿಂದ ಆಯಾಸ ಪರಿಹಾರ ಆಗುವುದು, ಬಾಯಾರಿಕೆ ನೀಗುವುದು, ಹಸಿವು ಕಾಣಿಸಿ ಕೊಳ್ಳುವುದು, ರಕ್ತ ವೃದ್ಧಿಯಾಗುವುದು, ಈ ಹಣ್ಣಿನ ರಸವನ್ನು ಎಲ್ಲಾ ವಯಸ್ಸಿನ ಜನರಿಗೂ ಯಾವುದೇ ಕಾಯಿಲೆಯಿಂದ ನರಳುತ್ತಿರುವ ರೋಗಿಗಳಿಗೂ ನಿರಂತರವಾಗಿ ಕೊಡಬಹುದು.

ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಮೃದುವಾಗಿ ಹಿಚುಕಿದಾಗ ಸುಗಂಧ ಯುಕ್ತವಾದ ದ್ರವ ಶ್ರವಿಸುವುದು, ಈ ಸಿಪ್ಪೆಯಿಂದ ಮುಖದ ಮೇಲೆ ಉಜ್ಜುತ್ತಿದ್ದರೆ ಮದುವೆಗಳು ಮಾಯವಾಗುತ್ತದೆ, ಕಪ್ಪು ಕಲೆಗಳು ಅದೃಶ್ಯವಾಗುತ್ತವೆ, ಚರ್ಮವ್ಯಾದಿಗಳಲ್ಲೂ ಇದು ಗುಣಕಾರಿ ಎಂದು ಕಂಡು ಬಂದಿದೆ.

ವಿಷಮ ಶೀತ ಜ್ವರ ಮತ್ತು ಕ್ಷಯ ರೋಗ ಪೀಡಿತದವರಿಗೆ ಕಿತ್ತಳೆ ಹಣ್ಣಿನ ರಸವನ್ನು ಅಗತ್ಯವಾಗಿ ಕೊಡಬೇಕು, ಇದು ದ್ರವ ರೂಪದ ಆಹಾರ, ಇದರ ಸೇವನೆ ಇಂದ ರೋಗ ನಿರೋಧಕ ಶಕ್ತಿ ಎಚ್ಚುವುದು.

ದಿನಕೊಂದು ಕಿತ್ತಳೆ ಹಣ್ಣು ಸೇವಿಸುವ ಅಭ್ಯಾಸ ಇಟ್ಟುಕೊಂಡರೆ ನಗಡಿ ಬರುವುದಿಲ್ಲ, ನಿತ್ಯ ಜೀವನದಲ್ಲಿ ಲವಲವಿಕೆ ಬರುವುದು, ನೆಗಡಿ, ಕೆಮ್ಮು, ದಮ್ಮು ರೋಗಿಗಳಿಗೆ ಒಂದು ಬಟ್ಟಲು ಹಣ್ಣಿನ ರಸಕ್ಕೆ ಒಂದು ಚಿಟಿಕೆ ಉಪ್ಪು ಮತ್ತು ಒಂದು ಊಟದ ಚಮಚ ಜೇನು ತುಪ್ಪ ಮಿಶ್ರ ಮಾಡಿ ಕೊಟ್ಟರೆ ಹೆಚ್ಚು ಪರಿಣಾಮ ಕಾರಿಯಾಗುವುದು.

ಹೃದಯ ದೌರ್ಬಲ್ಯ ಉಳ್ಳವರು ಈ ಹಣ್ಣನ್ನು ವಿಶೇಷವಾಗಿ ತಿನ್ನಬೇಕು, ಹೃದ್ರೋಗಿಗಳು ಜೇನುತುಪ್ಪದೊಂದಿಗೆ ಕಿತ್ತಳೆ ರಸ ಸೇವಿಸುವುದು ಉತ್ತಮ.

ಗರ್ಭಿಣಿಯರಿಗೆ ಕಿತ್ತಳೆ ಹಣ್ಣಿ ರಸ ಕೊಡುತ್ತಿದ್ದರೆ ಹೆರಿಗೆ ಸುಲಭವಾಗಿ ಆಗುವುದು, ತಾಯಿ ಮತ್ತು ಮಗು ಹೆಚ್ಚು ರೋಗ ನಿರೋಧಕ ಶಕ್ತಿ ಪಡೆಯುವರು.

ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ರುಚಿಯಾದ ಗೊಜ್ಜು ತಯಾರಿಸುವರು, ಸಣ್ಣ ಗಾತ್ರದ ವಿಶೇಷ ಜಾತಿಯ ಕಿತ್ತಳೆಹಣ್ಣನ್ನು ಉಪ್ಪಿನಕಾಯಿ ತಯಾರಿಕಲ್ಲು ಬಳಸ ಬಹುದು.

Leave a Reply

Your email address will not be published.