ಮಲೇರಿಯಾ ರೋಗಕ್ಕೆ ಒಂದು ನಿಂಬೆ ಬಳಸಿ ನಾವು ಹೇಳಿದ ಹಾಗೆ ಮಾಡಿ..!!

ಅರೋಗ್ಯ ಉಪಯುಕ್ತ ಮಾಹಿತಿ

ನಿಂಬೆಹಣ್ಣು ಜೀರ್ಣಶಕ್ತಿ ಹೆಚ್ಚಿಸುವುದು ದಾಹ ಇಂಗಿಸುವುದು ಬಳಸುವುದು, ಪಿತ್ತ ವಿಕಾರಗಳನ್ನು ಗುಣಪಡಿಸುವುದು ರಕ್ತ ದೋಷದಿಂದ ಪ್ರಾಪ್ತವಾಗುವ ಕಾಯಿಲೆಗಳಿಗೆ ಮಾರಕ ಪ್ರಾಯ ಆಗಿರುವುದು ಮಾದಕ ಪದಾರ್ಥಗಳನ್ನು ಸೇವಿಸುವುದರಿಂದ ಸಂಭವಿಸುವ ಶಾರೀರಿಕ ತೊಂದರೆಗಳನ್ನು ಶಾಂತಗೊಳಿಸುವುದು.

ನಿಂಬೆಹಣ್ಣು ಸಿ ಜೀವಸತ್ವದ ಬಂಡಾರ ನಸು ಹಳದಿ ಬಣ್ಣದ ಸಣ್ಣ ಗಾತ್ರದ ಗೋಲಾಕಾರದ ನಿಂಬೆ ಹಣ್ಣುಗಳು ಹೆಚ್ಚು ರಸಭರಿತ ವಾಗಿರುವುದಿಲ್ಲ ಆದರೂ ವೈದ್ಯಕೀಯ ದೃಷ್ಟಿಯಿಂದ ಈ ಬಗೆಯ ಹಣ್ಣುಗಳೇ ಉತ್ತಮ ಅನೇಕ ಸಾಮಾನ್ಯ ರೋಗಗಳನ್ನು ಗುಣಪಡಿಸಲು ನಿಂಬೆಹಣ್ಣನ್ನು ಮನೆಮದ್ದಾಗಿ ಬಳಸಬಹುದು.

ಒಂದು ಟೀ ಚಮಚ ನಿಂಬೆ ರಸಕ್ಕೆ ಅಷ್ಟೇ ಪ್ರಮಾಣ ಬಿಳಿ ಈರುಳ್ಳಿ ರಸ ಸೇರಿಸಿ ಪ್ರತಿದಿನ ಮೂರು ಬಾರಿ ಸೇವಿಸಿದರೆ ಮಲೇರಿಯಾ ರೋಗ ನಿವಾರಣೆಯಾಗುವುದು.

ಅಜೀರ್ಣವಾಗಿ ರುವಾಗ ಸ್ವಲ್ಪ ಜೀರಿಗೆ 1 ಟೀ ಚಮಚ ನಿಂಬೆರಸ ಮತ್ತು ಚಿಟಿಕೆ ಅಡುಗೆ ಸೋಡಾ ಬೆರೆಸಿ ಸೇವಿಸಿದರೆ ಶೀಘ್ರ ಗುಣ ಕಂಡು ಬರುವುದು.

ಗರ್ಭಿಣಿಯರು ಪ್ರತಿದಿನ ಒಂದು ಬಟ್ಟಲು ನಿಂಬೆ ಹಣ್ಣಿನ ಪಾನಕ ಸೇವಿಸುತ್ತಿದ್ದರೆ ಹೆಚ್ಚು ಕಷ್ಟವಿಲ್ಲದೆ ಹೆರಿಗೆಯಾಗುವುದು.

ಅಧಿಕ ಜ್ವರದಿಂದ ಬಾಯಾರಿಕೆ ಯಾಗುತ್ತಿದ್ದಾರೆ ಅಥವಾ ಬೇಸಿಗೆ ಕಾಲದಲ್ಲಿ ಅಧಿಕ ಶ್ರಮದಿಂದ ಬಾಯಾರಿಕೆಯಾದರೆ ನಿಂಬೆಹಣ್ಣಿನ ಪಾನಕ ಸೇವಿಸುವುದು ಲೇಸು, ಒಂದು ಬಟ್ಟಲು ನೀರಿಗೆ ಆರು ಟೀ ಚಮಚ ಸಕ್ಕರೆ ಸೇರಿಸಿ ಒಂದು ನಿಂಬೆ ಹಣ್ಣು ಹಿಂಡಿ ಪಾನಕ ತಯಾರಿಸಬೇಕು.

ನಿಂಬೆಹಣ್ಣಿನ ಪಾನಕ ಸೇವಿಸುವುದರಿಂದ ಹಸಿವು ಹೆಚ್ಚುವುದು, ಅಜೀರ್ಣದಿಂದ ಹೊಟ್ಟೆ ನೋವು ಉಂಟಾಗಿದ್ದರೆ ಗುಣವಾಗುವುದು, ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನುಲಿ ವಾಕರಿಕೆ ಲಕ್ಷಣಗಳು ನಿಂತು ಹೋಗುವುದು.

ನಿಂಬೆಹಣ್ಣಿನ ಪಾನಕ ಸೇವಿಸುವುದರಿಂದ ಆಮಶಂಕೆ ಮತ್ತು ಮೂಲವ್ಯಾಧಿಗಳಲ್ಲಿ ಆಗುವ ರಕ್ತಸ್ರಾವ ಸ್ವಲ್ಪ ಮಟ್ಟಿಗೆ ನಿಲ್ಲುವುದು, ಪಾನಕ ತಯಾರಿಸಲು ಸಕ್ಕರೆಗಿಂತ ಉಪ್ಪು ಬಳಸುವುದು ಲೇಸು.

ಕಿವಿ ನೋವು ಉಂಟಾದರೆ ತುಳಸಿ ಸೊಪ್ಪಿನ ರಸ ನಿಂಬೆ ರಸ ಎಣ್ಣೆ ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಚೆನ್ನಾಗಿ ಕುದಿಸಿ ಆರಿಸಿ ಉಗುರು ಬೆಚ್ಚಗಿರುವ ಆಗ ಕಿವಿಯೊಳಕ್ಕೆ ನಾಲ್ಕಾರು ತೊಟ್ಟು ಬಿಡಿ ಎರಡು ದಿನಗಳ ಕಾಲ ದಿನಕ್ಕೆ ಎರಡು ಬಾರಿ ಹೀಗೆ ಮಾಡಿದಲ್ಲಿ ನೋವು ನಿಲ್ಲುವುದು.

ಮೀನಿನ ಊಟದಲ್ಲಿ ನಿಂಬೆ ಹಣ್ಣನ್ನು ಅಗತ್ಯವಾಗಿ ಬಳಸಿರಿ ಊಟದಲ್ಲಿ ಅಪ್ಪಿತಪ್ಪಿ ಹೊಟ್ಟೆಗೆ ಸೇರಿದರೆ ಅದು ನಿಂಬೆಹಣ್ಣಿನ ಪ್ರಾಬಲ್ಯದಿಂದ ಜೀರ್ಣವಾಗುವುದು.

ಚಳಿಗಾಲದಲ್ಲಿ ಚರ್ಮ ಒಡೆಯುವುದನ್ನು ತಡೆಗಟ್ಟಲು ಹಾಲಿನ ಕೆನೆಗೆ ಕೆಲವು ತೊಟ್ಟು ನಿಂಬೆರಸ ಸೇರಿಸಿ ಮುಖದ ಮೇಲೆ ಮೃದುವಾಗಿ ಹಚ್ಚಿರಿ ಕಾಲು ಗಂಟೆಗಳ ನಂತರ ತೊಳೆಯಿರಿ.

Leave a Reply

Your email address will not be published.