ಸಂಶೋಧನೆಯ ಪ್ರಕಾರ ಹಸಿ ಈರುಳ್ಳಿ ತಿನ್ನುವುದರಿಂದ ನಮ್ಮ ದೇಹಕ್ಕೆ ಏನೆಲ್ಲಾ ಪ್ರಯೋಜನಗಳು ಆಗುತ್ತವೆ ಗೊತ್ತಾ ..ಗೊತ್ತಾದ್ರೆ ಇವತ್ತೇ ತಿನ್ನಲು ಪ್ರಾರಂಭಮಾಡುತ್ತೀರಾ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನಮಸ್ಕಾರ ಸ್ನೇಹಿತರೆ, ನಾನು ನಿಮಗೆ ಈ ಮಾಹಿತಿಯಲ್ಲಿ ಹಸಿ ಆದಂತಹ ಈರುಳ್ಳಿಯನ್ನು ನಿಮ್ಮ ಊಟದ ಜೊತೆಗೆ ತಿಂದರೆ ನಿಮ್ಮ ದೇಹದಲ್ಲಿ ಯಾವ ರೀತಿಯಾದಂತಹ ಬದಲಾವಣೆಗಳು ಉಂಟಾಗುತ್ತವೆ ಎಂದು ಮಾಹಿತಿಯನ್ನು ನಿಮಗೆ ಇಂದು ತಿಳಿಸುತ್ತೇನೆ ಸ್ನೇಹಿತರೆ.

ಹೌದು ನಮ್ಮ ಆರೋಗ್ಯವನ್ನು ಸಮತೋಲನದಲ್ಲಿ ಇರಿಸಲು ತರಕಾರಿಗಳು ಮತ್ತು ಹಣ್ಣುಗಳು ಪ್ರಮುಖವಾದಂತಹ ಪಾತ್ರವನ್ನುವಹಿಸುತ್ತವೆ.ಕೆಲವೊಂದು ತರಕಾರಿಗಳನ್ನು ಅಥವಾ ಹಣ್ಣುಗಳನ್ನು ಬೇಯಿಸದೇ ತಿಂದರೆ ನಮ್ಮ ಆರೋಗ್ಯಕ್ಕೆ ಉತ್ತಮವಾದಂತಹ ಲಾಭಗಳು ಉಂಟಾಗುತ್ತವೆ.

ಹಾಗೆ ನಾವು ಅಡುಗೆ ಮನೆಯಲ್ಲಿ ಆಹಾರ ತಯಾರು ಮಾಡಲು ಬಳಸುವಂತಹ ಒಂದು ಪ್ರಮುಖವಾದಂತಹ ಪದಾರ್ಥವೆಂದರೆ ಅದು ಈರುಳ್ಳಿ. ಯಾವುದೇ ರೀತಿಯ ಅಡುಗೆ ಮಾಡುವಾಗ ನಾವು ಈರುಳ್ಳಿ ಹಾಕದಿದ್ದರೆ ಅಡುಗೆ ಪರಿಪೂರ್ಣವಾಗುವುದಿಲ್ಲ.

ಹಾಗಾಗಿ ನಾವು ಎಲ್ಲಾ ರೀತಿಯ ಪದಾರ್ಥಗಳನ್ನು ತಯಾರು ಮಾಡುವಾಗ ಎಲ್ಲಾ ಪದಾರ್ಥಗಳಲ್ಲಿ ಕೂಡ ನಾವು ಈರುಳ್ಳಿಯನ್ನು ಬಳಸುತ್ತೇವೆ. ಈರುಳ್ಳಿ ಕಡಿಮೆ ಕ್ಯಾಲೋರಿಯನ್ನು ಹೊಂದಿದ್ದು ಅಗಾಧವಾದ ಅಂತಹ ಪೋಷಕಾಂಶಗಳನ್ನು ಹೊಂದಿದೆ.

ಹಾಗಾಗಿ ನಾವು ಆಹಾರದಲ್ಲಿ ಅಂದರೆ ಊಟಮಾಡುವಾಗ ಹಸಿಯಾದ ಈರುಳ್ಳಿಯನ್ನು ಬಳಸುವುದರಿಂದ ನಮ್ಮ ದೇಹಕ್ಕೆ ಅಗಾಧ ಲಾಭಗಳು ಸಿಗುತ್ತವೆ.ಸ್ನೇಹಿತರೆ ನೀವು ಹಸಿ ಈರುಳ್ಳಿಯನ್ನು ತಿನ್ನುವುದರಿಂದ ನಿಮ್ಮ ದೇಹದಲ್ಲಿ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ.

ನೀವು ಯಾವುದೇ ರೀತಿಯಾದಂತಹ ಆಹಾರವನ್ನು ಸೇವಿಸುವಾಗ ಅಂದರೆ ಸಸ್ಯಹಾರಿ ಅಥವಾ ಮಾಂಸಹಾರಿ ಇದರ ಜೊತೆ ಈರುಳ್ಳಿಯನ್ನು ಸೇವಿಸಿದರೆ ನಿಮಗೆ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ.ಮತ್ತು ಹೊಟ್ಟೆಯಲ್ಲಿ ಗ್ಯಾಸ್ಟಿಕ್ ಎನ್ನುವುದು ಉಂಟಾಗುವುದಿಲ್ಲ ಹಾಗೂ ನಿಮಗೆ ನಿಮ್ಮ ಜನ್ಮದಲ್ಲಿಯೂ ಕೂಡ ಅಸಿಡಿಟಿ ಎನ್ನುವುದು ಬರುವುದಿಲ್ಲ.

ಸ್ನೇಹಿತರೆ ಇಂದಿನ ದಿನಮಾನಗಳಲ್ಲಿ ಹಲವಾರು ಜನರು ಗ್ಯಾಸ್ಟ್ರಬಲ್ ಮತ್ತು ಅಸಿಡಿಟಿಯಿಂದ ಬಳಲುತ್ತಿರುತ್ತಾರೆ. ಅಂತವರು ಊಟದ ಜೊತೆಗೆ ಹಸಿ ಈರುಳ್ಳಿ ತಿನ್ನುತ್ತಾ ಬಂದರೆ ಅವರು ಈ ಸಮಸ್ಯೆಯಿಂದ ಹೊರಗೆ ಬರಬಹುದು.

ಗ್ಯಾಸ್ ಟ್ರಬಲ್ ಮತ್ತು ಅಸಿಡಿಟಿಯಿಂದ ನಿಮಗೆ ತುಂಬಾನೇ ಅಡ್ಡ ಪರಿಣಾಮಗಳು ಉಂಟಾಗುತ್ತವೆ ಅದೇನೆಂದರೆ ತಲೆನೋವು,ವಾಂತಿಯಾಗುವುದು,ಅಜೀರ್ಣತೆ ಹೀಗೆ ಹಲವಾರು ಸಮಸ್ಯೆಗಳು ಉಂಟಾಗುತ್ತವೆ.

ನೀವು ಈ ಸಮಸ್ಯೆಯಿಂದ ಹೊರಬರಬೇಕೆಂದರೆ ನೀವು ಪ್ರತಿನಿತ್ಯ ಊಟದಲ್ಲಿ ಹಸಿ ಈರುಳ್ಳಿಯನ್ನು ಸೇವಿಸಬೇಕು.ಇದರಲ್ಲಿ ನಾರಿನ ಅಂಶ ಹೆಚ್ಚಾಗಿದ್ದು ಬೆಳಗ್ಗೆ ಎದ್ದ ಕೂಡಲೇ ಯಾರಿಗೆ ಹೊಟ್ಟೆ ಸರಿಯಾಗಿ ಸ್ವಚ್ಛವಾಗುವುದಿಲ್ಲವೋ ಅಂತವರು ಹಸಿ ಈರುಳ್ಳಿಯನ್ನು ಬಳಸುವುದರಿಂದ ಬೆಳಿಗ್ಗೆ ಎದ್ದಾಗ ಹೊಟ್ಟೆಯೂ ಸರಿಯಾಗಿ ಸ್ವಚ್ಛವಾಗುತ್ತದೆ. ಮಲವಿಸರ್ಜನೆ ಕೂಡ ಸರಾಗವಾಗಿ ಆಗುತ್ತದೆ.

ಹಾಗೆಯೇ ತೂಕವನ್ನು ಕಡಿಮೆ ಮಾಡಲು ಬಯಸುವವರು ಈರುಳ್ಳಿಯನ್ನು ಊಟದ ಜೊತೆಗೆ ಬಳಸುವುದರಿಂದ ನಿಮ್ಮ ತೂಕವನ್ನು ನೈಸರ್ಗಿಕವಾಗಿ ಕಡಿಮೆ ಮಾಡಿಕೊಳ್ಳಬಹುದು.

ಈರುಳ್ಳಿಯನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಆಗುವ ಕೆಲವು ಅಲರ್ಜಿಯನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು. ದೇಹದಲ್ಲಿ ಇಷ್ಟೋಮಿನ್ ಹಾರ್ಮೋನು ಬಿಡುಗಡೆಯಿಂದ ಉಂಟಾಗುವ ಕಣ್ಣಿನ ಕೆರೆತ, ನೆಗಡಿ, ಕೆಮ್ಮು ಮುಂತಾದ ತೊಂದರೆಗಳಿಗೆ ಹಸಿ ಈರುಳ್ಳಿ ರಾಮಬಾಣವಿದ್ದಂತೆ.

ಹೌದು ಸ್ನೇಹಿತರೆ ನೀವು ಪ್ರತಿನಿತ್ಯ ಸತತವಾಗಿ ಹಸಿ ಈರುಳ್ಳಿ ಸೇವಿಸಿದಲ್ಲಿ ನಿಮ್ಮ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಬಹುದು. ಹಾಗೆಯೇ ನಿಮಗೆ ಯಾವ ಕಾಯಿಲೆಯೂ ಕೂಡ ಬರುವುದಿಲ್ಲ.

ಕಾಯಿಲೆಗಳಿಂದ ದೂರವಿರಬಹುದು.ಹೌದು ಸ್ನೇಹಿತರೆ ನಾವು ಮನೆಯಲ್ಲಿ ಬಳಸುವಂತಹ ಈ ರೀತಿ ಆಹಾರ ಪದಾರ್ಥವನ್ನು ರೂಢಿ ಮಾಡಿಕೊಂಡು ಬಳಸಿದ್ದೇ ಆದಲ್ಲಿ ನಮ್ಮ ಆರೋಗ್ಯವು ಯಾವಾಗಲೂ ಸಮತೋಲನದಲ್ಲಿರುತ್ತದೆ .

ಹಾಗೂ ನಮ್ಮ ಆರೋಗ್ಯವನ್ನು ಉತ್ತಮವಾಗಿ ನಾವು ಕಾಪಾಡಿಕೊಳ್ಳಬಹುದು ಎಲ್ಲವೂ ಕೂಡ ನಮ್ಮ ಕೈಯಲ್ಲಿದೆ.ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.