ಆಂಜನೇಯನ ವಾರದ ದಿನವೇ ನಡದೇ ಹೋಯ್ತು,ಆಂಜನೇಯನ ನೈಜ ಪವಾಡ ….ಮಗುವನ್ನು ಕಾಪಾಡಿದ ಹನುಮ …ಒಂದು ಕ್ಷಣ ಎಲ್ಲರೂ ಶಾಕ್ !!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಆಂಜನೇಯ ಸ್ವಾಮಿಯ ಹನುಮಾನ್ ಚಾಲೀಸ್ ಬಗ್ಗೆ ನೀವು ಕೇಳಿರುತ್ತೀರ ಈ ಒಂದು ಚಾಲೀಸ್ ಅನ್ನು ಪಠನೆ ಮಾಡುವುದರಿಂದ ಏನೆಲ್ಲಾ ಆಗುತ್ತದೆ ಅನ್ನುವುದರ ಮಹತ್ವವನ್ನು ತಿಳಿದರೆ ನೀವು ಕೂಡ ಅಚ್ಚರಿಗೊಳ್ಳುತ್ತೀರ,

ಇಂದಿನ ಮಾಹಿತಿಯಲ್ಲಿ ನಾನು ಅಂತಹದ್ದೇ ಒಂದು ಪವಾಡದ ಬಗ್ಗೆ ನಿಮಗೆ ತಿಳಿಸಿಕೊಡುತ್ತೇನೆ ಇದನ್ನು ಪೂರ್ತಿಯಾಗಿ ತಿಳಿಯಿರಿ ಹಾಗೂ ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೆ ಪ್ರತಿಯೊಬ್ಬರಲ್ಲಿಯು ಕೂಡ ಆಂಜನೇಯ ಸ್ವಾಮಿಯ ಪವಾಡದ ಬಗ್ಗೆ ತಿಳಿಸಿಕೊಡಲು ಮಾಹಿತಿಯನ್ನು ಶೇರ್ ಮಾಡಿ.

ಈ ಒಂದು ಘಟನೆ ಜರುಗಿರುವುದು ಬಿಹಾರದ ಮೂಲದ ಪಾಯಲ್ ಗುಪ್ತಾ ಎಂಬ ಮಹಿಳೆಯ ಜೀವನದಲ್ಲಿ, ಇವರು ಪಕ್ಕಾ ಆಂಜನೇಯ ಸ್ವಾಮಿಯ ಭಕ್ತರು. ಆಂಜನೇಯ ಸ್ವಾಮಿಯನ್ನು ಹಿಂದೂ ಸಂಪ್ರದಾಯದಲ್ಲಿ ಹೆಣ್ಣು ಮಕ್ಕಳು ಪೂಜಿಸಬಾರದು ಅನ್ನುವ ಪದ್ಧತಿ ಇದೆ.

ಆದರೆ ಅದನ್ನು ತಲೆ ಕೆಡಿಸಿಕೊಳ್ಳದೆ ಪಾಯಲ್ ಗುಪ್ತಾ ಅವರು ಆಂಜನೇಯ ಸ್ವಾಮಿಯನ್ನು ಪ್ರತಿ ದಿನ ಪೂಜಿಸುತ್ತಿದ್ದರು ಆಂಜನೇಯ ಸ್ವಾಮಿಯ ನಾಮಸ್ಮರಣೆ ಮಾಡುತ್ತಿದ್ದರು ಹಾಗೆ ಹನುಮಾನ್ ಚಾಲೀಸ್ ಅನ್ನು ಕೂಡ ಪ್ರತಿ ದಿನ ಪಠನೆ ಮಾಡುತ್ತಿದ್ದರು.

2014ರಲ್ಲಿ ಪಾಯಲ್ ಗುಪ್ತಾ ಅವರಿಗೆ ಮದುವೆಯಾಗುತ್ತದೆ ಇವರು ಅಮೆರಿಕದ ಗಂಡನ್ನು ವರಿಸಿ ನಂತರ ಅಮೆರಿಕಾ ದೇಶಕ್ಕೆ ಹೋಗುತ್ತಾರೆ. ಮದುವೆಯಾದ ಬಳಿಕವೂ ಪಾಯಲ್ ಗುಪ್ತಾ ಅವರು ಆಂಜನೇಯ ಸ್ವಾಮಿಯ ಹನುಮಾನ್ ಚಾಲೀಸ್ ಅನ್ನು ಪಠಿಸುವುದನ್ನು ನಿಲ್ಲಿಸಿರುವುದಿಲ್ಲ.

ಪಾಯಲ್ ಗುಪ್ತಾ ಹೀಗೆ ಒಮ್ಮೆ ಶನಿವಾರದ ದಿನದಂದು ಹನುಮಾನ್ ಚಾಲೀಸ್ ಅನ್ನು ಪಠನೆ ಮಾಡುತ್ತಿರುವಾಗ ಪಾಯಲ್ ಮಗುವು ಮನೆಯ ಮುಖ್ಯ ದ್ವಾರದ ಬಳಿ ಆಟವಾಡಿಕೊಳ್ಳುತ್ತಾ ಇರುತ್ತದೆ.

ಆಟವಾಡಿಕೊಳ್ಳುತ್ತಿರುವ ಮಗುವನ್ನು ಮರೆತು ಪಾಯಲ್ ಆಂಜನೇಯ ಸ್ವಾಮಿಯ ಪೂಜೆಯಲ್ಲಿ ಮುಳುಗಿರುತ್ತಾರೆ, ಮಗು ಆಟವಾಡಿಕೊಳ್ಳುತ್ತಾ ಬೀದಿಗೆ ಹೋಗಿಬಿಟ್ಟಿರುತ್ತದೆ.

ಎಲ್ಲ ಪೂಜೆ ಮುಗಿಸಿ ಬಂದು ಮಗುವನ್ನು ಹುಡುಕಿದರೆ ಮನೆಯಲ್ಲಿ ಎಲ್ಲಿಯೂ ಕೂಡ ಮಗು ಕಾಣಿಸುವುದಿಲ್ಲ ಆಗ ಗಾಬರಿಗೊಂಡ ಪಾಯಲ್ ಆಚೆ ಹೋಗಿ ಹುಡುಕುತ್ತಾರೆ, ಮಗುವನ್ನು ಹುಡುಕಿಕೊಂಡು ರಸ್ತೆಯೆಲ್ಲ ನೋಡುವಾಗ ಅಲ್ಲಿ ಒಂದು ಪವಾಡ ಸದೃಶ್ಯವೇ ನಡೆದಿತ್ತು ಅದೇನೆಂದರೆ, ಪಾಯಲ್ ಅವರ ಮಗು ಒಂದು ಕಾರಿನ ಬಳಿ ನಿಂತುಕೊಂಡಿತ್ತು ಹಾಗೆ ಅಲ್ಲಿ ಜನ ಕೂಡ ಸೇರಿದ್ದರು.

ಮಗುವನ್ನು ಕಂಡು ಪಾಯಲ್ ಅಲ್ಲಿಗೆ ಓಡಿ ಹೋಗಿದ್ದರು ನಂತರ ಅಲ್ಲಿ ನಡೆದ ಘಟನೆಯನ್ನು ತಿಳಿಸಿದಾಗ ಪಾಯಲ್ ಅವರು ಆಂಜನೇಯ ಸ್ವಾಮಿಯೆ ನನ್ನ ಮಗುವನ್ನು ಕಾಪಾಡಿದ್ದಾರೆ ಈ ಒಂದು ಅಪಘಾತದಿಂದ ಎಂದು ಹೇಳುತ್ತಾ ಆಂಜನೇಯ ಸ್ವಾಮಿಯ ನಾಮಸ್ಮರಣೆಯನ್ನು ಮಾಡುತ್ತ ಮನೆಗೆ ಬಂದರು.

ಅಷ್ಟಕ್ಕೂ ಅಲ್ಲಿ ನಡೆದ ಘಟನೆ ಏನು ಎಂದರೆ ಮಗು ಆಡಿಕೊಳ್ಳುತ್ತಾ ಬೀದಿಗೆ ಹೋಗಿಬಿಟ್ಟಿತ್ತು ಅಲ್ಲಿ ಒಂದು ಕಾರಿಗೆ ಅಡ್ಡ ಹೋದ ಮಗು, ತಕ್ಷಣವೇ ಕಾರು ಚಲಾಯಿಸುತ್ತಿದ್ದ ಮಹಿಳೆ ಮಗುವನ್ನು ಕಂಡು ಕೂಡಲೇ ಬ್ರೇಕ್ ಹಾಕಿದ್ದಾರೆ.

ಇದನ್ನೇ ಯೋಚಿಸುತ್ತಾ ಪಾಯಲ್ ಈ ಒಂದು ಅಪಘಾತದಲ್ಲಿ ನನ್ನ ಮಗು ಬಚಾವ್ ಆಗಿರುವುದೇ ಆಂಜನೇಯ ಸ್ವಾಮಿಯ ಪವಾಡದಿಂದ ನಾನು ಹನುಮಾನ್ ಚಾಲೀಸ್ ಓದಿದ್ದರಿಂದ ಇಷ್ಟೆಲ್ಲಾ ನನ್ನ ಜೀವನದಲ್ಲಿ ನಡೆದಿದೆ.

ಈಗಲೂ ಕೂಡ ಆಂಜನೇಯ ಸ್ವಾಮಿಯೇ ನನ್ನನ್ನು ಪಾರು ಮಾಡಿದ್ದಾರೆ ನನ್ನ ಮಗುವನ್ನು ಕಾಪಾಡಿದ್ದಾರೆ ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ಈ ಒಂದು ಮಾಹಿತಿಯನ್ನು ಕುರಿತು ಆಂಜನೇಯ ಸ್ವಾಮಿಯ ಪವಾಡವನ್ನು ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಫ್ರೆಂಡ್ಸ್ ಹಾಗೆ ಇದರಿಂದ ನಾವು ತಿಳಿದುಕೊಳ್ಳಬಹುದು ಹನುಮಾನ್ ಚಾಲೀಸ್ ಗೆ ಅದೆಷ್ಟು ಮಹತ್ವವಿದೆ ಎಂದು.

Leave a Reply

Your email address will not be published.