ಪ್ರತಿಯೊಬ್ಬರಿಗೂ ಕೂಡ ಒಂದು ವಯಸ್ಸಿನಲ್ಲಿ ಮೊಡವೆಗಳು ಆಗುವುದು ಸಹಜ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದರ ಬದಲು ಚಿಂತೆ ಮಾಡಿಕೊಂಡು ಕುಳಿತರೆ ಆಗುವುದಿಲ್ಲ ಮತ್ತು ಮೊಡವೆ ಆದಾಗ ಅದನ್ನು ಪಿನ್ನಿನಿಂದ ಚುಚ್ಚುವುದು ಅಥವಾ ಮೊಡವೆಗಳನ್ನು ಕಿತ್ತುಕೊಳ್ಳುವುದು ಮಾಡಿದರೆ ಅದರ ಕಲೆ ಮುಖದ ಮೇಲೆ ಉಳಿದುಬಿಡುತ್ತದೆ.
ಅಂತಹ ಕಲೆಗಳಿಗೆ ಏನು ಮಾಡಬಹುದು ಇದಕ್ಕೆ ಮನೆಯಲ್ಲಿಯೇ ಪರಿಹಾರ ಎಂಬುದನ್ನು ನೀವು ತಿಳಿದುಕೊಳ್ಳಬೇಕಾದರೆ ಇಂದಿನ ಮಾಹಿತಿಯನ್ನು ತಪ್ಪದೇ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಮನೆಯಲ್ಲಿಯೇ ನಿಮ್ಮ ಮೊಡವೆಯ ಕಲೆಗಳಿಗೆ ಪರಿಹಾರವನ್ನು ಕಂಡುಕೊಳ್ಳಿ.
ಮುಖದ ಮೇಲಿರುವ ಕಲೆಗಳನ್ನು ಪರಿಹರಿಸಿ ಕೊಳ್ಳುವುದಕ್ಕಾಗಿ ನಾವು ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಈ ಮೂರು ಸ್ಟೆಪ್ ಗಳನ್ನು ಪಾಲಿಸಿ ನಮ್ಮ ಮುಖವನ್ನು ರಿಫ್ರೆಶ್ ಮಾಡಬೇಕಾಗುತ್ತದೆ. ಆ ಮೂರು ಸ್ಟೆಪ್ ಗಳು ಯಾವುದು ಅಂದರೆ ಸ್ಕ್ರಬ್ಬಿಂಗ್ ಟೋನಿಂಗ್ ಮತ್ತು ಫೇಸ್ ಪ್ಯಾಕ್.
ಸ್ಕ್ರಬ್ಬಿಂಗ್ ಮಾಡುವ ವಿಧಾನವೂ ಹೇಗೆ ಮೊದಲಿಗೆ ಅಕ್ಕಿ ಹಿಟ್ಟನ್ನು ತೆಗೆದುಕೊಂಡು ಒಂದು ಚಮಚ ಅಕ್ಕಿ ಹಿಟ್ಟಿಗೆ ಅರ್ಧ ಚಮಚ ತುಪ್ಪವನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ಅದನ್ನು ಮುಖಕ್ಕೆ ನಿಧಾನವಾಗಿ ಹಚ್ಚುತ್ತಾ ಎರಡು ನಿಮಿಷಗಳ ವರೆಗೂ ಮುಖವನ್ನು ಸ್ಕ್ರಬ್ ಮಾಡಿಕೊಳ್ಳಬೇಕು.
ಸ್ಕ್ರಬ್ಬಿಂಗ್ ಮಾಡಿಕೊಳ್ಳುವಾಗ ಡೌನ್ ವಾರ್ಡ್ನಿಂದ ಅಪ್ವರ್ಡ್ ಪೊಸಿಶನ್ಗೆ ಸ್ಕ್ರಬ್ ಮಾಡಿಕೊಳ್ಳುವುದರಿಂದ ಮುಖದಲ್ಲಿ ಬ್ಲಡ್ ಸರ್ಕ್ಯುಲೇಷನ್ ಆಗಿ ಮುಖವೂ ಕಾಂತಿಗೊಳ್ಳುತ್ತದೆ.
ಈ ರೀತಿಯಾಗಿ ಮಾಡಿದ ನಂತರ ಮುಖವನ್ನು ತಣ್ಣೀರಿನಿಂದ ಸ್ವಚ್ಛ ಪಡಿಸಿಕೊಳ್ಳಬೇಕು ನಂತರ ಟೋನಿಂಗ್ ಹೇಗೆ ಮಾಡುವುದು ಅಂದರೆ ಆಲೋವೆರಾ ಜೆಲ್ಗೆ ಅರ್ಧ ಚಮಚ ಗ್ಲಿಸರಿನ್ ಅನ್ನು ಬೆರೆಸಿ ಇದನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಮಸಾಜ್ ಮಾಡಿಕೊಳ್ಳಬೇಕು ನಿಧಾನವಾಗಿ ಮಸಾಜ್ ಮಾಡಿಕೊಳ್ಳುತ್ತಾ ಐದು ನಿಮಿಷಗಳ ನಂತರ ಮುಖವನ್ನು ಮತ್ತೊಮ್ಮೆ ತಣ್ಣೀರಿನಿಂದ ಸ್ವಚ್ಛ ಪಡಿಸಿಕೊಳ್ಳಬೇಕು.
ಇದೀಗ ಮೂರನೇ ಸ್ಟೆಪ್ ಫೇಸ್ ಪ್ಯಾಕ್ ಫೇಸ್ ಪ್ಯಾಕ್ ಮಾಡಿಕೊಳ್ಳುವುದು ಹೇಗೆ ಅಂದರೆ ಅಕ್ಕಿ ಹಿಟ್ಟು, ಕಸ್ತೂರಿ ಅರಿಶಿನ, ಅಲೊವೆರಾ ಜೆಲ್ ಮತ್ತು ತುಪ್ಪ ಇದೆಷ್ಟು ಪದಾರ್ಥಗಳು ಫೇಸ್ಪ್ಯಾಕ್ ಮಾಡುವುದಕ್ಕೆ ಬೇಕಾಗಿರುತ್ತದೆ.
ಒಂದು ಚಮಚ ಅಕ್ಕಿ ಹಿಟ್ಟಿಗೆ ಒಂದು ಚಮಚ ಅಲೋವೆರ ಜೆಲ್ ಅನ್ನು ಹಾಕಿಕೊಂಡು ಅರ್ಧ ಚಮಚ ಕಸ್ತೂರಿ ಅರಿಶಿಣವನ್ನು ಬೆರೆಸಿ ಇದಕ್ಕೆ ತುಪ್ಪವನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು ನಂತರ ಇದನ್ನು ಹಸಿ ಹಾಲನ್ನು ಹಾಕಿ ಬೇಕಾದರೆ ಮಿಕ್ಸ್ ಮಾಡಿಕೊಳ್ಳಬಹುದು .
ಇದನ್ನು ಮುಖಕ್ಕೆ ಹಚ್ಚಿ ಇಪ್ಪತ್ತು ನಿಮಿಷಗಳ ಬಳಿಕ ಮುಖವನ್ನು ತೊಳೆಯುವುದರಿಂದ ಮುಖ ಒಳ್ಳೆಯ ಗ್ಲೂ ಬರುತ್ತದೆ ಮತ್ತು ಮುಖದ ಮೇಲಿರುವ ಮೊಡವೆ ಕಲೆಗಳು ಮಾಯವಾಗುತ್ತದೆ.
ಈ ರೀತಿ ಮನೆಯಲ್ಲಿಯೇ ಮಾಡಿ ಮುಖದ ಹಾರೈಕೆಯನ್ನು ನೀವು ಇದನ್ನು ವಾರಕ್ಕೆ ಎರಡು ಬಾರಿ ಮಾಡುತ್ತಾ ಬಂದಲ್ಲಿ ನಿಮ್ಮ ಮುಖದ ಮೇಲಿರುವ ಕಲೆಗಳು ಮಾಯವಾಗುತ್ತದೆ ಜೊತೆಗೆ ಮುಖ ಒಳ್ಳೆಯ ಕಾಂತಿ ಬರುತ್ತದೆ.
ಯಾವುದೇ ಕಾರಣಕ್ಕೂ ಮುಖಕ್ಕೆ ನಿಂಬೆ ಹಣ್ಣಿನ ರಸವನ್ನು ಆಗಲಿ ಅಥವಾ ಸೋಡ ಪುಡಿಯನ್ನಾಗಲಿ ಬಳಸಬೇಡಿ ಇದರಿಂದ ಮುಖದ ನೈಸರ್ಗಿಕ ಕಾಂತಿ ದೂರವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಆದ ಕಾರಣ ಮುಖದ ತ್ವಚೆ ಬಹಳ ಸೆನ್ಸಿಟಿವ್ ಇರುವ ಕಾರಣ ಮುಖಕ್ಕೆ ನಿಂಬೆಹಣ್ಣಿನ ರಸವಾಗಲಿ ಸೋಡಾ ಪುಡಿಯನ್ನಾಗಲಿ ಸೋಕಿಸದೇ ಇರುವುದು ಒಳ್ಳೆಯದು.
ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ನಿಮಗೂ ಮಾಹಿತಿ ಇಷ್ಟವಾದಲ್ಲಿ ತಪ್ಪದೆ ಲೈಕ್ ಮಾಡಿ ಕಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದಗಳು ಫ್ರೆಂಡ್ಸ್.