ಮುಖದ ಮೇಲಿರುವ ಕೂದಲನ್ನು ತೆಗೆದು ಹಾಕುವುದಕ್ಕಾಗಿ ಹೀಗೆ ಮಾಡಿ ಹೌದು ಮುಖದ ಮೇಲಿರುವ ಅಥವಾ ಕೈ ಕಾಲುಗಳ ಮೇಲಿರುವ ಕೂದಲನ್ನು ತೆಗೆದು ಹಾಕುವುದಕ್ಕೆ ಇನ್ನು ಮುಂದೆ ಪಾರ್ಲರ್ಗೆ ಹೋಗುವ ಅವಶ್ಯಕತೆ ಇರುವುದಿಲ್ಲ
ಹಾಗಾದರೆ ಮನೆಯಲ್ಲಿಯೇ ಕುಳಿತು ಸುಲಭವಾಗಿ ಹೇಗೆ ಕೈ ಕಾಲುಗಳ ಮೇಲೆ ಇರುವಂತಹ ಅನಗತ್ಯ ಕೂದಲುಗಳನ್ನು ತೆಗೆದು ಹಾಕುವುದು ಅನ್ನೋದನ್ನು ತಿಳಿಸುತ್ತೇವೆ.
ನೀವು ಈ ಮಾಹಿತಿಯನ್ನು ತಿಳಿದ ನಂತರ ನಿಮಗೆ ಉಪಯುಕ್ತವಾದಲ್ಲಿ ತಪ್ಪದೇ ಬೇರೆಯವರೊಂದಿಗೂ ಕೂಡ ಈ ಮಾಹಿತಿಯನ್ನ ಶೇರ್ ಮಾಡಿ, ಸ್ನೇಹಿತರೆ ಇನ್ನು ಇಂತಹ ಅನೇಕ ಮಾಹಿತಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ.
ನಾವು ಈ ದಿನದ ಮಾಹಿತಿಯಲ್ಲಿ ನಿಮಗೆ ಎರಡು ಮನೆ ಮದ್ದುಗಳನ್ನು ತಿಳಿಸಿಕೊಡುತ್ತೇವೆ, ಈ ಎರಡು ಮನೆ ಮದ್ದುಗಳಲ್ಲಿ ನಿಮಗೆ ಉಪಯುಕ್ತವಾದ ಸುಲಭವೆನಿಸಿದೆ ಯಾವುದಾದರೂ ಒಂದು ಮನೆ ಮದ್ದನ್ನು ವಾರಕ್ಕೆ ನಾಲ್ಕು ಬಾರಿಯಾದರೂ ಪಾಲಿಸಿ,
ಹೀಗೆ ಮಾಡುವುದರಿಂದ ನಿಮ್ಮ ಕೈ ಕಾಲುಗಳ ಮೇಲೆ ಅಥವಾ ಮುಖದ ಮೇಲೆ ಇರುವಂತಹ ಅನಗತ್ಯ ಕೂದಲುಗಳು ಮಾಯವಾಗಿ ನೀವು ಸುಂದರವಾಗಿ ಕಾಣಿಸುತ್ತೀರಿ.
ಮೊದಲನೆಯ ಮನೆ ಮದ್ದು ಮಾಡುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಅರಿಶಿನ ಸಕ್ಕರೆ ಪುಡಿ ಕಡಲೆ ಹಿಟ್ಟು ಕೊಬ್ಬರಿ ಎಣ್ಣೆ ಮತ್ತು ಹಸಿ ಹಾಲು. ಇದೀಗ ಒಂದು ಬಾರಿಗೆ ಹರಿಶಿನ ಕಡಲೆ ಹಿಟ್ಟು ಸಕ್ಕರೆ ಪುಡಿ ಹಾಲು ಕೊಬ್ಬರಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ರೀತಿ ಮಾಡಿಕೊಂಡು ಇದನ್ನು ಮುಖದ ಮೇಲೆ ಮತ್ತು ಕೈಕಾಲುಗಳ ಮೇಲೆ ಲೇಪಿಸಿಕೊಳ್ಳಿ.
ಯಾವುದೇ ಫೇಸ್ ಪ್ಯಾಕ್ ಅನ್ನು ಹಾಕಿಕೊಳ್ಳುವ ಮುನ್ನ ಕೈ ಕಾಲುಗಳನ್ನು ಮತ್ತು ಮುಖವನ್ನು ಬೆಚ್ಚಗಿನ ನೀರಿನಿಂದ ಸರಿಯಾಗಿ ಸ್ವಚ್ಛ ಪಡಿಸಿಕೊಳ್ಳಿ ನಂತರ ಫೇಸ್ ಪ್ಯಾಕ್ ಅನ್ನು ಲೇಪಿಸಿಕೊಳ್ಳಿ ,
ಫೇಸ್ ಪ್ಯಾಕ್ ಹಚ್ಚಿದ ಹದಿನೈದು ನಿಮಿಷಗಳ ಬಳಿಕ ನಿಧಾನವಾಗಿ ಈ ಮುಖವನ್ನು ಮತ್ತು ಕೈ ಕಾಲುಗಳನ್ನು ಮಸಾಜ್ ಮಾಡಿಕೊಳ್ಳುತ್ತಾ ತಣ್ಣೀರಿನಿಂದ ಮುಖವನ್ನು ಸ್ವಚ್ಛ ಪಡಿಸಿಕೊಳ್ಳಬೇಕು,
ಹೀಗೆ ಮಾಡಿ ನಿಮ್ಮ ಮುಖ ಮತ್ತು ಕೈ ಕಾಲುಗಳ ಮೇಲೆ ಇರುವಂತಹ ಅನಗತ್ಯ ಕೂದಲುಗಳು ಮಾಯವಾಗುತ್ತವೆ ಮತ್ತು ನಿಮಗೆ ಈ ಮನೆ ಮಾತು ಉತ್ತಮ ಫಲಿತಾಂಶವನ್ನು ನೀಡುವುದು ಪಕ್ಕಾ.
ಇನ್ನು ಎರಡನೇ ಮನೆ ಮದ್ದು ಈ ಮನೆಮದ್ದಿಗೆ ಬೇಕಾಗಿರುವ ಪದಾರ್ಥಗಳು ಮೊಟ್ಟೆ ಮತ್ತು ಅಲೊವೆರಾ ಜೆಲ್ ಹೌದು ನೀವು ನೈಸರ್ಗಿಕವಾಗಿ ದೊರೆಯುವಂತಹ ಲೋಳೆರಸದ ರಸವನ್ನು ಬೇಕಾದರೂ ತೆಗೆದುಕೊಳ್ಳಬಹುದು ಅಥವಾ ಮಾರುಕಟ್ಟೆಯಲ್ಲಿ ದೊರೆಯುವಂತಹ ಅಲೋವೆರಾ ಜೆಲ್ ಅನ್ನು ನೀವು ಬಳಸಬಹುದಾಗಿದೆ,
ಮೊಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ಬಿಳಿ ಭಾಗವನ್ನು ಮಾತ್ರ ತೆಗೆದುಕೊಳ್ಳಬೇಕು ನಂತರ ಅದಕ್ಕೆ ಒಂದು ಚಮಚ ಹಲವರ ಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು
ಇದನ್ನು ಕೈ ಕಾಲುಗಳ ಮೇಲೆ ಮತ್ತು ಮುಖದ ಮೇಲೆ ಲೇಪಿಸಿಕೊಂಡು ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ ನಂತರ ಹಾಕಿಕೊಳ್ಳದ ಫೇಸ್ ಪ್ಯಾಕ್ ಒಣಗಿದ ಮೇಲೆ ತಣ್ಣೀರನ್ನು ಬಳಸಿ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ.
ನಂತರ ತಣ್ಣೀರಿನಿಂದ ಮುಖ ಕೈಕಾಲುಗಳನ್ನು ತೊಳೆದುಕೊಳ್ಳಿ , ಈ ಎರಡು ಮನೆ ಮದ್ದುಗಳಲ್ಲಿ ಯಾವುದು ಸುಲಭ ಅನ್ನಿಸುತ್ತದೆಯೋ ಆ ಮನೆ ಮದ್ದನ್ನು ಪಾಲಿಸಿ ವಾರಕ್ಕೆ ಮೂರು ಅಥವಾ ನಾಲ್ಕು ಬಾರಿಯಾದರೂ ಇದನ್ನು ಮಾಡಿ. ನಿಮಗೆ ಮಾಹಿತಿ ಇಷ್ಟವಾದಲ್ಲಿ ತಪ್ಪದೆ ಲೈಕ್ ಮಾಡಿ ಕಮೆಂಟ್ ಮಾಡಿ ಹಾಗೂ ಶೇರ್ ಮಾಡಿ.