ನಮಸ್ಕಾರ ಸ್ನೇಹಿತರೆ ಇಂದು ನಾವು ನಿಮಗೆ ಎಕ್ಕದ ಗಿಡದ ಬಗ್ಗೆ ನಿಮಗೆ ಎಂದು ತಿಳಿಯದ ರಹಸ್ಯವನ್ನು ತಿಳಿಸಿಕೊಡುತ್ತೇವೆ. ಎಕ್ಕದ ಗಿಡ ಭಾರತದ ಎಲ್ಲಾ ಪ್ರದೇಶಗಳಲ್ಲಿ ಸಿಗುವಂತಹ ಗಿಡವಾಗಿದೆ.
ಇದರಲ್ಲಿ ಹಲವಾರು ಬಣ್ಣಗಳಿದ್ದು ಆದರೆ ಬಿಳಿ ಎಕ್ಕದ ಗಿಡ ಸಿಗುವುದು ತುಂಬಾನೇ ವಿರಳ. ಮುಖ್ಯವಾಗಿ ಈ ಗಿಡದ ಬೇರಿನಲ್ಲಿ ಗಣೇಶನ ಮೂರ್ತಿಯೂ ನಿರ್ಮಾಣವಾಗಿರುತ್ತದೆ.
ಇದು ಒಂದು ಪ್ರಕೃತಿಯ ಆಶ್ಚರ್ಯವೆಂದರೆ ತಪ್ಪಿಲ್ಲ. ಈ ರೀತಿಯ ಬೇರುಗಳನ್ನು ತೆಗೆಯಲು ಸುಮಾರು 60 ಅಡಿ ನೆಲವನ್ನು ಅಗೆದು ತೆಗೆಯಬೇಕಾಗುತ್ತದೆ. ಸ್ನೇಹಿತರೆ ಈ ಗಿಡವು ಎಲ್ಲರ ಮನೆ ಎದುರುಗಡೆ ಸಾಮಾನ್ಯವಾಗಿ ಇರುತ್ತದೆ.
ಎಕ್ಕದ ಗಿಡ ಒಂದು ಔಷಧಿ ಗಿಡವು ಹೌದು. ಇದು ಒಂದು ಔಷಧೀಯ ಗಿಡ ಎಂದು ತುಂಬಾ ಜನರಿಗೆ ಗೊತ್ತಿರುವುದಿಲ್ಲ. ಈಗಲೂ ಸಹ ಇದನ್ನು ಔಷಧಿಯಾಗಿ ಹಳ್ಳಿಗಳ ಕಡೆ ಬಳಸುತ್ತ ಬಂದಿದ್ದಾರೆ.
ಎಕ್ಕದ ಗಿಡ ದಲ್ಲಿ ಎರಡು ಪ್ರಭೇದದ ಗಿಡಗಳಿವೆ. ಅವು ಯಾವುದೆಂದರೆ ಬಿಳಿ ಮತ್ತು ಕೆಂಪು ಗಿಡಗಳು. ಎಕ್ಕದ ಗಿಡದ ಎಲೆ ವಿನಾಯಕ ಚತುರ್ಥಿಗೆ ಬೇಕಾದಂತಹ ಶ್ರೇಷ್ಠವಾದ ಎಲೆ. ಈ ಒಂದು ಗಿಡ ಅಪ್ಪು ಸೈನ್ಯ ಸಿ ಕುಟುಂಬಕ್ಕೆ ಸೇರಿದ್ದು.
ಇದನ್ನು ನಮ್ಮ ಕನ್ನಡದಲ್ಲಿ ಎಕ್ಕದ ಗಿಡ ಎಂದು ಕರೆಯುತ್ತೇವೆ. ಇದರಲ್ಲಿ ಬಿಳಿ ಎಕ್ಕದ ಗಿಡವು ಕಾಣಸಿಗುವುದು ತುಂಬಾನೇ ಕಡಿಮೆ. ರಥಸಪ್ತಮಿಯ ದಿನದಂದು ಎಕದ ಗಿಡಗಳನ್ನು ಧರಿಸಿ ನದಿಯಲ್ಲಿ ಸ್ನಾನ ಮಾಡಿದರೆ ತುಂಬಾ ಒಳ್ಳೆಯ ಪುಣ್ಯ ಬರುತ್ತದೆ ಎಂದು ನಮ್ಮ ಹಿಂದೂ ಪುರಾಣಗಳಲ್ಲಿ ಹೇಳಲಾಗಿದೆ.
ಈ ಒಂದು ಗಿಡವನ್ನು ಆಗಿನ ಕಾಲದಿಂದಲೂ ಆಯುರ್ವೇದ ಔಷಧೀಯ ಗಿಡ ವನ್ನಾಗಿ ಬಳಸುತ್ತಾ ಬಂದಿದ್ದಾರೆ. ಇದು ಶರೀರದ ಚರ್ಮ ಮತ್ತು ಮೂಳೆಗಳ ಸಮಸ್ಯೆಗಳಿಗೆ ರಾಮಬಾಣವಿದ್ದಂತೆ.ನೆನಪಿರಲಿ ಸ್ನೇಹಿತರೆ ಎಕ್ಕದ ಗಿಡದ ಎಲೆಗಳನ್ನು ಕೀಳುವಾಗ ಎಲೆಗಳಲ್ಲಿರುವ ಹಾಲು ನಿಮ್ಮ ಕಣ್ಣಿಗೆ ಬೀಳದಂತೆ ನೋಡಿಕೊಳ್ಳಿ.
ಯಾಕೆಂದರೆ ಎಕ್ಕದ ಗಿಡದ ಹಾಲು ಬಹಳ ವಿಷಪೂರಿತವಾಗಿರುತ್ತವೆ ಒಮ್ಮೆ ಈ ಗಿಡದ ಹಾಲು ನಿಮ್ಮ ಕಣ್ಣಿಗೆ ಒಂದು ಹನಿ ಕೂಡ ಬಿದ್ದರೂ ನಿಮ್ಮ ಕಣ್ಣಿಗೆ ತೊಂದರೆಯಾಗುವ ಸಾಧ್ಯತೆಗಳಿರುತ್ತವೆ.
ಹೌದು ಸ್ನೇಹಿತರೆ ಈ ಗಿಡದ ಎಲೆಗಳನ್ನು ತೆಗೆದುಕೊಂಡು ನಂತರ ಸ್ವಲ್ಪ ರುಬ್ಬಿಕೊಂಡು ಅದಕ್ಕೆ ಉಪ್ಪು ಸೇರಿಸಿ ಮೂಳೆಗಳನ್ನು ಹಾಗೂ ಮೂಳೆಮುರಿತ ಜಾಗದಲ್ಲಿ ಹಚ್ಚುವುದರಿಂದ ತೊಂದರೆ ನಿಮಗೆ ನಿವಾರಣೆಯಾಗುತ್ತದೆ. ಹಾಗೂ ಮೂಳೆಯಲ್ಲಿನ ನೋವು ಕಡಿಮೆಯಾಗುತ್ತದೆ.
ಯಾವುದೇ ಗಾಯಗಳಾಗಿದ್ದರೆ ಈ ಗಿಡದ ಎಲೆಗಳನ್ನು ಒಣಗಿಸಿ ಪುಡಿಮಾಡಿಕೊಂಡು ಗಾಯದ ಮೇಲೆ ಹಚ್ಚಿದರೆ ಗಾಯಗಳು ವಾಸಿಯಾಗುತ್ತದೆ. ಮತ್ತೊಂದು ವಿಷಯ ಏನೆಂದರೆ ನಿಮಗೆ ಭಯ ಬೀಳಿಸುವಂತಹ ಕನಸುಗಳು ಬೀಳುತ್ತಿ ದ್ದರೆ.ಈ ಗಿಡದ ಬೇರುಗಳನ್ನು ತಲೆದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ನಿಮಗೆ ಕೆಟ್ಟ ಕನಸುಗಳು ಬೀಳುವುದಿಲ್ಲ ಅದರಿಂದ ಮುಕ್ತಿ ಹೊಂದಬಹುದು.
ಹೀಗೆ ಆ ಗಿಡದ ಬೇರನ್ನು ತಲೆದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ನಿಮಗೆ ಆಗ್ರಹ ದೋಷಗಳು ಕೂಡ ನಿವಾರಣೆಯಾಗುತ್ತವೆ. ಸ್ನೇಹಿತರೆ ಬಿಳಿ ಎಕ್ಕದ ಗಿಡದ ಬೇರಿನಲ್ಲಿ ಗಣಪತಿ ನೆಲೆಸಿದ್ದಾನೆ ಎಂದು ನಮ್ಮ ಹಿಂದೂ ಪುರಾಣದ ನಂಬಿಕೆ.
ಅಷ್ಟೇ ಅಲ್ಲದೆ ಎಕ್ಕದ ಗಿಡದ ಗಣಪತಿಯನ್ನು ಪೂಜೆ ಮಾಡುವುದರಿಂದ ನಮ್ಮಕು ಸಂಕಷ್ಟಗಳು ದೂರವಾಗುತ್ತವೆ. ಇದರಿಂದ ದುಷ್ಟಶಕ್ತಿಗಳ ಕಣ್ಣು ಮತ್ತು ಕೆಟ್ಟ ಕಣ್ಣುಗಳು ಬೀಳದ ಹಾಗೆ ನೋಡಿಕೊಳ್ಳುತ್ತದೆ ಎಂದು ನಂಬಿಕೆ ಇದೆ. ಈಗಲೂ ಸಹ ಈ ಪದ್ಧತಿ ಚಾಲ್ತಿಯಲ್ಲಿದೆ.
ನಮ್ಮ ದೇಹದ ಮೇಲೆ ನೀರು ಗುಳ್ಳೆಗಳು ಬಂದರೆ ಈ ಗಿಡದ ಹಾಲನ್ನು ಅದರ ಮೇಲೆ ಮುಟ್ಟಿಸಿದರೆ ಗುಳ್ಳೆಗಳು ಹೋಗುತ್ತವೆ. ಈ ಗಿಡದ ಹಾಲು ವಿಷವಾದರೂ ಮುಖದ ಸೌಂದರ್ಯಕ್ಕೆ ತುಂಬಾನೆ ಒಳ್ಳೆಯದು.
ಈ ಗಿಡದ ಹಾಲನ್ನು ಅರಿಶಿನವನ್ನು ಬೆರೆಸಿ ಕಣ್ಣಿಗೆ ಬೀಳದಂತೆ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿರುವ ಕಪ್ಪು ಕಲೆಗಳು ವಾಸಿಯಾಗುತ್ತವೆ. ನಮಗೆ ಗಾಯವಾದಾಗ ಕೂಡಲೇ ಈ ಗಿಡದ ಹಾಲನ್ನು ಹಚ್ಚಿದರೆ ರಕ್ತ ಬರುವುದು ನಿಲ್ಲುತ್ತದೆ.
ಆದರೆ ಯಾವುದೇ ಕಾರಣಕ್ಕೂ ಎಕ್ಕದ ಗಿಡದ ಹಾಲು ಕಣ್ಣಿಗೆ ಬೀಳದ ಹಾಗೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ.ನೋಡಿದ್ರಲ್ಲ ಸ್ನೇಹಿತರೆ ಉಪಯುಕ್ತ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ. ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು ಶುಭದಿನ.