ವಾರದ ಏಳು ದಿನಕ್ಕೂ ಅದರದೇ ಆದ ಬೆಲೆ ಇದೆ, ಒಂದೊಂದು ದಿನಕ್ಕೂ ಒಂದೊಂದು ದಿನವನ್ನು ಮೀಸಲಿಡಲಾಗಿದೆ ಹಾಗು ಆ ದಿನದಂದು ಆ ದೇವರಿಗೆ ಶ್ರದ್ದೆ ಭಕ್ತಿಯೋಯಿಂದ ಪೂಜೆ ಸಹ ಮಾಡಲಾಗುತ್ತಸದೆ, ಇನ್ನು ಇವತ್ತು ಮಂಗಳವಾರ ಇದು ಆಂಜನೇಯನ ವಾರ ಇಂದು ನಾವು ಆಂಜನೇಯನನ್ನು ಶ್ರದ್ದಾ ಭಕ್ತಿಯಿಂದ ಪೂಜಿಸಿದರೆ ಕಲಿಯುಗದ ಪ್ರತ್ಯಕ್ಷ ದೇವನಾದ ಹನುಮಾ ಎಲ್ಲಾರನ್ನು ಕಾಪಾಡುತ್ತಾನೆ, ಮನುಷ್ಯರ ಜೀವನದಲ್ಲಿ ಬರುವ ಅಡೆತಡೆಗಳನ್ನ ನಿವಾರಿಸಿ ಸುಖ ಶಾಂತಿಯನ್ನ ಕರುಣಿಸುತ್ತಾನೆ.
ಮಂಗಳವಾರ ಆಂಜನೇಯನಿಗೆ ಪ್ರಿಯವಾದ ವಾರ, ಈ ವಾರ ಜನ ಆಂಜನೇಯನ ದೇವಸ್ಥಾನಗಳಿಗೆ ಹೋಗಿ ಪ್ರಾರ್ಥನೆಯನ್ನ ಮಾಡಿಕೊಳ್ಳುತ್ತಾರೆ, ಕೆಲವರು ಇಷ್ಟಾರ್ಥ ಸಿದ್ಧಿಗಾಗಿ ಉಪವಾಸವನ್ನು ಮಾಡುವುದುಂಟು, ಇನ್ನು ಕರುಣಾಸಾಗರ ಹನುಮನನ್ನು ಮನೆಯಲ್ಲಿ ಹೇಗೆ ಪೂಜಿಸಬೇಕು ಎಂಬುದನ್ನ ಇಂದು ತಿಳಿಸುತ್ತೇವೆ.
ಸಂತಾನವನ್ನು ಪಡೆಯಬೇಕು ಅಂತ ಬಯಸುವ ದಂಪತಿಗಳು ಮಂಗಳವಾರದ ದಿನ ಶ್ರದ್ಧಾ ಭಕ್ತಿಯಿಂದ ಉಪವಾಸ ಮಾಡಿ ಆಂಜನೇಯನ ಪೂಜೆಯನ್ನ ಮನೆಯಲ್ಲಿ ಮಾಡುವುದರಿಂದ ಅವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ.
ಆಂಜನೇಯನಿಗೆ ಕೆಂಪು ಅಥವಾ ಕೇಸರಿ ವಸ್ತ್ರವನ್ನ ಧರಿಸಿ ಕೆಂಪು ಬಣ್ಣದ ಹೂವಿನಿಂದ ಪೂಜೆಯನ್ನ ಮಾಡಿದರೆ ದೇವನ ಕೃಪೆ ಬಹು ಬೇಗ ಸಿಗುತ್ತದೆ, ಹೀಗೆ ಪೂಜೆ ಮಾಡುವುದರಿಂದ ಗ್ರಹ ದೋಷವಿದ್ದರೂ ನಿವಾರಣೆಯಾಗುತ್ತದೆ.
ದೀರ್ಘಕಾಲದಿಂದ ತೊಂದರೆ ಹಾಗು ನಷ್ಟಗಳನ್ನ ಅನುಭವಿಸುತ್ತಿರುವವರು ಐದು ಮಂಗಳವಾರ ಉಪವಾಸವಿದ್ದು ಆಂಜನೇಯನ ಪೂಜೆ ಮಾಡುವುದರಿಂದ ಕಷ್ಟಗಳು ದೂರವಾಗಿ ಸುಖ ಶಾಂತಿ ನೆಮ್ಮದಿಯನ್ನು ಆಂಜನೇಯ ಕರುಣಿಸುತ್ತಾನೆ.
ಮಂಗಳವಾರ ಆಂಜನೇಯನ ದೇವಸ್ಥಾನಕ್ಕೆ ಹೋಗಿ ಹನುಮಾನ್ ಚಾಲೀಸ್ ಪಠಿಸುವುದರಿಂದ ಇಂತಹ ಕಷ್ಟವಿದ್ದರೂ ದೂರವಾಗುತ್ತದೆ.
ಇನ್ನು ನೀವು ಅಂದುಕೊಂಡ ಕೆಲಸವನ್ನ ಬಹು ಬೇಗ ಶೀಘ್ರವಾಗಿ ನಡೆಯಲು ಹನುಮನ ದೇವಸ್ಥಾನದಲ್ಲಿ ವಿಳ್ಳೇದೆಲೆಯ ಹಾರದ ಹರಕೆಯನ್ನ ಹೇಳಿ ಪ್ರತಿ ಮಂಗಳವಾರ ದೇವಸ್ಥಾನಕ್ಕೆ ಹನುಮನ ಅಲಂಕಾರಕ್ಕೆ ನೀಡಿದರೆ ಕಾರ್ಯ ಸಿದ್ದಿ ಬೇಗ ಆಗುತ್ತದೆ.
ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದ ನಿಮ್ಮ ಸ್ನೇಹಿತರೊಂದಿ ಹಂಚಿಕೊಳ್ಳಿ.