ಎನಿದು Metoo ಅಭಿಯಾನ, ಇದನ್ನು ಮೊದಲು ಶುರು ಮಾಡಿದ್ದು ಯಾರು..? ದರ್ಶನ್ ರವರ ಪ್ರತಿಕ್ರಿಯೆ ಏನು.

118

ಸಧ್ಯ ಭಾರತದಲ್ಲಿ ಮೀ ಟು ಎಂಬ ಅಭಿಯಾನ ಒಂದು ಸಾಕಷ್ಟು ವೈರಲ್ ಆಗಿದೆ, ಅಗಾದರೆ ಎನಿದು ಮೀಟು ಇದರ ಅರ್ಥ ಏನು ಹಾಗು ಕಾರಣ ಏನು ಎಂಬ ಪ್ರೆಶ್ನೆಗೆ ಉತ್ತರ ಹುಡುಕಲು ಶುರು ಮಾಡಿದರೆ ಯಾವ ಒಂದು ಹೆಣ್ಣು ಅಥವಾ ಮಹಿಳೆಯರು ತಮಗೆ ಲೈಂಗಿಕ ಶೋಷಣೆಯಾದಲ್ಲಿ ಈ ಅಭಿಯಾನದಲ್ಲಿ ತಮ್ಮ ಜೀವನದಲ್ಲಿ ನಡೆದ ಅಂತಹ ದೌರ್ಜನ್ಯವನ್ನು ಸಮಾಜದ ಮುಂದಿಡಲು ಬಳಸಲಾಗಿದೆ.

ಈ ಮೀಟು ಅಭಿಯಾನ ನಮ್ಮ ದೇಶದ್ದು ಅಲ್ಲ ಹಾಗು ನೆನ್ನೆ ಮೊನ್ನೆ ಶುರುವಾಗಿದ್ದು ಅಲ್ಲ, 12 ವರ್ಷಗಳ ಹಿಂದೆ ಅಮೆರಿಕಾದಲ್ಲಿ ಆಫ್ರಿಕಾ ಮೂಲದ ತರಾನಾ ಬರ್ಕ್ ಎಂಬ ಮಾನವ ಹಕ್ಕು ಹೋರಾಟಗಾರ್ತಿ ಮೊದಲಿಗೆ 2006 ರಲ್ಲಿ ಮೊದಲ ಬಾರಿಗೆ ಕಡಿಮೆ ಆದಾಯವಿದ್ದ ಮಹಿಳೆಯರ ಮೇಲೆ ನೆಡೆಯುತ್ತಿದ್ದ ಲೈಂಗಿಕ ಶೋಷಣೆಯ ಹಿನ್ನೆಲೆಯಲ್ಲಿ ಅಂತಹ ಮಹಿಳೆಯರಿಗೆ ನೆರವಾಗುವ ಉದ್ದೇಶದೊಡನೆ ಪ್ರಾರಂಭಿಸಿದಳು.

ಇನ್ನು ಈ ಅಭಿಯಾನ ಬಾರತಕ್ಕೆ ಮೊದಲೇ ಬಂತಾದರೂ, ಕರ್ನಾಟಕ್ಕೆ ಸಧ್ಯ ಈಗ ಬಂದಿದೆ, ಅದರಲ್ಲೂ ಕನ್ನಡ ಚಿತ್ರರಂಗದ ದಿಗ್ಗಜರ ಮೇಲೆ ತನ್ನ ಪ್ರಹಾರವನ್ನು ನೆಡೆಸುತ್ತಿದೆ, ನೇರವಾಗಿ ಶ್ರುತಿ ಹರಿ ಹರನ್ ನಟಿಯು ಖ್ಯಾತ ಬಹು ಬಾಷಾ ನಟ, ನಿರ್ದೇಶಕ ಹಾಗು ನಿರ್ಮಾಪಕರಾದ ಅರ್ಜುನ್ ಸರ್ಜಾ ಅವರ ಮೇಲೆ ಆರೋಪ ಮಾಡಿದ್ದಾರೆ, ಆಗಾದರೆ ಒಮ್ಮೆ ಅರ್ಜುನ್ ಸರ್ಜಾ ಅವರ ಬಗ್ಗೆ ಸಣ್ಣದಾಗಿ ಒಮ್ಮೆ ತಿಳಿಯೋಣ.

ಯಾರಿದು ಅರ್ಜುನ್ ಸರ್ಜಾ.

ಅರ್ಜುನ್ ಸರ್ಜಾ ಇವರು ಜನಿಸಿದ್ದು ಆಗಸ್ಟ್ 15. 1962 ಮದುಗಿರಿಯಲ್ಲಿ ತಂದೆ ಶಕ್ತಿ ಪ್ರಸಾದ್( ನಟ ) ತಾಯಿ ಲಕ್ಷ್ಮೀ (ಶಿಕ್ಷಕಿ) ಅಣ್ಣ ಕಿಶೋರ್ ಸರ್ಜಾ ನಿರ್ಮಾಪಕರು, ಇವರು ಪ್ರಸಿದ್ಧ ಕಲಾವಿದರಾದ ಶಕ್ತಿ ಪ್ರಸಾದ್ ರವರ ಮಗ ಕನ್ನಡ ಚಿತ್ರರಂಗದಲ್ಲಿ ಬಾಲ ನಟ, ನಾಯಕ ನಟರಾಗಿ ಪಾತ್ರ ನಿರ್ವಹಿಸಿದ್ದಾರೆ.

ಆದರೆ ಅವಕಾಶಗಳು ಇವರಿಗೆ ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ದೊರೆತ ಕಾರಣ, ಅಲ್ಲಿ ಜನಪ್ರಿಯ ನಾಯಕ ನಟ ಮತ್ತು ನಿರ್ದೇಶಕಾಗಿ ಹೆಸರು ಗಳಿಸಿದ್ದಾರೆ. 1981 ರಲ್ಲಿ ತೆರೆಕಂಡಿರುವ “ಸಿಂಹದ ಮರಿ ಸೈನ್ಯ” ಚಿತ್ರದ ಮೂಲಕ ಕನ್ನಡ ಚಿತ್ರ ರಂಗವನ್ನು ಪ್ರವೇಶ ಮಾಡಿದ್ದಾರೆ.

ಇದಲ್ಲದೆ ಅರ್ಜುನ ಸರ್ಜಾ ಅವರು ನಾಯಕನಾಗಿ, ನಿರ್ದೇಶಕನಾಗಿ, ನಿರ್ಮಪಕಾರಾಗಿ ಚಿತ್ರ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ, ಇವರು ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಹೀಗೆ ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ.

ಚಾಲೆಂಜಿಗ್ ಸ್ಟಾರ್ ದರ್ಶನ ಮಾತುಗಳು : ಅರ್ಜುನ್ ಸರ್ಜಾ ಅವರು ನನಗೆ ತುಂಬಾ ವರ್ಷಗಳಿಂದ ಪರಿಚಯ, ಇತ್ತೀಚಿಗೆ ಸಹ ಅವರನ್ನ ಭೇಟಿಯಾಗಿದ್ದೆ, ಕುರುಕ್ಷೇತ್ರ ಚಿತ್ರದಲ್ಲಿ ಅವರೊಂದಿಗೆ ನಟನೆ ಮಾಡಿದ್ದೇನೆ, ಅವರ ಯೋಚನಾ ಲಹರಿಗಳೇ ಬೇರೆ ತರ ಅವರು ಈ ಕೆಲಸ ಮಾಡಿದರು ಸಾಧ್ಯವೇ ಇಲ್ಲ ಅಂತ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದ್ದಾರೆ, ಇನ್ನು ಈ ವಿಚಾರದ ಬೆಗ್ಗೆ ನಿಮ್ಮ ಅನಿಸಿಕೆಗಳನ್ನ ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

LEAVE A REPLY

Please enter your comment!
Please enter your name here