ಎದೆನೋವು ಸಾಮಾನ್ಯವಾಗಿ ಎದೆಯ ಮದ್ಯಭಾಗದಲ್ಲಿ ಇರುತ್ತದೆ, ಎದೆಯ ಮದ್ಯಭಾಗವನ್ನು ಜೋರಾಗಿ ಯಾರೊ ವತ್ತಿದ ಹಾಗೆ ಅಥವಾ ಎದೆಯಯನ್ನು ಬಿಗಿಯಾಗಿ ಕಟ್ಟಿ ಹಾಕಿದ ಹಾಗೆ ಅನಿಸುತ್ತದೆ, ಎದೆನೋವುನ ಜೋತೆಗೆ ಕೈಗಳಲ್ಲಿಯು ನೋವು ಕಾಣಿಸಬಹುದು ಮತ್ತು ಉಸಿರಾಟದ ತೊಂದರೆಯು ಆಗಬಹುದು, ಜೋರಾಗಿ ಭೆವರು ಬರಬಹುದು, ಕೆಲವೊಮ್ಮೆ ಪ್ರಜ್ಞೆಯು ಹೋಗಬಹುದು.
ಇನ್ನು ಬಾರತೀಯರಾದ ನಾವು ಆಂಗ್ಲ ಔಷಧಿಗಳಿಗೆ ಮೊರೆಯೊಗಿರುವುದು ಹಾಗು ಭಾರತದ ಆಯುರ್ವೇದವನ್ನ ಮರೆತಿರುವುದು ಅಷ್ಟು ಒಳ್ಳೆಯ ವಿಷಯವೇನಲ್ಲಾ, ಆಂಗ್ಲ ಮದ್ದುಗಳು ಸ್ವಲ್ಪ ಬದಿಗಿಟ್ಟರೆ ನಾವು ಇಂದು ನಿಮಗೆ ಆಯುರ್ವೇದ ಒಂದು ಹೃದಯಾಘಾತಕ್ಕೆ ದಿವ್ಯ ಔಷಧವನ್ನ ಇಂದು ನಿಮಗೆ ತಿಳಿಸುತ್ತೇವೆ.
ಕೊತ್ತಂಬರಿ ಸೊಪ್ಪನ್ನು ಎಳೆನೀರಿನೊಂದಿಗೆ ರುಬ್ಬಿ, ಕಲ್ಲುಸಕ್ಕರೆ, ಏಲಕ್ಕಿ ಪುಡಿ ಸೇರಿಸಿ ದಿನವೂ ಒಂದು ಭಾರಿ ಸೇವಿಸುತ್ತಿದ್ದರೆ ಎದೆನೋವು ಕಡಿಮೆ ಆಗುವುದು.
ಕೊತ್ತಂಬರಿ ಬೀಜವನ್ನು ಕುಟ್ಟಿ ಪುಡಿ ಮಾಡಿ ಅದನ್ನು ನೀರಿನಲ್ಲಿ ನೆನೆಹಾಕಬೇಕು, ಚೆನ್ನಾಗಿ ಕಿವಿಚಿ ಸೋಸಬೇಕು, ಈ ಕಷಾಯಕ್ಕೆ ಹಾಲು, ಸಕ್ಕರೆ ಬೆರೆಸಿ ಸೇವಿಸಿದರೆ ಆಗಾಗ ಕಾಡುವ ಎದೆ ನೋವು ಕಡಿಮೆಯಾಗುತ್ತದೆ.
ಎಳೆಯ ಸೀಬೆಕಾಯಿಯ ಕಷಾಯವನ್ನು ಸಿದ್ಧಪಡಿಸಬೇಕು, ಇದನ್ನು ಮಜ್ಜಿಗೆಯೊಂದಿಗೆ ಮಿಶ್ರಣ ಮಾಡಿ ಕುಡಿದರೆ ಎದೆ ನೋವು ತಕ್ಷಣ ಕಡಿಮೆಯಾಗುತ್ತದೆ.
ದಾಳಿಂಬೆ ಹಣ್ಣನ್ನು ಸೇವಿಸುತ್ತಿದ್ದರೆ ಕೆಮ್ಮುಸಹಿತ ಉಂಟಾಗುವ ಎದೆನೋವು ಬರುವುದಿಲ್ಲ, ಸಾಧ್ಯವಾದರೆ ವಾರಕ್ಕೆ ಮೂರು ದಿನವಾದರೂ ದಾಳಿಂಬೆ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
ಒಂದು ಬಟ್ಟಲು ತಣ್ಣೀರಿಗೆ ನಿಂಬೆರಸವನ್ನು ಸೇರಿಸಿ ಒಂದು ವಾರ ಸೇವಿಸುತ್ತಿದ್ದರೆ ಎದೆನೋವು ಕಡಿಮೆ ಆಗುವುದು.